ಭಾರತೀಯರಿಂದ ತಮ್ಮ ಭಾಷೆ ಬಳಕೆಯ ಪ್ರಯಾಣದ ಅನ್ವೇಷಣೆ: ಮೇಕ್ ಮೈಟ್ರಿಪ್
ಮೈರಾದ ಬಳಕೆದಾರ ಬೇಸ್ ಇನ್ನೂ ಬೆಳೆಯುತ್ತಲೇ ಇದ್ದು ಈಗ ಪ್ರತಿದಿನ 50,000ಕ್ಕಿಂತ ಹೆಚ್ಚಿನ ಸಂಭಾಷಣೆಗಳನ್ನು ತೋರಿಸುತ್ತಿದ್ದರೂ, ಆರಂಭಿಕ ಮಾಹಿತಿಯು, ಧ್ವನಿಯು, ಹೆಚ್ಚು ಅಭಿವ್ಯಕ್ತಿಯುಳ್ಳ, ಸಾಂದರ್ಭಿಕ ಹಾಗೂ ಭಾಷೆ ಒಳಗೊಂಡ ಪ್ರಯಾಣ ಶೋಧಕ್ಕೆ ನೆರವಾಗು ತ್ತಿದೆ ಎಂದು ಸೂಚಿಸುತ್ತಿದೆ. ಇದು, ಬಳಕೆದಾರರು ಪಠ್ಯದ ಮೂಲಕ ಶೋಧ ಮಾಡುವುದಕ್ಕಿಂತ ಭಿನ್ನವಾಗಿದೆ
-
ಬೆಂಗಳೂರು: ಭಾರತದ ಮುಂಚೂಣಿ ಆನ್‌ಲೈನ್ ಪ್ರಯಾಣ ಸಂಸ್ಥೆಯಾದ ಮೇಕ್ ಮೈಟ್ರಿಪ್ ತನ್ನ ಜೆನ್-ಎಐ ಶಕ್ತಿಯ ಟ್ರಿಪ್ ಯೋಜನಾ ಸಹಾಯಕಿಯಾದ ಮೈರಾದಿಂದ ಪಡೆದುಕೊಂಡ ಗಮನಿಕೆಗಳನ್ನು ಇಂದು ಹಂಚಿಕೊಂಡಿದ್ದು ಅದು, ಭಾರತೀಯ ಪ್ರಯಾ ಣಿಕರು ಧ್ವನಿಯ ಮೂಲಕ ಸಂವಾದ ನಡೆಸುತ್ತಿರುವ ರೀತಿಯಲ್ಲಿ ಒಂದು ಬೆಳವಣಿಗೆಯ ನಡವಳಿಕೆ ಪ್ರವೃತ್ತಿಯನ್ನು ತೋರಿಸುತ್ತದೆ ಎಂದು ಸೂಚಿಸಿದೆ.
ಮೈರಾದ ಬಳಕೆದಾರ ಬೇಸ್ ಇನ್ನೂ ಬೆಳೆಯುತ್ತಲೇ ಇದ್ದು ಈಗ ಪ್ರತಿದಿನ 50,000ಕ್ಕಿಂತ ಹೆಚ್ಚಿನ ಸಂಭಾಷಣೆಗಳನ್ನು ತೋರಿಸುತ್ತಿದ್ದರೂ, ಆರಂಭಿಕ ಮಾಹಿತಿಯು, ಧ್ವನಿಯು, ಹೆಚ್ಚು ಅಭಿವ್ಯಕ್ತಿಯುಳ್ಳ, ಸಾಂದರ್ಭಿಕ ಹಾಗೂ ಭಾಷೆ ಒಳಗೊಂಡ ಪ್ರಯಾಣ ಶೋಧಕ್ಕೆ ನೆರವಾಗುತ್ತಿದೆ ಎಂದು ಸೂಚಿಸುತ್ತಿದೆ. ಇದು, ಬಳಕೆದಾರರು ಪಠ್ಯದ ಮೂಲಕ ಶೋಧ ಮಾಡುವುದಕ್ಕಿಂತ ಭಿನ್ನವಾಗಿದೆ.
ಧ್ವನಿ ಮತ್ತು ಪಠ್ಯ ವಿಚಾರಣೆಗಳು ಭಿನ್ನಗೊಳ್ಳಲಾರಂಭಿಸುತ್ತಿರುವ ರೀತಿ ಆರಂಭಿಕ ಬಳಕೆ ಪ್ಯಾಟರ್ನ್‌ಗಳಲ್ಲೂ ಕೂಡ, ಬಳಕೆದಾರರು ತಮ್ಮ ಪ್ರಯಾಣ ಉದ್ದೇಶವನ್ನು ಟೈಪ್ ಮಾಡುವ ಮತ್ತು ಮಾತನಾಡುವುದರ ನಡುವೆ ವ್ಯತ್ಯಾಸವು ಕಣ್ಣಿಗೆ ಕಾಣುವಂತಿದೆ.
ಬಹುತೇಕ ಪಠ್ಯ ಶೋಧಗಳು 3-4 ಪದಗಳ ಅಕ್ಕಪಕ್ಕದಲ್ಲಿದ್ದು, ಸಂಕೀರ್ಣ, ಪ್ರಮುಖ ಪದ-ಚಾಲಿತವಾಗಿದೆ. ಉದಾಹರಣೆಗೆ, “ಅಗ್ಗವಾದ ಗೋವಾ ಹೋಟೆಲ್‌ಗಳು” ಅಥವಾ “ದೆಹಲಿ ಮುಂಬೈ ವಿಮಾನ.” ಧ್ವನಿ ವಿಚಾರಣೆಗಳು ಗಣನೀಯವಾಗಿ ವಿಭಿನ್ನವಾಗಿರಲಾರಂಭಿಸಿವೆ. ಪಠ್ಯದಲ್ಲಿರುವ ವಿಚಾರಣೆಯಲ್ಲಿರುವ ಕೇವಲ 7%ಗೆ ಹೋಲಿಸಿದರೆ, ಸರಿಸುಮಾರು 23% ಧ್ವನಿ ವಿಚಾರಣೆಗಳು,11 ಪದಗಳನ್ನು ಮೀರುತ್ತವೆ.
ಇದಕ್ಕೆ ಕಾರಣ, ಬಳಕೆದಾರರು ಸಹಜವಾಗಿಯೇ, ಗಮ್ಯದ ನಿಕಟತೆ, ಸೌಲಭ್ಯಗಳು, ಬಜೆಟ್, ಗ್ರೂಪ್ ಗಾತ್ರ ಮತ್ತು ದಿನಾಂಕಗಳನ್ನು ಒಂದೇ ಮಾತಿನ ಸಂವಾದದಲ್ಲಿ ಹೇಳುತ್ತಾರೆ. ಉದಾ ಹರಣೆಗೆ, “ಬೀಚ್ ಹತ್ತಿರ ಉತ್ತರ ಗೋವಾದಲ್ಲಿ ಪೂಲ್ ಇರುವ ಕೈಗೆಟುಕುವ ಹೋಟೆಲ್ ಗಳನ್ನು ತೋರಿಸು” ಅಥವಾ “2 ವಯಸ್ಕರು ಮತ್ತು ಒಂದು ಮಗು, 3 ರಾತ್ರಿಗಳು, ಜನವರಿ 14ರಿಂದ, ಬಜೆಟ್ ಪ್ರತಿ ರಾತ್ರಿಗೆ ₹15,000 ಒಳಗೆ.”
ಹಲವು ವಿಚಾರಣಾ ವರ್ಗಗಳಾದ್ಯಂತ, ಆರಂಭಿಕ ಡೇಟಾ, ಧ್ವನಿಯು, ಪಠ್ಯಕ್ಕಿಂತ ಹೆಚ್ಚು ಗಣನೀಯವಾಗಿ ಬಳಸಲ್ಪಟ್ಟಿರುವುದನ್ನು ಸೂಚಿಸುತ್ತದೆ. ದಿನಾಂಕ-ನಿರ್ದಿಷ್ಟ ವಿಚಾರಣೆ ಗಳು ಹೆಚ್ಚು ನಿಖರ ವ್ಯತ್ಯಾಸವನ್ನು ತೋರಿಸುತ್ತಿವೆ. ಅಂದರೆ ಧ್ವನಿಯಲ್ಲಿ 3.3x ಅಧಿಕ. ಇಲ್ಲಿ ಬಳಕೆದಾರರು, ಸಂಕೀರ್ಣವಾದ ದಿನಾಂಕ ಫಾರ್ಮಾಟ್‌ಗಳನ್ನು ಟೈಪ್ ಮಾಡುವ ಬದಲು, ಸಹಜವಾಗಿಯೇ “ಡಿಸಂಬರ್ 26ರಿಂದ 29ರವರೆಗೆ” ಅಥವಾ “ಮುಂದಿನ ಶುಕ್ರವಾರದಿಂದ ಭಾನುವಾರದವರೆಗೆ” ಎಂದು ಹೇಳುತ್ತಿದ್ದಾರೆ.