Stock Market: ಸೆನ್ಸೆಕ್ಸ್ 700 ಅಂಕ ಪತನ ನಿಫ್ಟಿ IT ಇಂಡೆಕ್ಸ್ ಕುಸಿತ
ಮಾಹಿತಿ ತಂತ್ರ ಜ್ಞಾನ ಅಥವಾ ಐಟಿ ಮತ್ತು ಆಟೊಮೊಬೈಲ್ ವಲಯದ ಷೇರುಗಳ ದರಗಳು ಕುಸಿಯಿತು. ದೇಶದ ಅತಿ ದೊಡ್ಡ ಸಾಫ್ಟ್‌ವೇರ್ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನ ಮೊದಲ ತ್ರೈಮಾಸಿಕ ಫಲಿತಾಂಶದಲ್ಲಿ ಆದಾಯವು ಮಾರುಕಟ್ಟೆಯ ನಿರೀಕ್ಷಿತ ಮಟ್ಟದಲ್ಲಿ ಇರದಿದ್ದುದರಿಂದ ಐಟಿ ಷೇರುಗಳ ದರ ಇಳಿಯಿತು.


ಮುಂಬಯಿ: ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಇವತ್ತು 715 ಅಂಕ ಪತನವಾಗಿದ್ದು, 82,452ಕ್ಕೆ ಇಳಿಕೆಯಾಯಿತು. ನಿಫ್ಟಿ 216 ಅಂಕ ಕುಸಿತಕ್ಕೀಡಾಗೊ 25,139ಕ್ಕೆ ಸ್ಥಿರವಾಯಿತು. ಮಾಹಿತಿ ತಂತ್ರ ಜ್ಞಾನ ಅಥವಾ ಐಟಿ ಮತ್ತು ಆಟೊಮೊಬೈಲ್ ವಲಯದ ಷೇರುಗಳ ದರಗಳು ಕುಸಿಯಿತು. ದೇಶದ ಅತಿ ದೊಡ್ಡ ಸಾಫ್ಟ್‌ವೇರ್ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನ ಮೊದಲ ತ್ರೈಮಾಸಿಕ ಫಲಿತಾಂಶದಲ್ಲಿ ಆದಾಯವು ಮಾರುಕಟ್ಟೆಯ ನಿರೀಕ್ಷಿತ ಮಟ್ಟದಲ್ಲಿ ಇರದಿದ್ದುದರಿಂದ ಐಟಿ ಷೇರುಗಳ ದರ ಇಳಿಯಿತು.
ಟಿಸಿಎಸ್ ತನ್ನ ಏಪ್ರಿಲ್-ಜೂನ್ ಅವಧಿಯಲ್ಲಿ, 12,760 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದ್ದು, ಮಾರುಕಟ್ಟೆ ಪಂಡಿತರ ಅಂದಾಜನ್ನೂ ಮೀರಿ ಲಾಭ ಗಳಿಸಿದೆ. ಮಾರುಕಟ್ಟೆಯಲ್ಲಿ ಟಿಸಿಎಸ್‌ಗೆ 12,205 ಕೋಟಿ ರುಪಾಯಿ ನಿವ್ವಳ ಲಾಭವನ್ನು ನಿರೀಕ್ಷಿಸಲಾಗಿತ್ತು.
ಟಿಸಿಎಸ್ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ 11 ರುಪಾಯಿಗಳ ಡಿವಿಡೆಂಡ್ ಅನ್ನು ಘೋಷಿಸಿದೆ. ಟಿಸಿಎಸ್ ಆದಾಯದಲ್ಲಿ 3.8% ಹೆಚ್ಚಳವಾಗಿದೆ. 63,437 ಕೋಟಿ ರುಪಾಯಿ ಆದಾಯ ಲಭಿಸಿದೆ. ಟಿಸಿಎಸ್ ಲಾಭವು ನಿರೀಕ್ಷೆಗೂ ಮೀರಿದ್ದರೂ, ಆದಾಯ ಮಾತ್ರ ಮಾರುಕಟ್ಟೆಯ ಅಂದಾಜಿನಷ್ಟಿರಲಿಲ್ಲ. ಮಾರುಕಟ್ಟೆಯಲ್ಲಿ 64,538 ಕೋಟಿ ರುಪಾಯಿ ಆದಾಯವನ್ನು ಅಂದಾಜಿಸಲಾಗಿತ್ತು. ಸ್ಟಾಕ್ ಮಾರ್ಕೆಟ್ ವಹಿವಾಟು ಮುಗಿದ ಬಳಿಕ ಟಿಸಿಎಸ್ ರಿಸಲ್ಟ್ ಪ್ರಕಟವಾಯಿತು.
ಟಿಸಿಎಸ್‌ನಲ್ಲಿ 6 ಲಕ್ಷದ 13 ಸಾವಿರ ಉದ್ಯೋಗಿಗಳು ದುಡಿಯುತ್ತಿದ್ದಾರೆ. ವಲಸೆಯ ದರ 13.8% ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾ ವಿರುದ್ಧ ಭಾರಿ ಟಾರಿಫ್ ಹಾಕಿರುವುದು ಷೇರು ಪೇಟೆಯನ್ನು ತಲ್ಲಣಗೊಳಿಸಿತು. ಅಮೆರಿಕದ ಸಂಸದರಾದ ಗ್ರಹಾಂ ಮತ್ತು ಬ್ಲುಮೆಂಥಾಲ್ ಎಂಬುವರಿ, ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಚೀನಾ ಮತ್ತು ಭಾರತದಂತಹ ದೇಶಗಳ ವಿರುದ್ಶ 500% ಟಾರಿಫ್ ಅನ್ನು ಹಾಕಬೇಕು ಎಂಬ ಒತ್ತಡವನ್ನು ಹೇರುತ್ತಿದ್ದು, ರಷ್ಯಾ ಕಾಯಿದೆ 2025 ಎಂಬ ವಿಧೇಯಕವನ್ನು ಪ್ರಸ್ತಾಪಿಸಿದ್ದಾರೆ. ಹೀಗಿದ್ದರೂ, ಟ್ರಂಪ್ ಈ ವಿಧೇಯಕಕ್ಕೆ ತಮ್ಮ ಪೂರ್ಣ ಬೆಂಬಲ ನೀಡಿಲ್ಲ. ಅಂತಿಮ ಆಯ್ಕೆ ನನ್ನದೇ ಎಂದು ಹೇಳಿದ್ದಾರೆ.
ಇವತ್ತು ಸ್ಟಾಕ್ ಮಾರ್ಕೆಟ್ ನಲ್ಲಿ 13 ಪ್ರಮುಖ ಸೆಕ್ಟರ್‌ಗಳ ಪೈಕಿ 10 ಸೆಕ್ಟರ್‌ಗಳು ಇಳಿಕೆಯಿಂದ ವಹಿವಾಟು ಆರಂಭಿಸಿತು. ಟಿಸಿಎಸ್, ಇನ್ಫೋಸಿಸ್, ವಿಪ್ರೊ ಷೇರ ದರ ಇಳಿಯಿತು. ಹಣಕಾಸು, ಬ್ಯಾಂಕಿಂಗ್ ಷೇರು ಇಳಿಯಿತು. ಮಹೀಂದ್ರಾ ಮಹೀಂದ್ರಾ ಷೇರು 3% ಇಳಿಯಿತು. ಟಾಟಾ ಮೋಟಾರ್ಸ್ ಷೇರು ದರ 2% ಇಳಿಯಿತು.
ಈ ಸುದ್ದಿಯನ್ನೂ ಓದಿ: President Droupadi Murmu: ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ, ಮಧ್ಯಮ ವರ್ಗದವರಿಗೆ ಮನೆ; ಉಭಯ ಸದನಗಳಲ್ಲಿ ಕೇಂದ್ರದ ಸಾಧನೆ ತೆರೆದಿಟ್ಟ ರಾಷ್ಟ್ರಪತಿ
ಷೇರು ಸೂಚ್ಯಂಕ ಕುಸಿತಕ್ಕೆ 4 ಮುಖ್ಯ ಕಾರಣಗಳು:
- ಟಿಸಿಎಸ್ ಮೊದಲ ತ್ರೈಮಾಸಿಕದ ಫಲಿತಾಂಶ ನಿರಾಸೆ ಮೂಡಿಸಿರುವುದು
- ಟ್ರಂಪ್ ಅವರ ಹೊಸ ಟಾರಿಫ್ ಪ್ಲಾನ್ ಆತಂಕ ಮೂಡಿಸಿರುವುದು.
- ರಷ್ಯಾ ವಿರುದ್ಧ ನಿರ್ಬಂಧದಿಂದ ತೈಲ ದರ ಏರಿಕೆ ಭೀತಿ
- ಪಂಪ್- ಆಂಡ್- ಡಂಪ್ ಆಪರೇಷನ್‌ಗಳ ಮೇಲೆ ಸೆಬಿ ಕ್ರಮ ಕೈಗೊಂಡಿರುವುದು.
ಇವತ್ತಿನ ಟಾಪ್ ಟ್ರೇಡ್ಸ್ :
- ಟಿಸಿಎಸ್ ಷೇರು ದರದಲ್ಲಿ 3.5 % ಇಳಿಕೆ
- IREDA ಷೇರು ದರದಲ್ಲಿ 6% ಕುಸಿತ, ಮೊದಲ ತ್ರೈಮಾಸಿಕ ಫಲಿತಾಂಶ 36% ಇಳಿಕೆಯಾಗಿರುವುದು ಕಾರಣ. 247 ಕೋಟಿ ರುಪಾಯಿ ಲಾಭ.
- HUL ಷೇರು ದರ 4% ಏರಿಕೆಯಾಗಿದೆ. ಹೊಸ ಎಂಡಿ, ಸಿಇಒ ಆಗೊ ಪ್ರಿಯಾ ನಾಯರ್ ನೇಮಕ ಹಿನ್ನೆಲೆ.
- ಟಾಟಾ ಎಲೆಕ್ಸಿ ಷೇರಿನ ದರದಲ್ಲಿ 7% ಇಳಿಕೆ, ತ್ರೈಮಾಸಿಕ ಲಾಭ 144 ಕೋಟಿ ರುಪಾಯಿ ಇಳಿಕೆ ಹಿನ್ನೆಲೆ.
- ಝೀ ಎಂಟರ್ ಟೈನ್ ಮೆಂಟ್ ಷೇರು 6% ಇಳಿಕೆ.
ಟಿಸಿಎಸ್ ತ್ರೈಮಾಸಿಕ ಫಲಿತಾಂಶ ಷೇರು ಪೇಟೆಯನ್ನು ನಿರಾಸೆಗೊಳಿಸಿದೆ. ಹೀಗಾಗಿ ಇತರ ಐಟಿ ಕಂಪನಿಗಳ ಫಲಿತಾಂಶ ಕೂಡ ಏನಾಗಲಿದೆ ಎಂಬ ಕುತೂಹಲ ಉಂಟಾಗಿದೆ.
ಟ್ರಂಪ್ ಟಾರಿಫ್ ಕುರಿತ ಅನಿಶ್ಚಿತತೆ:
- ಟ್ರೇಡ್ ವಾರ್ ಅನ್ನು ಟ್ರಂಪ್ ಮತ್ತಷ್ಟು ತೀವ್ರಗೊಳಿಸುತ್ತಿದ್ದಾರೆ. ಇವತ್ತು ನೀಡಿರುವ ಹೇಳಿಕೆಯಲ್ಲಿ, ಕೆನಡಾದಿಂದ ವಸ್ತುಗಳ ಆಮದು ಮೇಲೆ 35% ಟಾರಿಫ್ ಘೋಷಿಸಿದ್ದಾರೆ.
- ಎರಡನೆಯದಾಗಿ ಟಾರಿಫ್ ಲೆಟರ್‌ಗಳು ಸಿಗದಿರುವ ದೇಶಗಳಿಗೆ ಬೇಸ್‌ಲೈನ್ ಟಾರಿಫ್ 15-20% ಆಗಲಿದೆ ಎಂದಿದ್ದಾರೆ. ಅಂದರೆ ಭಾರತಕ್ಕೆ ಈಗ ಟಾರಿಫ ಲೆಟರ್ ಸಿಕ್ಕಿಲ್ಲ. ಈಗ ಬೇಸ್ ಲೈನ್ 10% ಇದೆ. ಅದು 10-25% ಆಗಲಿದೆಯೇ ಎಂಬ ಆತಂಕ ಹೂಡಿಕೆದಾರರಲ್ಲಿದೆ. ಆದರೆ ಭಾರತ ಕೂಡ ತನ್ನ ಹಿತಾಸಕ್ತಿಯನ್ನು ನೋಡಿಕೊಳ್ಳುತ್ತಿದೆ. ಸುಲಭವಾಗಿ ಅಮೆರಿಕದ ಷರತ್ತುಗಳಿಗೆ ತಲೆ ಬಾಗಲ್ಲ. ಬದಲಿಗೆ ತನ್ನದೇ ಷರತ್ತುಗಳನ್ನು ಹಾಕುವ ಸಾಮರ್ಥ್ಯ ಭಾರತಕ್ಕಿದೆ.
- ಹೂಡಿಕೆದಾರರು ಎಂಸಿಎಕ್ಸ್ ಚಿನ್ನದ ವಾಯಿದಾ ವಹಿವಾಟು ಚೇತರಿಸಿದೆ. ಬೆಳ್ಳಿಯ ವಾಯಿದಾ ವಹಿವಾಟು ಕೂಡ ಚೇತರಿಸಿದೆ. ಹೂಡಿಕೆದಾರರು ಪರ್ಯಾಯ ಹೂಡಿಕೆಯ ಸಾಧನಗಳತ್ತ ಗಮನ ಹರಿಸುತ್ತಿದ್ದಾರೆ.
- ಟೆಕ್ನಿಕಲ್ ಇಂಡಿಕೇಟರ್ ಗಳ ಪ್ರಕಾರ ನಿಫ್ಟಿ 50 ಮತ್ತಷ್ಟು ವೀಕ್ನೆಸ್ ಆಗುವ ಸಾಧ್ಯತೆ ಇದೆ.
- ಬೆಳ್ಳಿಯ ದರ ಪ್ರತಿ ಕೆಜಿಗೆ 1 ಲಕ್ಷದ 10 ಸಾವಿರ ರುಪಾಯಿಗೆ ಏರಿಕೆಯಾಗಿದೆ. ಜಾಗತಿಕ ವಾಣಿಜ್ಯ ಸಂಘರ್ಷ ಹೆಚ್ಚುತ್ತಿರುವುದು ಇದಕ್ಕೆ ಕಾರಣ.