Narayana Yaji Column: ಗೆದ್ದವರ ಕಥೆಗಳು
ಅಡಕಳ್ಳಿಯವರಿಗೆ ಬರಹ ಎಂದರೆ ಹೊಳ್ಳಿ ಮೇಲೆ ಕುಳಿತು ಕವಳದ ಚಂಚಿ ತೆಗೆದಷ್ಟೆ ಸಲೀಸು. ಯಾವ ವಿಷಯದ ಮೇಲಾದರೂ ಯಾರ ಕುರಿತಾದರೂ ಬರೆಯಬಲ್ಲರು; ಅವರದೇ ಧಾಟಿಯಲ್ಲಿ ಬರೆಯ ಬೇಕೆಂದೆರೆ “ಎಮ್ಮೆಗೆ ಅಕ್ಕೊಚ್ಚು ಹೊಯ್ದಂಗಲ್ಲ, ಒಳ್ಳೇ ಕೇಸರಿ ಹಾಕಿ ಮಾಡಿದ ಗಸ ಗಸೆ ಪಾಯಸದಂತೆ ಇರುತ್ತದೆ".

-

ನಾರಾಯಣ ಯಾಜಿ
ಕೆಲವರ ಲೇಖನಗಳು ಅವರಿಗೆ ಜನಪ್ರಿಯತೆ ತಂದುಕೊಡುತ್ತದೆ. ಇನ್ನು ಕೆಲ ಲೇಖಕರು ಅನಾಮಧೇಯ ಸಾಧಕರನ್ನು ಗುರುತಿಸಿ ಅವರನ್ನು ಜನಪ್ರಿಯರನ್ನಾಗಿಸುತ್ತಾರೆ. ರಾಜು ಅಡಕಳ್ಳಿ ಅವರ ಇತ್ತೀಚಿನ ಕೃತಿ “ಗೆದ್ದವರ ಕಥೆಗಳು" ಎರಡನೆಯ ವಿಭಾಗಕ್ಕೆ ಸೇರಿದಂತವುಗಳಾಗಿದೆ.
ಅಡಕಳ್ಳಿಯವರಿಗೆ ಬರಹ ಎಂದರೆ ಹೊಳ್ಳಿ ಮೇಲೆ ಕುಳಿತು ಕವಳದ ಚಂಚಿ ತೆಗೆದಷ್ಟೆ ಸಲೀಸು. ಯಾವ ವಿಷಯದ ಮೇಲಾದರೂ ಯಾರ ಕುರಿತಾದರೂ ಬರೆಯಬಲ್ಲರು; ಅವರದೇ ಧಾಟಿಯಲ್ಲಿ ಬರೆಯಬೇಕೆಂದೆರೆ “ಎಮ್ಮೆಗೆ ಅಕ್ಕೊಚ್ಚು ಹೊಯ್ದಂಗಲ್ಲ, ಒಳ್ಳೇ ಕೇಸರಿ ಹಾಕಿ ಮಾಡಿದ ಗಸ ಗಸೆ ಪಾಯಸದಂತೆ ಇರುತ್ತದೆ".
“ವ್ಯಕ್ತಿ ಶಕ್ತಿ, ಹೊಸಮುಖ,ಸ್ಪೂರ್ತಿವಂತರು ಕೃತಿಯ ನಂತರ ಈ ಸರಣಿಯನ್ನು ಪ್ರಾರಂಭಿಸಿ ನಾಲ್ಕನೆಯದಾದದ್ದು “ಗೆದ್ದವರ ಕಥೆಗಳು" ಒಟ್ಟಾರೆಯಾಗಿ ಅವರ ಹತ್ತನೆ ಕೃತಿ. ರಾಜು ಅಡಕಳ್ಳಿ ಅಂಕಣಕಾರರಾಗಿ ಪ್ರಸಿದ್ಧರು. ಅವರ ಅಂಕಣ “ವ್ಯಕ್ತಿ ಶಕ್ತಿ" ಮಹತ್ವದ್ದಾಗುವುದು ಅದರಲ್ಲಿ ಇವರು ಬರೆಯುವ ವ್ಯಕ್ತಿಗಳ ಕುರಿತಾಗಿ. ಲೋಕದಲ್ಲಿ “ಅನಾಮಧೇಯರು ಪರಿಣಾಮಕಾರಿ ಇತಿಹಾಸವನ್ನು ಸೃಷ್ಟಿಸಬಲ್ಲರು" ಎನ್ನುವ ಮಾತಿದೆ.
ಈ ಕೃತಿಯಲ್ಲಿ ಒಟ್ಟೂ ಮುವತ್ತ್ನಾಲ್ಕು ಸಾಧಕರ ಸಾಧನೆಗಳ ವಿವರವಿಲ್ಲಿದೆ. ಯಾವುದೂ ಉತ್ರೇಕ್ಷೆಯಿಂದ ಕೂಡಿಲ್ಲ. ಎಲ್ಲವರೂ ಉತ್ತರಕನ್ನಡ ಜಿಲ್ಲೆಯವರು. ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಹೊತ್ತುಕೊಂಡು ಜಿಲ್ಲೆಯಿಂದ ರಾಜು ಅಡಕಳ್ಳಿಯವರು ಗುರುತಿಸಿದ ಸಾಧಕರ ಸಂಖ್ಯೆ ನೂರವೈತ್ತು ದಾಟಿರಬಹುದು.
ಕೃಷಿಯಿಂದ ಹಿಡಿದು ಕಾರ್ಪೋರೇಟ್ ಜಗತ್ತನ್ನು ಕಟ್ಟಿದ ಮಹನೀಯರ ಪರಿಚಯ ಇಲ್ಲಿದೆ. ಪ್ರತಿಯೋರ್ವ ಸಾಧಕನ ಕುರಿತೂ Phಜ ಮಾಡಬಹುದು. ಜೀವನ ಮತ್ತು ಬದುಕು ಎರಡರಲ್ಲಿ ವೆತ್ಯಾಸವಿದೆ. ಜೀವವಿರುವರೆಲ್ಲರೂ ಜೀವಿಸುವವರು; ಬದುಕು ಹಾಗಲ್ಲ, ಅದನ್ನು ಕಟ್ಟಬೇಕಾಗು ತ್ತದೆ. ಜೊತೆಯಲ್ಲಿರುವವರಿಗೂ ಬದುಕನ್ನು ಕಟ್ಟಿಕೊಡುತ್ತಾರೆ.
ಅಂತಹವರ ಸಾಧನೆ ಬದುಕಿನಲ್ಲಿ ಏನಿಲ್ಲವೆನ್ನುವವರಿಗೆ ಮೂಡಿಬಂದ ಬೆಳಕಿನ ಪುಂಜವಿದು. ಅಂಕಣಕಾರ ಪ್ರತಿವಾರವೂ ಬರೆಯಲು ವಿಷಯಕ್ಕಾಗಿ ತಡಾಕಾಡುತ್ತಾನೆ. ಸಮಾಜವನ್ನು ಸಕಾರಾ ತ್ಮಕವಾಗಿ ನೋಡುವವರಿಗೆ ವಿಷಯದ ಕೊರತೆಯಿರುವುದಿಲ್ಲ. ಎಲ್ಲಿಯೋ ಕುಳಿತು ಫೋನಿನಲ್ಲಿ ವಿಚಾರಿಸಿ ಬರೆದ ಬರಹಗಳು ಇವಲ್ಲ. ತಾವೇ ಹೊಗಿ ಸ್ವತಃ ನೋಡಿ ಮನದಟ್ಟು ಮಾಡಿಕೊಂಡು ಬರೆದಿದ್ದಾರೆ.
ಪ್ರತಿಯೊಂದೂ ಬರಹಗಳೂ ಭಿನ್ನ ಭಿನ್ನ. ಓದುವಾಗ ಭಣ, ಭಣಾ ಅನಿಸುವುದಿಲ್ಲ. ಹೃದಯದಲ್ಲಿ ಸಂವೇದನೆ ಎಬ್ಬಿಸಿದ ಸೇವಾಕಾರಯವನ್ನು ಗಮನಿಸಿ ಎದೆಯಾಳದ ಅನಿಸಿಕೆಗಳು ಇಲ್ಲಿವೆ. ಹಾಗಾಗಿ ಇದು ಓದುಗರ ಹೃದಯವನ್ನು ತಟ್ಟುತ್ತದೆ. ಸರಳ, ಗ್ರಾಮ್ಯ ಶಬ್ದಗಳಾದ ತಂಬ್ಳಿ,ಮಗೆಕಾಯಿ ಪಳ್ಡ್ಯ, ಎಮ್ಮೆಹಗ್ಗ, ಹೀಗೆ ಉತ್ತರಕನ್ನಡದ ಆಡುಮಾತನ್ನು ಬರಹಕ್ಕೆ ಪೋಣಿಸುವ ಕಲೆ ಇವರಿಗೆ ಸಿದ್ಧಿಸಿದೆ.
ಎಲ್ಲಕ್ಕಿಂತ ಇಷ್ಟವಾಗುವುದು ಸ್ವರ್ಣವಲ್ಲಿ ಶ್ರೀಗಳನ್ನು ಇವರು ಚಿತ್ರಿಸಿದ ರೀತಿ. ಅವರ ಕುರಿತು ಅನೇಕಲೇಖನ ಬಗೆಬಗೆಯಲ್ಲಿ ಈಗಾಗಲೇ ಬಂದಿವೆ. ಅವರ ಬಹುಮುಖೀ ಸಮಾಜ ಚಿಂತನೆ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ಶೃತಿ ಹಿಡಿದ ತಂತಿಯಂತೆ ಭಕ್ತಿಯ ಲಯದಲ್ಲಿ ಪೋಣಿಸಿದ್ದಾರೆ. ವಿಶ್ವವಾಣಿಯ ಸಂಪಾದಕ ವಿಶ್ವೇಶ್ವರ ಭಟ್ಟರು ಬೆನ್ನುಡಿಯಲ್ಲಿ ಬರೆದಂತೆ ಜೀವನದ ಏರಿಳಿತದಲ್ಲಿ ಬದುಕನ್ನು ಹಸನು ಮಾಡಿಕೊಂಡ “ಗೆದ್ದವರ ಕಥೆಗಳು"ಎನ್ನುವುದು ನಿತ್ಯ ಸತ್ಯ.
ಪುಸ್ತಕವೊಂದರ ಯಶಸ್ಸು ವಿಷಯ, ನಿರೂಪಣೆ, ಸಮಕಾಲೀನತೆಗಳನ್ನು ಅವಲಂಬಿರುತ್ತದೆ. ಅಡಕಳ್ಳಿ ಗೆದ್ದವರನ್ನು ಗೆಲ್ಲಿಸಿದ್ದಲ್ಲದೇ ತಾವೂ ಗೆದ್ದಿದ್ದಾರೆ.