ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jagdeep Dhankhar: ಮಾಜಿ ಶಾಸಕತ್ವದ ಪಿಂಚಣಿಗೆ ಜಗದೀಪ್‌ ಧನ್ಕರ್‌ ಅರ್ಜಿ

ಧನಕರ್‌ ಅವರು ಈ ಹಿಂದೆ ಕಿಶನ್‌ಗಢ ಕ್ಷೇತ್ರದಿಂದ 1993 ರಿಂದ 1998ರ ತನಕ ಕಾಂಗ್ರೆಸ್‌ ಶಾಸಕರಾಗಿದ್ದರು. ಆ ಬಳಿಕ 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳುವ ತನಕ ಪಿಂಚಣಿ ಪಡೆಯುತ್ತಿದ್ದರು. ನಂತರ ಸ್ಥಗಿತಗೊಳಿಸಲಾಗಿತ್ತು.

ಮಾಜಿ ಶಾಸಕತ್ವದ ಪಿಂಚಣಿಗೆ ಜಗದೀಪ್‌ ಧನ್ಕರ್‌ ಅರ್ಜಿ

-

Abhilash BC Abhilash BC Aug 31, 2025 8:44 AM

ಜೈಪುರ: ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌(Jagdeep Dhankhar) ಅವರು ಮಾಜಿ ಶಾಸಕ ಕೋಟಾದಡಿ ತಮಗೆ ಸಿಗಬೇಕಿರುವ ಪಿಂಚಣಿ ನೀಡುವಂತೆ(Dhankhar applies for pension) ಕೋರಿ ರಾಜಸ್ಥಾನದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಅನಾರೋಗ್ಯ ಕಾರಣ ನೀಡಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಧನಕರ್‌ ಅವರು ಈ ಹಿಂದೆ ಕಿಶನ್‌ಗಢ ಕ್ಷೇತ್ರದಿಂದ 1993 ರಿಂದ 1998ರ ತನಕ ಕಾಂಗ್ರೆಸ್‌ ಶಾಸಕರಾಗಿದ್ದರು. ಆ ಬಳಿಕ 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳುವ ತನಕ ಪಿಂಚಣಿ ಪಡೆಯುತ್ತಿದ್ದರು. ನಂತರ ಸ್ಥಗಿತಗೊಳಿಸಲಾಗಿತ್ತು.

ಇದೀಗ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮತ್ತೆ ಪಿಂಚಣಿ ಪುನಾರಂಭಿಸುವಂತೆ ಕೋರಿ ರಾಜಸ್ಥಾನ ವಿಧಾನಸಭಾ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.ಸಚಿವಾಲಯವು ಈ ಪ್ರಕ್ರಿಯೆ ಪ್ರಾರಂಭಿಸಿದ್ದು, ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಅಂಗೀಕರಿಸಲ್ಪಟ್ಟ ದಿನದಿಂದ ಪಿಂಚಣಿ ಅನ್ವಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 74 ವರ್ಷದ ಧನಕರ್‌ ಅವರು ಮಾಸಿಕ 42 ಸಾವಿರ ರೂ. ಪಿಂಚಣಿಗೆ ಅರ್ಹರಾಗಿದ್ದಾರೆ.

ಇದನ್ನೂ ಓದಿ Jagdeep Dhankhar: ʼʼಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಧನಕರ್‌ ಕಚೇರಿ ಸೀಲ್‌ ಮಾಡಿಲ್ಲʼʼ: ಕೇಂದ್ರದಿಂದ ಸ್ಪಷ್ಟನೆ

ಉಪರಾಷ್ಟ್ರಪತಿ ಹುದ್ದೆಗೆ ದಿಢೀರ್‌ ರಾಜೀನಾಮೆ ನೀಡಿದ್ದ ಅವರ ಈ ನಡೆ ಹಲವಾರು ಸಂಶಯಗಳು, ಗೊಂದಲಗಳಿಗೆ ಎಡೆಮಾಡಿತ್ತು. ಬಿಜೆಪಿಗೆ ತಕ್ಕಂತೆ ವರ್ತಿಸುತ್ತಿರಲಿಲ್ಲವಾದ್ದರಿಂದ ಅವರನ್ನು ತೆಗೆದುಹಾಕಲಾಯಿತು ಎಂಬ ವಿಶ್ಲೇಷಣೆಗಳೂ ಕೇಳಿಬಂದಿದ್ದವು.