ಸೆನ್ಸೆಕ್ಸ್ 1,300 ಅಂಕ ಪತನ; 5 ಲಕ್ಷ ಕೋಟಿ ರುಪಾಯಿ ನಷ್ಟ: ಕಾರಣವೇನು?
Sensex Crashes: ಅಮೆರಿಕ-ಇಸ್ರೇಲ್-ಇರಾನ್ ಯುದ್ಧ ಮುಂದುವರಿದಿದ್ದು, ಬುಧವಾರ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,300 ಅಂಕ ಪತನವಾಗಿದ್ದು ಹೂಡಿಕೆದಾರರಿಗೆ 5 ಲಕ್ಷ ಕೋಟಿ ನೋಶನಲ್ ನಷ್ಟ ಉಂಟಾಯಿತು. ಸೆನ್ಸೆಕ್ಸ್ 1,342 ಅಂಕ ಕಳೆದುಕೊಂಡು 76,863ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು
ಸಾಂದರ್ಭಿಕ ಚಿತ್ರ -
ಮುಂಬೈ, ಮಾ. 11: ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,300 ಅಂಕ ಪತನವಾಗಿದ್ದು (Sensex Crashes), ಹೂಡಿಕೆದಾರರಿಗೆ 5 ಲಕ್ಷ ಕೋಟಿ ನೋಶನಲ್ ನಷ್ಟ ಉಂಟಾಯಿತು. ಸೆನ್ಸೆಕ್ಸ್ 1,342 ಅಂಕ ಕಳೆದುಕೊಂಡು 76,863ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು (Share Market). ನಿಫ್ಟಿ 395 ಅಂಕ ಕಳೆದುಕೊಂಡು 23,866 ಅಂಕಗಳಿಗೆ ಸ್ಥಿರವಾಯಿತು.
ಒಟ್ಟಾರೆಯಾಗಿ ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 447 ಲಕ್ಷ ಕೋಟಿ ರುಪಾಯಿಗಳಿಂದ 442 ಲಕ್ಷ ಕೋಟಿ ರುಪಾಯಿಗೆ ಇಳಿಕೆಯಾಯಿತು. ಹೂಡಿಕೆದಾರರಿಗೆ ಹೀಗಾಗಿ 5 ಲಕ್ಷ ಕೋಟಿ ನೋಶನಲ್ ನಷ್ಟವಾಯಿತು.
ಮಾರುಕಟ್ಟೆಯಲ್ಲಿ ಸೂಚ್ಯಂಕಗಳ ಕುಸಿತಕ್ಕೆ ಕಾರಣವೇನು?
ಪ್ರಾಫಿಟ್ ಬುಕಿಂಗ್: ಎಚ್‌ಡಿಎಫ್‌ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಮಹೀಂದ್ರಾ & ಮಹೀಂದ್ರಾ ಷೇರುಗಳಲ್ಲಿ ಪ್ರಾಫಿಟ್ ಬುಕಿಂಗ್ ಆಯಿತು. ಇದರ ಪರಿಣಾಮ ಸ್ಟಾಕ್ ಸೂಚ್ಯಂಕ ಇಳಿಕೆ ದಾಖಲಿಸಿತು. ನಿಫ್ಟಿ ಬ್ಯಾಂಕ್ 2.13 ಪರ್ಸೆಂಟ್, ಫೈನಾನ್ಷಿಯಲ್ ಸರ್ವೀಸ್ ಇಂಡೆಕ್ಸ್ 2.32 ಪರ್ಸೆಂಟ್, ನಿಫ್ಟಿ ಆಟೊ 3.15 ಪರ್ಸೆಂಟ್ ಇಳಿಯಿತು.
ಡಾಲರ್ ಎದುರು ರುಪಾಯಿ ಇಳಿಕೆ: ಬ್ಲೂಮ್ ಬರ್ಗ್ ವರದಿಯ ಪ್ರಕಾರ ಡಾಲರ್ ಎದುರು ರುಪಾಯಿ ಮೌಲ್ಯ 92 ರುಪಾಯಿಗೆ ಇಳಿಕೆಯಾಯಿತು.
ಅಮೆರಿಕ- ಇರಾನ್ ನಿಲ್ಲದ ಯುದ್ಧ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಯುದ್ಧ ಶೀಘ್ರ ಮುಕ್ತಾಯವಾಗಲಿದೆ ಎಂದು ಹೇಳಿದ್ದರೂ, ಇರಾನ್ ಶರಣಾಗತಿಯಾಗುವುದಿಲ್ಲ ಎಂದು ಹೇಳಿದೆ. ಅಮೆರಿಕ- ಇಸ್ರೇಲ್ ವಿರುದ್ಧ ಕದನ ಮುಂದುವರಿಸಿದೆ. ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ವಿದೇಶಿ ಹೂಡಿಕೆ ಹಿಂತೆಗೆತ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರತೀಯ ಸ್ಟಾಕ್ ಮಾರ್ಕೆಟ್‌ನಿಂದ ಮಾರ್ಚ್‌ನಲ್ಲಿ 32,800 ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಕಚ್ಚಾ ತೈಲ ದರ ಏರಿಕೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರದಲ್ಲಿ ದಾಖಲೆಯ ಎತ್ತರದಿಂದ ಇಳಿಕೆಯಾಗಿದ್ದರೂ, ಈಗಲೂ ಉನ್ನತ ಮಟ್ಟದಲ್ಲಿಯೇ ಇದೆ. ಅಮೆರಿಕ- ಇರಾನ್ ಯುದ್ಧ ದೀರ್ಘಾವಧಿಗೆ ,ಮುಂದುವರಿದರೆ ಕಚ್ಚಾ ತೈಲ ದರದ ಬಿಕ್ಕಟ್ಟು ತೀವ್ರವಾಗಲಿದೆ.
ನಿಫ್ಟಿ 50ಯಲ್ಲಿ ಲಾಭ ಗಳಿಸಿದ ಷೇರುಗಳು
ಜಿಯೊ ಫೈನಾನ್ಷಿಯಲ್ ಸರ್ವೀಸ್: 238/-: 1.15%
ಡಾ. ರೆಡ್ಡೀಸ್: 1,326/-: 0.83%
ಕೋಲ್ ಇಂಡಿಯಾ: 446/-: 0.73%
ಸನ್ ಫರ್ಮಾ: 1,826/-: 0.73%
ಎನ್‌ಟಿಪಿಸಿ: 379/-: 0.69%
ವಿಪ್ರೊ: 202/-: 0.65%
ONGC: 270/-: 0.58%
ನಿಫ್ಟಿ 50ಯಲ್ಲಿ ನಷ್ಟಕ್ಕೀಡಾದ ಷೇರುಗಳು:
ಬಜಾಜ್ ಫೈನಾನ್ಸ್: 893/-: 4.92%
ಎಕ್ಸಿಸ್ ಬ್ಯಾಂಕ್: 1,256/-: 4.49%
M&M: 3,168/-: 3.82%
ಬಜಾಜ್ ಫೈನಾನ್ಸ್: 9,328/-: 2.94%
ಶ್ರೀರಾಮ್ ಫೈನಾನ್ಸ್: 1,032/-: 2.94%
ಹೊರ್ಮುಜ್ ಜಲಸಂಧಿ ಸಂಘರ್ಷ: 40 ರಾಷ್ಟ್ರಗಳಿಂದ ತೈಲ ಆಮದು ಮಾಡಿಕೊಳ್ಳಲು ಮುಂದಾದ ಭಾರತ
ಭಾರತದ ಕ್ಯಾಪಿಟಲ್ ಮಾರ್ಕೆಟ್ ಸ್ಟಾಕ್ಸ್ 2025-26ರಲ್ಲಿ ಉತ್ತಮ ಗಳಿಕೆ ದಾಖಲಿಸಿವೆ. ನಿಫ್ಟಿ ಕ್ಯಾಪಿಟಲ್ ಮಾರ್ಕೆಟ್ಸ್ ಇಂಡೆಕ್ಸ್ 35% ಏರಿಕೆಯಾಗಿದೆ. ಪಿಎಸ್‌ಯು ಬ್ಯಾಂಕ್‌ಗಳ ನಂತರ ಸೆಕೆಂಡ್ ಬೆಸ್ಟ್ ಪರ್ಫಾರ್ಮಿಂಗ್ ಸೆಕ್ಟರ್ ಆಗಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾ ಷೇರು ದರ 2025-26ರಲ್ಲಿ 143 ಪರ್ಸೆಂಟ್ ಏರಿಕೆ ದಾಖಲಿಸಿದೆ.
ಎಲ್‌ಪಿಜಿ ಪೂರೈಕೆಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಲವಾರು ಹೋಮ್ ಅಪ್ಲೈಯನ್ಸ್ ಉತ್ಪಾದಕ ಕಂಪನಿಗಳ ಷೇರು ದರದಲ್ಲಿ ಮಂಗಳವಾರ 15 ಪರ್ಸೆಂಟ್ ಹೆಚ್ಚಳವಾಗಿದೆ. ಪಿಜನ್ ಬ್ರ್ಯಾಂಡ್ ಮಾಲಿಕತ್ವ ಹೊಂದಿರುವ ಸೌವ್ ಕ್ರಾಫ್ಟ್, ಪ್ರೆಸ್ಟೀಜ್ ಬ್ರ್ಯಾಂಡ್ ಓನರ್ ಆದ ಟಿಟಿಕೆ ಪ್ರೆಸ್ಟೀಜ್ ಷೇರು ದರ ಏರಿಕೆಯಾಯಿತು.