ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

HDFC Flexi Cap Fund : ತಿಂಗಳಿಗೆ 10,000 ರೂ SIP ; 5 ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಕೆ ಮಾಡಬಹುದಾ?

ಎಚ್‌ಡಿಎಫ್‌ಸಿ ಫ್ಲೆಕ್ಸಿ ಕ್ಯಾಪ್‌ ಫಂಡ್‌, ಫ್ಲೆಕ್ಸಿ ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಕೆಟಗರಿಯಲ್ಲಿ ಟಾಪ್‌ ಪರ್ಫಾಮರ್‌ ಆಗಿ ಹೊರಹೊಮ್ಮಿದೆ. ಕಳೆದ 5 ವರ್ಷಗಳಲ್ಲಿ ವಾರ್ಷಿಕ ಸುಮಾರು 25% ರಿಟರ್ನ್‌ ನೀಡಿದೆ. ಲಂಪ್ಸಮ್‌ ಮತ್ತು ಸಿಪ್‌ ಹೂಡಿಕೆದಾರರಿಗೆ ಲಾಭದಾಯಕವಾಗಿ ಪರಿಣಮಿಸಿದೆ.

ಸಾಂಧರ್ಬಿಕ ಚಿತ್ರ

ಬೆಂಗಳೂರು: ಎಚ್‌ಡಿಎಫ್‌ಸಿ ಫ್ಲೆಕ್ಸಿ ಕ್ಯಾಪ್‌ ಫಂಡ್‌, ಫ್ಲೆಕ್ಸಿ ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಕೆಟಗರಿಯಲ್ಲಿ ಟಾಪ್‌ ಪರ್ಫಾಮರ್‌ ಆಗಿ ಹೊರಹೊಮ್ಮಿದೆ. ಕಳೆದ 5 ವರ್ಷಗಳಲ್ಲಿ ವಾರ್ಷಿಕ ಸುಮಾರು 25% ರಿಟರ್ನ್‌ ನೀಡಿದೆ. ಲಂಪ್ಸಮ್‌ ಮತ್ತು ಸಿಪ್‌ ಹೂಡಿಕೆದಾರರಿಗೆ ಲಾಭದಾಯಕವಾಗಿ ಪರಿಣಮಿಸಿದೆ. ಪ್ರತಿ ತಿಂಗಳು 5,000 ರುಪಾಯಿಗಳಂತೆ ಸಿಪ್‌ ಮೂಲಕ ಹೂಡಿಕೆ ಮಾಡಿದವರಿಗೆ 10 ಲಕ್ಷ ರುಪಾಯಿಗಳ ಗಳಿಕೆ ಸಾಧ್ಯವಾಗಿದೆ. ಹೂಡಿಕೆದಾರರ ಹೂಡಿಕೆಯನ್ನು ಮೂರು ಪಟ್ಟು ವೃದ್ಧಿಸಿಚೆ. ವಾಲ್ಯೂ ರಿಸರ್ಚ್‌ ಮತ್ತು ಮಾರ್ನಿಂಗ್‌ ಸ್ಟಾರ್‌ನಿಂದ 5 ಸ್ಟಾರ್‌ ರೇಟಿಂಗ್ಸ್‌ ಅನ್ನೂ ಈ ಮ್ಯೂಚುವಲ್‌ ಫಂಡ್‌ ಗಳಿಸಿದೆ.

ಹಾಗಾದರೆ ಈ HDFC Flexi Cap Fund ಬಗ್ಗೆ ಒಂದಷ್ಟು ವಿವರಗಳನ್ನು ತಿಳಿದುಕೊಳ್ಳೋಣ.

ಈ ಫಂಡ್‌ ಕಳೆದ 5 ವರ್ಷಗಳಲ್ಲಿ ಸರಾಸರಿ 25% ರಿಟರ್ನ್‌ ನೀಡುವುದರೊಂದಿಗೆ ಹೂಡಿಕೆದಾರರ ಗಮನ ಸೆಳೆದಿದೆ. ತನ್ನ ಬೆಂಚ್‌ ಮಾರೆಕ್‌ ನಿಫ್ಟಿ 500 ಟೋಟಲ್‌ ರಿಟರ್ನ್ ಇಂಡೆಕ್ಸ್‌ ಅನ್ನೂ ಮೀರಿಸಿದೆ.

HDFC Flexi Cap Fund ಕಳೆದ 5 ವರ್ಷಗಳಲ್ಲಿ ಡೈರೆಕ್ಟ್‌ ಪ್ಲಾನ್‌ ಅಡಿಯಲ್ಲಿ ವಾರ್ಷಿಕ 24.97% CAGR ರಿಟರ್ನ್‌ ನೀಡಿದೆ. 5 ವರ್ಷಗಳ ರೆಗ್ಯುಲರ್‌ ಪ್ಲಾನ್‌ ಅಡಿಯಲ್ಲಿ 24.16% ರಿಟರ್ನ್‌ ಕೊಟ್ಟಿದೆ. ಬೆಂಚ್‌ ಮಾರ್ಕ್‌ ರಿಟರ್ನ್‌ 17.19% CAGR ಆಗಿದೆ.

ಒಂದು ವೇಳೆ 5 ವರ್ಷಗಳ ಹಿಂದೆ 1 ಲಕ್ಷ ರುಪಾಯಿಗಳನ್ನು ಹೂಡಿಕೆ ಮಾಡಿರುತ್ತಿದ್ದರೆ ಈಗ ಅದು 3 ಲಕ್ಷದ 5 ಸಾವಿರ ರುಪಾಯಿಗೆ ಏರಿಕೆಯಾಗಿರುತ್ತಿತ್ತು. ಅಂದರೆ ಹೂಡಿಕೆದಾರರ ಹೂಡಿಕೆಯನ್ನು ಇದು ಮೂರು ಪಟ್ಟು ಹೆಚ್ಚಿಸಿದಂತಾಗಿದೆ.

ಸಿಪ್‌ ಹೂಡಿಕೆದಾರರ ಸಂಪತ್ತನ್ನೂ ಎಚ್‌ಡಿಎಫ್‌ಸಿ ಫ್ಲೆಕ್ಸಿ ಕ್ಯಾಪ್‌ ಫಂಡ್‌ ಹೆಚ್ಚಿಸಿದೆ. ಅದರ ವಿವರಗಳನ್ನು ಕೂಡ ತಿಳಿಯೋಣ.

ಮಾಸಿಕ ಸಿಪ್‌ ಮೊತ್ತ : 10,000/-

ಹೂಡಿಕೆಯ ಅವಧಿ: 5 ವರ್ಷಗಳು

ಒಟ್ಟು ಹೂಡಿಕೆಯ ಮೊತ್ತ: 6 ಲಕ್ಷ ರುಪಾಯಿ.

5 ವರ್ಷ ಸಿಪ್‌ ರಿಟರ್ನ್:‌ ವಾರ್ಷಿಕ 21.69%

5 ವರ್ಷಗಳ ಕೊನೆಯಲ್ಲಿ ಸಿಪ್‌ ಹೂಡಿಕೆ: 10,27,815 ರುಪಾಯಿ. ( 10 ಲಕ್ಷದ 27 ಸಾವಿರ 815 ರುಪಾಯಿ)

Stock Market: ಸ್ಟಾಕ್ ಮಾರ್ಕೆಟ್ ನಲ್ಲಿ ಮುಂದಿನ ವಾರ ಪ್ರಭಾವ ಬೀರಬಹುದಾದ ಅಂಶಗಳೇನು?

ಫ್ಲೆಕ್ಸಿ ಕ್ಯಾಪ್‌ ಫಂಡ್‌ ಏಕೆ ಆಕರ್ಷಕ? ಫ್ಲೆಕ್ಸಿ ಕ್ಯಾಪ್‌ ಫಂಡ್‌ಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಹೂಡಿಕೆ ಹರಿದು ಬರುತ್ತಿದೆ. ಇಲ್ಲಿ ಫಂಡ್‌ ಮ್ಯಾನೇಜರ್‌ಗಳು ಲಾರ್ಜ್‌ ಕ್ಯಾಪ್‌, ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಸ್ಟಾಕ್ಸ್‌ಗಳಲ್ಲಿ, ಮಾರುಕಟ್ಟೆಯ ಪರಿಸ್ಥಿತಿಯನ್ನು ಗಮನಿಸಿಕೊಂಡು ಹೂಡಿಕೆ ಮಾಡಬಹುದಾಗಿದೆ. ಹೀಗಾಗಿ ಫ್ಲೆಕ್ಸಿ ಕ್ಯಾಪ್‌ ಫಂಡ್‌ಗಳು ಜನಪ್ರಿಯವಾಗಿವೆ.

ಕೇಶವ ಪ್ರಸಾದ್​ ಬಿ

View all posts by this author