ಬೆಂಗಳೂರಿನ ಸ್ಪೇಸ್ ಟೆಕ್ ಸ್ಟಾರ್ಟ್‌ಅಪ್ ದಿಗಂತರದಲ್ಲಿ ಹೂಡಿಕೆ
Digantara: ಬೆಂಗಳೂರು ಮೂಲದ ಸ್ಪೇಸ್ ಟೆಕ್ ಸ್ಟಾರ್ಟ್‌ಅಪ್ ದಿಗಂತರದಲ್ಲಿ ಹೂಡಿಕೆದಾರರು 450 ಕೋಟಿ ರುಪಾಯಿ ಹೂಡಿಕೆಯನ್ನು ಮಾಡಿದ್ದಾರೆ. 2020ರಲ್ಲಿ ಸ್ಥಾಪನೆಯಾಗಿರುವ ದಿಗಂತರ ಸ್ಟಾರ್ಟ್‌ಅಪ್ ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ಸಾಧನೆ ಮಾಡಿದೆ. ಸ್ಪೇಸ್ ಬೇಸ್ಡ್ ಸರ್ವೈವಲೆನ್ಸ್ ಮತ್ತು ಆರಂಭಿಕ ಮುನ್ನೆಚ್ಚರಿಕೆ ನೀಡುವ ತಂತ್ರಜ್ಞಾನ ವಿಭಾಗದಲ್ಲಿ ಮುಂಚೂಣಿಯಲ್ಲಿದೆ.
ಅನಿರುದ್ಧ್ ಶರ್ಮಾ -
ಬೆಂಗಳೂರು, ಡಿ. 21: ಬೆಂಗಳೂರು ಮೂಲದ ಸ್ಪೇಸ್ ಟೆಕ್ ಸ್ಟಾರ್ಟ್‌ಅಪ್ ದಿಗಂತರದಲ್ಲಿ (Digantara) ಹೂಡಿಕೆದಾರರು 50 ದಶಲಕ್ಷ ಡಾಲರ್ (ಸುಮಾರು 450 ಕೋಟಿ ರುಪಾಯಿ) ಹೂಡಿಕೆಯನ್ನು ಮಾಡಿದ್ದಾರೆ. ಇದರೊಂದಿಗೆ ಸ್ಟಾರ್ಟ್‌ಅಪ್‌ಗೆ ಒಟ್ಟು 64 ದಶಲಕ್ಷ ಡಾಲರ್ ಹೂಡಿಕೆ ಲಭಿಸಿದಂತಾಗಿದೆ. 2020ರಲ್ಲಿ ಸ್ಥಾಪನೆಯಾಗಿರುವ ದಿಗಂತರ ಸ್ಟಾರ್ಟ್‌ಅಪ್ ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ಸಾಧನೆ ಮಾಡಿದೆ. ನಿರ್ಣಾಯಕ ಸಮಸ್ಯೆಗಳನ್ನು ಬಗೆಹರಿಸಿದೆ. ಸ್ಪೇಸ್ ಬೇಸ್ಡ್ ಸರ್ವೈವಲೆನ್ಸ್ ಮತ್ತು ಆರಂಭಿಕ ಮುನ್ನೆಚ್ಚರಿಕೆ ನೀಡುವ ತಂತ್ರಜ್ಞಾನ ವಿಭಾಗದಲ್ಲಿ ಮುಂಚೂಣಿಯಲ್ಲಿದೆ.
ದಿಗಂತರವು ತನ್ನ ಮೊದಲ ಸ್ಪೇಸ್ ಸರ್ವೈವಲೆನ್ಸ್ ಸ್ಯಾಟಲೈಟ್ (ಸ್ಪೇಸ್ ಕೆಮರಾ ಫಾರ್ ಆಬ್ಜೆಕ್ಟ್ ಟ್ರ್ಯಾಕಿಂಗ್) ಅನ್ನು ಜನವರಿಯಲ್ಲಿ ಬಿಡುಗಡೆಗೊಳಿಸಿತು. ಸ್ಪೇಸ್ ಎಕ್ಸ್‌ನ ಟ್ರಾನ್ಸ್‌ಪೋರ್ಟರ್-12 ಯೋಜನೆಯಲ್ಲಿ ಇದನ್ನು ಸೇರಿಸಲಾಗಿತ್ತು. ಸ್ಪೇಸ್-ಟು ಸ್ಪೇಸ್ ನಿಗಾ ವಹಿಸಲು ಇದು ಅನುಕೂಲ ಒದಗಿಸಿತ್ತು. ಬಳಿಕ ಭಾರತ ಮತ್ತು ಅಮೆರಿಕದಲ್ಲಿ ಡಿಫೆನ್ಸ್ ಗುತ್ತಿಗೆಗಳನ್ನು ಸ್ಟಾರ್ಟ್‌ಅಪ್ ಗಳಿಸಿದೆ. ಮುಂದಿನ ಎರಡು ವರ್ಷಗಳಲ್ಲಿ 15 ಸರ್ವೈವಲೆನ್ಸ್ ಸ್ಯಾಟಲೈಟ್ಸ್‌ಗಳನ್ನು ಬಿಡುಗಡೆಗೊಳಿಸುವ ಸಿದ್ಧತೆಯಲ್ಲಿದೆ ಎಂದು ಸಿಇಒ ಮತ್ತು ಸ್ಥಾಪಕ ಅನಿರುದ್ಧ್ ಶರ್ಮಾ ತಿಳಿಸಿದ್ದಾರೆ. 360 ವನ್ ಅಸೆಟ್, ಎಸ್ ಬಿಐ ಇನ್ವೆಸ್ಟ್‌ಮೆಂಟ್ ಕೊ ಜಪಾನ್, ರೊನ್ನಿ ಸ್ಕ್ರಿವಾಲಾ ಹೊಸ ಹೂಡಿಕೆ ಮಾಡಿವೆ. ಹಾಲಿ ಹೂಡಿಕೆದಾರ ಕಂಪನಿಗಳಾದ ಪೀಕ್ ಎಕ್ಸ್‌ವಿ ಪಾರ್ಟ್ ನರ್ಸ್ ಮತ್ತು ಕಲಾರಿ ಕ್ಯಾಪಿಟಲ್ ಹೂಡಿಕೆಯನ್ನು ಮುಂದುವರಿಸಿವೆ.
ತಿಂಗಳಿಗೆ 10,000 ರೂ SIP; 5 ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಕೆ ಮಾಡಬಹುದಾ?
ಈ ಹೊಸ ಹೂಡಿಕೆಯ ನೆರವಿನಿಂದ ಕಂಪನಿಗೆ ಅಮೆರಿಕ, ಯುರೋಪ್‌ನಲ್ಲಿ ಚಟುವಟಿಕೆ, ವಹಿವಾಟುಗಳನ್ನು ವೃದ್ಧಿಸಲು ಅನುಕೂಲವಾಗಿದೆ ಎಂದು ಅನಿರುದ್ಧ್ ಶರ್ಮಾ ತಿಳಿಸಿದ್ದಾರೆ.
ಜಗತ್ತಿನ ಮೊದಲ ಕಮರ್ಶಿಯಲ್ ಸ್ಪೇಸ್ ಸರ್ವೈವಲೆನ್ಸ್ ಸ್ಯಾಟಲೈಟ್ ಅನ್ನು ದಿಗಂತರ ಬಿಡುಗಡೆಗೊಳಿಸಿದೆ. ಮಿಲಿಟರಿ ವಲಯದಲ್ಲಿ ಬಳಕೆಯಾಗುತ್ತಿದ್ದ ಸ್ಯಾಟಲೈಟ್ ಈಗ ಎಲ್ಲ ರಂಗಗಳಲ್ಲಿ ಕೂಡ ಬಳಕೆಯಾಗುತ್ತಿದೆ. ದೇಶದ ಅಭಿವೃದ್ಧಿಗೆ ಇದು ಉಪಯುಕ್ತವಾಗಿದೆ.

ದಿಗಂತರ ಅಭಿವೃದ್ಧಿಪಡಿಸಿರುವ ಸರ್ವೈವಲೆನ್ಸ್ ಸ್ಯಾಟಲೈಟ್ ಬಾಹ್ಯಾಕಾಶದಲ್ಲಿ ಸಣ್ಣ ಪುಟ್ಟ ಅವಶೇಷಗಳನ್ನೂ ಪತ್ತೆ ಹಚ್ಚಬಲ್ಲುದು. ಭಾರತ, ಸಿಂಗಾಪುರ, ಅಮೆರಿಕ, ಯುರೋಪ್‌ನಲ್ಲಿ 2026ರ ಮಧ್ಯ ಭಾಗದಲ್ಲಿ ಚಟುವಟಿಕೆಗಳನ್ನು ವಿಸ್ತರಣೆ ಮಾಡುವ ಮಹತ್ತ್ವಾಕಾಂಕ್ಷೆಯನ್ನು ದಿಗಂತರ ಹೊಂದಿದೆ. ಡಿಫೆನ್ಸ್ ಮತ್ತು ಕಮರ್ಷಿಯಲ್ ಇಂಟಲಿಜೆನ್ಸ್ ವಲಯದ ಗ್ರಾಹಕರಿಂದ ದೊಡ್ಡ ಗುತ್ತಿಗೆಗಳನ್ನು ಪಡೆಯಲಾಗಿದೆ ಎಂದು ದಿಗಂತರದ ಸಿಇಒ ಅನಿರುದ್ಧ್ ಶರ್ಮಾ ತಿಳಿಸಿದ್ದಾರೆ. ಭಾರತದ ಬಾಹ್ಯಾಕಾಶ ವಲಯವನ್ನು 2020ರಿಂದೀಚೆಗೆ ಖಾಸಗೀಕರಣಗೊಳಿಸಲಾಗುತ್ತಿದೆ. ಖಾಸಗಿ ವಲಯದ ಕಂಪನಿಗಳೂ ಉತ್ಸಾಹದಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಹಾದಿ ಸುಗಮವಾಗಿದೆ. ಇಸ್ರೋ ಕೂಡ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಕೈಗೊಳ್ಳುತ್ತಿದೆ.