ಬಿಜೆಪಿ ದೃಷ್ಟಿಯಲ್ಲಿ ಆರ್‌ಎಸ್‌ಎಸ್ ಅನ್ನು ನೋಡುವುದು ತಪ್ಪು: ಮೋಹನ್ ಭಾಗವತ್
ಆರ್‌ಎಸ್‌ಎಸ್ ಅನ್ನು ಬಿಜೆಪಿಯ ದೃಷ್ಟಿಕೋನದಲ್ಲಿ ನೋಡುವುದು ಒಂದು ದೊಡ್ಡ ತಪ್ಪು. ಅದೇ ರೀತಿಯಾಗಿ ಆರ್‌ಎಸ್‌ಎಸ್ ಸೇವಾ ಸಂಸ್ಥೆ ಎಂದು ತಿಳಿದುಕೊಳ್ಳುವುದು ಕೂಡ ಸರಿಯಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. ಅವರು ಕೋಲ್ಕತ್ತಾದಲ್ಲಿ ಆರ್‌ಎಸ್‌ಎಸ್ ನ 100 ವ್ಯಾಖ್ಯಾನ ಮಾಲಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮೋಹನ್ ಭಾಗವತ್ (ಸಂಗ್ರಹ ಚಿತ್ರ) -
ಕೋಲ್ಕತ್ತಾ: ಬಿಜೆಪಿಯ (BJP) ದೃಷ್ಟಿಯಲ್ಲಿ ಆರ್‌ಎಸ್‌ಎಸ್ (RSS) ಅನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಅದೇ ರೀತಿ ಆರ್‌ಎಸ್‌ಎಸ್ ಅನ್ನು ಕೇವಲ ಒಂದು ಸೇವಾ ಸಂಸ್ಥೆ ಎಂದು ಗುರುತಿಸುವುದು ಕೂಡ ತಪ್ಪು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ತಿಳಿಸಿದ್ದಾರೆ. ಕೋಲ್ಕತ್ತಾದಲ್ಲಿ ಭಾನುವಾರ ಅವರು ಆರ್‌ಎಸ್‌ಎಸ್ 100 ವ್ಯಾಖ್ಯಾನ ಮಾಲಾ (RSS 100 Vyakhyan Mala) ಕಾರ್ಯಕ್ರಮದಲ್ಲಿ ಮಾತನಾಡಿ, ಹೋಲಿಕೆಗಳು ಅಥವಾ ರಾಜಕೀಯ ದೃಷ್ಟಿಕೋನಗಳಿಂದ ಸಂಘಟನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ತಪ್ಪು ತಿಳುವಳಿಕೆಗಳಿಗೆ ಕಾರಣವಾಗುತ್ತದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ ಹೋಲಿಕೆಗಳನ್ನು ಮಾಡುವುದು ತಪ್ಪು ತಿಳುವಳಿಕೆಗಳಿಗೆ ಕಾರಣವಾಗುತ್ತದೆ. ಅನೇಕ ಜನರು ಬಿಜೆಪಿಯ ದೃಷ್ಟಿಯಲ್ಲಿ ಸಂಘವನ್ನು ಅರ್ಥಮಾಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಇದು ದೊಡ್ಡ ತಪ್ಪು ಎಂದು ಅವರು ಹೇಳಿದರು.
#WATCH | Kolkata, West Bengal | RSS Chief Mohan Bhagwat says, "If you want to understand 'Sangh', making comparisons will lead to misunderstandings... If you consider the 'sangh' to be just another service organisation, you'll be mistaken... Many people have a tendency to… pic.twitter.com/zyELZc7tC4
— ANI (@ANI) December 21, 2025
ಇದಕ್ಕೂ ಮೊದಲು ಸಿಲಿಗುರಿಯ ಉತ್ತರ ಬಂಗಾ ಮಾರ್ವಾರಿ ಭವನದಲ್ಲಿ ಶುಕ್ರವಾರ ಬೆಳಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಆಚರಣೆ ನಡೆಯಿತು. ಇದರಲ್ಲಿ ಕೂಡ ಭಾಗವತ್ ಪಾಲ್ಗೊಂಡಿದ್ದರು. ದಿನವಿಡೀ ನಡೆದ ಸಮ್ಮೇಳನದಲ್ಲಿ ಆರ್‌ಎಸ್‌ಎಸ್ ಉತ್ತರ ಬಂಗಾ ಪ್ರಾಂತ್ಯ ಆಯೋಜಿಸುತ್ತಿದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ: 100 ವರ್ಷಗಳ ಪಯಣ ಶೀರ್ಷಿಕೆಯ ಈ ಸಮ್ಮೇಳನದಲ್ಲಿ ಉತ್ತರ ಬಂಗಾಳದ ಎಂಟು ಜಿಲ್ಲೆಗಳಿಂದ ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಯುವ ಸಮ್ಮೇಳನದಲ್ಲಿ ಗುರುವಾರ ಪಾಲ್ಗೊಂಡಿದ್ದ ಭಾಗವತ್, ಆರ್‌ಎಸ್‌ಎಸ್‌ನ ಐತಿಹಾಸಿಕ ವಿಕಸನ ಮತ್ತು ಪ್ರಗತಿಪರ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು.
ಸಂಘದ ಕುರಿತಾಗಿರುವ ಹಲವಾರು ತಪ್ಪು ಕಲ್ಪನೆಗಳ ಕುರಿತು ಮಾಹಿತಿ ನೀಡಿದ ಅವರು, ನೈತಿಕ ಬಲವಾಗಿರುವ ಮತ್ತು ಸಾಮಾಜಿಕವಾಗಿ ಬದ್ಧವಾಗಿರುವ ಸ್ವಯಂಸೇವಕರಿಂದ ಮಾತ್ರ ಆರೋಗ್ಯಕರ ಸಮಾಜ ಮತ್ತು ಬಲವಾದ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಬಾಂಗ್ಲಾದೇಶದಲ್ಲಿ ಹಿಂಸಾಚಾರ: ಭಾರತೀಯ ಸಹಾಯಕ ಹೈಕಮಿಷನ್ ಕಚೇರಿ, ವೀಸಾ ಅರ್ಜಿ ಕೇಂದ್ರದಲ್ಲಿ ಬಿಗಿ ಭದ್ರತೆ
ನಿಸ್ವಾರ್ಥ ಸೇವೆ ಮತ್ತು ಮೌಲ್ಯಾಧಾರಿತ ಜೀವನದಿಂದ ಮಾರ್ಗದರ್ಶಿಸಲ್ಪಟ್ಟ ವ್ಯಕ್ತಿಗಳು ರಾಷ್ಟ್ರದ ಹೆಮ್ಮೆ ಮತ್ತು ಅಭಿವೃದ್ಧಿಯನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದರು.
ಪ್ರಶ್ನೋತ್ತರ ಅವಧಿಯಲ್ಲಿ ರಾಷ್ಟ್ರೀಯ ಭದ್ರತೆ, ಶಿಕ್ಷಣ ಮತ್ತು ರಾಷ್ಟ್ರೀಯ ದೃಷ್ಟಿಕೋನಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.