ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಬಿದ್ದು ಎದ್ದ ಸೆನ್ಸೆಕ್ಸ್, ಬಿಹಾರ ರಿಸಲ್ಟ್‌ ಎಫೆಕ್ಟ್‌

Share Market: ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಸೆನ್ಸೆಕ್ಸ್‌ ಮತ್ತು ನಿಫ್ಟಿ ಬಿದ್ದು ಎದ್ದು ಚೇತರಿಸಿತು. ಬೆಳಗ್ಗಿನ ವಹಿವಾಟಿನಲ್ಲಿ ಪ್ರಾಫಿಟ್‌ ಬುಕಿಂಗ್‌ ಪರಿಣಾಮ ಕುಸಿತಕ್ಕೀಡಾಗಿದ್ದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಬಳಿಕ ಗಣನೀಯ ಚೇತರಿಸಿತು. ಬೆಳಗ್ಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್‌ 500 ಮತ್ತು ನಿಫ್ಟಿ 175 ಅಂಕ ಕುಸಿದಿತ್ತು. ಆದರೆ ನಂತರ ಚೇತರಿಕೆ ಕಂಡು ಬಂದಿತು ಅಂತಿಮವಾಗಿ ಸೆನ್ಸೆಕ್ಸ್‌ 84 ಅಂಕ ಏರಿಕೆಯಾಗಿ 84,562ಕ್ಕೆ ಸ್ಥಿರವಾಯಿತು. ನಿಫ್ಟಿ 36 ಅಂಕ ಹೆಚ್ಚಳವಾಗಿ 25,916ಕ್ಕೆ ದಿನದ ವಹಿವಾಟು ಮುಕ್ತಾಯಗಳಿಸಿತು.

ಸಾಂದರ್ಭಿಕ ಚಿತ್ರ.

ಮುಂಬಯಿ, ನ. 14: ಷೇರು ಮಾರುಕಟ್ಟೆಯಲ್ಲಿ (Stock Market) ಶುಕ್ರವಾರ ಸೆನ್ಸೆಕ್ಸ್‌ (Sensex) ಮತ್ತು ನಿಫ್ಟಿ (Nifty) ಬಿದ್ದು ಎದ್ದು ಚೇತರಿಸಿತು. ಬೆಳಗ್ಗಿನ ವಹಿವಾಟಿನಲ್ಲಿ ಪ್ರಾಫಿಟ್‌ ಬುಕಿಂಗ್‌ ಪರಿಣಾಮ ಕುಸಿತಕ್ಕೀಡಾಗಿದ್ದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಬಳಿಕ ಗಣನೀಯ ಚೇತರಿಸಿತು. ಬೆಳಗ್ಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್‌ 500 ಮತ್ತು ನಿಫ್ಟಿ 175 ಅಂಕ ಕುಸಿದಿತ್ತು. ಆದರೆ ನಂತರ ಚೇತರಿಕೆ ಕಂಡು ಬಂದಿತು ಅಂತಿಮವಾಗಿ ಸೆನ್ಸೆಕ್ಸ್‌ 84 ಅಂಕ ಏರಿಕೆಯಾಗಿ 84,562 ಕ್ಕೆ ಸ್ಥಿರವಾಯಿತು. ನಿಫ್ಟಿ 36 ಅಂಕ ಹೆಚ್ಚಳವಾಗಿ 25,916ಕ್ಕೆ ದಿನದ ವಹಿವಾಟು ಮುಕ್ತಾಯಗಳಿಸಿತು.

ಟ್ರೆಂಟ್‌, ಬಿಇಎಲ್‌, ಎಟರ್ನಲ್‌ ಮತ್ತು ಎಸ್‌ಬಿಐ ಷೇರು ಲಾಭ ಗಳಿಸಿತು. ಟಾಟಾ ಮೋಟಾರ್ಸ್‌ ಪಿವಿ, ಇನ್ಫೋಸಿಸ್‌, ಟಾಟಾ ಸ್ಟೀಲ್‌, ಐಸಿಐಸಿಐ ಬ್ಯಾಂಕ್‌, ಟೆಕ್‌ ಮಹೀಂದ್ರಾ, ಅಲ್ಟ್ರ ಟೆಕ್‌ ಸಿಮೆಂಟ್‌, ಐಟಿಸಿ ಷೇರು ದರ ಇಳಿಯಿತು.

ಸನ್‌ ಟಿವಿ ನೆಟ್‌ವರ್ಕ್ಸ್‌ ಲಿಮಿಟೆಡ್‌ ಷೇರು ದರ ಶುಕ್ರವಾರ 14 ಪರ್ಸೆಂಟ್‌ ಇಳಿಯಿತು. ಬಿಟ್‌ ಕಾಯಿನ್‌ ದರ ಕಳೆದ ಆರು ತಿಂಗಳಿನಲ್ಲಿ ಮೊದಲ ಬಾರಿಗೆ 96,000 ಡಾಲರ್‌ಗೆ ಇಳಿಯಿತು.

ಕೋಟಕ್‌ ಮಹೀಂದ್ರಾ ಬ್ಯಾಂಕ್‌ ತನ್ನ ಷೇರುಗಳ ವಿಭಜನೆಗೆ ಮುಂದಾಗಿದ್ದು, ಆಡಳಿತ ಮಂಡಳಿ ಈ ಬಗ್ಗೆ ನವೆಂಬರ್‌ 21ರಂದು ಸಭೆ ಸೇರಲಿದೆ. ಈ ಹಿಂದೆ 2010ರಲ್ಲಿ ಬ್ಯಾಂಕ್‌ ತನ್ನ ಷೇರುಗಳ ವಿಭಜನೆ ಮಾಡಿತ್ತು. ಕೋಟಕ್‌ ಮಹೀಂದ್ರಾ ಬ್ಯಾಂಕ್‌ 4 ಲಕ್ಷದ 14 ಸಾವಿರ ಕೋಟಿ ರುಪಾಯಿ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೊಂದಿದೆ.

ಏಷ್ಯನ್‌ ಪೇಂಟ್ಸ್‌ ಷೇರು ದರದಲ್ಲಿ ಕಳೆದ ಒಂದೇ ತಿಂಗಳಿನಲ್ಲಿ 25 ಪರ್ಸೆಂಟ್‌ ಹೆಚ್ಚಳವಾಗಿದೆ. 2024ರಲ್ಲಿ ಷೇರು ದರದಲ್ಲಿ 24 ಪರ್ಸೆಂಟ್‌ ಇಳಿಕೆ ಆಗಿತ್ತು. ಫಂಡಮೆಂಟಲ್‌ ಆಗಿ ಷೇರು ಉತ್ತಮವಾಗಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ‌

ಈ ಸುದ್ದಿಯನ್ನೂ ಓದಿ | RRB Recruitment: 8,860 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ; ಹೆಚ್ಚಿನ ವಿವರ ಇಲ್ಲಿದೆ

ಮುತ್ತೂಟ್‌ ಫೈನಾನ್ಸ್‌ ತನ್ನ ಎರಡನೇ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದ್ದು, 2,345 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಬಂಗಾರಕ್ಕೆ ಭಾರಿ ಬೇಡಿಕೆ ಬಂದಿರುವುದು ಇದಕ್ಕೆ ಕಾರಣವಾಗಿದೆ. ಚಿನ್ನದ ಸಾಲದ ವಿತರಣೆಯಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ಭಾರಿ ಹೆಚ್ಚಳವಾಗಿದೆ. ಇದರ ಪರಿಣಾಮ ಮುತ್ತೂಟ್‌ ಫೈನಾನ್ಸ್‌ ಎರಡನೇ ತ್ರೈಮಾಸಿಕದಲ್ಲಿ ಭರ್ಜರಿ ಲಾಭ ಗಳಿಸಿದೆ. ಮುತ್ತೂಟ್‌ ಫೈನಾನ್ಸ್‌ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ 1,47,673 ಕೋಟಿ ರುಪಾಯಿ ಲೋನ್‌ ಬುಕ್‌ ಅನ್ನು ಒಳಗೊಂಡಿದೆ. ಕಂಪನಿಯ ನಿವ್ವಳ ಬಡ್ಡಿ ಆದಾಯವು 3,991 ಕೋಟಿ ರುಪಾಯಿಗೆ ಏರಿಕೆ ಆಗಿದೆ. ಅಂದರೆ 59 ಪರ್ಸೆಂಟ್‌ ಹೆಚ್ಚಳವಾಗಿದೆ.

ಕೇಶವ ಪ್ರಸಾದ್​ ಬಿ

View all posts by this author