RRB Recruitment: 8,860 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ; ಹೆಚ್ಚಿನ ವಿವರ ಇಲ್ಲಿದೆ
Job News: ರೈಲ್ವೆ ನೇಮಕಾತಿ ಮಂಡಳಿಯು ಎನ್‌ಟಿಪಿಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಪದವಿ ವಿದ್ಯಾರ್ಹತೆ ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ ಕೊನೆ ದಿನವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆಗೆ ಬೇಕಾದ ಅರ್ಹತೆಗಳ ಕುರಿತು ಮಾಹಿತಿ ಇಲ್ಲಿದೆ.
ರೈಲ್ವೆ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ -
ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯು(Indian Railway) ತಾಂತ್ರಿಕೇತರ ವರ್ಗದ (ಎನ್‌ಟಿಪಿಸಿ(NTPC)) ದಲ್ಲಿ ಉದ್ಯೋಗಾವಕಾಶವಿದ್ದು(Job), ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು(Notification) ಬಿಡುಗಡೆ ಮಾಡಿದೆ. ಒಟ್ಟು 8,860 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಎರಡು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 5,817 ಪದವೀಧರ ಹುದ್ದೆಳು ಹಾಗೂ 3058 ಅಂಡರ್ ಗ್ರಾಜುಯೇಟ್ ಹುದ್ದೆಗಳು ಇದ್ದು, ಅರ್ಜಿ ಸಲ್ಲಿಕೆಗೆ ನವೆಂಬರ್ ಕೊನೆ ದಿನವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ner.indianrailways.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆ ಕುರಿತಾದ ಮಾಹಿತಿ, ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ .
ಖಾಲಿ ಇರುವ ಹುದ್ದೆಗಳ ವಿವರ
ಒಟ್ಟು 8,860 ಹುದ್ದೆಗಳು ಖಾಲಿ ಇದ್ದು, ಸ್ಟೇಷನ್ ಮಾಸ್ಟರ್ ವಿಭಾಗದಲ್ಲಿ 615, ಗೂಡ್ಸ್ ಟ್ರೈನ್ ಮ್ಯಾನೇಜರ್ - 342, ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ವೈಸರ್ -161, ಜೂನಿಯರ್ ಅಕೌಂಟ್ ಅಸಿಸ್ಟಂಟ್ ಕಮ್ ಟೈಪಿಸ್ಟ್ -921, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ - 638 ಹುದ್ದೆಗಳ ಭರ್ತಿಗೆ ಆಯ್ಕೆ ನಡೆಯಲಿದೆ.
ಅಂಡರ್ ಗ್ರಾಜುಯೇಟ್ ಎನ್‌ಟಿಪಿಸಿ ವಿಭಾಗದಲ್ಲಿ 3058 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದ್ದು, ಟ್ರೈನಿ ಕರ್ಕ್ - 77, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ - 2424, ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್ - 394, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ - 163 ಹುದ್ದೆಗಳಿವೆ.
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು.
ಈ ಸುದ್ದಿಯನ್ನು ಓದಿ; KEA Recruitment 2025: ವಿವಿಧ ಇಲಾಖೆಗಳ 708 ಹುದ್ದೆ ನೇಮಕಾತಿ; ಅರ್ಜಿ ಸಲ್ಲಿಕೆ ಅವಧಿ ನ.14ರವರೆಗೆ ವಿಸ್ತರಣೆ
ಆಯ್ಕೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಒಟ್ಟು ಎರಡು ಹಂತಗಳಲ್ಲಿ ನೇಮಕಾತಿ ಮಾಡಲಿದ್ದು, ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹಾಗೇ ಟೈಪಿಸ್ಟ್ (ಅಕೌಂಟ್ಸ್ ಕ್ಲರ್ಕ್, ಜೂನಿಯರ್ ಕ್ಲರ್ಕ್) ಹುದ್ದೆಗಳಿಗೆ ಟೈಪಿಂಗ್ ಸ್ಕಿಲ್ ಟೆಸ್ಟ್ (ಟಿಎಸ್‌ಟಿ) ಇರಲಿದ್ದು, ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ ಬಳಿಕ ಅಂತಿಮವಾಗಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ.
ವಯೋಮಿತಿ:
ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷ ವಯೋಮಿತಿ ಸಡಿಲಿಕೆ.
ಅರ್ಜಿ ಶುಲ್ಕ:
ಮಹಿಳೆಯರು, ಎಸ್‌ಸಿ, ಎಸ್‌ಟಿ, ತೃತೀಯ ಲಿಂಗ, ಇಬಿಸಿಗೆ 250ರೂ. ಸಾಮಾನ್ಯ, ಒಬಿಸಿ ಸೇರಿದಂತೆ ಇತರ ವರ್ಗಗಳಿಗೆ 500 ರೂ ಶುಲ್ಕ ವಿಧಿಸಲಾಗಿದೆ. ಈ ಹುದ್ದೆಗಳಿಗೆ ಈಗಾಗಲೇ ಅಕ್ಟೋಬರ್ 21ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನವೆಂಬರ್ 20 ಆಗಿದೆ.