ನವದೆಹಲಿ: ದೇಶಾದ್ಯಂತ ಸೆಪ್ಟೆಂಬರ್ 28ರಿಂದ ಮೂರು ದಿನಗಳ ಮುಷ್ಕರದ (bank strike) ಹಿನ್ನೆಲೆಯಲ್ಲಿ ಮುಂದಿನ ಭಾನುವಾರ ದೇಶಾದ್ಯಂತ ಬ್ಯಾಂಕ್ ಗಳು ಕಾರ್ಯಾಚರಣೆ ನಡೆಸಲಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಆಯುಕ್ತರೊಂದಿಗೆ ಮಂಗಳವಾರ ನಡೆಸಿದ ಸಂವಾದ ವಿಫಲವಾದ ಹಿನ್ನೆಲೆಯಲ್ಲಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (United Forum of Bank Unions m) ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ (nationwide bank strike) ಕರೆ ನೀಡಿದೆ. ಹೀಗಾಗಿ ಗ್ರಾಹಕರಿಗೆ ಕೊಂಚ ಪರಿಹಾರ ಒದಗಿಸಲು ಮುಷ್ಕರಕ್ಕೂ ಮುನ್ನ ದಿನವಾದ ಭಾನುವಾರ ಬ್ಯಾಂಕುಗಳು ತೆರೆದಿರುತ್ತವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಉಪ ಮುಖ್ಯ ಕಾರ್ಮಿಕ ಆಯುಕ್ತರ ಮುಂದೆ ಮಂಗಳವಾರ ಸಭೆ ನಡೆಸಲಾಯಿತು. ಇದರಲ್ಲಿ ಯಾವುದೇ ಅಂತಿಮ ನಿರ್ಣಯ ಕೈಗೊಳ್ಳಲು ಸಾಧ್ಯವಾಗದೇ ಇರುವುದರಿಂದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮುಷ್ಕರ ನಡೆಸಲು ನಿರ್ಧರಿಸಿದೆ.
Insurance: ಎಸ್‌ಎಂಇ ವಿಮೆಗೆ ಡಿಜಿಟಲ್ ಸ್ಪರ್ಶ: ಜೂರಿಕ್ ಕೋಟಕ್
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ನೀಡಿರುವ ಮುಷ್ಕರಕ್ಕೆ ಸಂಬಂಧಿಸಿ ಹಣಕಾಸು ಸಚಿವಾಲಯವು, ಬ್ಯಾಂಕ್ ನೌಕರರು ಮುಷ್ಕರದಿಂದ ದೂರವಿರಲು ಮತ್ತು ಸಂವಾದದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮನವಿ ಮಾಡಿದೆ.
ಬೇಡಿಕೆ ಏನು?
ಬ್ಯಾಂಕ್ ಯೂನಿಯನ್‌ಗಳು ಐದು ಪ್ರಮುಖ ಬೇಡಿಕೆಗಳನ್ನು ಇರಿಸಿ ಮುಷ್ಕರ ನಡೆಸುವುದಾಗಿ ತಿಳಿಸಿದೆ. ಇದರಲ್ಲಿ ಮುಖ್ಯವಾಗಿ ನೌಕರರ ಮೇಲೆ ಪರಿಣಾಮ ಬೀರುವ ಹೆಚ್ಚುತ್ತಿರುವ ಕೆಲಸದ ಹೊರೆ, ಸಿಬ್ಬಂದಿ ಕೊರತೆ, ಅನುಸರಣೆ ಜವಾಬ್ದಾರಿಗಳು ಮತ್ತು ಕಾರ್ಯಕ್ಷಮತೆಯ ಗುರಿಗಳ ಬಗ್ಗೆ ಉಲ್ಲೇಖಿಸಿದೆ. ಇದರೊಂದಿಗೆ ಪಿಂಚಣಿ ನವೀಕರಣ ಮತ್ತು ಸುಧಾರಣೆ, ಎಲ್ಲಾ ಪಿಂಚಣಿದಾರರಿಗೆ ಏಕರೂಪದ ತುಟ್ಟಿ ಭತ್ಯೆ ಸೂತ್ರ ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಡಿಯಲ್ಲಿ ಬರುವ ಉದ್ಯೋಗಿಗಳು ಹಳೆಯ ಪಿಂಚಣಿ ಯೋಜನೆಗೆ ಬದಲಾಯಿಸುವ ಆಯ್ಕೆ ಕೂಡ ಸೇರಿವೆ.
ಐದು ದಿನಗಳ ಬ್ಯಾಂಕಿಂಗ್ ವಾರದ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ ಸೆಪ್ಟೆಂಬರ್ 11 ರಂದು ಬ್ಯಾಂಕ್ ಒಕ್ಕೂಟಗಳು ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ್ದವು.