ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತ- ಯುಎಸ್ ನಡುವೆ ಎಐ ಸಂಪರ್ಕ ಹೆಚ್ಚಿಸಲು ಗೂಗಲ್‌ನಿಂದ ಹೊಸ ಸಬ್‌ಸೀ ಕೇಬಲ್ ಮಾರ್ಗ ಘೋಷಿಸಿದ ಸುಂದರ್ ಪಿಚೈ

ಭಾರತದ ಎಐ ಸಾಮರ್ಥ್ಯ ಹೆಚ್ಚಿಸಲು ಇದೀಗ ಗೂಗಲ್ ಕೂಡ ಜೊತೆಯಾಗಿದೆ. ಇದಕ್ಕಾಗಿ ಭಾರತ- ಯುಎಸ್ ನಡುವೆ ಗೂಗಲ್ ನಿಂದ ಹೊಸ ಸಬ್‌ಸೀ ಕೇಬಲ್ ಮಾರ್ಗವನ್ನು ಗೂಗಲ್ ಸಿಇಒ ಸುಂದರ್ ಪಿಚೈ ಬುಧವಾರ ಘೋಷಿಸಿದರು. ಇದು 15 ಬಿಲಿಯನ್ ಯುಎಸ್‌ಡಿ ಮೌಲ್ಯದ ಎಐ ಹಬ್ ಗಿಗಾವ್ಯಾಟ್- ಸ್ಕೇಲ್ ಕಂಪ್ಯೂಟ್ ಸೌಲಭ್ಯ ಮತ್ತು ಅಂತಾರಾಷ್ಟ್ರೀಯ ಸಬ್‌ಸೀ ಕೇಬಲ್ ಗೇಟ್‌ವೇಯನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು.

ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ಭಾರತದ ಕೃತಕ ಬುದ್ದಿಮತ್ತೆ (Artificial intelligence) ಸಾಮರ್ಥ್ಯದ ಮೇಲೆ ಭಾರಿ ಹೂಡಿಕೆ ಮಾಡಲು ಗೂಗಲ್ (Google) ನಿರ್ಧರಿಸಿದೆ. ಇದಕ್ಕಾಗಿ ಭಾರತ- ಯುಎಸ್ (India-US) ನಡುವೆ ಗೂಗಲ್ ನಿಂದ ಹೊಸ ಸಬ್‌ಸೀ ಕೇಬಲ್ ಮಾರ್ಗವನ್ನು ಗೂಗಲ್ ಸಿಇಒ ಸುಂದರ್ ಪಿಚೈ (Google CEO Sundar Pichai) ಬುಧವಾರ ಘೋಷಿಸಿದರು. ಇದರೊಂದಿಗೆ 20 ಮಿಲಿಯನ್ ಸಾರ್ವಜನಿಕ ಸೇವಕರಿಗೆ ತರಬೇತಿ ನೀಡುವುದು ಮತ್ತು 11 ಮಿಲಿಯನ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸೇರಿದಂತೆ ಪ್ರಮುಖ ಕೌಶಲ ಯೋಜನೆಗಳನ್ನು ಅವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.

2026ರ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಅವರು ಆಂಧ್ರಪ್ರದೇಶದ ವೈಜಾಗ್‌ನಲ್ಲಿ ಇತ್ತೀಚೆಗೆ ಘೋಷಿಸಿರುವ 15 ಬಿಲಿಯನ್ ಯುಎಸ್‌ಡಿ ಮೌಲ್ಯದ ಎಐ ಹಬ್ ಗಿಗಾವ್ಯಾಟ್ ಸ್ಕೇಲ್ ಕಂಪ್ಯೂಟ್ ಸೌಲಭ್ಯ ಮತ್ತು ಅಂತಾರಾಷ್ಟ್ರೀಯ ಸಬ್‌ಸೀ ಕೇಬಲ್ ಗೇಟ್‌ವೇ ಬಗ್ಗೆ ಮಾಹಿತಿ ನೀಡಿದರು.

ಇಲ್ಲಿ 2BHK ಮನೆಗೆ 1.11 ಲಕ್ಷ ಬಾಡಿಗೆ; ಪಾವತಿ ಮಾಡಲು ಎರಡು ಕಿಡ್ನಿ ಬೇಕು ಎಂದ ಯುವತಿ! ವಿಡಿಯೋ ವೈರಲ್‌

ಭಾರತವು ಎಐಯೊಂದಿಗೆ ಅಸಾಧಾರಣ ಪಥವನ್ನು ಹೊಂದಲಿದೆ. ಇದರ ಪಾಲುದಾರರಾಗಲು ನಾವು ಬಯಸುತ್ತೇವೆ ಎಂದ ಅವರು, ಎಐಯು ಅತಿದೊಡ್ಡ ಬದಲಾವಣೆಯ ವೇದಿಕೆಯಾಗಿದೆ. ಭಾರತದಂತಹ ದೇಶಗಳಿಗೆ ಇದು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಆರೋಗ್ಯ ರಕ್ಷಣೆ, ಶಿಕ್ಷಣ, ಹವಾಮಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇದರ ಅಗತ್ಯ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ಗೂಗಲ್ ನೀಡುವ ತರಬೇತಿಯಲ್ಲಿ ಪಾಲ್ಗೊಳ್ಳುವವರಿಗೆ ಗೂಗಲ್ ಎಐ ವೃತ್ತಿಪರ ಪ್ರಮಾಣಪತ್ರ, 20 ಮಿಲಿಯನ್ ಸಾರ್ವಜನಿಕ ಸೇವಕರಿಗೆ ತರಬೇತಿ ನೀಡಲು ಕರ್ಮ ಯೋಗಿ ಭಾರತ್ ಜೊತೆಗೆ ಪಾಲುದಾರಿಕೆ ಮತ್ತು 11 ಮಿಲಿಯನ್ ವಿದ್ಯಾರ್ಥಿಗಳನ್ನು ತಲುಪಲು 10,000 ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‌ಗಳಿಗೆ ಜನರೇಟಿವ್ ಎಐ ಬೆಂಬಲ ಸೇರಿದಂತೆ ಪ್ರಮುಖ ಕೌಶಲ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಗೂಗಲ್ ಭಾರತದಲ್ಲಿ ಅನಾವರಣಗೊಳಿಸಿತು.



ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿರುವ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಪಿಚೈ, ಭಾರತದಲ್ಲಿ ಗೂಗಲ್ ಪೂರ್ಣ ಪ್ರಮಾಣದ ಸಂಪರ್ಕವನ್ನು ಹೊಂದಿದೆ. ಆದರೆ ಒಟ್ಟಾಗಿ ಭವಿಷ್ಯ ನಿರ್ಮಿಸುತ್ತೇವೆ ಎಂದು ಯೋಚಿಸಿರಲಿಲ್ಲ. ಆರೋಗ್ಯವನ್ನು ಸುಧಾರಿಸಲು, ಎಲ್ಲಾ ಭಾಷೆಗಳಲ್ಲಿ ಮಾಹಿತಿಯ ಪ್ರವೇಶವನ್ನು ವಿಸ್ತರಿಸಲು, ನವೋದ್ಯಮಗಳು, ಕೃಷಿ ಮತ್ತು ಇನ್ನೂ ಹೆಚ್ಚಿನದನ್ನು ಬೆಂಬಲಿಸಲು ಭಾರತದಲ್ಲಿ ಎಲ್ಲಾ ಹಂತಗಳಲ್ಲಿ ಎಐ ಅನ್ನು ತುಂಬುವ ತನ್ನ ಧ್ಯೇಯಕ್ಕೆ ಗೂಗಲ್ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನಾವು ಚರ್ಚಿಸಿದ್ದೇವೆ ಎಂದು ಅವರು ತಿಳಿಸಿದರು.

ಬಿಜೆಪಿ ಶಾಸಕರೇ ಕಸ ಇಟ್ಟುಕೊಳ್ಳಲಿ: ಡಿ.ಕೆ. ಶಿವಕುಮಾರ್ ವಾಗ್ದಾಳಿ

ಎಐ ಶೃಂಗ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸುಂದರ್ ಪಿಚೈ ಅವರನ್ನು ಭೇಟಿಯಾಗಿದ್ದು ಸಂತೋಷವಾಯಿತು. ಎಐನಲ್ಲಿ ಭಾರತ ಮಾಡುತ್ತಿರುವ ಕೆಲಸದ ಬಗ್ಗೆ ಮತ್ತು ಈ ಕ್ಷೇತ್ರದಲ್ಲಿ ನಮ್ಮ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ವೃತ್ತಿಪರರೊಂದಿಗೆ ಗೂಗಲ್ ಹೇಗೆ ಕೆಲಸ ಮಾಡಬಹುದು ಎಂಬುದರ ಕುರಿತು ಮಾತನಾಡಿದ್ದೇವೆ ಎಂದರು.

ಬಳಿಕ ಪಿಚೈ ಅವರು ಮಾಧ್ಯಮ ಕಾರ್ಯಕ್ರಮದಲ್ಲಿ ಮಾತನಾಡಿ ಜಾಗತಿಕ ಎಐ ನಾಯಕನಾಗಿ ಭಾರತದ ಸಾಮರ್ಥ್ಯದ ಬಗ್ಗೆ ತಿಳಿಸಿದರು. ಅಲ್ಲದೇ ಈ ಸಂದರ್ಭದಲ್ಲಿ ಅವರು ಗೂಗಲ್ ಎಐ ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮವನ್ನು ಭಾರತದಲ್ಲಿ ನಡೆಸುವ ಬಗ್ಗೆ ಘೋಷಣೆ ಮಾಡಿದರು.

ವಿದ್ಯಾ ಇರ್ವತ್ತೂರು

View all posts by this author