ಇಲ್ಲಿ 2BHK ಮನೆಗೆ 1.11 ಲಕ್ಷ ಬಾಡಿಗೆ; ಪಾವತಿ ಮಾಡಲು ಎರಡು ಕಿಡ್ನಿ ಬೇಕು ಎಂದ ಯುವತಿ! ವಿಡಿಯೋ ವೈರಲ್
Viral Video: ಮಹಿಳೆ ತನ್ನ ಬಾಂದ್ರಾ ಅಪಾರ್ಟ್‌ಮೆಂಟ್‌ಗೆ ಪಾವತಿಸುವ ಬಾಡಿಗೆ ಮೊತ್ತವನ್ನು ಬಹಿ ರಂಗಪಡಿಸಿದ್ದು, ಭಾರತದ ಆರ್ಥಿಕ ರಾಜಧಾನಿಯಲ್ಲಿ ಜೀವನ ವೆಚ್ಚವನ್ನು ನೋಡಿ ಅನೇಕರು ಶಾಕ್ ಆಗಿದ್ದಾರೆ. ಮುಂಬೈ ಮೂಲದ ಕಂಟೆಂಟ್ ಕ್ರಿಯೇಟರ್ ಮುಸ್ಕಾನ್ ರಾಂಕಾ ಎನ್ನುವ ಯುವತಿ ಮನೆಯನ್ನು ಪ್ರೀತಿಯಿಂದ "ಬ್ಯಾಡಿ ಭವನ" ಎಂದು ಕರೆಯುತ್ತಾರೆ. ಆದರೆ ಈ ಮನೆಗೆ ಅವರು ಭಾರೀ ಮೊತ್ತದ ಬಾಡಿಗೆಯನ್ನು ಪಾವತಿ ಮಾಡುತ್ತಾರೆ.
ಮುಂಬೈನಲ್ಲಿ 2BHK ಮನೆಗೆ 1.11 ಲಕ್ಷ ಬಾಡಿಗೆ -
ಮುಂಬೈ,ಫೆ.19: ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ವಾಸ ಮಾಡಲು ಹೆಚ್ಚಿನವರು ಇಚ್ಚಿ ಸುತ್ತಾರೆ. ಇಲ್ಲಿ ಬೇಕಾದ ಮೂಲ ಸೌಕರ್ಯ, ಉದ್ಯೋಗಾವಕಾಶಗಳು, ಶಿಕ್ಷಣ ಹೀಗೆ ಎಲ್ಲ ಸೇವನೆಗಳು ಒಳಗೊಂಡಿರುತ್ತವೆ. ಆದರೆ ಇಲ್ಲಿ ಬದುಕಲು ದೊಡ್ಡ ಮೊತ್ತದ ಹಣವಿರಬೇಕು. ಇದಕ್ಕೆ ಸಾಕ್ಷಿ ಎಂಬಂತೆ ಮಹಿಳೆ ತನ್ನ ಬಾಂದ್ರಾ ಅಪಾರ್ಟ್‌ಮೆಂಟ್‌ಗೆ ಪಾವತಿಸುವ ಬಾಡಿಗೆ ಮೊತ್ತವನ್ನು ಬಹಿರಂಗಪಡಿಸಿದ್ದು, ಭಾರತದ ಆರ್ಥಿಕ ರಾಜಧಾನಿಯಲ್ಲಿ ಜೀವನ ವೆಚ್ಚವನ್ನು ನೋಡಿ ಅನೇಕರು ಶಾಕ್ ಆಗಿದ್ದಾರೆ. ಯುವತಿಯೂ ತಾನು ನೀಡುವ ಬಾಡಿಗೆ ಮೊತ್ತವನ್ನು ಬಹಿರಂಗ ಪಡಿಸಿದ್ದು ಈ ವಿಡಿಯೊ ವೈರಲ್ (Viral Video) ಆಗಿದೆ.
ಮುಂಬೈನ ಬಾಂದ್ರಾದಲ್ಲಿ ಇರುವ 2BHK ಫ್ಲಾಟ್‌ನ ಹೋಮ್ ಟೂರ್ ಮಾಡಿದ ಯುವತಿಯೂ ಬಾಡಿಗೆಯ ವಿವರ ನೀಡಿ ಎಲ್ಲರನ್ನೂ ದಿಗ್ಬ್ರಮೆ ಗೊಳಿಸಿದ್ದಾರೆ. ಮುಂಬೈ ಮೂಲದ ಕಂಟೆಂಟ್ ಕ್ರಿಯೇಟರ್ ಮುಸ್ಕಾನ್ ರಾಂಕಾ ಎನ್ನುವ ಯುವತಿ ಮನೆಯನ್ನು ಪ್ರೀತಿಯಿಂದ "ಬ್ಯಾಡಿ ಭವನ" ಎಂದು ಕರೆಯುತ್ತಾರೆ. ಆದರೆ ಈ ಮನೆಗೆ ಅವರು ಭಾರೀ ಮೊತ್ತದ ಬಾಡಿಗೆಯನ್ನು ಪಾವತಿ ಮಾಡುತ್ತಾರೆ.
ವಿಡಿಯೋ ನೋಡಿ:
ಈ ಫ್ಲಾಟ್ ಬಿಳಿ, ಕಂದು ಮತ್ತು ಬೀಜ್ ಬಣ್ಣಗಳಲ್ಲಿ ವಿನ್ಯಾಸ ಮಾಡಲಾಗಿದೆ. ಅಪಾರ್ಟ್ಮೆಂಟ್ ಸುಮಾರು 600 ಚದರ ಅಡಿಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು ಐಶಾರಾಮಿ ಸೌಲಭ್ಯ ಗಳನ್ನು ಒಳಗೊಂಡಿದೆ. ಅವರು ತಮ್ಮ ಮಲಗುವ ಕೋಣೆಗಳು, ಅಡುಗೆಮನೆ ಮತ್ತು ಸಣ್ಣ ಬಾಲ್ಕನಿಯನ್ನು ತೋರಿಸುತ್ತಾ ಎಲ್ಲವನ್ನು ವಿವರಿಸುತ್ತಾರೆ.
Viral Video: ಇದೆಂಥ ಕೃತ್ಯ? ಕೈಕಾಲುಗಳಿಗೆ ಸಂಕೋಲೆ ಬಿಗಿದಿದ್ದರೂ ದುಡಿಯುತ್ತಿರುವ ಕಾರ್ಮಿಕನ ವಿಡಿಯೊ ವೈರಲ್
ಆದರೆ ಮುಂಬೈನಲ್ಲಿ ವಿಶೇಷವಾಗಿ ಬಾಂದ್ರಾದಂತಹ ಪ್ರತಿಷ್ಠಿತ ಪ್ರದೇಶದಲ್ಲಿ ವಾಸಿಸುವುದು ಹೆಚ್ಚಿನ ವೆಚ್ಚವನ್ನು ಹೊಂದಿದೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ. ಇದಕ್ಕೆ ತಿಂಗಳ ಬಾಡಿಗೆ ಮೊತ್ತ ವನ್ನು 1.11 ಲಕ್ಷ ಎಂದು ಹೇಳಿ ಎಲ್ಲರನ್ನು ಆಶ್ಚರ್ಯ ಗೊಳಿಸಿದ್ದಾರೆ.ಅವರ ಪ್ರಕಾರ, ಬಾಂದ್ರಾದಲ್ಲಿ ಇದೇ ರೀತಿಯ 2BHK ಫ್ಲಾಟ್‌ಗಳ ಬಾಡಿಗೆ ಸಾಮಾನ್ಯವಾಗಿ ಗಾತ್ರ ಮತ್ತು ಸೌಕರ್ಯಗಳಿಗೆ ತಿಂಗಳಿಗೆ ರೂ. 85,000 ರಿಂದ ರೂ. 1.5 ಲಕ್ಷದವರೆಗೆ ಇರುತ್ತದೆ.
ವಿಡಿಯೋದಲ್ಲಿ ಆಕೆ ಈ ಮನೆಯ ಬಾಡಿಗೆ ಕಟ್ಟಲು ನನ್ನ ಎರಡು ಕಿಡ್ನಿಗಳನ್ನೇ ನೀಡಬೇಕಾ ಬಹುದು ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ವೈರಲ್ ಆಗುತ್ತಿದ್ದಂತೆ ಚರ್ಚೆಗೆ ಕಾರಣವಾಗಿದೆ. ಒಬ್ಬ ಬಳಕೆದಾರರು ಓಹ್ ವಾವ್... ಹಾಗಾದರೆ ನೀವು ರೂ. 1,11,000 ಬಾಡಿಗೆಯನ್ನು ಪಾವತಿಸುತ್ತಿದ್ದೀರಿ, ಏಕಾಂಗಿಯಾಗಿ ವಾಸಿ ಸುತ್ತಿದ್ದೀರಿ... ಆರಾಮವಾಗಿ ಬದುಕಲು ನಿಮಗೆ ರೂ. 1.5–2 ಲಕ್ಷ ಬಾಡಿಗೆ ಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ. ಮೊತ್ತೊಬ್ಬರು ಇಷ್ಟು ದುಬಾರಿಯೇ? ಬದುಕಲು ಕಷ್ಟ ಅಂದಿದ್ದಾರೆ.