ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Income Tax: ನಮ್ಮ ದೇಶದಲ್ಲಿ ಹಿರಿಯ ಮತ್ತು ಅತೀ ಹಿರಿಯ ನಾಗರಿಕರಿಗೆ ಇರುವ ತೆರಿಗೆ ವಿನಾಯಿತಿಗಳ ಬಗ್ಗೆ ನಿಮಗೆಷ್ಟು ಗೊತ್ತು?

ಆದಾಯ ತೆರಿಗೆ ಪಾವತಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಇದಕ್ಕೆ ಪ್ರತಿಯಾಗಿ ದೇಶದ ಆಡಳಿತ ವ್ಯವಸ್ಥೆಯೂ ಸಹ ಆದಾಯ ತೆರಿಗೆ ಪಾವತಿಯಲ್ಲಿ ಕೆಲವೊಂದು ಸಡಿಲಿಕೆಗಳನ್ನು ನೀಡುತ್ತದೆ. ಅದರಲ್ಲೂ ಮುಖ್ಯವಾಗಿ ಹಿರಿಯ ಮತ್ತು ಅತೀ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಮಿತಿಯಲ್ಲಿ ಹಲವು ವಿನಾಯಿತಿಗಳಿದ್ದು ಆ ಕುರಿತಾಗಿರುವ ಮಾಹಿತಿ ಇಲ್ಲಿದೆ..

ಹಿರಿಯ ನಾಗರಿಕರಿಗಿರುವ ತೆರಿಗೆ ವಿನಾಯಿತಿಗಳು ಹೀಗಿವೆ ನೋಡಿ!

ಸಾಂದರ್ಭಿಕ ಚಿತ್ರ

Profile Sushmitha Jain Mar 5, 2025 8:40 AM

ನವದೆಹಲಿ: ಹಿರಿಯ ನಾಗರಿಕರು (Senior Citizens) ಮತ್ತು ಅತೀ ಹಿರಿಯ ನಾಗರಿಕರು (Very Senior Citizens) ಭಾರತದಲ್ಲಿ ಅತೀ ಹೆಚ್ಚಿನ ತೆರಿಗೆ ವಿನಾಯಿತಿಯನ್ನು (Tax Exemption) ಹೊಂದಿದ್ದಾರೆ. ಇದು ರೆಗ್ಯುಲರ್ ತೆರಿಗೆ ಪಾವತಿದಾರರಿಗೆ ಹೋಲಿಸಿದರೆ ಉತ್ತಮ ಪ್ರಯೋಜನಕಾರಿಯಾಗಿದೆ. ಅಂದರೆ ಇದರ ಅರ್ಥ, ಹಿರಿಯ ನಾಗರಿಕರು ಮತ್ತು ಅತೀ ಹಿರಿಯ ನಾಗರಿಕರು ಆದಾಯ ತೆರಿಗೆ ಪಾವತಿಸಲು ಅರ್ಹರಾಗುವವರೆಗೆ ಉತ್ತಮ ಆದಾಯವನ್ನು ಹೊಂದಬಹುದಾಗಿರುತ್ತದೆ. ಅಂದ ಹಾಗೆ ಈ ಪ್ರಯೋಜನಗಳೆಲ್ಲವೂ ಭಾರತೀಯ ಪ್ರಜೆಗಳಿಗೆ ಮಾತ್ರವೇ ಲಭ್ಯ, ಅನಿವಾಸಿ ಭಾರತೀಯರಿಗೆ ಈ ಪ್ರಯೋಜನಗಳು ಲಭ್ಯವಿಲ್ಲ. ಹಾಗಾದರೆ ಭಾರತದಲ್ಲಿ ಹಿರಿಯ ಮತ್ತು ಅತೀ ಹಿರಿಯ ನಾಗರಿಕರಿಗೆ ಯಾವೆಲ್ಲಾ ರೀತಿಯ ತೆರಿಗೆ ವಿನಾಯಿತಿಗಳಿವೆ ಎಂಬ ಮಾಹಿತಿಯನ್ನು ನಾವು ಈ ವಿವರಣಾತ್ಮಕ ಸುದ್ದಿಯ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಹಿರಿಯ ನಾಗರಿಕರು: 2024-25ನೇ ಆರ್ಥಿಕ ವರ್ಷದ ಲೆಕ್ಕದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 80 ವರ್ಷಕ್ಕಿಂತ ಕೆಳಗಿನ ಹಿರಿಯ ನಾಗರಿಕ ವ್ಯಕ್ತಿಗಳಿಗೆ 3 ಲಕ್ಷದವರೆಗೆ ಹೆಚ್ಚಿನ ತೆರಿಗೆ ವಿನಾಯಿತಿ ಸಿಗುತ್ತದೆ, ಇದು ಹಿರಿಯ ನಾಗರಿಕರಲ್ಲದ ವ್ಯಕ್ತಿಗಳಿಗೆ ಹೋಲಿಸಿದಾಗ 50 ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ. ಸಾಮಾನ್ಯ ನಾಗರಿಕರಿಗೆ ಈ ಮಿತಿ 2.50 ಲಕ್ಷ ರೂಪಾಯಿಗಳಾಗಿದೆ.

ಇದನ್ನೂ ಓದಿ: Hydrogen vehicles: ಇನ್ನೆರೆಡು ವರ್ಷದೊಳಗೆ ದೇಶದ ಈ 10 ನಗರಗಳ ಮಧ್ಯೆ ರಸ್ತೆಗಿಳಿಯಲಿವೆ ಹಸಿರು ಹೈಡ್ರೋಜನ್ ವಾಹನ

ಅತೀ ಹಿರಿಯ ನಾಗರಿಕರು: 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಪ್ರಾಯದ ವ್ಯಕ್ತಿಗಳಿಗೆ 2024-25ರ ಆರ್ಥಿಕ ವರ್ಷದಲ್ಲಿ 5 ಲಕ್ಷದವರೆಗಿನ ವಿನಾಯಿತಿ ಮಿತಿ ಇದೆ. ಇದು ಸಾಮಾನ್ಯ ನಾಗರಿಕರ ತೆರಿಗೆ ಮಿತಿಗೆ ಹೋಲಿಸಿದಲ್ಲಿ 2.50 ಲಕ್ಷ ರೂಪಾಯಿ ಅಧಿಕವಾಗಿದೆ. ಆದರೆ ಈ ಪ್ರಯೋಜನಗಳನ್ನು ಪಡೆದುಕೊಳ್ಳಲು ವಯಸ್ಸಿನ ಮಾನದಂಡವಿದ್ದು, ಇದರ ವಿವರಗಳನ್ನು ಮೇಲೆ ನೀಡಲಾಗಿದೆ. ಮತ್ತು ಈ ಪ್ರಯೋಜನ ಭಾರತದ ನಾಗರಿಕಾರಾದವರಿಗೆ ಮಾತ್ರವೇ ಲಭ್ಯವಿದೆ.

ಸೆಕ್ಷನ್ 80ಡಿ ಅಡಿಯಲ್ಲಿ ಹೆಚ್ಚುವರಿ ಪ್ರಯೋಜನಗಳು:

ಅತೀ ಹೆಚ್ಚಿನ ವಿನಾಯಿತಿ ಮಿತಿಗಳನ್ನು ಹೊರತುಪಡಿಸಿ, ಹಿರಿಯ ನಾಗರಿಕರು ಮೆಡಿಕಲ್ ಇನ್ಶೂರೆನ್ಸ್ ಪ್ರೀಮಿಯಂಗಳು ಮತ್ತು ಸಂಬಂಧಿತ ವೆಚ್ಚಗಳ ಮೇಲೆ ಆದಾಯ ತೆರಿಗೆ ಕಾನೂನಿನ ಸೆಕ್ಷನ್ 80ಡಿ ಅಡಿಯಲ್ಲಿ ಇನ್ನೂ ಕೆಲವು ಪ್ರಯೋಜನಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿರುತ್ತದೆ. ಈ ಪ್ರಯೋಜನಗಳ ಕುರಿತಾದ ಹೆಚ್ಚಿನ ವಿವರಗಳಿಗಾಗಿ, ‘ಮೆಡಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಕಡಿತ (ಸೆಕ್ಷನ್ 80ಡಿ) ಯಲ್ಲಿರುವ ಪುಟ 5ರಲ್ಲಿನ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಬಹುದಾಗಿರುತ್ತದೆ.