ಕ್ಯಾಲಿಫೋರ್ನಿಯಾ, ಸೆ.10: ಟೆಕ್ ದೈತ್ಯ ಆ್ಯಪಲ್ (Apple) ಸಂಸ್ಥೆಯು ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಅಮೆರಿಕದ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ವಿಶೇಷ ಸಮಾರಂಭ ಸರ್ಪೈಸ್ ಆಂಡ್ ಶೈನ್‌ನಲ್ಲಿ ಕಂಪನಿಯು ತನ್ನ ಚೊಚ್ಚಲ ಫೋಲ್ಡಬಲ್ (Foldable) ಸ್ಮಾರ್ಟ್‌ಫೋನ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಇದಕ್ಕೆ ಐಫೋನ್ ಡ್ಯುಯೊ (iPhone Duo) ಎಂದು ಹೆಸರಿಡಲಾಗಿದೆ. ಪಾಸ್‌ಪೋರ್ಟ್ ಮಾದರಿಯಲ್ಲಿ ಮಡಚಬಹುದಾದ ಈ ಫೋನ್ ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಅತ್ಯಾಧುನಿಕ ವೈಶಿಷ್ಟ್ಯ
ಈ ಪ್ರೀಮಿಯಂ ಫೋನ್ ಸ್ಟಾರ್ ವೈಟ್ ಮತ್ತು ನೈಟ್ ಸ್ಕೈ ಎಂಬ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, ಆಪಲ್‌ನ ಅತ್ಯಂತ ಶಕ್ತಿಶಾಲಿ A20 Pro ಚಿಪ್‌ಸೆಟ್ ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದನ್ನು ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ (TSMC) 2ಎನ್ಎಂ ಪ್ರಕ್ರಿಯೆಯ ಮೂಲಕ ತಯಾರಿಸಲಾಗಿದೆ.
ಐಫೋನ್ ಡ್ಯುಯೊ 7.76 ಇಂಚಿನ ವಿಶಾಲವಾದ ಮುಖ್ಯ ಪರದೆ ಹಾಗೂ 5.49 ಇಂಚಿನ ಕವರ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. 12 ಜಿಬಿ ರ‍್ಯಾಮ್ ಮತ್ತು ಅತ್ಯಾಧುನಿಕ ಐಒಎಸ್ 27 (iOS 27) ಕಾರ್ಯನಿರ್ವಹಣಾ ವ್ಯವಸ್ಥೆ ಹೊಂದಿರುವ ಈ ಫೋನ್‌ನಲ್ಲಿ 48+48 ಮೆಗಾಪಿಕ್ಸೆಲ್ ಸಾಮರ್ಥ್ಯದ ಡ್ಯುಯಲ್ ರಿಯರ್ ಕ್ಯಾಮರಾಗಳನ್ನು ಹೊಂದಿದೆ. ಇದರೊಂದಿಗೆ ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವೂ ಇದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಎಡ್ಜ್ ಸ್ಮಾರ್ಟ್ ಫೋನ್ ಗೆ ಪ್ರೀ- ಆರ್ಡರ್ ಪ್ರಾರಂಭ; ಆರಂಭಿಕ ಬೆಲೆ ರೂ.109,999
ಭಾರತದಲ್ಲಿ ಇದರ ಬೆಲೆ ಎಷ್ಟು?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಆರಂಭಿಕ ಬೆಲೆ 1,999 ಡಾಲರ್ ಆಗಿದ್ದರೂ, ಭಾರತದಲ್ಲಿ ತೆರಿಗೆ ಹಾಗೂ ಇತರ ಸುಂಕಗಳಿಂದಾಗಿ ಇದರ ಬೆಲೆ ತೀರಾ ದುಬಾರಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ, ಬೇಸ್ ಮಾಡೆಲ್ ಅಥವಾ ಆರಂಭಿಕ ಮಾದರಿಯ ಬೆಲೆ 256 ಜಿಬಿಗೆ 2,99,900 ರೂ. ಇದ್ದರೆ, 512 GB ಮಾದರಿಗೆ 3,24,900 ರೂ. ಇದ್ದು, 1 TB ಮಾದರಿಗೆ 3,74,900 ರೂ. ಮತ್ತು 2 TB ಮಾದರಿಗೆ ರೂ. 4,49,900 ಇದೆ.
ಫೋಲ್ಡಬಲ್ ಐಫೋನ್ ಡ್ಯುಯೊ ವೈಶಿಷ್ಟ್ಯಗಳು
ಡಿಸ್‌ಪ್ಲೇ (ಪ್ರೈಮರಿ) – 7.76 ಇಂಚು
ಕವರ್ ಡಿಸ್‌ಪ್ಲೇ – 5.49 ಇಂಚು
ಕವರ್ ರೆಸಲ್ಯೂಶನ್– 1422x2088 ಪಿಕ್ಸೆಲ್
ಪ್ರೊಸೆಸರ್ – ಆ್ಯಪಲ್ ಎ20 ಪ್ರೊ
ಮುಂಬದಿಯ ಕ್ಯಾಮೆರಾ –12 ಮೆಗಾಪಿಕ್ಸೆಲ್
ಹಿಂಬದಿಯ ಎರಡು ಕ್ಯಾಮೆರಾ – 48 ಮೆಗಾಪಿಕ್ಸೆಲ್ + 48 ಮೆಗಾಪಿಕ್ಸೆಲ್
ರ್‍ಯಾಮ್ –12 ಜಿಬಿ
ಸ್ಟೋರೇಜ್ – 256 ಜಿಬಿ
ಆಪರೇಟಿಂಗ್ ಸಿಸ್ಟಂ – iOS 27
ರೆಸಲ್ಯೂಶನ್ – 2713x1920 ಪಿಕ್ಸೆಲ್