ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Nirmala Sitaraman pressmeet: 1ಕೋಟಿಗೂ ಅಧಿಕ ತೆರಿಗೆದಾರರಿಗೆ ಟ್ಯಾಕ್ಸ್‌ ವಿನಾಯಿತಿ-ನಿರ್ಮಲಾ ಸೀತಾರಾಮನ್‌

ಕೇಂದ್ರ ಬಜೆಟ್‌(Union Budget 2025) ಮಂಡನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitaraman) , 2025 ರ ಕೇಂದ್ರ ಬಜೆಟ್ - ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್‌ಗಳ ಕುರಿತು ದೊಡ್ಡ ಘೋಷಣೆಗಳು ಮತ್ತು ತೆರಿಗೆ ರಿಯಾಯಿತಿ ಮಿತಿಯನ್ನು 7 ಲಕ್ಷದಿಂದ 12 ಲಕ್ಷಕ್ಕೆ ಹೆಚ್ಚಿಸಿರುವುದು 'ಜನರ ಧ್ವನಿ'ಗೆ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದರು.

ಬಜೆಟ್‌ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್‌ ಪತ್ರಿಕಾಗೋಷ್ಠಿ

Profile Rakshita Karkera Feb 1, 2025 6:43 PM

ನವದೆಹಲಿ: ದೇಶದಲ್ಲಿ ಇನ್ನು ಮುಂದೆ ಸುಮಾರು ಒಂದು ಕೋಟಿ ತೆರಿಗೆದಾರರು ತೆರಿಗೆ ಮುಕ್ತರಾಗಿದ್ದಾರೆ. ಇದು ಜನ ದನಿಗೆ ಸರ್ಕಾರದ ಪ್ರತಿಕ್ರಿಯೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಕೇಂದ್ರ ಬಜೆಟ್‌(Union Budget 2025) ಮಂಡನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2025 ರ ಕೇಂದ್ರ ಬಜೆಟ್ - ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್‌ಗಳ ಕುರಿತು ದೊಡ್ಡ ಘೋಷಣೆಗಳು ಮತ್ತು ತೆರಿಗೆ ರಿಯಾಯಿತಿ ಮಿತಿಯನ್ನು 7 ಲಕ್ಷದಿಂದ 12 ಲಕ್ಷಕ್ಕೆ ಹೆಚ್ಚಿಸಿರುವುದು 'ಜನರ ಧ್ವನಿ'ಗೆ ಪ್ರತಿಕ್ರಿಯೆಯಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitaraman) ಹೇಳಿದರು.



ಶನಿವಾರ ಲೋಕಸಭೆಯಲ್ಲಿ ಬಜೆಟ್‌ ಮಂಡನೆ ಬಳಿಕ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ್ದು, ತೆರಿಗೆ ರಿಯಾಯಿತಿ ಹೆಚ್ಚಳದಿಂದಾಗಿ ಅಂದಾಜು ಒಂದು ಕೋಟಿ ತೆರಿಗೆದಾರರು ಆದಾಯ ತೆರಿಗೆ ಪಾವತಿಸುವುದಿಲ್ಲ. ಇದು ಜನರಿಗೆ ತುಂಬಾ ಸ್ಪಂದಿಸುವ ಸರ್ಕಾರ... ಪರಿಣಾಮವಾಗಿ, ಜುಲೈನಲ್ಲಿ ನಾನು ಘೋಷಿಸಿದ ಆದಾಯ ತೆರಿಗೆ ಸರಳೀಕರಣವು ಈಗಾಗಲೇ ಪೂರ್ಣಗೊಂಡಿದೆ ಮತ್ತು ನಾವು ಮುಂದಿನ ವಾರ ಮಸೂದೆಯನ್ನು ತರುತ್ತೇವೆ ಎಂದರು.



ಈ ಸುದ್ದಿಯನ್ನೂ ಓದಿ: Nirmala Sitharaman:ಬಜೆಟ್‌ ಮಂಡನೆ ಆಗ್ತಿದ್ದಂತೆ ನಿರ್ಮಲಾ ಸೀತಾರಾಮನ್ ಫೊಟೋಗೆ ಪೂಜೆ ಮಾಡಿದ ಉದ್ಯಮಿ!!

2025ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಧ್ಯಮ ವರ್ಗದ ವೇತನದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ವಾರ್ಷಿಕ 12 ಲಕ್ಷ ರೂಪಾಯಿ ತನಕ ಆದಾಯಕ್ಕೆ ಇನ್ನು ಮುಂದೆ ಆದಾಯ ತೆರಿಗೆ ಇಲ್ಲ. ಇದು ಹೊಸ ತೆರಿಗೆ ಪದ್ಧತಿಯಲ್ಲಿ ಅನ್ವಯವಾಗಲಿದೆ. ವೇತನದಾರರಿಗೆ 12,75,000 ರೂಪಾಯಿ ತನಕ ಯಾವುದೇ ಆದಾಯ ತೆರಿಗೆ ಕಟ್ಟುವ ಅಗತ್ಯವಿಲ್ಲ.

ಮಧ್ಯಮ ವರ್ಗದ ತೆರಿಗೆಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಮತ್ತು ಅವರಿಗೆ ಹೆಚ್ಚಿನ ಹಣವನ್ನು ನೀಡುವ ಗುರಿಯೊಂದಿಗೆ ಸರ್ಕಾರವು ಹೊಸ ತೆರಿಗೆ ಶ್ರೇಣಿಗಳನ್ನು ರೂಪಿಸಿದೆ. ಇದು ಮನೆಯ ಬಳಕೆ, ಉಳಿತಾಯ ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತದೆ. ಮುಂದಿನ ವಾರ ಹೊಸ ಆದಾಯ ತೆರಿಗೆ ವಿಧೇಯಕ ಮಂಡನೆಯಾಗಲಿದೆ. ಅದರಲ್ಲಿ ಮತ್ತಷ್ಟು ವಿವರಗಳು ತಿಳಿಯಲಿದೆ. ಮುಖ್ಯವಾಗಿ ಸರ್ಕಾರ ನೇರ ತೆರಿಗೆ ಪದ್ಧತಿಯನ್ನು ಮತ್ತಷ್ಟು ಸರಳ ಮತ್ತು ಸುಧಾರಣೆ ಮಾಡುವ ಉದ್ದೇಶದಿಂದ ಈ ವಿಧೇಯಕವನ್ನು ತರುತ್ತಿದೆ.