2025ರ ಜೂನ್ ನಲ್ಲಿ ಮಾರಾಟದಲ್ಲಿ ಶೇ.5ರಷ್ಟು ಅಭಿವೃದ್ಧಿ ದಾಖಲಿಸಿದ ಟೊಯೋಟಾ
ಜೂನ್ ತಿಂಗಳಿನಲ್ಲಿ ಫಾರ್ಚುನರ್ ಮತ್ತು ಲೆಜೆಂಡರ್‌ನ ಹೊಸ 'ನಿಯೋ ಡ್ರೈವ್' ವೇರಿಯೆಂಟ್ ಗಳನ್ನು ಪರಿಚಯಿಸಲಾಗಿದೆ. ಇವು ಅತ್ಯಾಧುನಿಕ 48 ವೋಲ್ಟ್ ವ್ಯವಸ್ಥೆಯನ್ನು ಹೊಂದಿದ್ದು, ಉತ್ತಮ ಇಂಧನ ದಕ್ಷತೆ, ಅತ್ಯಾಧುನಿಕ ಚಾಲನಾ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ಅನುಕೂಲತೆ ಯನ್ನು ನೀಡುತ್ತದೆ


ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ತನ್ನ ಮಾರಾಟ ಬೆಳವಣಿಗೆಯ ಕುರಿತ ಮಾಹಿತಿಯನ್ನು ಪ್ರಕಟಿಸಿದೆ.
ಇದರಲ್ಲಿ 26,453 ಯೂನಿಟ್ ಗಳು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದು, 2,416 ಯೂನಿಟ್ ಗಳು ರಫ್ತು ಆಗಿವೆ.
“ಜೂನ್ 2025ರಲ್ಲಿ ಟಿಕೆಎಂನ ವಾಹನಗಳ ಮಾರಾಟವು ಜೂನ್ 2024ಕ್ಕಿಂತ ಶೇ.5ರಷ್ಟು ಹೆಚ್ಚಾ ಗಿದೆ. ನಾವು ನಮ್ಮ ಗ್ರಾಹಕರಿಗೆ ಉತ್ತಮ ಮಾರಾಟದ ನಂತರದ ಸೇವೆಗಳು ಮತ್ತು ಮೌಲ್ಯವರ್ಧಿತ ಸೌಲಭ್ಯ ಒದಗಿಸುವುದರ ಮೂಲಕ ಉತ್ತಮ ಸಂಪರ್ಕವನ್ನು ಉಳಿಸಿಕೊಂಡಿದ್ದೇವೆ. ನಾವು ಅವರ ಮಾಲೀಕತ್ವದ ಅನುಭವವನ್ನು ಪ್ರತೀ ಹಂತದಲ್ಲೂ ಉತ್ತಮಗೊಳಿಸುವ ಗುರಿಯನ್ನು ಇಟ್ಟು ಕೊಂಡಿದ್ದೇವೆ. ಮುಂದೆಯೂ ನಾವು ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಸಜ್ಜಾಗಿರುತ್ತೇವೆ ಮತ್ತು ಮಾರುಕಟ್ಟೆಯಲ್ಲಿ ಪರಿಣಾಮಕಾರಿಯಾಗಿ ಸೇವೆ ನೀಡುವುದನ್ನು ಮುಂದುವರಿಸುತ್ತೇವೆ” ಎಂದು ಸೇಲ್ಸ್ ಸರ್ವೀಸ್ ಯೂಸ್ಡ್ ಕಾರ್ ಬಿಸಿನೆಸ್ ಉಪಾಧ್ಯಕ್ಷ ವರೀಂದರ್ ವಾಧ್ವಾ ಹೇಳಿದರು.
ಇದನ್ನೂ ಓದಿ: Toyota: ಸಮಾಜಕ್ಕೆ ಒಳಿತು ಮಾಡುವ ಉದ್ದೇಶದಿಂದ 32ನೇ ಐಕೇರ್ ಕಾರ್ಯಕ್ರಮ ಆಯೋಜಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್
ಪ್ರಮುಖ ಉತ್ಪನ್ನ ವಿವರ:
ಜೂನ್ ತಿಂಗಳಿನಲ್ಲಿ ಫಾರ್ಚುನರ್ ಮತ್ತು ಲೆಜೆಂಡರ್‌ನ ಹೊಸ 'ನಿಯೋ ಡ್ರೈವ್' ವೇರಿಯೆಂಟ್ ಗಳನ್ನು ಪರಿಚಯಿಸಲಾಗಿದೆ. ಇವು ಅತ್ಯಾಧುನಿಕ 48 ವೋಲ್ಟ್ ವ್ಯವಸ್ಥೆಯನ್ನು ಹೊಂದಿದ್ದು, ಉತ್ತಮ ಇಂಧನ ದಕ್ಷತೆ, ಅತ್ಯಾಧುನಿಕ ಚಾಲನಾ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ಅನುಕೂಲತೆ ಯನ್ನು ನೀಡುತ್ತದೆ. ನಮ್ಮ ಉತ್ಪನ್ನ ಸಾಲಿಗೆ ಆಗಿರುವ ಈ ಹೊಸ ಸೇರ್ಪಡೆಗೆ ಪ್ರೋತ್ಸಾಹಕಾರಕ ಪ್ರತಿಕ್ರಿಯೆ ದೊರಕಿದ್ದು, ಭಾರತೀಯ ಗ್ರಾಹಕರ ಬೆಳೆಯುತ್ತಿರುವ ನಿರೀಕ್ಷೆಗಳನ್ನು ಪೂರೈಸುವ ಅತ್ಯಾಧುನಿಕ ಸಾರಿಗೆ ಉತ್ಪನ್ನಗಳನ್ನು ನೀಡುವ ನಮ್ಮ ಬದ್ಧತೆಯನ್ನು ಮತ್ತೆ ದೃಢಪಡಿಸಿದೆ.
ಪ್ರಮುಖ ಕಾರ್ಪೊರೇಟ್ ಸಾಧನೆಗಳು:
ಟಿಕೆಎಂ ಸಂಸ್ಥೆಯು ಪ್ರಮುಖ ಪಿಇಎಂ [ಪ್ರೋಟಾನ್ ಎಕ್ಸ್ ಚೇಂಜ್ ಮೆಂಬರೇನ್] ಹೈಡ್ರೋಜನ್ ತಂತ್ರಜ್ಞಾನ ಒದಗಿಸುವ ಓಹ್ಮಿಯಮ್ ಇಂಟರ್‌ನ್ಯಾಷನಲ್ ಸಂಸ್ಥೆ ಜೊತೆಗೆ ಒಂದು ತಿಳಿವಳಿಕೆ ಪತ್ರಕ್ಕೆ (ಎಂಓಯು) ಸಹಿ ಹಾಕಿದೆ. ಈ ಒಡಂಬಡಿಕೆಯಡಿ ಎರಡೂ ಕಂಪನಿಗಳು ಗ್ರೀನ್ ಹೈಡ್ರೋ ಜನ್ ನಿಂದ ಚಾಲಿತವಾದ ಸಂಯೋಜಿತ ವಿದ್ಯುತ್ ಉತ್ಪನ್ನಗಳಾದ ಮೈಕ್ರೋಗ್ರಿಡ್ ಉತ್ಪಾದನೆಯ ಸಾಧ್ಯತೆಯನ್ನು ಪರಿಶೀಲನೆ ಮಾಡಲಿವೆ. ಈ ಉತ್ಪನ್ನವನ್ನು ಡೇಟಾ ಸೆಂಟರ್‌ಗಳು, ಪರಿಸರ ನಿರ್ಬಂಧ ಸ್ಥಳಗಳು ಮುಂತಾದ ವಿವಿಧ ಕಾರ್ಯಗಳಿಗೆ ಉಪಯೋಗಗಳಿಗೆ ಅನ್ವಯಿಸಬಹುದು.