Indi News: ಕೈಬರಹ ಉತ್ತರ ಕೊಟ್ಟವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇನೆ
ಕಳೆದ 3 ತಿಂಗಳಿಂದ ನೂತನ ಪುರಸಭೆಗೆ ಮುಖ್ಯಾಧಿಕಾರಿ ಬಂದಿದ್ದು ಯಾವ ಯಾವ ಕಾಮಗಾರಿ ಮಾಡಿದ್ದೀರಿ ಖರ್ಚು, ವೆಚ್ಚ ತಿಳಿಸಬೇಕು ಎಂದು ಪಟ್ಟು ಹಿಡಿದಾಗ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಸಭೆಯ ನಂತರ ಖರ್ಚು, ವೆಚ್ಚ ಚುಕ್ತಾ ಲೆಕ್ಕಪತ್ರ ಎಲ್ಲ ತೋರಿಸುತ್ತೇನೆ. ಕೆಲ ಮುಖ್ಯ ವಿಷಯಗಳು ಚರ್ಚಿಸಿ ಠರಾವು ಮಾಡಬೇಕಾಗಿರುವದರಿಂದ ಅಡ್ಡಿಪಡಿಸಬೇಡಿ ಎಂದು ಸದಸ್ಯರಿಗೆ ಸಮಾಧಾನ ಪಡಿಸಿದರು

ಇಂದು ಇಂಡಿ ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ಲಿಂಬಾಜಿ ರಾಠೋಡ ಇವರ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ಜಹಾಂಗೀರ ಸೌದಾಗರ ಇವರ ನೈತೃತ್ವದಲ್ಲಿ ಸಾಮಾನ್ಯ ಸಭೆ ಜರುಗಿತ್ತು. -

ಇಂಡಿ: ಪಟ್ಟಣದ ಪುರಸಭೆಯಲ್ಲಿ ಶನಿವಾರ ಅಧ್ಯಕ್ಷ ಲಿಂಬಾಜಿ ರಾಠೋಡ ಇವರ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ಜಹಾಂಗೀರ ಸೌದಾಗರ ಇವರ ನೇತೃತ್ವದಲ್ಲಿ ಸಾಮಾನ್ಯ ಸಭೆ ಜರುಗಿತ್ತು.
ಸಭೆಯಲ್ಲಿ ಪುರಸಭೆ ಆರೋಗ್ಯ ಅಧಿಕಾರಿ ಪ್ರವೀಣ ಸೋನಾರ ವಿಶೇಷ ಸಾಮಾನ್ಯ ಸಭೆಯ ನಡಾವಳಿ ಹಾಗೂ ಇತರೆ ವಿಷಯಗಳು ಚರ್ಚಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪುರಸಭೆ ಸದಸ್ಯ ಅನಿಲ ಗೌಡ ಬಿರಾದಾರ, ಯಾವುದೇ ವಿಷಯ ಚರ್ಚಿಸುವುದಕ್ಕಿಂತ ಮುಂಚೆ ಲೆಕ್ಕ ಪತ್ರ ಸಭೆಯಲ್ಲಿ ಮಂಡಿಸಬೇಕು. ಕಳೆದ 3 ತಿಂಗಳಿಂದ ನೂತನ ಪುರಸಭೆಗೆ ಮುಖ್ಯಾಧಿಕಾರಿ ಬಂದಿದ್ದು ಯಾವ ಯಾವ ಕಾಮಗಾರಿ ಮಾಡಿದ್ದೀರಿ ಖರ್ಚು, ವೆಚ್ಚ ತಿಳಿಸಬೇಕು ಎಂದು ಪಟ್ಟು ಹಿಡಿದಾಗ ಮುಖ್ಯಾಧಿ ಕಾರಿ ಸಿದ್ದರಾಯ ಕಟ್ಟಿಮನಿ ಸಭೆಯ ನಂತರ ಖರ್ಚು, ವೆಚ್ಚ ಚುಕ್ತಾ ಲೆಕ್ಕಪತ್ರ ಎಲ್ಲ ತೋರಿಸು ತ್ತೇನೆ. ಕೆಲ ಮುಖ್ಯ ವಿಷಯಗಳು ಚರ್ಚಿಸಿ ಠರಾವು ಮಾಡಬೇಕಾಗಿರುವದರಿಂದ ಅಡ್ಡಿಪಡಿಸಬೇಡಿ ಎಂದು ಸದಸ್ಯರಿಗೆ ಸಮಾಧಾನ ಪಡಿಸಿದರು.
ನಂತರ ಸ್ಥಳೀಯ ಜ್ಞಾನಯೋಗಿ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ಯೋಜನೆಯಡಿ ಸ್ಥಾಪಿಸಿದ ಮೆಗಾ ಮಾರುಕಟ್ಟೆಯ ಒಟ್ಟು ೨೩೩ ವಾಣಿಜ್ಯ ಮಳಿಗೆಗಳು ಇದ್ದು ಇದರಲ್ಲಿ ೨೭ ಮಾತ್ರ ಮಳಿಗೆ ಹರಾಜು ಆಗಿವೆ. ೫-೬ ಬಾರಿ ಲೀಲಾವು ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಬಾಡಿಗೆ ಹೋಗಿಲ್ಲ. ತಿಂಗಳಿಗೆ ೨೪ ಲಕ್ಷ ರೂ ಸಾಲ ಕಟ್ಟಬೇಕಾಗಿದೆ. ವ್ಯಾಪಾರಸ್ಥರು, ಸಾರ್ವಜನಿಕರು ಬಾಡಿಗೆ ಹೆಚ್ಚಾಗಿದೆ ಎನ್ನುತ್ತಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲರು ೬ ಕೋಟಿ ಅನುದಾನ ಕೊಡುವ ಭರವಸೆ ನೀಡಿದ್ದು ವಿಶೇಷ ಸಾಮಾನ್ಯ ಸಭೆಯಲ್ಲಿ ಒಂದು ನಿರ್ಣಯಕ್ಕೆ ಬನ್ನಿ ಎಂದು ಮುಖ್ಯಾಧಿ ಕಾರಿ ಸಿದ್ದರಾಯ ಕಟ್ಟಿಮನಿ ಸದಸ್ಯರ ಗಮನಕ್ಕೆ ತಂದಾಗ ಶಾಸಕರ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳೋಣ ಎಂದು ಸದಸ್ಯರು ತಿಳಿಸಿದರು.
ಇದನ್ನೂ ಓದಿ: ವಿಜಯಪುರದಲ್ಲಿ ಗುಂಡಿಗಳದ್ದೇ ದರ್ಬಾರ್
15ನೇ ಹಣಕಾಸು ಯೋಜನೆಯಡಿ ಪುರಸಭೆ ಇಂಡಿ ವ್ಯಾಪ್ತಿಯ ಕುಡಿಯುವ ನೀರಿನ ವ್ಯವಸ್ಥೆ ಪೈಪಲೈನ್ ಕಾಮಗಾರಿ ಕ್ರಮ ಕೈಗೊಳ್ಳುವ ಕುರಿತು ವಿಷಯ ಪ್ರಸ್ತಾವನೆ ಮಾಡುತ್ತಿದಂತೆ ಅಧ್ಯಕ್ಷ ಲಿಂಬಾಜಿ ರಾಠೋಡ ಹಾಗೂ ಸದಸ್ಯ ಶಬೀರ್ ಖಾಜಿ ಇವರ ಇಬ್ಬರ ಮಧ್ಯೆ ಮಾತಿನ ಚಕುಮಕಿ ಪ್ರಯೋಗವಾಗುತ್ತಿದ್ದಂತೆ ಏತನ್ಮಧ್ಯೆ ಸದಸ್ಯರಾದ ದೇವೇಂದ್ರ ಕುಂಬಾರ, ಅಯುಬ ಬಾಗವಾನ, ಉಮೇಶ ದೇಗಿನಾಳ, ಅನಿಲಗೌಡ ಬಿರಾದಾರ ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.
ಪುರಸಭೆ ಸದಸ್ಯ ಉಮೇಶ ದೇಗಿನಾಳ ಪುರಸಭೆಯ ವ್ಯಾಪ್ತಿಯ ೫೧೪/ಅ, ೫೧೪/ಬ ಮ್ಯಾನುವೇಲ್ ಉತ್ತಾರಿ ಕೊಟ್ಟಿದ್ದಾರೆ. ಉತ್ತಾರಿ ಕೊಡುವಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಎಲ್ಲಾ ದಾಖಲಾತಿ ಗಳು ಇದ್ದರೂ ಕೂಡಾ ಒಂದೊಂದೇ ನೆಪ ಹೇಳಿ ಸಾರ್ವಜನಿಕರಿಗೆ ಉತ್ತರ ಕೊಡದೆ ಸತಾಯಿಸು ತ್ತಿದ್ದು ಹಣ ಕೊಟ್ಟರೆ ಸಾಕು ಕೈಯಿಂದ ಬರವಣಿಗೆ ಮಾಡಿ ಕೈಬರಹ ಉತ್ತರ ನೀಡುತ್ತಿದ್ದು ೬೦ ಉತ್ತಾರಿಗಳು ಸಾಕ್ಷಿ ಸಮೇತ ಕೊಡುತ್ತೇನೆ ಎಂದು ಆರೋಪಿಸಿದ ಅವರು ಕೂಡಲೆ ತಪ್ಪು ಮಾಡಿ ದವರು ಒಪ್ಪಿಕೊಳ್ಳಿ ಎಂದು ಹೇಳಿದಾಗ ಪುರಸಭೆ ಮುಖ್ಯಾಧಿಕಾರಿ ಕೈಬರಹ ಉತ್ತರ ಕೊಟ್ಟವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಪುರಸಭೆ ಹೋಗಿ ನಗರ ಸಭೆಯಾಗುತ್ತಿದೆ. ವಾರ್ಡಗಳಲ್ಲಿ ವಿದ್ಯುತ್ ಬಲ್ಬ್ ಗಳು ಇಲ್ಲದೆ ಮಳೆಗಾಲ ದಲ್ಲಿ ಜನರಿಗೆ ತೊಂದರೆಯಾಗಿದೆ. ಕೆಲ ವಾರ್ಡಗಳ ರಸ್ತೆಗಳು ಕೆಸರು ಗದ್ದೆಯಾಗಿವೆ ಅವಶ್ಯಕತೆ ಇದ್ದಲ್ಲಿ ಬಲ್ಬ್ ಗಳು, ರಸ್ತೆಗೆ ಮುರುಮ ಹಾಕಿ ಇನ್ನು ನಮ್ಮ ಅವಧಿ ಮುಗಿಯುತ್ತಿದೆ ಸಾರ್ವಜನಿಕ ರಿಂದ ಬೈಗುಳ ತಿಂದು ಸಾಕಾಗಿದೆ ಕೂಡಲೆ ಹೇಳಿದ ಕೆಲಸ ಮಾಡಿ ಎಂದು ಅಯುಬ ಬಾಗವಾನ, ಉಮೇಶ ದೇಗಿನಾಳ ಸಭೆಯಲ್ಲಿಸೂಚಿಸುತ್ತಿದಂತೆ ಸದಸ್ಯ ಮುಸ್ತಾಕ ಇಂಡಿಕರ್ ನೋಡಿ ಈಗಾಗಲೇ ಎಲ್ಲಾ ವಾರ್ಡಗಳಲ್ಲಿ ಲೈಟಿನ ವ್ಯವಸ್ಥೆ ಮಾಡಲಾಗಿದೆ ಸದ್ಯ ತುರ್ತು ಬಲ್ಬ್ ಹಾಕುವಂತೆ ಸೂಚನೆ ನೀಡುತ್ತೇನೆ ಎಂದರು.
ಪುರಸಭೆ ಸರ್ವ ಸದಸ್ಯರು, ನಾಮನಿರ್ದೇಶಕ ಸದಸ್ಯರು, ಪುರಸಭೆಯ ನೌಕರರು, ಅಧಿಕಾರಿಗಳು ಇದ್ದರು.