ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indi News: ಕಹಿ ಉಂಡು ಸಿಹಿ ಉಣ ಬಡಿಸುತ್ತಿರುವ ನಾಗೇಶ ತಳಕೇರಿ: ಬಿ.ಡಿ ಪಾಟೀಲ

ಎಷ್ಟೋ ಜನರು ಸುಧೀರ್ಘ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ವ್ಯಕ್ತಿಯಾಗಬೇಕು ಪ್ರಶಸ್ತಿ ಪಡೆಯಬೇಕು ಎಂದು ಕೆಲಸ ಮಾಡಿದರೂ ಆಗುವುದಿಲ್ಲ. ಡಾಕ್ಟರೇಟ್ ಪದವಿ ಪಡೆಯದೆ ವಿಫಲರಾಗುತ್ತಾರೆ. ಸಮಾಜದ ಒಬ್ಬ ಚಿಕಿತ್ಸಕನಾಗಿ ಕೆಲಸ ಮಾಡಿರುವ ಇವರು ಉನ್ನತ ಪ್ರಶಸ್ತಿ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ. ಮುಂಬರುವ ದಿನಗಳಲ್ಲಿ ಸಮಾಜ ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ನಮ್ಮ ಸಮಾಜದಲ್ಲಿ ಶಿಕ್ಷಣ ಕೊರತೆ ಇದೆ.

ಕಹಿ ಉಂಡು ಸಿಹಿ ಉಣಬಡಿಸುತ್ತಿರುವ ನಾಗೇಶ ತಳಕೇರಿ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಶ್ರೀಮತಿ ರಮಾಬಾಯಿ ಪೌಢ ಶಾಲೆ ಇಂಡಿ ಇವರಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಡಾ. ನಾಗೇಶ ಎಸ್ ತಳಕಾರಿ ಇವರಿಗೆ ಅಭಿನಂದನೆ ಸಲ್ಲಿಸುತ್ತಿದರು. -

Ashok Nayak Ashok Nayak Aug 31, 2025 12:00 AM

ಇಂಡಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಜಾರ್ಯಾಲಯದ ಗುರುಭವನದಲ್ಲಿ ಶ್ರೀಮತಿ ರಮಾಬಾಯಿ ಪೌಢ ಶಾಲೆ ಇಂಡಿ ಇವರಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಡಾ.ನಾಗೇಶ ಎಸ್ ತಳಕಾರಿ ಇವರಿಗೆ ಅಭಿನಂದನಾ ಸನ್ಮಾನ ಜರುಗಿತು.

ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಮಾತನಾಡಿ, ನಾಗೇಶ ತಳಕೇರಿಯವರು ನಡೆದ ಬಂದ ದಾರಿ ಅತ್ಯಂತ ದುರ್ಗಮವಾಗಿದ್ದು ಅನೇಕ ಕಷ್ಟ ನಷ್ಟ ಬಡತನ ಕಹಿ ಅನುಭವ ಉಂಡ ವ್ಯಕ್ತಿ ತಾನು ಅನುಭವಿಸಿದ ಕಷ್ಟ ಇನ್ನೊಬ್ಬರಿಗೆ ಬರಬಾರದು ಎಂದು ಕಹಿ ಉಂಡು ಸಿಹಿ ಉಣಬಡಿಸುತ್ತಿರುವ ಸದಾ ಚಿಂತನೆ ಮಾಡುವ ಮೂಲಕ ದೀನ ದುರ್ಬಲರು, ಅನಾಥರು, ಬಡವರು ,ಅಂಗವಿಕರು ಕಂಡಾಗ ಕೈಲಾದ ಮಟ್ಟಿಗೆ ಸಹಾಯ ಮಾಡುವ ಗುಣ ಇವರಲ್ಲಿದೆ ಇಂತಹ ಸಮಾಜ ಸೇವೆಕನ ಸೇವೆ ಪರಿಗಣಿಸಿ ಡಾಕ್ಟರೇಟ್ ಪ್ರಶೆಸ್ತಿ ನೀಡಿರುವುದು ಸ್ವಾಗತಾರ್ಹ ಎಂದರು.

ಇದನ್ನೂ ಓದಿ: Indi News: ಕೈಬರಹ ಉತ್ತರ ಕೊಟ್ಟವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇನೆ

ಗ್ಯಾರಂಟಿ ಯೋಜನೆ ತಾಲೂಕಾ ಅಧ್ಯಕ್ಷ ಪ್ರಶಾಂತ ಕಾಳೆ ಮಾತನಾಡಿ ನಾಗೇಶ ತಳಕೇರಿ ಸಮಾಜಿಕ ಕಳಕಳಿ ಇನ್ನೊಬ್ಬರಿಗೆ ಪ್ರೇರಣೆಯಾಗಲಿದೆ. ಇವರ ಸಾಮಾಜಿಕ ಕಾರ್ಯ ಮನ ಮಿಡಿಯುತ್ತದೆ. ಕೆಸರಿನಲ್ಲಿ ಕಮಲ ಅರಳಿದಂತೆ ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿಸುತ್ತೆ. ಬುದ್ದ, ಬಸವ ,ಅಂಬೇಡ್ಕರ ಇವರಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸಿದರು.

ಹಂಜಗಿ ಗ್ರಾಮದ ಮಾಜಿ ಗ್ರಾ.ಪಂ ಅಧ್ಯಕ್ಷ, ಸಮಾಜದ ಹಿರಿಯ ನಾಯಕ ಮುತ್ತಪ್ಪ ಪೋತೆ ಮಾತನಾಡಿ, ಎಷ್ಟೋ ಜನರು ಸುಧೀರ್ಘ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ವ್ಯಕ್ತಿಯಾಗಬೇಕು ಪ್ರಶಸ್ತಿ ಪಡೆಯಬೇಕು ಎಂದು ಕೆಲಸ ಮಾಡಿದರೂ ಆಗುವುದಿಲ್ಲ. ಡಾಕ್ಟರೇಟ್ ಪದವಿ ಪಡೆಯದೆ ವಿಫಲ ರಾಗುತ್ತಾರೆ. ಸಮಾಜದ ಒಬ್ಬ ಚಿಕಿತ್ಸಕನಾಗಿ ಕೆಲಸ ಮಾಡಿರುವ ಇವರು ಉನ್ನತ ಪ್ರಶಸ್ತಿ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ. ಮುಂಬರುವ ದಿನಗಳಲ್ಲಿ ಸಮಾಜ ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ನಮ್ಮ ಸಮಾಜದಲ್ಲಿ ಶಿಕ್ಷಣ ಕೊರತೆ ಇದೆ. ನಿಮ್ಮದೇಯಾದ ಒಂದು ಶಕ್ತಿ ಇದೆ ನಿಮಗೆ ಮತ್ತಷ್ಟು ಉನ್ನತ ಸ್ಥಾನಗಳು ಸಿಗಲಿ ಎಂದು ಶುಭ ಕೋರಿದರು.

ಕಾಸುಗೌಡ ಬಿರಾದಾರ, ಹಣಮಂತರಾಯಗೌಡ ಪಾಟೀಲ ಮಾತನಾಡಿದರು.

ಭೀಮಾಶಂಕರ ಮೂರಮನ್, ವಿನಾಯಕ ಗುಣಸಾಗರ, ಮರೇಪ್ಪ ಗಿರಣಿವಡ್ಡರ್, ಅಯೂಬ ನಾಟೀಕಾರ, ಸಿದ್ದು ಡಂಗಾ ವೇದಿಕೆಯಲ್ಲಿದ್ದರು.

ಮುಖ್ಯೋಪಾಧ್ಯಾಯ ನಿಜಣ್ಣಾ ಕಾಳೆ ಹಾಗೂ ಶ್ರೀಮತಿ ರಮಾಬಾಯಿ ಪ್ರೌಢ ಶಾಲೆಯ ಅಧ್ಯಕ್ಷರು, ಆಡಳಿತ ಮಂಡಳಿಯ ಸರ್ವದಸ್ಯರು ಮತ್ತು ಶಿಕ್ಷಕ ವರ್ಗ ಉಪಸ್ಥಿರಿದ್ದರು.