ನವದೆಹಲಿ: ಇನ್ನು ಮುಂದೆ ಭಾರತೀಯ ರೈಲಿನಲ್ಲಿ (indian railways) ಪ್ರಯಾಣ ಮಾಡುವವರು ಮುಂಗಡವಾಗಿ ಟಿಕೆಟ್ ಬುಕ್ (train ticket) ಮಾಡದೇ ಇದ್ದರೆ ಭಾರಿ ದಂಡವನ್ನು (fine) ತೆರಬೇಕಾದೀತು ಎಂದು ಭಾರತೀಯ ರೈಲ್ವೆ ಇಲಾಖೆ (Indian Railway Department) ಎಚ್ಚರಿಕೆಯನ್ನು ನೀಡಿದೆ. ಟಿಕೆಟ್ ಕೌಂಟರ್ ಗಳಲ್ಲಿ ನಿಲ್ಲದೆ ಡಿಜಿಟಲ್ ಮೂಲಕ ಅನ್‌ರಿಸರ್ವ್ಡ್ ಟಿಕೆಟ್ ಬುಕ್ (unreserved train ticket) ಮಾಡಿಕೊಳ್ಳುವ ಪ್ರಯಾಣಿಕರು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ಇನ್ನು ಮುಂದೆ ರೈಲ್ ವನ್ (railone) ಆಪ್ ಮೂಲಕ ಬುಕ್ ಮಾಡಿದ ಮೂಲ ಡಿಜಿಟಲ್ ಟಿಕೆಟ್ ಮಾತ್ರ ಮಾನ್ಯವಾಗುತ್ತದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಭಾರತೀಯ ರೈಲ್ವೆ ಇಲಾಖೆಯು ಹೊರಡಿಸಿರುವ ಈ ಹೊಸ ನಿಯಮಗಳ ಪ್ರಕಾರ ಇನ್ನು ಮುಂದೆ ಟಿಕೆಟ್‌ನ ಸ್ಕ್ರೀನ್‌ಶಾಟ್, ಮೊಬೈಲ್‌ನಲ್ಲಿ ಉಳಿಸಿಕೊಂಡಿರುವ ಟಿಕೆಟ್ ಪ್ರತಿ, ಪಿಡಿಎಫ್ ಪ್ರತಿ, ವಾಟ್ಸ್‌ಆಪ್ ಅಥವಾ ಇತರ ಮೆಸೇಜಿಂಗ್ ಆಪ್ ಗಳ ಮೂಲಕ ಬಂದ ಟಿಕೆಟ್‌ಗಳು ಮಾನ್ಯವಾಗುವುದಿಲ್ಲ ಎಂದು ಹೇಳಿದೆ.
ಉತ್ತರ ಪ್ರದೇಶದಲ್ಲಿ ಮಳೆ ಅವಾಂತರ: ಸ್ಮಶಾನಕ್ಕೆ ನುಗ್ಗಿದ ನೆರೆ; ಎಲ್ಲೆಂದರಲ್ಲಿ ತೇಲಿದ ಮೃತದೇಹಗಳು
ಸ್ಲೀಪರ್, ಎಸಿ ಸೇರಿದಂತೆ ರಿಸರ್ವ್ಡ್ ಟಿಕೆಟ್‌ಗಳನ್ನು ಆಧಾರ್, ಪ್ಯಾನ್ ಕಾರ್ಡ್ ಸೇರಿದಂತೆ ಗುರುತಿನ ಚೀಟಿಗಳ ಮೂಲಕ ಪರಿಶೀಲಿಸಲಾಗುತ್ತದೆ. ಆದರೆ ಡಿಜಿಟಲ್ ಅನ್‌ರಿಸರ್ವ್ಡ್ ಟಿಕೆಟ್‌ಗಳನ್ನು ರೈಲು ಹೊರಡುವ ಮುನ್ನ ಪ್ರಯಾಣಿಕರು ಪ್ರಯಾಣಿಸುವ ಬೋರ್ಡಿಂಗ್ ನಿಲ್ದಾಣದಿಂದಲೇ ಬುಕ್ ಮಾಡಬೇಕು. ಒಂದು ವೇಳೆ ರೈಲು ನಿಲ್ದಾಣದಿಂದ ಹೊರಟ ಮೇಲೆ ಬುಕ್ ಮಾಡಿದರೆ ಅವುಗಳಿಗೆ ಡಿಜಿಟಲ್ ಮಾನ್ಯತೆ ಸಿಗುವುದಿಲ್ಲ. ಈ ನಿಯಮವು ಅನ್‌ರಿಸರ್ವ್ಡ್ ಟಿಕೆಟ್‌ಗಳಿಗೆ ಮಾತ್ರ ಅನ್ವಯ ವಾಗುತ್ತದೆ.
ಡಿಜಿಟಲ್ ಅನ್‌ರಿಸರ್ವ್ಡ್ ಟಿಕೆಟ್ ಅನ್ನು ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ರೈಲ್‌ಒನ್ ಅಪ್ಲಿಕೇಶನ್‌ನಲ್ಲಿ ಕೂಡ ಪಡೆಯಬಹುದಾಗಿದೆ. ಇಲ್ಲಿ ಪ್ರದರ್ಶಿಸಲಾದ ಮೂಲ ಟಿಕೆಟ್ ಅನ್ನು ಮಾತ್ರ ಟಿಕೆಟ್ ಪರಿಶೀಲನೆಯ ಸಮಯದಲ್ಲಿ ಸ್ವೀಕರಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ರೈಲು ಸಂಖ್ಯೆ 18517 ಕೊರ್ಬಾ- ವಿಶಾಖಪಟ್ಟಣ ಲಿಂಕ್ ಎಕ್ಸ್‌ಪ್ರೆಸ್‌ನಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ತನ್ನ ಸಹೋದರ ವಾಟ್ಸಾಪ್‌ನಲ್ಲಿ ಫಾರ್ವರ್ಡ್ ಮಾಡಿದ ಕಾಯ್ದಿರಿಸದ ಟಿಕೆಟ್ ಅನ್ನು ತೋರಿಸಿದ್ದರು. ಆದರೆ ಇದು ಅನ್‌ರಿಸರ್ವ್ಡ್ ಆಗಿದ್ದರಿಂದ ಅವರು ದಂಡ ಪಾವತಿ ಮಾಡಬೇಕಾಯಿತು.
ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ಮಹಿಳೆಯ ಸಹೋದರ ರೈಲ್‌ಒನ್ ಅಪ್ಲಿಕೇಶನ್ ಮೂಲಕ ಟಿಕೆಟ್ ಬುಕ್ ಮಾಡಿ ಅನಂತರ ಅದನ್ನು ವಾಟ್ಸಾಪ್ ಮೂಲಕ ಮಹಿಳೆಗೆ ಫಾರ್ವರ್ಡ್ ಮಾಡಿದ್ದಾನೆ. ಟಿಕೆಟ್ ಪರಿಶೀಲನೆ ವೇಳೆ ರೈಲು ಬೋರ್ಡಿಂಗ್ ನಿಲ್ದಾಣದಿಂದ ಸಂಜೆ 4.10 ಕ್ಕೆ ಹೊರಟ ಸ್ವಲ್ಪ ಸಮಯದ ಅನಂತರ ಅಂದರೆ ಸಂಜೆ 4.45ಕ್ಕೆ ಈ ಟಿಕೆಟ್ ಅನ್ನು ಪೋಯೆಡೆಯಲಾಗಿದೆ. ಇದನ್ನು ಗಮನಿಸಿದ ಪ್ರಯಾಣ ಟಿಕೆಟ್ ಪರೀಕ್ಷಕರು (ಟಿಟಿಇ) ನಿಯಮಗಳ ಅಡಿಯಲ್ಲಿ ಇದನ್ನು ಅಮಾನ್ಯವೆಂದು ಘೋಷಿಸಿ ಪ್ರಯಾಣಿಕರಿಗೆ ದಂಡ ವಿಧಿಸಿದರು ಎಂದು ಹೇಳಿದರು.
ಶಾಲೆಯಲ್ಲಿ ತಮಿಳುನಾಡು ಸಿಎಂ ವಿಜಯ್ ಭಾಷಣ ನೇರಪ್ರಸಾರ: ಮುಖ್ಯ ಶಿಕ್ಷಕಿ ಅಮಾನತು
ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾದ ಭಾರತೀಯ ರೈಲ್ವೆಯು ಡಿಜಿಟಲ್ ಮಾದರಿಗಳನ್ನು ಅಳವಡಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್ ಮತ್ತು ಆನ್‌ಲೈನ್ ಅಪ್ಲಿಕೇಶನ್‌ಗಳು ಟಿಕೆಟ್ ಪರಿಶೀಲನೆ ಪ್ರಕ್ರಿಯೆಯನ್ನು ಕೂಡ ವೇಗಗೊಳಿಸುತ್ತಿದೆ. ಇದರಿಂದ ಕಾಗದದ ಬಳಕೆ ಕಡಿಮೆ ಮಾಡಿ ಟಿಕೆಟ್ ಬುಕಿಂಗ್ ನಲ್ಲಿ ಪಾರದರ್ಶಕತೆಯನ್ನು ತೋರಲು ಮತ್ತು ಟಿಕೆಟ್ ವಂಚನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ.