ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉತ್ತರ ಪ್ರದೇಶದಲ್ಲಿ ಮಳೆ ಅವಾಂತರ: ಸ್ಮಶಾನಕ್ಕೆ ನುಗ್ಗಿದ ನೆರೆ; ಎಲ್ಲೆಂದರಲ್ಲಿ ತೇಲಿದ ಮೃತದೇಹಗಳು

Heavy Rain in Uttar Pradesh: ಪಶ್ಚಿಮ ಉತ್ತರ ಪ್ರದೇಶದಾದ್ಯಂತ ದಿನಗಟ್ಟಲೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದ ನೀರು ಮತ್ತು ಮಣ್ಣಿನ ಸವೆತದಿಂದ ಸ್ಥಳೀಯ ಸ್ಮಶಾನದಲ್ಲಿದ್ದ ಹಲವು ಮೃತದೇಹಗಳು ಹೊರಗೆ ಬಂದು ಎಲ್ಲೆಂದರಲ್ಲಿ ತೇಲುತ್ತ ಸಾಗುತ್ತಿವೆ.

ಉತ್ತರ ಪ್ರದೇಶದಲ್ಲಿ ಮಳೆ ಅವಾಂತರ: ಸ್ಮಶಾನಕ್ಕೆ ನುಗ್ಗಿದ ಮಳೆ ನೀರು

ಉತ್ತರ ಪ್ರದೇಶದಲ್ಲಿ ನೆರೆಯಲ್ಲಿ ತೇಲಿದ ಮೃತದೇಹಗಳು -

Priyanka P
Priyanka P Jul 11, 2026 3:51 PM

ಲಖನೌ, ಜು. 11: ಪಶ್ಚಿಮ ಉತ್ತರ ಪ್ರದೇಶದಾದ್ಯಂತ (Uttar Pradesh) ದಿನಗಟ್ಟಲೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ (Heavy rain) ಜನಜೀವನ ಅಸ್ತವ್ಯಸ್ತವಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿದೆ. ನಿವಾಸಿಗಳು ಮನೆಯಿಂದ ಹೊರಗೆ ಬರದಂತೆ ತಿಳಿಸಲಾಗಿದೆ. ಸಹಾರನ್‌ಪುರ ಜಿಲ್ಲೆಯ ಗಾಗಲ್ಹೇರಿ ಪ್ರದೇಶದ ಡೆಹ್ರಾಡೂನ್–ದೆಹಲಿ ಹೆದ್ದಾರಿಯ ಸಮೀಪದ ಸಯ್ಯದ್ ಮಜ್ರಾ ಗ್ರಾಮದಲ್ಲಿ ಮಳೆಯಿಂದ ಹೊಸ ಆತಂಕ ಎದುರಾಗಿದೆ. ಪ್ರವಾಹದ ನೀರು ಮತ್ತು ಮಣ್ಣಿನ ಸವೆತದಿಂದ ಸ್ಥಳೀಯ ಸ್ಮಶಾನದಲ್ಲಿದ್ದ ಹಲವು ಸಮಾಧಿಗಳು ಕುಸಿದು, ಅವುಗಳಲ್ಲಿದ್ದ ಸಮಾಧಿ ಮಾಡಲಾಗಿದ್ದ ಮೃತದೇಹಗಳು ಹೊರಗೆ ಬಂದಿವೆ.

ಮೂರು ದಿನಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ ಸ್ಮಶಾನದ ಹಲವು ಭಾಗಗಳಲ್ಲಿ ನೆಲ ಕುಸಿದಿದೆ. ಪ್ರವಾಹದ ನೀರು ಸ್ಮಶಾನದೊಳಗೆ ಹರಿದ ಪರಿಣಾಮ ಹಲವು ಸಮಾಧಿಗಳು ಹಾನಿಗೊಳಗಾಗಿ ಹೂಳಲಾದ ಮೃತದೇಹಗಳು ಹಾಗೂ ಮತ್ತು ಹೊರಗೆ ಕಾಣಿಸಿಕೊಂಡಿವೆ. ಜತೆಗೆ ಸೇರಿನಲ್ಲಿ ತೇಲುತ್ತಿವೆ.

ವೈರಲ್‌ ವಿಡಿಯೊ:



ಸುದ್ದಿ ಹರಡಿ ಜನರು ಒಟ್ಟುಗೂಡಿ ಮೃತದೇಹಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಸಾಮಾಜಿಕ ಕಾರ್ಯಕರ್ತರಾದ ಆಶು ಮತ್ತು ಪಾಷಾ ರಕ್ಷಣಾ ಕಾರ್ಯವನ್ನು ಸಂಘಟಿಸಲು ಸಹಕರಿಸಿದರು. ಮಳೆ ಕಡಿಮೆಯಾಗಿ ನೀರು ಬಸಿದು ಹೋದ ನಂತರ, ಧಾರ್ಮಿಕ ಪದ್ಧತಿಗಳನ್ನು ಅನುಸರಿಸಿ ಮೃತದೇಹಗಳನ್ನು ಮತ್ತೆ ಗೌರವಯುತವಾಗಿ ಸಮಾಧಿ ಮಾಡಲಾಯಿತು.

ಮಹಾರಾಷ್ಟ್ರದ ಭೀಕರ ಮಳೆ ನಡುವೆ ಸ್ಪೈಡರ್‌ಮ್ಯಾನ್ ಪ್ರತ್ಯಕ್ಷ; ಟ್ರಾಫಿಕ್ ನಿಯಂತ್ರಿಸಿ ವಾಹನ ಸವಾರರಿಗೆ ನೆರವು

ಭಾರಿ ಚರ್ಚೆ

ಈ ಘಟನೆ ಸ್ಥಳೀಯ ಮೂಲಸೌಕರ್ಯದ ಕೊರತೆಯ ಬಗ್ಗೆಯೂ ಗಮನ ಸೆಳೆದಿದೆ. ಸ್ಮಶಾನದ ಸಮೀಪದ ಹೆದ್ದಾರಿಯ ಪಕ್ಕದಲ್ಲಿರುವ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಇದು ಪ್ರವಾಹವನ್ನು ಇನ್ನಷ್ಟು ಹದಗೆಡಿಸಿದೆ ಎಂದು ನಿವಾಸಿಗಳು ದೂರಿದ್ದಾರೆ. ಮಳೆಗಾಲದ ಮೊದಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೆ ಈ ಹಾನಿ ಉಂಟಾಗುತ್ತಿರಲಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ದುರ್ಘಟನೆಗಳು ಮತ್ತೆ ಮರುಕಳಿಸದಂತೆ ತಡೆಯಲು ಸ್ಮಶಾನದ ಸುತ್ತ ಸೂಕ್ತ ರಕ್ಷಣಾ ಗೋಡೆ ನಿರ್ಮಿಸಬೇಕು. ಜತೆಗೆ ಚರಂಡಿ ವ್ಯವಸ್ಥೆಯನ್ನು ಸುಧಾರಿಸಬೇಕು ಹಾಗೂ ಮಣ್ಣಿನ ಸವೆತವನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಪಶ್ಚಿಮ ಭಾಗದಲ್ಲಿ ಸುರಿದ ಭಾರಿ ಮಳೆ ವ್ಯಾಪಕ ಹಾನಿ ಉಂಟು ಮಾಡಿದೆ. ರಾಷ್ಟ್ರೀಯ ರಾಜಧಾನಿ ದೆಹಲಿ ಸಮೀಪದ ಗಾಜಿಯಾಬಾದ್ ಮತ್ತು ನೋಯ್ಡಾದಲ್ಲಿ ರಸ್ತೆಗಳು ಕುಸಿದು ಮರಗಳು ಉರುಳಿಬಿದ್ದ ಪರಿಣಾಮ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿತು. ಗಾಜಿಯಾಬಾದ್‌ನಲ್ಲಿ ಮಳೆಯಿಂದಾಗಿ ಆರು ಮಂದಿ ಸಾವಿಗೀಡಾದರು.