Union Budget 2025: ಬಜೆಟ್‌ಗೆ ಷೇರು ಮಾರುಕಟ್ಟೆ ನೀರಸ ಪ್ರತಿಕ್ರಿಯೆ, ಕಾರಣವೇನು?
Union Budget 2025: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದವರಿಗೆ ಮತ್ತು ವೇತನದಾರರಿಗೆ 12 ಲಕ್ಷ ರುಪಾಯಿ ತನಕ ಆದಾಯಕ್ಕೆ ತೆರಿಗೆ ಹೊರೆಯನ್ನು ಇಳಿಸಿ ದೊಡ್ಡ ರಿಲೀಫ್ ನೀಡಿದ್ದರೂ, ಷೇರು ಪೇಟೆ ಮಾತ್ರ ಮಂಕಾಗಿತ್ತು! ಕಾರಣವೇನು ಎಂಬ ಚರ್ಚೆ ಈಗ ನಡೆಯುತ್ತಿದೆ.
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನಿಫ್ಟಿ ಕೇಂದ್ರ ಬಜೆಟ್‌ಗೆ ನೀರಸವಾಗಿ ಪ್ರತಿಕ್ರಿಯಿಸಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದವರಿಗೆ ಮತ್ತು ವೇತನದಾರರಿಗೆ 12 ಲಕ್ಷ ರುಪಾಯಿ ತನಕ ಆದಾಯಕ್ಕೆ ತೆರಿಗೆ ಹೊರೆಯನ್ನು ಇಳಿಸಿ ದೊಡ್ಡ ರಿಲೀಫ್ ನೀಡಿದ್ದರೂ, ಷೇರು ಪೇಟೆ ಮಾತ್ರ ಮಂಕಾಗಿತ್ತು! ಕಾರಣವೇನು ಎಂಬ ಚರ್ಚೆ ಈಗ ನಡೆಯುತ್ತಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಕೇವಲ 5 ಅಂಕ ಏರಿಕೊಂಡು 77,505ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 26 ಅಂಕ ಕಳೆದುಕೊಂಡು 23,482ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.
ಐಟಿಸಿ, ಹಿಂದೂಸ್ತಾನ್ ಯುನಿಲಿವರ್, ಡಾಬರ್ ಷೇರುಗಳು ಶೇಕಡಾ 5 ಕ್ಕೂ ಹೆಚ್ಚು ಏರಿಕೆಯಾಯಿತು. ಇಂಡಿಯನ್ ಹೋಟೆಲ್ಸ್, ಐಟಿಸಿ ಹೋಟೆಲ್ಸ್ ಷೇರು ದರ 10% ಜಿಗಿಯಿತು. ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿರುವುದು ಇದಕ್ಕೆ ಕಾರಣ.
ಈ ನಡುವೆ ಡಿಫೆನ್ಸ್ ಸೆಕ್ಟರ್ ಷೇರುಗಳು 9%ಗೂ ಹೆಚ್ಚು ಕುಸಿಯಿತು. ರಕ್ಷಣಾ ಇಲಾಖೆಗೆ 4.92 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದ್ದು, ನಿರೀಕ್ಷೆಗಿಂ ಕಡಿಮೆಯಾಗಿದೆ. ಒಟ್ಟಾರೆ ಬಂಡವಾಳ ವೆಚ್ಚವು 11.2 ಲಕ್ಷ ಕೋಟಿ ರುಪಾಯಿಗಳಾಗಿದ್ದು, ನಿರೀಕ್ಷೆಯ ಮಟ್ಟದಲ್ಲಿ ಇದ್ದಿರಲಿಲ್ಲ. ಇದು ಮಾರುಕಟ್ಟೆಯನ್ನು ನಿರುತ್ಸಾಹಗೊಳಿಸಿತು. ರೈಲ್ವೆ ಷೇರು ಆರ್‌ವಿಎನ್‌ಎಲ್ ಷೇರು ದರ ಶೇಕಡಾ 9 ಇಳಿಯಿತು. ಹೀಗಿದ್ದರೂ, ಮಾರುತಿ ಸುಜುಕಿ, ಹುಂಡೈ ಮೋಟಾರ್ ಷೇರು ದರ ಜಿಗಿಯಿತು. ಕಂಪನಿಯ ಮಾಸಿಕ ಸೇಲ್ಸ್ ಹೆಚ್ಚಳವಾಗಿರುವುದು ಇದಕ್ಕೆ ಕಾರಣ.
ಈ ಸುದ್ದಿಯನ್ನೂ ಓದಿ: Union Budget Size: ಈ ಬಾರಿಯ ಬಜೆಟ್ ಗಾತ್ರ ಎಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಎಲ್ ಆಂಡ್ ಟಿ, ಭಾರತ್ ಎಲೆಕ್ಟ್ರಾನಿಕ್ಸ್, ಪವರ್ ಗ್ರಿಡ್ ಕಾರ್ಪ್, ಎಚ್‌ಡಿಎಫ್‌ಸಿ ಲೈಫ್, ಸಿಪ್ಲಾ ಷೇರುಗಳ ದರ ನಿಫ್ಟಿಯಲ್ಲಿ ತೀವ್ರ ಕುಸಿಯಿತು. 2014 ರಿಂದೀಚೆಗೆ 14 ಕೇಂದ್ರ ಬಜೆಟ್ ಪೈಕಿ 7ರಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕ ಏರಿತ್ತು.
ಕೇಂದ್ರ ಸರಕಾರ ಬಂಡವಾಳ ವೆಚ್ಚವನ್ನು ಏರಿಸಿದಾಗ ಮೂಲಸೌಕರ್ಯ ವಲಯಕ್ಕೆ ಸಂಬಂಧಿಸಿದ ಷೇರುಗಳು ಏರಿಕೆಯಾಗುತ್ತವೆ. ಆದರೆ ಈ ಬಾರಿ ಬಂಡವಾಳ ವೆಚ್ಚ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗಿಲ್ಲ. ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಮತ್ತು ಬಿಹಾರಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ ಎಂದು ಆರ್ಥಿಕ ತಜ್ಞ ಸ್ವಾಮಿನಾಥನ್ ಅಯ್ಯರ್ ತಿಳಿಸಿದ್ದಾರೆ.