2028ರ ವೇಳೆಗೆ ಇನ್ನೂ 1,00,000 ಎಂಎಸ್ಎಂಇಗಳ ಸಬಲೀಕರಣಕ್ಕೆ ವಾಲ್ ಮಾರ್ಟ್ ವೃದ್ಧಿ ಗುರಿ
2019 ರಿಂದ ಇಲ್ಲಿವರೆಗೆ ವಾಲ್ ಮಾರ್ಟ್ ವೃದ್ಧಿ 70,000 ಎಂಎಸ್ಎಂಇಗಳಿಗೆ ತರಬೇತಿಯನ್ನು ನೀಡಿದ್ದು, ಡಿಜಿಟಲ್ ಕಾಮರ್ಸ್, ಪರ್ಸನಲೈಸ್ಡ್ ಮೆಂಟರ್ ಶಿಪ್ ಮತ್ತು ಕಾರ್ಯತಂತ್ರೀಯ ಪಾಲು ದಾರಿಕೆಯನ್ನು ಹೊಂದಲು ಈ ಕಾರ್ಯಕ್ರಮ ನೆರವಾಗಿದೆ. ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು ಹಣಕಾಸು, ಮಾರುಕಟ್ಟೆ, ಕಾರ್ಮಿಕಶಕ್ತಿ ನಿರ್ವಹಣೆ ಮತ್ತು ಪರಿಸರ ಸುಸ್ಥಿರತೆ ಯಂತಹ ನಿರ್ಣಾಯಕ ಅಂಶಗಳನ್ನು ಹೇಗೆ ನಿರ್ವಹಣೆ ಮಾಡಬಹುದು ಎಂಬುದರ ಬಗ್ಗೆ ಎಂಎಸ್ಎಂಇಗಳಿಗೆ ಈ ಕಾರ್ಯಕ್ರಮ ತರಬೇತಿ ನೀಡುತ್ತದೆ.


ಎಂಎಸ್ಎಂಇಗಳು ತಮ್ಮ ವ್ಯಾಪಾರ ವೃದ್ಧಿಗೆ ಈ ಕಾರ್ಯಕ್ರಮ ಸಹಕಾರಿ
· ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಪ್ರವೇಶಕ್ಕೆ ನೆರವು
· ವಾಲ್ ಮಾರ್ಟ್ ವೃದ್ಧಿ ಕಾರ್ಯಕ್ರಮದಡಿ 2019 ರಿಂದ 70,000 ಕ್ಕೂ ಅಧಿಕ ಎಂಎಸ್ಎಂಇಗಳಿಗೆ ತರಬೇತಿ ನೀಡಲಾಗಿದೆ
· ಭಾರತದಾದ್ಯಂತ ಎಂಎಸ್ಎಂಇಗಳಿಗೆ ಡಿಜಿಟಲ್ ಲರ್ನಿಂಗ್ ಸಾಧನಗಳನ್ನು ಬಳಸಿಕೊಂಡು ಆಧುನೀಕರಣಗೊಳಿಸಿ ವ್ಯವಹಾರ ವೃದ್ಧಿಗೆ ಸಹಕಾರಿ
ಬೆಂಗಳೂರು: ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚುವರಿಯಾಗಿ 1,00,000 ಎಂಎಸ್ಎಂಇಗಳ ಸಬಲೀಕರಣಕ್ಕಾಗಿ ವಾಲ್ ಮಾರ್ಟ್ ನ ಸಪ್ಲೈಯರ್ ಡೆವಲಪ್ ಮೆಂಟ್ ಪ್ರೋಗ್ರಾಂ ಆಗಿರುವ ವಾಲ್ ಮಾರ್ಟ್ ವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಈ ದಿಸೆಯಲ್ಲಿ ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಪ್ಯಾನ್ ಇಂಡಿಯಾ ಒಪ್ಪಂದ ಮಾಡಿಕೊಂಡಿವೆ. ವಾಲ್ ಮಾರ್ಟ್ ನ ಜಾಗತಿಕ ಪೂರೈಕೆ ಜಾಲದ ಪರಿಣತಿ ಮತ್ತು ಫ್ಲಿಪ್ ಕಾರ್ಟ್ ನ ಭಾರತದಾದ್ಯಂತ ಇರುವ ಇ-ಕಾಮರ್ಸ್ ಸಾಮರ್ಥ್ಯಗಳನ್ನು ಒಟ್ಟುಗೂಡಿಸಿಕೊಂಡು ಫೌಂಡೇಶನ್ (i2i) ಅನ್ನು ಬಲವರ್ಧನೆ ಗೊಳಿಸಲಿವೆ. ವಾಲ್ ಮಾರ್ಟ್ ವೃದ್ಧಿಯ ಈ ಉಚಿತ ಕಾರ್ಯಕ್ರಮವು ಎಂಎಸ್ಎಂಇಗಳು ತಮ್ಮ ವ್ಯಾಪಾರವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವೃದ್ಧಿಸಿಕೊಳ್ಳಲು ನೆರವಾಗುತ್ತದೆ.
2019 ರಿಂದ ಇಲ್ಲಿವರೆಗೆ ವಾಲ್ ಮಾರ್ಟ್ ವೃದ್ಧಿ 70,000 ಎಂಎಸ್ಎಂಇಗಳಿಗೆ ತರಬೇತಿಯನ್ನು ನೀಡಿದ್ದು, ಡಿಜಿಟಲ್ ಕಾಮರ್ಸ್, ಪರ್ಸನಲೈಸ್ಡ್ ಮೆಂಟರ್ ಶಿಪ್ ಮತ್ತು ಕಾರ್ಯತಂತ್ರೀಯ ಪಾಲುದಾರಿಕೆಯನ್ನು ಹೊಂದಲು ಈ ಕಾರ್ಯಕ್ರಮ ನೆರವಾಗಿದೆ. ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು ಹಣಕಾಸು, ಮಾರುಕಟ್ಟೆ, ಕಾರ್ಮಿಕಶಕ್ತಿ ನಿರ್ವಹಣೆ ಮತ್ತು ಪರಿಸರ ಸುಸ್ಥಿರತೆ ಯಂತಹ ನಿರ್ಣಾಯಕ ಅಂಶಗಳನ್ನು ಹೇಗೆ ನಿರ್ವಹಣೆ ಮಾಡಬಹುದು ಎಂಬುದರ ಬಗ್ಗೆ ಎಂಎಸ್ಎಂಇಗಳಿಗೆ ಈ ಕಾರ್ಯಕ್ರಮ ತರಬೇತಿ ನೀಡುತ್ತದೆ. ಈ ಕಾರ್ಯಕ್ರಮವು ಉದ್ಯಮಿಗಳಿಗೆ ಯಶಸ್ವಿ ಮತ್ತು ಸುಸ್ಥಿರ ವ್ಯವಹಾರ ಮಾದರಿಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ. ವಾಲ್ ಮಾರ್ಟ್ ವೃದ್ಧಿಯು ಪದವೀಧರರು ಕಾರ್ಯಕ್ರಮದ ಸಕ್ರಿಯಗೊಳಿಸುವಿಕೆಯ ಮೂಲಕ ವರ್ಷದಿಂದ ವರ್ಷಕ್ಕೆ ತಮ್ಮ ವ್ಯವಹಾರವನ್ನು ಸುಮಾರು ಶೇ/55 ರಷ್ಟು ಬೆಳವಣಿಗೆ ಮಾಡಿಕೊಂಡಿ ದ್ದಾರೆ.
ಇದನ್ನೂ ಓದಿ: Bengaluru News: ಮನೆಯಲ್ಲೇ ಹೆರಿಗೆ ಮಾಡಲು ಹೋಗಿ ಸಾವಿಗೀಡಾದ ಯುವತಿ, ಬೆಂಗಳೂರಿನಲ್ಲೇ ನಡೆದ ಘಟನೆ
ಪಾಲ್ಗೊಳ್ಳುವವರು ವಾಲ್ ಮಾರ್ಟ್, ಫ್ಲಿಪ್ ಕಾರ್ಟ್ ಮತ್ತು ಕಾರ್ಯಕ್ರಮದ ಅನುಷ್ಠಾನ ಪಾಲಿದಾರ ಐಡಿಯಾಸ್ ಟು ಇಂಪ್ಯಾಕ್ಟ್ ಫೌಂಡೇಶನ್ ರೂಪಿಸಿದ ವಿಧಾನದಿಂದ ಪ್ರವೇಶ, ಔಟ್ರೀಚ್ ಮತ್ತು ಕಾರ್ಯಕ್ರಮ ನಿರ್ವಹಣಾ ಪರಿಣತಿಯ ಮೂಲಕ ಪ್ರಯೋಜನವನ್ನು ಪಡೆಯಲಿದ್ದಾರೆ. ಫೂಟ್-ಆನ್-ಗ್ರೌಂಡ್ ತಂಡಗಳು, ಸಕ್ರಿಯದಾರರು, ಡಿಜಿಟಲ್ ಕೌಶಲ್ಯ ಪರಿಕರಗಳಿಗೆ ಪ್ರವೇಶ, ಆನ್ ಬೋರ್ಡಿಂಗ್ ಪರ್ಸನಲೈಸ್ಡ್ ಮೆಂಟರ್ ಶಿಪ್ ನೊಂದಿಗೆ ಕಾರ್ಯಕ್ರಮವು ತನ್ನ ಪಾಲ್ಗೊಳ್ಳುವವ ರನ್ನು ಸಬಲೀಕರಣಗೊಳಿಸಲು ಹೆಚ್ಚಿನ ಪ್ರಭಾವವನ್ನು ಬೀರುವ ಸಾಧನವನ್ನು ನಿರ್ಮಾಣ ಮಾಡುತ್ತದೆ.
ಈ ಬಗ್ಗೆ ಮಾತನಾಡಿದ ವಾಲ್ ಮಾರ್ಟ್ ನ ಸಪ್ಲೈಯರ್ ಡೆವಲಪ್ ಮೆಂಟ್ ನ ಹಿರಿಯ ಉಪಾಧ್ಯಕ್ಷ ಜಾಸನ್ ಫ್ರೆಮ್ ಸ್ಟಡ್ ಅವರು, ``ಭಾರತದಲ್ಲಿನ ರೋಮಾಂಚಕಾರಿ ನಾವೀನ್ಯತೆಯ ಪರಿಸರ ವ್ಯವಸ್ಥೆ ಮತ್ತು ಅದರ ಎಂಎಸ್ಎಂಇಗಳ ಬೆಳವಣಿಗೆಯ ಸಾಮರ್ಥ್ಯದಿಂದ ನಾವು ನಿರಂತರವಾಗಿ ಪ್ರೇರೇಪಿತರಾಗಿದ್ದೇವೆ. ಅನೇಕ ಸೂಕ್ಷ್ಮ ಉದ್ಯಮಗಳು ಅಭಿವೃದ್ಧಿ ಹೊಂದಲು ಅಗತ್ಯವಿರುವ ಜ್ಞಾನ, ಪರಿಕರಗಳು ಮತ್ತು ಮಾರುಕಟ್ಟೆ ಪ್ರವೇಶವನ್ನು ಪಡೆದುಕೊಳ್ಳುವಲ್ಲಿ ಸಮಸ್ಯೆಗಳನ್ನು ಎದುರಿಸು ತ್ತವೆ. ಈ ಉದ್ಯಮಿಗಳಿಗೆ ನಿರ್ಣಾಯಕ ಮತ್ತು ಪರಿಣಾಮಕಾರಿ ವ್ಯಾಪಾರ ಕೌಶಲ್ಯ ಮತ್ತು ಮಾರುಕಟ್ಟೆ ಪ್ರವೇಶದೊಂದಿಗೆ ಸಬಲೀಕರಣಗೊಳಿಸುವುದು ಅವರ ವ್ಯವಹಾರವನ್ನು ಸುಸ್ಥಿರವಾಗಿ ನಿರ್ಮಿಸಲು ಮತ್ತು ಮಾಪನ ಮಾಡಲು ಸಹಾಯ ಮಾಡಿದೆ ಹಾಗೂ ಭಾರತದ ಆರ್ಥಿಕ ಬೆಳವಣಿ ಗೆಗೆ ತನ್ನದೇ ಆದ ಕೊಡುಗೆ ನೀಡಿದೆ’’ ಎಂದರು.
``ನಾವು ವಾಲ್ ಮಾರ್ಟ್ ವೃದ್ಧಿಯ ಮುಂದಿನ ಹಂತವನ್ನು ಪ್ರವೇಶಿಸುತ್ತಿದ್ದಂತೆ ನಾವು ಡಿಜಿಟಲ್ ಬೆಳವಣಿಗೆ, ಸುಸ್ಥಿರತೆ ಮತ್ತು ರಫ್ತು ಸಿದ್ಧತೆಗಾಗಿ ಹೊಸ ಹೊಸ ಸಾಧನಗಳೊಂದಿಗೆ ಎಂಎಸ್ಎಂಇ ಗಳನ್ನು ಸಬಲೀಕರಣಗೊಳಿಸುತ್ತಿದ್ದೇವೆ ಮತ್ತು ನಾವು ಇವುಗಳನ್ನು ಉಚಿತವಾಗಿ ಒದಗಿಸುವುದನ್ನು ಮುಂದುವರಿಸುತ್ತೇವೆ. ವಾಲ್ ಮಾರ್ಟ್ ಸರಬರಾಜುದಾರ ಅಕಾಡೆಮಿಯ ಇ-ಲರ್ನಿಂಗ್ ಮಾಡ್ಯೂಲ್ ಗಳು ಮತ್ತು ಹೊಸ ಪರಿಸರ ವ್ಯವಸ್ಥೆಯ ಪಾಲಿದಾರಿಕೆಗಳ ಮೂಲಕ ವಾಲ್ಮಾರ್ಟ್ ಮಾರುಕಟ್ಟೆ ಮತ್ತು ಫ್ಲಿಪ್ ಕಾರ್ಟ್ ಮೂಲಕ ವ್ಯವಹಾರಗಳನ್ನು ಮಾರಾಟ ಮಾಡಲು ನಾವು ಕೌಶಲ್ಯವನ್ನು ಮೀರಿ ಹೋಗುತ್ತಿದ್ದೇವೆ. ವಾಲ್ ಮಾರ್ಟ್ ನಲ್ಲಿ ಹಿಂದೆಂದಿಗಿಂತಲೂ ದೊಡ್ಡದಾದ ಹೆಚ್ಚು ಡಿಜಿಟಲ್ ಮತ್ತು ಹೆಚ್ಚು ಸಂಪರ್ಕ ಹೊಂದಿದ ಭವಿಷ್ಯವನ್ನು ನಿರ್ಮಿಸುವಲ್ಲಿ ಭಾರತದ ಸಣ್ಣ ವ್ಯವಹಾರಗಳನ್ನು ಬೆಂಬಲಿಸಲು ನಾವು ಹೆಮ್ಮೆ ಪಡುತ್ತೇವೆ’’ ಎಂದು ತಿಳಿಸಿದರು.
ಎಂಎಸ್ಎಂಇಗಳು ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದ್ದಂತೆ ವಾಲ್ ಮಾರ್ಟ್ ವೃದ್ಧಿ ಕಾರ್ಯಕ್ರಮವು ವಾಲ್ ಮಾರ್ಟ್ ಮಾರುಕಟ್ಟೆ (Walmart.com) ಮೂಲಕ ಗಡಿಯಾಚೆಗಿನ ವ್ಯಾಪಾರ ಪ್ರವೇಶವನ್ನು ಸಕ್ರಿಯಗೊಳಿಸುತ್ತವೆ. ಈ ಮೂಲಕ ಅವರ ಅಂತಾರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸಲು ಸಹಾಯ ಮಾಡುವುದನ್ನು ಮುಂದುವರಿಸುತ್ತದೆ. ಇದು ಫ್ಲಿಪ್ ಕಾರ್ಟ್ ಮಾರುಕಟ್ಟೆ, ವಾಲ್ ಮಾರ್ಟ್ ಮಾರುಕಟ್ಟೆ ಅಥವಾ ಯಾವುದೇ ಇತರ ಆನ್ ಲೈನ್ ಪ್ಲಾಟ್ ಫಾರ್ಮ್ ಅನ್ನು ಒಳಗೊಂಡಂತೆ ಪೂರೈಕೆ ಜಾಲಗಳಲ್ಲಿ ಸಂಯೋಜನೆ ಮಾಡಲು ವ್ಯವಹಾರಗಳಿಗೆ ಸಾಧನಗಳನ್ನು ಒದಗಿಸುತ್ತದೆ.
ಫ್ಲಿಪ್ ಕಾರ್ಟ್ ಗ್ರೂಪ್ ನ ಹಿರಿಯ ಉಪಾಧ್ಯಕ್ಷ ಮತ್ತು ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್ ಅವರು ಮಾತನಾಡಿ, ``ಫ್ಲಿಪ್ ಕಾರ್ಟ್ ನಲ್ಲಿರುವ ನಮ್ಮ ಅಚಲವಾದ ಬದ್ಧತೆಯು ಡಿಜಿಟಲ್ ವಾಣಿಜ್ಯ ಮತ್ತು ವಿಸ್ತಾರವಾದ ಬೆಳವಣಿಗೆಯ ಅವಕಾಶಗಳಿಗೆ ಪ್ರವೇಶವನ್ನು ಕಲ್ಪಿಸುವ ಮೂಲಕ ಎಂಎಸ್ಎಂಇಗಳನ್ನು ಸಬಲಗೊಳಿಸುತ್ತದೆ. ವಾಲ್ ಮಾರ್ಟ್ ವೃದ್ಧಿಯಂತಹ ಕಾರ್ಯತಂತ್ರಗಳ ಸಹಯೋಗಗಳ ಮೂಲಕ ನಾವು ಉದ್ಯಮಿಗಳು ತಮ್ಮ ಆಕಾಂಕ್ಷೆಗಳನ್ನು ಮಾಪನ ಮಾಡಲು ಮತ್ತು ಭಾರತದಲ್ಲಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಗೆ ಗಮನಾರ್ಹವಾದ ಕೊಡುಗೆ ನೀಡಲು ಸಾಮೂಹಿಕವಾಗಿ ಅವಕಾಶ ಮಾಡಿಕೊಡುತ್ತಿದ್ದೇವೆ’’ ಎಂದರು.
ಕಾರ್ಯಕ್ರಮದ ವ್ಯಾಪ್ತಿ ಮತ್ತು ಪ್ರಭಾವವನ್ನು ವಿಸ್ತರಣೆ ಮಾಡುವ ಪ್ರಯತ್ನಗಳ ಭಾಗವಾಗಿ ವಾಲ್ ಮಾರ್ಟ್ ಸಮಗ್ರ ಬೆಳವಣಿಗೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯತಂತ್ರದ ಪಾಲುದಾರ ರೊಂದಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತದೆ. ಈ ಕಾರ್ಯಕ್ರಮದ ಬಗ್ಗೆ ಹರ್ಯಾಣ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಯಶಸ್ಸನ್ನು ಸಬಲೀಕರಣಗೊಳಿಸಲು ಹಾಗೂ ಶೀಘ್ರದಲ್ಲೇ ಇತರ ರಾಜ್ಯಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲಿದೆ. ಭಾರತದಲ್ಲಿ ವಾಲ್ ಮಾರ್ಟ್ ವೃದ್ಧಿಯ ಯಶಸ್ಸಿನ ಮೇಲೆ ನಿರ್ಮಾಣವಾಗುವ ಮೂಲಕ ಮೆಕ್ಸಿಕೊ(ಕ್ರೀಸ್ ಕಾನ್ ವಾಲ್ ಮಾರ್ಟ್) ಮತ್ತು ಯುಎಸ್ (ಗ್ರೋ ವಿತ್ ಯುಎಸ್) ನಲ್ಲಿ ಇದೇ ರೀತಿಯ ಪೂರೈಕೆದಾರ ಅಭಿವೃದ್ಧಿ ಉಪಕ್ರಮಗಳನ್ನು ಆರಂಭಿಸಲಾಗಿದೆ.
ವಾಲ್ ಮಾರ್ಟ್ ವೃದ್ಧಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಚ್ಛಿಸುವ ಎಂಎಸ್ ಎಂಇಗಳು https://www.walmartvriddhi.org/ ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಅದೇ ರೀತಿ ವಾಲ್ ಮಾರ್ಟ್ ಮಾರ್ಕೆಟ್ ಪ್ಲೇಸ್ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬಯಸುವ ಮಾರಾಟಗಾರರು https://www.walmartvriddhi.org/marketplace ಲಿಂಕ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಉದ್ಯಮಿಗಳಿಗೆ ಮಾಹಿತಿಯನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ವಾಲ್ ಮಾರ್ಟ್ ವೆಬ್ ಸೈಟ್ ಈಗ ಸಣ್ಣ ವ್ಯವಹಾರಗಳಿಗೆ ವಾಲ್ ಮಾರ್ಟ್ ನ ಸಮೂಹ ಕಂಪನಿಗಳು ಮತ್ತು ಇತರ ಸಂಪನ್ಮೂಲಗಳಿಂದ ಕೊಡುಗೆಗಳನ್ನು ಪ್ರವೇಶಿಸಲು ಏಕೀಕೃತ ಸಂಪನ್ಮೂಲ ಪ್ಲಾಟ್ ಫಾರ್ಮ್ ಅನ್ನು ಒಳಗೊಂಡಿದೆ. ಎಂಎಸ್ಎಂಇಗಳು ಫ್ಲಿಪ್ ಕಾರ್ಟ್, ಮಿಂತ್ರಾ ಮತ್ತು ವಾಲ್ ಮಾರ್ಟ್ ಮಾರ್ಕೆಟ್ ಪ್ಲೇಸ್, ದೇಶೀಯ ಪಾವತಿ ಪರಿಹಾರಗಳು, ದೇಶೀಯ ಮತ್ತು ಜಾಗತಿಕ ಇ-ಕಾಮರ್ಸ್ ಗೆ ಪ್ರವೇಶಿಸುವ ಸಣ್ಣ ವ್ಯವಹಾರಗಳು ಹಾಗೂ ಕುಶಲಕರ್ಮಿಗಳನ್ನು ಬೆಂಬಲಿಸಲು ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಪರಿಸರ ವ್ಯವಸ್ಥೆಯಾದ್ಯಂತ ಉಪಕ್ರಮಗಳಿಗೆ ಆನ್ ಬೋರ್ಡಿಂಗ್ ಲಿಂಕ್ ಗಳನ್ನು ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತಿದೆ.