ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ashok Devanampriya Money Tips: ಗ್ಲೋಬಲ್‌ ಮಾರ್ಕೆಟ್‌ ಸೈಕಲ್‌ ಹೇಗಿರುತ್ತೆ? ಪ್ರಯೋಜನ ಪಡೆಯುವುದು ಹೇಗೆ?

ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆದಾರರು ಮತ್ತು ಟ್ರೇಡರ್ಸ್‌ ನಾನಾ ಸೈಕಲ್‌ಗಳನ್ನು ಅರ್ಥ ಮಾಡಿಕೊಂಡರೆ ಪ್ರಯೋಜನ ಸಿಗುತ್ತದೆ. ಹಾಗಾದರೆ ಏನಿದು ಗ್ಲೋಬಲ್‌ ಸ್ಟಾಕ್‌ ಮಾರ್ಕೆಟ್‌ ಸೈಕಲ್?‌ ಇದನ್ನು ತಿಳಿಯುವುದು ಹೇಗೆ? ಕೌಟಿಲ್ಯ ಕ್ಯಾಪಿಟಲ್‌ ಸಂಸ್ಥೆಯ ಸ್ಥಾಪಕರಾದ ಅಶೋಕ್‌ ದೇವಾನಾಂಪ್ರಿಯ ವಿವರಿಸಿದ್ದಾರೆ.

ಅಶೋಕ್‌ ದೇವಾನಾಂಪ್ರಿಯ

ಬೆಂಗಳೂರು, ಡಿ. 12: ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆದಾರರು ಮತ್ತು ಟ್ರೇಡರ್ಸ್‌ ನಾನಾ ಸೈಕಲ್‌ಗಳನ್ನು ಅರ್ಥ ಮಾಡಿಕೊಂಡರೆ ಪ್ರಯೋಜನ ಸಿಗುತ್ತದೆ. ಹಾಗಾದರೆ ಏನಿದು ಗ್ಲೋಬಲ್‌ ಸ್ಟಾಕ್‌ ಮಾರ್ಕೆಟ್‌ ಸೈಕಲ್?‌ (Global Market Cycle) ಇದನ್ನು ತಿಳಿಯುವುದು ಹೇಗೆ? ಎಂಬುದರ ಬಗ್ಗೆ ಬೆಂಗಳೂರಿನ ಹೆಸರಾಂತ ಕೌಟಿಲ್ಯ ಕ್ಯಾಪಿಟಲ್‌ ಸಂಸ್ಥೆಯ ಸ್ಥಾಪಕರಾದ ಅಶೋಕ್‌ ದೇವಾನಾಂಪ್ರಿಯ ಅವರು 'ವಿಶ್ವವಾಣಿ ಮನಿʼ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.‌

ಏನಿದು ಗ್ಲೋಬಲ್ ಮಾರ್ಕೆಟ್‌ ಸೈಕಲ್?

ನನ್ನ ಟೀಮ್‌ ಐಐಟಿ ಮದ್ರಾಸ್‌ನಲ್ಲಿದೆ. ನನ್ನ ಕಂಪನಿಯ ಕೋ ಫೌಂಡರ್‌ ಅಲ್ಲಿಯೇ ಪಿಎಚ್‌ಡಿ ಮಾಡಿದ್ದಾರೆ. ನನ್ನ ಆಲೋಚನೆಗಳನ್ನು ಅವರು ಪ್ರೋಗ್ರಾಮ್‌ ಮಾಡಿ ವ್ಯಾಲಿಡೇಶನ್‌ ಮಾಡುತ್ತಾರೆ. ಇದು ನಮ್ಮ ದಿನಚರಿ.

ವಿಡಿಯೊ ಇಲ್ಲಿದೆ:



ನಾವಿಬ್ಬರೂ ಟೈಮ್‌ ಸೈಕಲ್‌ ಬಗ್ಗೆ ಕಳೆದ ಏಳೆಂಟು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದೇವೆ. ಬ್ಯಾಕ್‌ ಟೆಸ್ಟಿಂಗ್‌ ಮತ್ತು ಫಾರ್ವರ್ಡ್‌ ಟೆಸ್ಟಿಂಗ್‌ ಮಾಡಿದ್ದೇವೆ. ಫಾರ್ವರ್ಡ್‌ ಎಂದರೆ ಮುಂದಿನ ಹಂತದ ಟೆಸ್ಟಿಂಗ್. ಬ್ಯಾಕ್‌ ಟೆಸ್ಟಿಂಗ್‌ ಅಂದರೆ ಎರಡು ವರ್ಷ ಹಿಂದಕ್ಕೆ ಹೋಗಿ ಪರೀಕ್ಷಿಸುವುದು. ಭಾರತೀಯ ಮಾರುಕಟ್ಟೆಗೆ ಹನ್ನೆರಡು ವರ್ಷಗಳ ಕಾಲ ಟೆಸ್ಟಿಂಗ್‌ ಮಾಡಿದ್ದೇವೆ.‌ 2013ರಿಂದ 2025ರ ತನಕ ಡೇಟಾ ಬೇಸ್‌ ಅನ್ನು ಡಿಲೀಟ್‌ ಮಾಡಿದೆವು. ಬಳಿಕ 2003 ತನಕ 2013 ತನಕ ಹತ್ತು ವರ್ಷದ ಸ್ಟಾಕ್‌ ಮಾರ್ಕೆಟ್‌ ಆಗುಹೋಗುಗಳ ಬಗ್ಗೆ ವಿಶ್ಲೇಷಣೆ ಮಾಡಿದೆವು. ಪ್ರತಿ ತಿಂಗಳು ಷೇರುಗಳು ಯಾವಾಗ ಎತ್ತರಕ್ಕೇರಿತು? ಯಾವಾಗ ಇಳಿದಿವೆ ಇತ್ಯಾದಿ ಡೇಟಾವನ್ನು ಎಐ ಮೂಲಕ ತುಂಬಿಸಿದೆವು. ಈ ಡೇಟಾವನ್ನು ಇಟ್ಟುಕೊಂಡು 2014 ಅನ್ನು ಗ್ರಹಿಸಿದೆವು. ನಾವು ಕಂಡು ಹಿಡಿದಿರುವುದಕ್ಕೂ 2014ರಲ್ಲಿ ನಿಜವಾಗಿ ಆಗಿರುವುದಕ್ಕೂ ಸಂಬಂದ ಇದೆಯೇ ಎಂದು ಹೋಲಿಕೆ ಮಾಡಿದೆವು. 2015ರ ಪ್ಯಾಟರ್ನ್‌ ಗ್ರಹಿಸಿದೆವು. ಹೀಗೆ ಹಲವಾರು ವರ್ಷಗಳನ್ನು ಗ್ರಹಿಸಿದೆವು 60 ಪರ್ಸೆಂಟ್‌ ಸರಿಯಾದ ಫಲಿತಾಂಶ ಲಭಿಸಿತ್ತು. ಪ್ರತಿ ನೂರು ಮುನ್ನೋಟದಲ್ಲಿ 60 ಸಲ ಸರಿಯಾಗಿ ಫಲಿತಾಂಶ ಬಂದಿತ್ತು. ಈ ವ್ಯವಸ್ಥೆಗೆ ಟೈಮ್‌ ಕ್ವಾಂಟ್‌ ರೆಸೆನನ್ಸ್‌ ಪೋರ್ಟ್‌ ಫೋಲಿಯೊ ಸಿಸ್ಟಮ್‌ ಅಂತ ಹೆಸರು ಕೊಟ್ಟೆವು. ಎಲ್ಲ ಆದಮೇಲೆ ಒಂದು ದಿನ ಸೈಕಲ್‌ ಭಾರತದಲ್ಲಿ ವರ್ಕೌಟ್‌ ಆಗುವುದಿದ್ದರೆ ಬೇರೆ ದೇಶದ್ದೂ ಆಗಬಹುದಲ್ಲವೇ ಎಂಬ ಆಲೋಚನೆ ಬಂದಿತು.

ಚಿನ್ನ ಯಾವಾಗ ಖರೀದಿಸಬೇಕು? ಸೂಕ್ತ ಸಮಯ ಯಾವುದು? ನಿಮ್ಮೆಲ್ಲ ಗೊಂದಲಗಳಿಗೆ ಇಲ್ಲಿದೆ ಉತ್ತರ

ಎಲ್ಲ ದೇಶಗಳಲ್ಲೂ ಸೈಕಲ್ಸ್‌ ಇರುತ್ತದೆಯೇ?

ಪ್ರತಿಯೊಂದು ದೇಶದಲ್ಲೂ ಅವರದ್ದೇ ಸೈಕಲ್‌ ಇರುತ್ತದೆ. ಹೆಸರು ಬೇರೆ ಇರುತ್ತದೆ. ಅಂತಿಮವಾಗಿ ಬಳಕೆ, ಖರ್ಚು ಆಗಬೇಕು. ಭಾರತದಲ್ಲಿ ದೀಪಾವಳಿ-ದಸರಾ ಇದ್ದರೆ ಅರಬ್‌ ರಾಷ್ಟ್ರಗಳಲ್ಲಿ ರಂಜಾನ್‌ ಮತ್ತು ಇತರ ಹಬ್ಬಗಳಿವೆ. ಇದೇ ರೀತಿ ನಾನಾ ದೇಶಗಳಲ್ಲಿ ಪ್ರತಿ ವರ್ಷ ಪುನರಾವರ್ತನೆ ಆಗುತ್ತಿರುತ್ತದೆ. ಪ್ರತಿ ವರ್ಷ ಹಬ್ಬಗಳಿಗೆ ಖರ್ಚು ಆಗುತ್ತಿರುತ್ತದೆ. ಹೀಗಾಗಿ ನಾವು ಅಮೆರಿಕದ ಸ್ಟಾಕ್‌ ಮಾರುಕಟ್ಟೆಯ ಸೂಚ್ಯಂಕ ಎಸ್‌ &ಪಿಯ 35 ವರ್ಷಗಳ ಡೇಟಾ ತೆಗೆದುಕೊಂಡು ಸ್ಟಡಿ ಮಾಡಿದೆವು. 1990ರಿಂದ 2000 ತನಕ ಅಧ್ಯಯನ ಮಾಡಿದೆವು. ಪ್ರೆಡಿಕ್ಟ್‌ ಮಾಡಿದೆವು 6,000 ಟ್ರೇಡ್ಸ್‌ ಮಾಡಿದೆವು. ಅಲ್ಲೂ ಕೂಡ 60 ಪರ್ಸೆಂಟ್‌ ಫಲಿತಾಂಶ ಬಂದಿತು. ಬಳಿಕ ಯುರೋಪ್‌ನ ಸುಮಾರು 18 ದೇಶಗಳ 600 ಕಂಪನಿಗಳ ಷೇರುಗಳ ಅಧ್ಯಯನ ಮಾಡಿದೆವು. ಅದೂ ಸೂಪರ್‌ ಹಿಟ್‌ ಆಯಿತು. ಬಳಿಕ ಯುಕೆ ಮಾರ್ಕೆಟ್‌ ಡೇಟಾವನ್ನು ಅಧ್ಯಯನ ಮಾಡಿತು. ಮುಂದೆ ಹಾಂಕಾಂಗ್‌ ಮತ್ತು ಜಪಾನ್‌ ಮಾರುಕಟ್ಟೆಯ ಸೈಕಲ್ಸ್‌ ಅಧ್ಯಯನ ಮಾಡಲಿದ್ದೇವೆ. ದುಬೈನಲ್ಲಿ ನಮ್ಮ ಕಂಪನಿ ಇದೆ. ಜಾಗತಿಕ ಸ್ಟಾಕ್‌ ಮಾರ್ಕೆಟ್‌ನಲ್ಲಿ ಸೈಕಲ್ಸ್‌ ಕೆಲಸ ಮಾಡುತ್ತದೆ. ಮನುಷ್ಯರು ತಮ್ಮ ಜೀವನವನ್ನು ಸುಗಮಗೊಳಿಸಲು ಸೈಕಲ್ಸ್‌ ಮಾಡಿದ್ರು. ಇದು ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಪ್ರಕ್ರಿಯೆ ಎಂದರೆ ಪುನರಾವರ್ತನೆ ಆಗುವಂತದ್ದು. ಹೀಗಾಗಿ ಎಲ್ಲ ಕಡೆಗಳಲ್ಲಿ ಸೈಕಲ್ಸ್‌ ಸೃಷ್ಟಿಯಾಗುತ್ತವೆ.

ʼʼಯಾರೂ ಎಲ್ಲ ಸಂದರ್ಭಗಳಲ್ಲೂ ಬುದ್ಧಿವಂತರಾಗಿರುವುದಿಲ್ಲ. ನಾವು ನೂರು ಕಂಪನಿಗಳಲ್ಲಿ ಹೂಡಿಕೆ ಮಾಡುತ್ತೇವೆ. ಏಕೆಂದರೆ ಎಲ್ಲ ಮಾರುಕಟ್ಟೆಗಳಲ್ಲೂ ಒಂದೇ ರೀತಿ ಇರಲ್ಲ. ವಿರಾಟ್‌ ಕೊಹ್ಲಿ ಎಲ್ಲ ಪಂದ್ಯಗಳಲ್ಲಿ ಸೆಂಚುರಿ ಬಾರಿಸಲಾರ. ಅಂಥ ನಿರೀಕ್ಷೆಯೂ ತಪ್ಪು. ಈ ವರ್ಷ ಭಾರತೀಯ ಸ್ಟಾಕ್‌ ಮಾರ್ಕೆಟ್‌ ಉತ್ತಮ ರಿಸಲ್ಟ್‌ ಕೊಟ್ಟಿಲ್ಲ. ಆದರೆ ಅಮೆರಿಕದ ಸ್ಟಾಕ್‌ ಮಾರ್ಕೆಟ್‌ 56 ಪರ್ಸೆಂಟ್‌ ರಿಸಲ್ಟ್‌ ಬಂದಿತ್ತು. ಆದ್ದರಿಂದ ಸಮಯ ಕೊಡಬೇಕಾಗುತ್ತದೆ. ತಾಳ್ಮೆಯಿಂದ ಕಾಯಬೇಕಾಗುತ್ತದೆ. ಒಂದು ವ್ಯವಸ್ಥೆಯಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆʼʼ

ಒಂದು ಸೈಕಲ್‌ ಒಂದು ವರ್ಷ ಉತ್ತಮ ರಿಸಲ್ಟ್‌ ಕೊಡಬಹುದು, ಮರು ವರ್ಷ ಕೊಡದಿರಬಹುದು. ಸ್ಟ್ರಾಟಜಿಯನ್ನು ಪ್ರತಿ ದಿನ ಮಾಡಲಾಗುವುದಿಲ್ಲ. ಆದರೆ ನಿಯಮಿತ ಕೆಲಸಗಳು ಇರುತ್ತವೆ. ಸ್ಟ್ರಾಟಜಿಯನ್ನು ನಿರಂತರ ಫಾಲೋ ಮಾಡಿದಾಗ ರಿಸಲ್ಟ್‌ ಕೂಡ ಬರುತ್ತದೆ ಎಂದು ಅಶೋಕ್‌ ದೇವಾನಂಪ್ರಿಯ ಅವರು ವಿವರಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಶ್ವವಾಣಿ ಮನಿ ವಿಡಿಯೊ ವೀಕ್ಷಿಸಿ ಮತ್ತು ಸಬ್‌ಸ್ಕ್ರೈಬ್‌ ಮಾಡಿ.