ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಿನ್ನ ಯಾವಾಗ ಖರೀದಿಸಬೇಕು? ಸೂಕ್ತ ಸಮಯ ಯಾವುದು? ನಿಮ್ಮೆಲ್ಲ ಗೊಂದಲಗಳಿಗೆ ಇಲ್ಲಿದೆ ಉತ್ತರ

ಅಕ್ಷಯ ತೃತೀಯ, ಯುಗಾದಿ, ದೀಪಾವಳಿ, ಮದುವೆ ಸೀಸನ್ ಸೇರಿದಂತೆ ವಿವಿಧ ಸಮಯಗಳಲ್ಲಿ ಭಾರತೀಯರು ಹೆಚ್ಚಾಗಿ ಚಿನ್ನ ಖರೀದಿ ಮಾಡಲು ಆಸಕ್ತಿ ತೋರುತ್ತಾರೆ. ಆದರೆ ಇದು ಚಿನ್ನ ಖರೀದಿಗೆ ಸರಿಯಾದ ಸಮಯವೇ? ಚಿನ್ನದ ಬೆಲೆ ಏರಿಳಿತವಾಗಲು ಕಾರಣವೇನು ಎಂಬುದರ ಕುರಿತು ಮಾರುಕಟ್ಟೆ ತಜ್ಞರು ಹೇಳುವುದು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಚಿನ್ನ ಖರೀದಿ ಮಾಡಲು ಸೂಕ್ತ ಸಮಯ ಯಾವುದು?

ಮಾರುಕಟ್ಟೆ ತಜ್ಞ ಅಶೋಕ್ -

ಬೆಂಗಳೂರು: ಹಬ್ಬದ ಸೀಸನ್ (Festive season) ಬಂದಾಗ ಚಿನ್ನ ಖರೀದಿ (Time to buy gold) ಹೆಚ್ಚಾಗುತ್ತದೆ ಎನ್ನುವುದು ಒಂದು ನಂಬಿಕೆ. ಆದರೆ ಹಬ್ಬದ ಸೀಸನ್‌ಗೂ ಚಿನ್ನದ ಬೆಲೆ (gold rate) ಏರಿಳಿತಕ್ಕೂ ಸಂಬಂಧವಿಲ್ಲ. ಅದು ಒಂದು ಸಣ್ಣ ಕಾರಣ ಮಾತ್ರ. ಚಿನ್ನದ ಬೆಲೆಯ ಮೇಲೆ ಹಲವು ಅಂಶಗಳು ಪರಿಣಾಮ ಬಿರುವುದರಿಂದ ಚಿನ್ನ ಖರೀದಿ ಮಾಡುವಾಗ ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞ ಅಶೋಕ್. 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಚಿನ್ನ ಖರೀದಿಗೂ ಒಂದು ಸಮಯವಿರುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡಿರುವುದು ಮುಖ್ಯ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ನವೆಂಬರ್‌ನಿಂದ ಮಾರ್ಚ್ ಅವಧಿಯಲ್ಲಿ ಹೆಚ್ಚಿನ ಚಿನ್ನ ಖರೀದಿ ಮಾಡಲಾಗುತ್ತದೆ. ಆಗಸ್ಟ್ ಬಳಿಕ ದೀಪಾವಳಿ ಹಬ್ಬದವರೆಗೆ ಚಿನ್ನ ಖರೀದಿ ಸ್ವಲ್ಪ ಕಡಿಮೆಯಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಚಿನ್ನದ ದರದಲ್ಲಿ ಕೊಂಚ ಹೆಚ್ಚಿನ ಪ್ರಮಾಣ ವ್ಯತ್ಯಯವಾಗುವುದನ್ನು ಕಾಣಬಹುದು ಎಂದು ಹೇಳಿದರು.

ಚಿನ್ನದ ಖರೀದಿಗೆ ಸೂಕ್ತ ಸಮಯ ಯಾವುದು ಎನ್ನುವ ವಿವರ ಇಲ್ಲಿದೆ:



ಚಿನ್ನದ ಬೆಲೆಯ ಮೇಲೆ ಹಬ್ಬಗಳಿಂದ ಯಾವುದೇ ಪರಿಣಾಮ ಆಗೋದಿಲ್ಲ. ಆದರೆ ಈ ವೇಳೆ ಖರೀದಿ ಮಾತ್ರ ಕೊಂಚ ಹೆಚ್ಚಾಗಿರುತ್ತದೆ. ಭಾರತೀಯರ ಬಳಿ ಪ್ರಪಂಚದ ಶೇ. 15ರಷ್ಟು ಚಿನ್ನ ಇದೆ. ಇದು ಇಲ್ಲಿಯವರಿಗೆ ಸಾಕು. ಚಿನ್ನದ ಬೆಲೆಯ ಮೇಲೆ ಬೇರೆ ಬೇರೆ ಅಂಶಗಳು ಪರಿಣಾಮ ಬೀರುತ್ತದೆ. ಇದರಲ್ಲಿ ಹಬ್ಬದ ಸೀಸನ್ ಎಂಬುದು ಇರುವುದಿಲ್ಲ ಎಂದು ತಿಳಿಸಿದರು.

ಮೊದಲು ಭಾರತಕ್ಕೆ ಬನ್ನಿ, ನಂತರ ಪ್ರಕರಣದ ವಿಚಾರಣೆ: ವಿಜಯ್ ಮಲ್ಯಗೆ ಸೂಚನೆ

ಅಕ್ಷಯ ತೃತೀಯ ಚಿನ್ನ ಖರೀದಿಯ ಪೀಕ್ ಸೀಸನ್ ಎಂದು ಹೇಳಬಹುದು. ಈ ದಿನ ಸುಮಾರು ಒಂದು ತಿಂಗಳ ಖರೀದಿ ಒಂದೇ ದಿನದಲ್ಲಿ ನಡೆಯುತ್ತದೆ. ಭಾರತೀಯರಿಗೆ ಚಿನ್ನ, ಬೆಳ್ಳಿಯ ಮೇಲೆ ಪ್ರೀತಿ ಜಾಸ್ತಿ. ಅಕ್ಷಯ ತೃತೀಯ, ದಂತೇರಾಸ್ ಮೊದಲಾದ ಹಬ್ಬಗಳನ್ನು ಚಿನ್ನ ಖರೀದಿಗೆ ಜನರ ಆಸಕ್ತಿ ಹೆಚ್ಚಿಸಲು ಮಾಡಿರುವಂತದ್ದು. ಇದಕ್ಕೂ, ಚಿನ್ನದ ಬೆಲೆ ಏರಿಳಿತಕ್ಕೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಅವರು ತಿಳಿಸಿದರು.

ಚಿನ್ನದ ಬೆಲೆ ಏರಿಕೆಗೆ ಕೇವಲ ಭಾರತೀಯ ಹಬ್ಬ ಮಾತ್ರ ಕಾರಣವಾಗೋದಿಲ್ಲ. ಇದರಲ್ಲಿ ಜಾಗತಿಕ ಅಂಶಗಳು ಕೂಡ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಅಕ್ಷಯ ತೃತೀಯ, ಗಣೇಶ ಚತುರ್ಥಿ ಮುಂಚಿತವಾಗಿ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗುತ್ತದೆ. ಹಬ್ಬಗಳು ಚಿನ್ನದ ಬೆಲೆ ಏರಿಕೆಗೆ ಬೂಸ್ಟರ್ ನಂತೆ ಕೆಲಸ ಮಾಡುತ್ತದೆ ಎಂದರು.

ಕೆಲವೊಮ್ಮೆ ಸುಮಾರು ನಾಲ್ಕು ತಿಂಗಳ ಕಾಲ ಒಂದೇ ರೀತಿ ಚಿನ್ನದ ಬೆಲೆ ಇರುತ್ತದೆ. ಇದರಿಂದ ಚಿನ್ನ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದರ್ಥವಲ್ಲ. ಚಿನ್ನದ ಮೌಲ್ಯವನ್ನು ಕಳೆದ ಹತ್ತು, ಇಪ್ಪತ್ತು, ಮೂವತ್ತು ವರ್ಷದ ಪರಿಣಾಮ ನೋಡಿ ನಿರ್ಧಾರಿಸಲಾಗುತ್ತದೆ ಎಂದು ಅಶೋಕ್ ತಿಳಿಸಿದರು.

ದೇಶಾದ್ಯಂತ 200ಕ್ಕೂ ಹೆಚ್ಚು ವಿಮಾನ ರದ್ದು: ಪರದಾಡಿದ ಇಂಡಿಗೋ ಪ್ರಯಾಣಿಕರು

ಆಗಸ್ಟ್‌ನಿಂದ ನವಂಬರ್‌ವರೆಗೆ ಚಿನ್ನ ಖರೀದಿಗೆ ರಾಹು ದೆಸೆ ಕಾಲ ಎನ್ನಬಹುದು. ಈ ಸಂದರ್ಭದಲ್ಲಿ ಖರೀದಿಯಲ್ಲಿ ಕೊಂಚ ಹಿನ್ನಡೆಯಾಗುತ್ತದೆ. ಹೀಗಾಗಿ ಇದು ಬೆಲೆಯ ಮೇಲೂ ಪರಿಣಾಮ ಬೀರುತ್ತದೆ. ಜನವರಿ, ಫೆಬ್ರವರಿ, ಮಾರ್ಚ್ ತಿಂಗಳು ಚಿನ್ನ ಖರೀದಿಗೆ ಉತ್ತಮ ಸಮಯ. ಈ ಅವಧಿಯಲ್ಲಿ ಚಿನ್ನದ ಬೆಲೆ ಹೆಚ್ಚಾಗಿ ಒಂದೇ ಹಂತದಲ್ಲಿರುತ್ತದೆ. ಯಾಕೆಂದರೆ ಇದು ರೈತರ ಕೈಯಲ್ಲಿ ದುಡ್ಡಿರುವ ಅವಧಿಯಾಗಿದೆ. ಅವರು ಹೆಚ್ಚಾಗಿ ಚಿನ್ನ ಖರೀದಿ ಮಾಡಲು ಬರುವುದು ಇದೇ ಸಮಯದಲ್ಲಿ. ಇನ್ನು ಚಿನ್ನದ ಬೆಲೆಯ ಮೇಲಿದೆ ದೇಶಿಯ, ಅಂತಾರಾಷ್ಟ್ರೀಯ ಸಂಗತಿಗಳು ಕೂಡ ಪರಿಣಾಮ ಬೀರುತ್ತವೆ ಎಂದು ಅವರು ತಿಳಿಸಿದರು.