ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Budget 2026: ಮಧ್ಯಮ ವರ್ಗದವರ ಹಣ ಉಳಿತಾಯ ಮಾಡುತ್ತಾ ಈ ಬಾರಿಯ ಬಜೆಟ್ ?

ಸಾಮಾನ್ಯವಾಗಿ ಬಜೆಟ್ ಮಂಡನೆಯಾದಾಗ ಜನ ಸಾಮಾನ್ಯರಿಗೆ ಏನಿದೆ ಎನ್ನುವ ಪ್ರಶ್ನೆ ಕಾಡುತ್ತದೆ. ಯಾಕೆಂದರೆ ಪ್ರತಿಯೊಂದು ರೂಪಾಯಿ ಖರ್ಚು ಮಾಡುವ ಮುನ್ನ ಹಲವು ಬಾರಿ ಯೋಚಿಸುವ ಇವರು ಉಳಿತಾಯಕ್ಕೆ ಯಾವುದಾದರೂ ದಾರಿ ಸಿಕ್ಕಿದರೆ ಸಾಕು ಎಂದುಕೊಳ್ಳುತ್ತಾರೆ. ಈ ಬಾರಿಯ ಬಜೆಟ್ ನಲ್ಲಿ ಜನಸಾಮಾನ್ಯರಿಗೆ ಏನಿದೆ ? ಎನ್ನುವ ಕುರಿತು ಇಲ್ಲಿದೆ ಕಿರು ಮಾಹಿತಿ.

ಸಂಗ್ರಹ ಚಿತ್ರ

ನವದೆಹಲಿ: ಜೇಬಿನಿಂದ ಒಂದು ರೂಪಾಯಿ ಸೋರಿಕೆಯಾದರೂ ಚಿಂತೆ ಮಾಡುವ ಮಾಧ್ಯಮ ವರ್ಗದ ತೆರಿಗೆದಾರರಿಗೆ ಹೆಚ್ಚಿನ ಖುಷಿ ಕೊಡದ 2026ರ ಕೇಂದ್ರ ಬಜೆಟ್ (Budget 2026), ಮಧ್ಯಮ ವರ್ಗ ಮತ್ತು ಸಣ್ಣ ಹೂಡಿಕೆದಾರರ ಬೆಳವಣಿಗೆಗೆ ಹೆಚ್ಚಿನ ಅವಕಾಶವನ್ನು ನೀಡಿದೆ. ಈ ಮೂಲಕ ಜನ ಸಾಮಾನ್ಯರನ್ನು ಉಳಿತಾಯಕ್ಕೆ ಪ್ರೋತ್ಸಾಹ ನೀಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಭಾನುವಾರ ಮಂಡಿಸಿದ ಒಂಬತ್ತನೇ ಬಜೆಟ್ (Union Budget 2026) ನಲ್ಲಿ ಮಧ್ಯಮ ವರ್ಗಕ್ಕೆ ಪ್ರಯೋಜನವಾಗುವ ಕೆಲವು ಅಂಶಗಳು ಇಲ್ಲಿವೆ.

ಈ ಬಾರಿಯ ಬಜೆಟ್ ನಲ್ಲಿ ಸಂಬಳ ಪಡೆಯುವ ಮಧ್ಯಮ ವರ್ಗಕ್ಕೆ ಯಾವುದೇ ಹೊಸ ತೆರಿಗೆ ವಿನಾಯಿತಿ ನೀಡಲಾಗಿಲ್ಲ. ಹಿಂದಿನಂತೆ 12 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯವು ತೆರಿಗೆ ಮುಕ್ತವಾಗಿ ಉಳಿದಿದೆ. 75,000 ರೂ. ಪ್ರಮಾಣಿತ ಕಡಿತವನ್ನು ಸೇರಿಸಿ ತೆರಿಗೆ ಮುಕ್ತ ಆದಾಯವು 12,75,000 ರೂ. ಗೆ ಏರಿದೆ. ಇನ್ನು ಈ ವರ್ಷದ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

ನಿರ್ಮಲಾ ಸೀತಾರಾಮನ್ ಮಂಡಿಸಿದ ದಾಖಲೆಯ 9ನೇ ಬಜೆಟ್ ಭಾಷಣದ ಅವಧಿ 1 ಗಂಟೆ 25 ನಿಮಿಷ; ಏನಿದರ ವೈಶಿಷ್ಟ್ಯ?

ಮಧ್ಯಮ ವರ್ಗದ ಜನರಿಗಾಗಿ ಈ ಬಾರಿ ಬಜೆಟ್ ನಲ್ಲಿ ವಿದೇಶಿ ರವಾನೆಗಳ ಮೇಲಿನ ಹೊರೆ ಮತ್ತು ತೆರಿಗೆ ದರಗಳನ್ನು ಇಳಿಸಲಾಗಿದೆ. ಈ ಮೂಲಕ ತೆರಿಗೆದಾರರಿಗೆ ದೀರ್ಘಕಾಲೀನ ಉಳಿತಾಯಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ವಿದೇಶಿಕ್ಕೆ ಹೋಗುವವರ ಪ್ಯಾಕೇಜ್‌ಗಳಲ್ಲಿ ತೆರಿಗೆ ಸಂಗ್ರಹ (TCS) ಅನ್ನು ಪ್ರಸ್ತುತ ಶೇ. 5 ರಿಂದ ಶೇ. 2 ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಇದು ಶೇ. 20ರಷ್ಟಿದೆ.

ಇನ್ನು ವೈಯಕ್ತಿಕ ತೆರಿಗೆದಾರರು ಜುಲೈ 31 ರವರೆಗೆ ಐಟಿಆರ್-1 ಮತ್ತು ಐಟಿಆರ್-2 ಅನ್ನು ಸಲ್ಲಿಸಬಹುದು. ಆಡಿಟ್ ಮಾಡದ ವ್ಯವಹಾರಗಳು ಮತ್ತು ಟ್ರಸ್ಟ್‌ಗಳಿಗೆ ಇದು ಆಗಸ್ಟ್ 31 ರವರೆಗೆ ಸಮಯ ನೀಡಲಾಗುತ್ತದೆ. ಅಲ್ಪಸಂಖ್ಯಾತ ಚಿಲ್ಲರೆ ಹೂಡಿಕೆದಾರರ ರಕ್ಷಣೆಗಾಗಿ ಎಲ್ಲಾ ಲಾಭಾಂಶಗಳ ಬದಲು ಬಂಡವಾಳ ಲಾಭದ ಮೇಲೆ ತೆರಿಗೆ ವಿಧಿಸಲು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ಇನ್ನು ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಯು ವ್ಯಕ್ತಿಗಳಿಗೆ ನೀಡುವ ಬಡ್ಡಿಯನ್ನು ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

ಸುಮಾರು 17 ಕ್ಯಾನ್ಸರ್ ಔಷಧಗಳು ಸೇರಿದಂತೆ ಇತರ ಏಳು ಅಪರೂಪದ ಕಾಯಿಲೆಗಳ ಔಷಧಗಳನ್ನು ಸುಂಕ ಮುಕ್ತಗೊಳಿಸಲಾಗಿದೆ. ಅಗ್ಗದ ಉತ್ಪನ್ನಗಳ ಪಟ್ಟಿಯಲ್ಲಿ ಮೈಕ್ರೋವೇವ್ ಓವನ್‌ಗಳು, ಟಿವಿ ಉಪಕರಣಗಳು, ಚರ್ಮದ ಸರಕುಗಳು ಮತ್ತು ಪಾದರಕ್ಷೆಗಳ ತಯಾರಿಕೆಯಲ್ಲಿ ಬಳಸುವ ವಸ್ತುಗಳು ಸೇರಿವೆ.

Budget 2026: ರಾಜ್ಯಗಳ ತೆರಿಗೆ ಹಣ ಹಂಚಿಕೆಯಲ್ಲಿ ಬದಲಾವಣೆ ಇಲ್ಲ, 41%ದಲ್ಲಿಯೇ ಉಳಿಕೆ

ಪ್ರವಾಸೋದ್ಯಮ, ರೈಲ್ವೆ ಮತ್ತು ಪ್ರವಾಸೋದ್ಯಮ, ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿ ಬಂಡವಾಳ ವೆಚ್ಚದ ವೆಚ್ಚವನ್ನು 12 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದ್ದು, ಇದು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ವಿದ್ಯಾ ಇರ್ವತ್ತೂರು

View all posts by this author