ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಿರ್ಮಲಾ ಸೀತಾರಾಮನ್ ಮಂಡಿಸಿದ ದಾಖಲೆಯ 9ನೇ ಬಜೆಟ್ ಭಾಷಣದ ಅವಧಿ 1 ಗಂಟೆ 25 ನಿಮಿಷ; ಏನಿದರ ವೈಶಿಷ್ಟ್ಯ?

ಸತತ 9ನೇ ಬಜೆಟ್ ಭಾಷಣ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಐದು ಬಜೆಟ್ ಭಾಷಣಗಳಂತೆ ಒಂದೂವರೆ ಗಂಟೆಯಲ್ಲಿ ಮಾಡಿ ಮುಗಿಸಿದರು. ಈ ಬಾರಿ ಅವರು 1 ಗಂಟೆ 25 ನಿಮಿಷಗಳಲ್ಲಿ ಬಜೆಟ್ ಮಂಡನೆ ಪೂರ್ಣಗೊಳಿಸಿದರು. ಈವರೆಗಿನ ಅವರ ಅತೀ ಉದ್ದ ಮತ್ತು ಕಡಿಮೆ ಭಾಷಣ ಮಾಡಿದ ಅವಧಿಗಳು ಇಂತಿವೆ.

ನಿರ್ಮಲಾ ಸೀತಾರಾಮನ್ ಅವರ 9ನೇ ಬಜೆಟ್ ಭಾಷಣದ ಅವಧಿ ಎಷ್ಟು?

ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ) -

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ದಾಖಲೆಯ 9ನೇ ಬಜೆಟ್ (Budget 2026) ಭಾಷಣವನ್ನು ಭಾನುವಾರ ಮಾಡಿದ್ದಾರೆ. ಇವರ ಈವರೆಗಿನ ಭಾಷಣಗಳಲ್ಲಿ ಇದು ಸತತ ಐದನೇ ಭಾಷಣ ಒಂದೂವರೆ ಗಂಟೆಯಲ್ಲಿ ಪೂರ್ಣಗೊಂಡಿದೆ. ಪಿ. ಚಿದಂಬರಂ ಅವರ ಹೆಚ್ಚಿನ ಬಜೆಟ್‌ ಭಾಷಣಗಳ ಅವಧಿಯ ದಾಖಲೆಯನ್ನು ಮುರಿದ ನಿರ್ಮಲಾ ಸೀತಾರಾಮನ್ ಅವರ ಈ ಬಾರಿಯ ಬಜೆಟ್ ಭಾಷಣವು (9th budget speech) 1 ಗಂಟೆ 25 ನಿಮಿಷಗಳ ಕಾಲ ನಡೆಯಿತು. ಸುದೀರ್ಘ ಭಾಷಣ ಮಾಡಿದ ಇವರು ಓದುವಿಕೆಯ ಮಧ್ಯೆ ಸಮತೋಲನವನ್ನು ಹೊಂದಿದ್ದರು.

ಫೆಬ್ರವರಿ ತಿಂಗಳ ಮೊದಲ ಭಾನುವಾರವೇ ಬಜೆಟ್ ಮಂಡಿಸಿ ದಾಖಲೆ ಬರೆದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ತಮ್ಮ ಸತತ ಒಂಬತ್ತನೇ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಇದು ಮೋದಿ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್ ಆಗಿದೆ. ಇವರ ಭಾಷಣವು ಸುಮಾರು 1 ಗಂಟೆ 25 ನಿಮಿಷಗಳ ಕಾಲ ನಡೆಯಿತು. ಇದು ವಿವರವಾದ ನೀತಿ ಘೋಷಣೆಗಳು, ಸಂಕ್ಷಿಪ್ತ ವಿತರಣೆ ವಿವರವನ್ನು ಒಳಗೊಂಡಿತ್ತು.

Budget 2026: ಅನಿವಾಸಿ ಭಾರತೀಯರಿಗೆ ಭರ್ಜರಿ ಗಿಫ್ಟ್: ಷೇರು ಹೂಡಿಕೆಗೆ ಅವಕಾಶ ದುಪ್ಪಟ್ಟು

ಭಾರತದ ಸಂಸದೀಯ ಇತಿಹಾಸದಲ್ಲಿ ಅತಿ ಉದ್ದದ ಬಜೆಟ್ ಭಾಷಣ ಮಾಡಿದ ದಾಖಲೆ ಈಗ ಸೀತಾರಾಮನ್ ಅವರದ್ದಾಗಿದೆ. ಇವರ ಅತೀ ಸುದೀರ್ಘ ಭಾಷಣವು 2020ರ ಫೆಬ್ರವರಿ 1ರಂದು ನಡೆದ ಭಾಷಣವಾಗಿದ್ದು, ಇದು 2 ಗಂಟೆ 42 ನಿಮಿಷಗಳ ಕಾಲ ನಡೆಯಿತು. ಇದರಲ್ಲಿ ಅವರು ಹೊಸ ಆದಾಯ ತೆರಿಗೆ, ಆಡಳಿತ ಮತ್ತು ಜೀವ ವಿಮಾ ನಿಗಮದ ಪ್ರಸ್ತಾವಿತ ಆರಂಭಿಕ ಸಾರ್ವಜನಿಕ ಕೊಡುಗೆಯಂತಹ ಪ್ರಮುಖ ಸುಧಾರಣೆಗಳನ್ನು ಪರಿಚಯಿಸಿದ್ದರು. ಈ ವೇಳೆ ಅವರು ಅಸ್ವಸ್ಥರಾಗಿದ್ದು, ಬಳಿಕ ಅವರ ಪರವಾಗಿ ಲೋಕಸಭಾಪತಿ ಓಂ ಬಿರ್ಲಾ ಅವರು ಕೊನೆಯ ಎರಡು ಪುಟಗಳನ್ನು ಓದಿದರು.

ಇನ್ನು ಸೀತಾರಾಮನ್ ಅವರ ಮೊದಲ ಬಜೆಟ್ ಭಾಷಣ 2 ಗಂಟೆ 17 ನಿಮಿಷಗಳಾಗಿತ್ತು. 2024 ರ ಮಧ್ಯಂತರ ಬಜೆಟ್ ಭಾಷಣವು ಕೇವಲ 56 ನಿಮಿಷಗಳಾಗಿದ್ದು, ಇದು ಅವರ ಅಧಿಕಾರಾವಧಿಯ ಅತ್ಯಂತ ಕಡಿಮೆ ಸಮಯದ ಬಜೆಟ್ ಭಾಷಣವಾಗಿದೆ.

ನಿರ್ಮಲಾ ಸೀತಾರಾಮನ್ ಅವರ ಈವರೆಗಿನ ಭಾಷಣ ಅವಧಿ

ನಿರ್ಮಲಾ ಸೀತಾರಾಮನ್ ಅವರ 2019ರ ಮೊದಲ ಕೇಂದ್ರ ಬಜೆಟ್ ಭಾಷಣ 2 ಗಂಟೆ 17 ನಿಮಿಷ, 2020ರ ಬಜೆಟ್ ಭಾಷಣ 2 ಗಂಟೆ 42 ನಿಮಿಷ, 2021ರಲ್ಲಿ 1 ಗಂಟೆ 50 ನಿಮಿಷ, 2022ರಲ್ಲಿ 1 ಗಂಟೆ 30 ನಿಮಿಷ, 2023ರಲ್ಲಿ 1 ಗಂಟೆ 27 ನಿಮಿಷ, 2024 ಮಧ್ಯಂತರ ಬಜೆಟ್ ಭಾಷಣ 56– 58 ನಿಮಿಷ, 2025ರ ಬಜೆಟ್ ಭಾಷಣ 1 ಗಂಟೆ 14 ನಿಮಿಷ, 2026ರಲ್ಲಿ 1 ಗಂಟೆ 25 ನಿಮಿಷಗಳಾಗಿತ್ತು.

Union Budget: "ಈ ಬಜೆಟ್​ 2047 ರ ವಿಕಸಿತ ಭಾರತಕ್ಕೆ ಅಡಿಪಾಯ"; ವಿತ್ತ ಸಚಿವೆಯನ್ನು ಹೊಗಳಿದ ಮೋದಿ

ಹಿಂದೆ ಅತೀ ಕಡಿಮೆ ಅವಧಿಯ ಬಜೆಟ್ ಭಾಷಣವನ್ನು ಮಾಜಿ ಹಣಕಾಸು ಸಚಿವ ಹಿರುಭಾಯ್ ಮುಲ್ಜಿಭಾಯ್ ಪಟೇಲ್ ಅವರು ಮಾಡಿದ್ದು ಇವರು 1977ರ ಮಧ್ಯಂತರ ಬಜೆಟ್ ಅನ್ನು ಕೇವಲ 800 ಪದಗಳಲ್ಲಿ ಮಂಡಿಸಿದ್ದರು. ಅತಿ ಹೆಚ್ಚು ಬಜೆಟ್‌ ಮಂಡಿಸಿದ ಕೀರ್ತಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರದ್ದಾಗಿದ್ದು, ಇವರು 1959- 1969 ರ ನಡುವೆ ಒಟ್ಟು ಹತ್ತು ಬಜೆಟ್‌ ಭಾಷಣ ಮಾಡಿದ್ದಾರೆ.

ಬಳಿಕ ಪಿ. ಚಿದಂಬರಂ ಒಂಬತ್ತು, ಪ್ರಣಬ್ ಮುಖರ್ಜಿ ಎಂಟು ಬಜೆಟ್‌ ಭಾಷಣ ಮಾಡಿದ್ದಾರೆ. ಭಾನುವಾರದ ಭಾಷಣದೊಂದಿಗೆ ಚಿದಂಬರಂ ಅವರ ದಾಖಲೆಯನ್ನು ಮುರಿದ ನಿರ್ಮಲಾ ಸೀತಾರಾಮನ್ ಈಗ ದೇಶದ ಅತ್ಯಂತ ಅನುಭವಿ ಹಣಕಾಸು ಮಂತ್ರಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.