ಬೆಂಗಳೂರು: ಅತೀ ಹೆಚ್ಚು ಪ್ರಮಾಣದಲ್ಲಿ ಅಡುಗೆ ಅನಿಲ (Edible Oil ) ಬಳಸುವ ಮತ್ತು ಆಮದು ಮಾಡಿಕೊಳ್ಳುವ ಭಾರತವು ಇದಕ್ಕಾಗಿಯೇ ವಾರ್ಷಿಕವಾಗಿ 1.61 ಲಕ್ಷ ಕೋಟಿ ರೂಪಾಯಿ ವ್ಯಯ ಮಾಡುತ್ತಿದೆ. ವಾರ್ಷಿಕವಾಗಿ ಸರಿಸುಮಾರು 15-16 ಮಿಲಿಯನ್ ಟನ್ ಖಾದ್ಯ ತೈಲವನ್ನು ಆಮದು (Edible Oil Imports) ಮಾಡಿಕೊಳ್ಳುವ ಭಾರತದಲ್ಲಿ ಖಾದ್ಯ ತೈಲ (vegetable oil) ಬೆಳೆಯನ್ನು (Edible Oil Produce) ಬೆಳೆಯಲು ರೈತರು ಹಿಂದೇಟು ಹಾಕುತ್ತಾರೆ. ಯಾಕೆಂದರೆ ಇದನ್ನು ಭಾರತೀಯ ರೈತರು (Indian former) ಅಪಾಯಕಾರಿ ಬೆಳೆಯೆಂದು ಪರಿಗಣಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಡುಗೆ ಅನಿಲ ಸೇರಿದಂತೆ ಇಂಧನಗಳನ್ನು ಅತೀ ಕಡಿಮೆ ಪ್ರಮಾಣದಲ್ಲಿ ಬಳಸುವಂತೆ ಕರೆ ನೀಡಿದ್ದರು. ಯಾಕೆಂದರೆ ಭಾರತೀಯರು ಖಾದ್ಯ ತೈಲಕ್ಕಾಗಿಯೇ ಹೊರರಾಷ್ಟ್ರಗಳನ್ನೇ ಹೆಚ್ಚಾಗಿ ಅವಲಂಬಿಸಿರುವುದು ಮತ್ತು ಇದರ ಉತ್ಪಾದನೆ ಭಾರತದಲ್ಲಿ ಅತೀ ಕಡಿಮೆ ಇರುವುದು ಮುಖ್ಯ ಕಾರಣವಾಗಿದೆ.
‘ಕ್ಯಾಶ್‌ಲೆಸ್ ಎನಿವೇರ್’ ಮೂಲಕ ಮೋಟಾರ್ ಇನ್ಶೂರೆನ್ಸ್ ಬಲ ಹೆಚ್ಚಿಸಿದ ನವಿ ಜನರಲ್ ಇನ್ಶೂರೆನ್ಸ್!
ಭಾರತವು ವಿಶ್ವದ ಅತೀ ದೊಡ್ಡ ಖಾದ್ಯ ತೈಲ ಆಮದುದಾರ ರಾಷ್ಟ್ರವಾಗಿದೆ. ವರದಿಗಳ ಪ್ರಕಾರ ದೇಶವು ಪ್ರತಿ ವರ್ಷ ಸುಮಾರು 16 ಮಿಲಿಯನ್ ಟನ್ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದಕ್ಕಾಗಿ ಸರಿಸುಮಾರು 1.61 ಲಕ್ಷ ಕೋಟಿ ರೂ. ಗಳನ್ನು ಖರ್ಚು ಮಾಡುತ್ತದೆ. ಇದಕ್ಕಾಗಿ ಭಾರತವು ಅಪಾರ ಪ್ರಮಾಣದ ವಿದೇಶಿ ವಿನಿಮಯವನ್ನು ಇರಿಸಬೇಕಾಗುತ್ತದೆ.
ದೇಶದಲ್ಲಿ ವಿಶಾಲವಾದ ಕೃಷಿ ಭೂಮಿ, ಲಕ್ಷಾಂತರ ರೈತರಿದ್ದರೂ ಕೂಡ ಅಕ್ಕಿ ಮತ್ತು ಗೋಧಿಗೆ ಸರಿಸಮವಾಗಿ ಎಣ್ಣೆ ಬೀಜಗಳನ್ನು ಬೆಳೆಯಲಾಗುತ್ತಿಲ್ಲ. ಯಾಕೆಂದರೆ ಭಾರತದ ರೈತರು ಎಣ್ಣೆ ಬೀಜಗಳನ್ನು ಅಪಾಯಕಾರಿ ಬೆಳೆಗಳಾಗಿ ನೋಡುತ್ತಾರೆ. ಅನಿಯಮಿತ ಮಳೆ, ಕೀಟ, ರೋಗ ಮತ್ತು ಅಸ್ಥಿರ ಬೆಲೆಗಳ ಕಾರಣದಿಂದ ಇದನ್ನು ಬೆಳೆಯಲು ರೈತರು ಹಿಂದೇಟು ಹಾಕುತ್ತಾರೆ.
ಅರೆ-ಶುಷ್ಕ ಉಷ್ಣವಲಯದ ಅಂತಾರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಯ ಮಹಾನಿರ್ದೇಶಕ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಾಜಿ ಮಹಾನಿರ್ದೇಶಕ ಡಾ. ಹಿಮಾಂಶು ಪಾಠಕ್ ಅವರು ಇದರ ಕುರಿತು ಹೇಳುವುದು ಹೀಗೆ.
ಭಾರತದಲ್ಲಿ ಅಕ್ಕಿ ಮತ್ತು ಗೋಧಿ ಸ್ಥಿರವಾದ ಬೆಳೆಗಳು ಎಂದೇ ಪರಿಗಣಿಸಲ್ಪಟ್ಟಿದೆ. ಯಾಕೆಂದರೆ ಅವುಗಳಿಗೆ ಸಾಕಷ್ಟು ಪ್ರೋತ್ಸಾಹವು ಸಿಗುತ್ತಿದೆ. ಆದರೆ ಎಣ್ಣೆ ಬೀಜಗಳಿಗೆ ಅಂತಹ ಬೆಂಬಲ ಸಿಗುತ್ತಿಲ್ಲ. ಭಾರತವು ಎಣ್ಣೆ ಬೀಜಗಳಲ್ಲಿ ಆತ್ಮನಿರ್ಭರ್ ಆಗಬೇಕಿದೆ ಎನ್ನುತ್ತಾರೆ ಡಾ. ಹಿಮಾಂಶು ಪಾಠಕ್.
ಭಾರತದಲ್ಲಿ ಎಣ್ಣೆ ಬೀಜಗಳನ್ನು ಬೆಳೆಯಲು ಭೌಗೋಳಿಕ ಸವಾಲುಗಳು ಇವೆ. ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳನ್ನು ಹೆಚ್ಚಾಗಿ ಕಳಪೆ ಮಣ್ಣಿನ ಫಲವತ್ತತೆ, ಸೀಮಿತ ನೀರಾವರಿ ಮತ್ತು ಕಡಿಮೆ ಒಳಹರಿವು ಹೊಂದಿರುವ ಸಣ್ಣ ಭೂಮಿಯಲ್ಲಿ ಬೆಳೆಸಲಾಗುತ್ತದೆ. ಇದರಿಂದಾಗಿ ಇಳುವರಿ ಅತ್ಯಂತ ಕಡಿಮೆಯಾಗಿದೆ. ಅಕ್ಕಿ ಮತ್ತು ಗೋಧಿ ಉತ್ಪಾದನೆಗೆ ಹೋಲಿಸಿದರೆ ಎಣ್ಣೆ ಬೀಜಗಳನ್ನು ಬೆಳೆಯುವುದು ಹೆಚ್ಚು ಲಾಭದಾಯಕವಾಗಿದೆ. ಆದರೆ ಇದಕ್ಕಾಗಿ ನೀತಿ ಬೆಂಬಲ, ವಿಮೆ, ಉಚಿತ ವಿದ್ಯುತ್ ಮತ್ತು ಸಂಗ್ರಹಣೆ ಸೌಲಭ್ಯಗಳು ಸಿಗಬೇಕಿದೆ ಎಂದು ಅವರು ಹೇಳಿದ್ದಾರೆ.
ಒಂದು ರೋಗದ ಹರಡುವಿಕೆಯು ಇಡೀ ಎಣ್ಣೆ ಬೀಜ ಬೆಳೆಯನ್ನು ನಾಶಮಾಡಬಹುದು. ಕೀಟ, ರೋಗ ಮತ್ತು ಹವಾಮಾನ ಒತ್ತಡವನ್ನು ಸಹಿಸಿಕೊಳ್ಳುವ ಹೊಸ ಪ್ರಭೇದಗಳು ಭಾರತದಲ್ಲಿ ಲಭ್ಯವಿದೆ. ಉತ್ತಮ ಬೀಜಗಳು ಮಾತ್ರ ಇಳುವರಿಯನ್ನು ಹೆಚ್ಚಿಸುತ್ತದೆ. ಇಂತಹ ಗುಣಮಟ್ಟದ ಬೀಜಗಳು ರೈತರನ್ನು ತಲುಪಲು ವ್ಯವಸ್ಥೆ ಮಾಡಬೇಕಿದೆ ಎನ್ನುತ್ತಾರೆ ಅವರು.
ಸರ್ಕಾರವು ಖಾದ್ಯ ಎಣ್ಣೆ ಬೀಜಗಳ ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭಿಸಿದೆ. ಎಣ್ಣೆ ಬೀಜ ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ, ಅಂತರ ಬೆಳೆಯನ್ನು ಉತ್ತೇಜಿಸುವ ಮೂಲಕ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದರಡಿಯಲ್ಲಿ ಉತ್ತಮ ಸಂಗ್ರಹಣೆ ಮತ್ತು ವಿಮಾ ರಕ್ಷಣೆಯು ದೊರೆಯಲಿದೆ. ಇದರ ಪ್ರಯೋಜನ ಪಡೆದು ರೈತರು ಎಣ್ಣೆ ಬೀಜಗಳ ಉತ್ಪಾದನೆಗೆ ಒಲವು ತೋರಿಸಿದರೆ ನಿಗದಿತ ಗುರಿಯನ್ನು ಸಾಧಿಸಬಹುದು ಎನ್ನುತ್ತಾರೆ ಪಾಠಕ್.