Stock Market: ಸೆನ್ಸೆಕ್ಸ್ 1,500 ಅಂಕ ಭಾರಿ ಪತನ; ಐಟಿ ಸ್ಟಾಕ್ಸ್ ತಲ್ಲಣ: 4 ದಿನಗಳಲ್ಲಿ 17 ಲಕ್ಷ ಕೋಟಿ ರುಪಾಯಿ ನಷ್ಟ
ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಮತ್ತೆ ಕುಸಿತಕ್ಕೀಡಾಗಿದೆ. ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 1,500 ಅಂಕ ಕುಸಿತಕ್ಕೀಡಾಗಿ 74,559ಕ್ಕೆ ಸ್ಥಿರವಾಯಿತು. ನಿಫ್ಟಿ 381 ಅಂಕ ಕಳೆದುಕೊಂಡು 23,429ಕ್ಕೆ ಇಳಿಯಿತು. ಐಟಿ, ರಿಯಾಲ್ಟಿ ಸ್ಟಾಕ್ಸ್ ಗಣನೀಯ ಕುಸಿತಕ್ಕೀಡಾಯಿತು.
ಸಾಂದರ್ಭಿಕ ಚಿತ್ರ -
ಮುಂಬೈ, ಮೇ 12: ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಮತ್ತೆ ಕುಸಿತಕ್ಕೀಡಾಗಿದೆ. ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 1,500 ಅಂಕ ಕುಸಿತಕ್ಕೀಡಾಗಿ 74,559ಕ್ಕೆ ಇಳಿಯಿತು. ನಿಫ್ಟಿ 381 ಅಂಕ ಕಳೆದುಕೊಂಡು 23,429ಕ್ಕೆ ಇಳಿಯಿತು. ಐಟಿ, ರಿಯಾಲ್ಟಿ ಸ್ಟಾಕ್ಸ್ (Stock Market) ಗಣನೀಯ ಕುಸಿತಕ್ಕೀಡಾಯಿತು. ಈ ಭಾರಿ ಪತನದಿಂದ ಹೂಡಿಕೆದಾರರಿಗೆ ಇವತ್ತು 10 ಲಕ್ಷ ಕೋಟಿ ರುಪಾಯಿ ನೋಶನಲ್ ನಷ್ಟ ಉಂಟಾಯಿತು. ಕಳೆದ 4 ದಿನಗಳಲ್ಲಿ ಸ್ಟಾಕ್ ಮಾರ್ಕೆಟ್ ಕುಸಿತದ ಪರಿಣಾಮ ಹೂಡಿಕೆದಾರರಿಗೆ 17 ಲಕ್ಷ ಕೋಟಿ ರುಪಾಯಿ ನೋಶನಲ್ ನಷ್ಟವಾಗಿದೆ.
ಡಾಲರ್ ಎದುರು ರುಪಾಯಿ ಮೌಲ್ಯ 95 ರುಪಾಯಿ 67 ಪೈಸೆಗೆ ಇಳಿದಿದ್ದು, ಸಾರ್ವಕಾಲಿಕ ಕುಸಿತಕ್ಕೀಡಾಯಿತು. ಇರಾನ್‌ನ ಕದನ ವಿರಾಮ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಸದ ಬುಟ್ಟಿಗೆ ಎಸೆದಿದ್ದು, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರಿದಿದೆ.
ಸ್ಟಾಕ್ ಮಾರ್ಕೆಟ್ ಕುಸಿತಕ್ಕೆ ಕಾರಣವೇನು?
- ಕದನ ವಿರಾಮ ಕುರಿತ ಇರಾನ್ ಪ್ರಸ್ತಾಪವನ್ನು ಟ್ರಂಪ್ ತಿರಸ್ಕರಿಸಿರುವುದು.
- ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆಲ್‌ಗೆ 106 ಡಾಲರ್‌ಗೆ ಏರಿಕೆಯಾಗಿರುವುದು.
- ಡಾಲರ್ ಎದುರು ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ.
- ಬಾಂಡ್ ಉತ್ಪತ್ತಿ ಏರಿಕೆ ಆಗಿರುವುದು. ಅಮೆರಿಕದ 10 ವರ್ಷ ಅವಧಿಯ ಬಾಂಡ್ ಉತ್ಪತ್ತಿ ದರ 4.42% ಕ್ಕೆ ಏರಿಕೆಯಾಗಿದೆ.
- ವಿದೇಶಿ ಸಾಂಸ್ಥಿಕ ಹೂಡಿಕೆಯ ಹಿಂತೆಗೆತ.
ಭಾರತದ ಐಟಿ ಕಂಪನಿಗಳ ಷೇರುಗಳ ದರದಲ್ಲಿ ಇವತ್ತು ಗಣನೀಯ ಇಳಿಕೆಯಾಗಿದೆ. ಇನ್ಫೋಸಿಸ್, ಟಿಸಿಎಸ್, ಎಚ್‌ಸಿಎಲ್ ಟೆಕ್ ಷೇರುಗಳ ದರದಲ್ಲಿ 5% ತನಕ ಇಳಿಕೆ ಉಂಟಾಯಿತು. ನಿಫ್ಟಿ ಐಟಿ ಇಂಡೆಕ್ಸ್ 4% ತಗ್ಗಿತು. ಇದಕ್ಕೆ ಕಾರಣ ಎಐ ದಿಗ್ಗಜ ಕಂಪನಿಯಾದ ಓಪನ್ ಎಐ ಸಾಫ್ಟ್‌ವೇರ್ ಸೇವೆಯ ಬಿಸಿನೆಸ್‌ಗೆ ಪ್ರವೇಶಿಸುತ್ತಿರುವುದಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಐಟಿ ಸ್ಟಾಕ್ಸ್ ದರಗಳು ಕುಸಿದಿವೆ.
ಓಪನ್ ಎಐ ತನ್ನ ನೂತನ ಓಪನ್ ಎಐ ಡಿಪ್ಲಾಯ್‌ಮೆಂಟ್ ಕಂಪನಿಗೆ ಚಾಲನೆ ನೀಡಿದ್ದು, ಇದು ಐಟಿ ಸೇವೆಯನ್ನು ನೀಡಲಿದೆ. ಹೊಸ ಕಂಪನಿಯ ಸಲುವಾಗಿ ಓಪನ್ ಎಐ 400 ಕೋಟಿ ಡಾಲರ್ ಬಂಡವಾಳ ಹೂಡಿಕೆಯನ್ನೂ ಮಾಡಿದೆ.
ನಿಫ್ಟಿ 50ಯಲ್ಲಿ ಹೆಚ್ಚು ನಷ್ಟಕ್ಕೀಡಾದ ಷೇರುಗಳು
- ಶ್ರೀರಾಮ್ ಫೈನಾನ್ಸ್: 930/-: 4.67%
- ಅದಾನಿ ಪೋರ್ಟ್ಸ್: 1688/-: 4.48%
- ಟೆಕ್ ಮಹೀಂದ್ರಾ: 1,393/-: 4.43%
- ಎಚ್‌ಸಿಎಲ್ ಟೆಕ್: 1,146/-: 4.11%
- ಜಿಯೊ ಫೈನಾನ್ಷಿಯಲ್ ಸರ್ವೀಸ್: 230/-: 4.11%
- ಟಿಸಿಎಸ್: 2,300/-: 3.87%
ಯುವ ವಾಹನ ವಿನ್ಯಾಸಕರಿಗೆ ಭರ್ಜರಿ ಅವಕಾಶ: 'ಡಿಸೈನ್-ಎಕ್ಸ್‌ಥಾನ್ 2026' ಸ್ಪರ್ಧೆ ಘೋಷಿಸಿದ ಮಾರುತಿ ಸುಜುಕಿ
ನಿಫ್ಟಿ 50ಯಲ್ಲಿ ಲಾಭ ಗಳಿಸಿದ ಷೇರುಗಳು
ಒಎನ್‌ಜಿಸಿ: 294/-: 4.81%
ಹಿಂಡಾಲ್ಕೊ: 1041/-: 1.75%
SBI: 974/-: 0.11%