Canara Bank: ಕೆನರಾ ಬ್ಯಾಂಕ್ ಷೇರಿನ ದರ ಏರುತ್ತಿರುವುದೇಕೆ?
Share Market: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಷೇರು ದರ ಇತ್ತೀಚೆಗೆ ಏರಿಕೆಯ ಹಾದಿಯಲ್ಲಿದೆ. ಇದರ ಜತೆಗೆ ಕೆನರಾ ಬ್ಯಾಂಕ್ (Canara Bank) ಷೇರಿನ ಏರುಗತಿಯ ಬಗ್ಗೆ ಹಾಗೂ 30%ನಿಂದ 40% ತನಕ ಅಗ್ಗದ ದರದಲ್ಲಿ ಸಿಗುತ್ತಿರುವ 5 ಉತ್ತಮ ಕಂಪನಿಗಳ ಷೇರುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೆನರಾ ಬ್ಯಾಂಕ್.

ಕೇಶವ ಪ್ರಸಾದ ಬಿ.
ಬೆಂಗಳೂರು: ಕೆನರಾ ಬ್ಯಾಂಕ್ (Canara Bank) ಷೇರಿನ ಏರುಗತಿಯ ಬಗ್ಗೆ ಹಾಗೂ 30%ನಿಂದ 40% ತನಕ ಅಗ್ಗದ ದರದಲ್ಲಿ ಸಿಗುತ್ತಿರುವ 5 ಉತ್ತಮ ಕಂಪನಿಗಳ ಷೇರುಗಳ ಬಗ್ಗೆ ತಿಳಿದುಕೊಳ್ಳೋಣ (Share Market). ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಷೇರು ದರ ಇತ್ತೀಚೆಗೆ ಏರಿಕೆಯ ಹಾದಿಯಲ್ಲಿದೆ. 1906ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ಕೆನರಾ ಬ್ಯಾಂಕ್ ಕನ್ನಡಿಗರಿಗೆಲ್ಲ ಅಚ್ಚುಮೆಚ್ಚಿನ ಬ್ಯಾಂಕ್. ಇದರ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ.
ಕೆನರಾ ಬ್ಯಾಂಕ್ ಷೇರು Canara Bank
ಈಗಿನ ದರ: 105 ರೂ.
ಮಧ್ಯಂತರ ಅವಧಿಗೆ ಟಾರ್ಗೆಟ್ ದರ: 127 ರೂ.
ಏರಿಕೆ ಸಂಭವ ಎಷ್ಟು?: 21%
2020ರ ಮೇನಲ್ಲಿ ದರ: 17 ರೂ.
ಕಳೆದ 5 ವರ್ಷದಲ್ಲಿ ಏರಿಕೆ: 526%
ಮಾರ್ಕೆಟ್ ಕ್ಯಾಪ್ : 95,000 ಕೋಟಿ ರೂ.
ಕೆನರಾ ಬ್ಯಾಂಕ್ ಷೇರಿನ ದರ ಕಳೆದ 6 ತಿಂಗಳಿನಲ್ಲಿ 8% ಏರಿಕೆ ದಾಖಲಿಸಿದೆ. 97 ರೂ.ಯಿಂದ 105 ರೂ.ಗೆ ಏರಿಕೆಯಾಗಿದೆ.
ಹಾಗಾದರೆ ಇತ್ತೀಚೆಗೆ ಕೆನರಾ ಬ್ಯಾಂಕ್ ಷೇರು ದರ ಏರಿಕೆಗೆ ಕಾರಣವೇನು?
ಕೆನರಾ ಬ್ಯಾಂಕ್ ಇತ್ತೀಚೆಗೆ ಮಾರ್ಜಿನಲ್ ಕಾಸ್ಟ್ ಆಫ್ ಓಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (MCLR) ದರದಲ್ಲಿ 10 ಬೇಸಿಸ್ ಪಾಯಿಂಟ್ಸ್ ಇಳಿಕೆ ಮಾಡಿದೆ. ಅಂದ್ರೆ ಪಾಯಿಂಟ್ 1 ಪರ್ಸೆಂಟ್ ತಗ್ಗಿದೆ. ಈ MCLR ದರ ಕಡಿತ ಮಾಡೋದ್ರಿಂದ ಬ್ಯಾಂಕ್ ನೀಡುವ ಸಾಕಗಳ ಬಡ್ಡಿ ದರಗಳು ಇಳಿಕೆಯಾಗಲಿವೆ. ಸಾಲಗಾರರನ್ನು ಹೆಚ್ಚು ಆಕರ್ಷಿಸುತ್ತದೆ. ಆಗ ಬ್ಯಾಂಕಿನ ವಹಿವಾಟು ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಷೇರಿನ ದರ ಏರಿಕೆಯ ಹಾದಿಯಲ್ಲಿದೆ.
ಈ ಸುದ್ದಿಯನ್ನೂ ಓದಿ: Stock Market: FII ಮತ್ತು DII ಖರೀದಿಸಿದ 5 ಪೆನ್ನಿ ಸ್ಟಾಕ್ಸ್; 100 ರುಪಾಯಿಗಿಂತಲೂ ಅಗ್ಗ!
ಎರಡನೆಯದಾಗಿ ಕೆನರಾ ಬ್ಯಾಂಕ್ ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ ಉತ್ತಮ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ. ಬ್ಯಾಂಕಿನ ಒಟ್ಟು ಆದಾಯದಲ್ಲಿ 10% ಏರಿಕೆಯಾಗಿದೆ. ಈ ಅವಧಿಯಲ್ಲಿ ಕೆನರಾ ಬ್ಯಾಂಕ್ 5,070 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂ 3,951 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. ಅಂದ್ರೆ 28% ಏರಿಕೆ ಆಗಿರುವುದು ಗಮನಾರ್ಹ.
2025-26ರಲ್ಲಿ ಕೆನರಾ ಬ್ಯಾಂಕಿನ ಕ್ರೆಡಿಟ್ ಗ್ರೋತ್ 10-11% ನಿರೀಕ್ಷಿಸಲಾಗಿದೆ.
ಕೆನರಾ ಬ್ಯಾಂಕ್ 50,000 ಕೋಟಿ ರೂ. ಕಾರ್ಪೊರೇಟ್ ಸಾಲವನ್ನು ಮಂಜೂರು ಮಾಡಿದೆ.
ಈಗ ಕಳೆದ ಒಂದು ವರ್ಷದಲ್ಲಿ 30%-40% ಅಗ್ಗದ ದರದಲ್ಲಿ ಸಿಗುತ್ತಿರುವ ಮತ್ತು ಫಂಡಮೆಂಟಲ್ ಆಗಿ ಉತ್ತಮವಾಗಿರುವ 5 ಷೇರುಗಳ ವಿವರಗಳನ್ನು ತಿಳಿಯೋಣ. ಖರೀದಿಸುವವರಿಗೆ ಇದು ಉಪಯುಕ್ತ ಮಾಹಿತಿ ಆಗಬಹುದು. ಈಕ್ವಿಟಿ ಸ್ಟಾಕ್ ಮಾಸ್ಟರ್ ಈ ಸ್ಟಾಕ್ಸ್‌ಗಳ ವಿವರಗಳನ್ನು ಕೊಟ್ಟಿದೆ.
ಅಸ್ಟ್ರಲ್ Astral
ಷೇರಿನ ಈಗಿನ ದರ: 1,326 ರೂ.
2024 ಮೇ 14ಕ್ಕೆ ದರ: 2,211 ರೂ.
1 ವರ್ಷದಲ್ಲಿ ಎಷ್ಟು ಅಗ್ಗ?: 40%
ಟಾರ್ಗೆಟ್ ದರ : 1,344 ರೂ. - 2,180
ಗುಜರಾತಿನ ಅಹಮದಾಬಾದ್ ಮೂಲದ ಅಸ್ಟ್ರಲ್ ಕಂಪನಿಯು ಬಿಲ್ಡಿಂಗ್ ಮೆಟೀರಿಯಲ್‌ಗಳನ್ನು ತಯಾರಿಸುತ್ತದೆ. ಅಡ್ಹೇಸಿವ್, ಬಾತ್‌ವೇರ್, ಸಿಪಿವಿಸಿ ಪೈಪ್ಸ್, ಪೇಂಟ್ಸ್, ಪಿವಿಸಿ ಪೈಪ್‌ಗಳನ್ನು ಉತ್ಪಾದಿಸುತ್ತದೆ. 2024ರಲ್ಲಿ 5,641 ಕೋಟಿ ರೂ. ಆದಾಯ ಗಳಿಸಿತ್ತು. ಅಸ್ಟ್ರಲ್ ಷೇರು ದೀರ್ಘಾವಧಿಯ ದೃಷ್ಟಿಯಿಂದ ಉತ್ತಮ ಷೇರು ಎನ್ನುತ್ತಾರೆ ತಜ್ಞರು. ಈ ಷೇರು ಭವಿಷ್ಯದಲ್ಲಿ 2,180 ರುಪಾಯಿ ತನಕ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಆನಂದ್ ರಾತಿ ಸಂಸ್ಥೆಯ ವಿಶ್ಲೇಷಕರು ಹೇಳಿದ್ದಾರೆ.
ಟಾಟಾ ಟೆಕ್ನಾಲಜೀಸ್ Tata Technologies
ಷೇರಿನ ಈಗಿನ ದರ: 706 ರೂ.
1 ವರ್ಷದ ಹಿಂದಿನ ದರ: 1,058 ರೂ.
ಎಷ್ಟು ಅಗ್ಗವಾಗಿದೆ : 34%
ಟಾರ್ಗೆಟ್ ದರ : 1,150 ರೂ. (JM Financial)
ಸರಾಸರಿ ಟಾರ್ಗೆಟ್ ದರ: 622 ರೂ.
ಅಂದ್ರೆ ಷೇರು ದರ ಈಗಿನ ಮಟ್ಟಕ್ಕಿಂತಲೂ ಇಳಿಕೆಯಾಗಲಿದೆ ಎಂದು ಸರಾಸರಿ ಸಮೀಕ್ಷೆ ತಿಳಿಸಿದೆ. ಕಳೆದ ಒಂದು ವರ್ಷದಿಂದೀಚೆಗೆ ಟಾಟಾ ಟೆಕ್ನಾಲಜೀಸ್ ಷೇರು ದರದಲ್ಲಿ 34% ಇಳಿಕೆಯಾಗಿರುವುದು ಏಕೆ ಎಂದು ನೀವು ಕೇಳಬಹುದು. ತಜ್ಞರ ಪ್ರಕಾರ ಕಂಪನಿಯು ಆಟೊಮೋಟಿವ್ ಸೆಕ್ಟರ್ ಮೇಲೆ ಹೆಚ್ಚಿನ ಅವಲಂಬನೆ ಇಟ್ಟುಕೊಂಡಿರುವುದು ಇದಕ್ಕೆ ಕಾರಣ. ಆಟೊಮೋಟಿವ್ ಸೆಕ್ಟರ್ ಜಾಗತಿಕವಾಗಿ ಈಗ ಹಿನ್ನಡೆ ಎದುರಿಸುತ್ತಿದೆ. ಎರಡನೆಯದಾಗಿ ಮ್ಯೂಚುವಲ್ ಫಂಡ್‌ಗಳು ಈ ಕಂಪನಿಯಲ್ಲಿ ಹೂಡಿಕೆಯನ್ನು ಕಡಿತಗೊಳಿಸಿವೆ.
ಎಬಿಬಿ ಇಂಡಿಯಾ ABB India
ಷೇರಿನ ಈಗಿನ ದರ: 5,602 ರೂ.
1 ವರ್ಷದ ಹಿಂದಿನ ದರ: 8,080 ರೂ.
ಎಷ್ಟು ಅಗ್ಗವಾಗಿದೆ ?: 31%
ಟಾರ್ಗೆಟ್ ದರ: 6,851 ರೂ. ( ಪ್ರಭುದಾಸ್ ಲೀಲಾಧರ್ ವರದಿ)
ಎಂಜಿನಿಯರಿಂಗ್ ವಲಯದ ಎಬಿಬಿ ಇಂಡಿಯಾ ಕಂಪನಿಯು ಎಲೆಕ್ಟ್ರಿಫಿಕೇಶನ್ ಮತ್ತು ಆಟೊಮೇಶನ್ ಟೆಕ್ನಾಲಜಿ ಸೇವೆಯನ್ನು ನೀಡುತ್ತದೆ. ಸ್ವಿಡಿಶ್ ಮೂಲದ ಎಬಿಬಿ ಲಿಮಿಟೆಡ್‌ನ ಸಬ್ಸಿಡರಿ ಕಂಪನಿ ಇದಾಗಿದೆ. ಕಂಪನಿಯ ಆಡಳಿತ ಮಂಡಳಿಯು ಕಾಶಿಯಸ್ ಔಟ್‌ಲುಕ್ ಅನ್ನು ಕೊಟ್ಟಿರುವುದು ಮತ್ತು ಎಫ್‌ಐಐ ಹೂಡಿಕೆಯಲ್ಲಿ ಹಿಂತೆಗೆತ ಉಂಟಾಗಿರುವುದೇ ಎಬಿಬಿ ಇಂಡಿಯಾ ಷೇರಿನ ದರ ಇಳಿಕೆಗೆ ಕಾರಣವಾಗಿದೆ. ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ ಕಂಪನಿಯು 474 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. 3% ಏರಿಕೆ ದಾಖಲಿಸಿದೆ.
ಅದಾನಿ ಟೋಟಲ್ ಗ್ಯಾಸ್ Adani Total Gas
ಷೇರಿನ ಈಗಿನ ದರ: 655 ರೂ.
1 ವರ್ಷದ ಹಿಂದಿನ ದರ: 916 ರೂ.
ಇಳಿಕೆ ಎಷ್ಟು?: 28%
ಟಾರ್ಗೆಟ್ ದರ: 1,106 ರೂ. (ಟ್ರೆಂಡ್ ಲೈನ್ ವರದಿ)
ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಬಿಸಿನೆಸ್ ಮತ್ತು ನೇಚ್ಯುರಲ್ ಗ್ಯಾಸ್ ವಲಯದಲ್ಲಿ ವಹಿವಾಟು ನಡೆಸುತ್ತಿದೆ. ಅದಾನಿ ಟೋಟಲ್ ಗ್ಯಾಸ್ ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ 155 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. 1,453 ಕೋಟಿ ರೂ. ಆದಾಯ ಗಳಿಸಿದೆ. ಭವಿಷ್ಯದಲ್ಲಿ ಸಿಎನ್‌ಜಿ, ಎಲ್ ಎನ್‌ಜಿ ಮೂಲಸೌಕರ್ಯ, ಇವಿ ಚಾರ್ಜಿಂಗ್ ಸ್ಟೇಶನ್ ವಲಯದಲ್ಲಿ ಬಿಸಿನೆಸ್ ವಿಸ್ತರಿಸುವ ಉದ್ದೇಶವನ್ನು ಕಂಪನಿ ಹೊಂದಿದೆ.
ಐಆರ್‌ಸಿಟಿಸಿ IRCTC
ಷೇರಿನ ಈಗಿನ ದರ: 777 ರೂ.
1 ವರ್ಷದ ಹಿಂದಿನ ದರ: 1,025 ರೂ.
ಇಳಿಕೆ ಎಷ್ಟು?: 25%
ಟಾರ್ಗೆಟ್ ದರ: 900 ರೂ. (ಟ್ರೇಡಿಂಗ್ ವ್ಯೂ)
ಇಂಡಿಯನ್ ರೈಲ್ವೆ ಕೇಟರಿಂಗ್ & ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ ಅಥವಾ IRCTC, 2019ರಲ್ಲಿ ಲಿಸ್ಟ್ ಆಗಿರುವ ಮೊನೊಪಲಿ ಷೇರಾಗಿದೆ. ಆನ್‌ಲೈನ್ ರೈಲ್ವೆ ಟಿಕೆಟ್‌ಗಳನ್ನು ವಿತರಿಸುವ ರೈಲ್ವೆಯ ಏಕೈಕ ಅಧಿಕೃತ ಸಂಸ್ಥೆಯಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಇದರದ್ದೇ ಏಕಸ್ವಾಮ್ಯ ಇದೆ. ಎಲ್ಲ ರೈಲ್ವೆ ಸ್ಟೇಶನ್‌ಗಳಲ್ಲಿ ಪ್ಯಾಕೇಜ್ಡ್ ಡ್ರೀಂಕಿಂಗ್ ವಾಟರ್ ಅನ್ನೂ ಕೊಡುತ್ತದೆ. ಸಾಂಸ್ಥಿಕ ಹೂಡಿಕೆಯ ಇಳಿಕೆಯಿಂದ ಷೇರು ದರ ಕಳೆದ ಒಂದು ವರ್ಷದಿಂದ ತಗ್ಗಿತ್ತು. ಆದರೆ ಫಂಡಮೆಂಟಲ್ ಆಗಿ ಉತ್ತಮ ಷೇರಾಗಿದೆ.
ಫಂಡಮೆಂಟಲ್ ಆಗಿ ಒಳ್ಳೆಯ ಷೇರುಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡುವುದು ಸ್ಮಾರ್ಟ್ ನಡೆ ಎನ್ನಬಹುದು. ಇದು ನಿಮ್ಮ ಸಂಪತ್ತನ್ನು ವೃದ್ಧಿಸುತ್ತದೆ. ಹೈ ಕ್ವಾಲಿಟಿ ಷೇರುಗಳನ್ನು ಖರೀದಿಸಬಹುದು. ಶಾರ್ಟ್ ಟರ್ಮ್ ಮಾರ್ಕೆಟ್ ಡಿಕ್ಲೇನ್ ಇದ್ದಾಗ ಖರೀದಿಸಬಹುದು. ಈಗ ಅಂಥ ಅವಕಾಶ ಬಂದೊದಗಿದೆ.
ಹೂಡಿಕೆದಾರರು ಕಂಪನಿಯ ಫಂಡಮೆಂಟಲ್ಸ್, ಕಾರ್ಪೊರೇಟ್ ಗವರ್ನೆನ್ಸ್, ಷೇರುಗಳ ಮೌಲ್ಯವನ್ನು ಅರಿತು ಹೂಡಿಕೆ ಮಾಡಿದರೆ ಲಾಭ ನಿಶ್ಚಿತ ಎನ್ನುತ್ತಾರೆ ತಜ್ಞರು.