ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 world cup final 2026: ಫೈನಲ್‌ ಪಂದ್ಯಕ್ಕೆ ಮಳೆ ಬಂದರೆ, ಟೈಗೊಂಡರೆ ಏನು ಗತಿ? ನಿಯಮ ಏನು ಹೆಳುತ್ತದೆ?

IND vs NZ T20 world cup final: ಒಂದೊಮ್ಮೆ ಪಂದ್ಯ ಟೈಗೊಂಡರೆ ಸೂಪರ್‌ ಓವರ್‌ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಸೂಪರ್‌ ಓವರ್‌ ಕೂಡ ಟೈಗೊಂಡರೆ ಫಲಿತಾಂಶ ಬರುವ ತನಕ ಸೂಪರ್‌ ಓವರ್‌ ಆಡಿಸಲಾಗುತ್ತದೆ.

ಫೈನಲ್‌ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೆಳುತ್ತದೆ?

t20 world cup final rain rules -

Abhilash BC
Abhilash BC Mar 7, 2026 12:26 PM

ಅಹಮದಾಬಾದ್‌, ಮಾ.7: ಕಳೆದ ಒಂದು ತಿಂಗಳಿನಿಂದ ಕ್ರಿಕೆಟ್‌ ಪ್ರಿಯರಿಗೆ ಮನರಂಜನೆ ನೀಡಿದ ಐಸಿಸಿ ಟಿ20 ವಿಶ್ವಕಪ್‌ 2026(T20 world cup final 2026) ಅಂತಿಮ ಹಂತ್ಕೆ ಬಂದಿದೆ. ಭಾನುವಾರ(ಮಾ.8) ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌(IND vs NZ T20 world cup final) ತಂಡಗಳು ಆಡಲಿವೆ. ಭಾರತ-ಶ್ರೀಲಂಕಾ ಆತಿಥ್ಯದ ಈ ವಿಶ್ವಕಪ್‌ನಲ್ಲಿ ಕೆಲವು ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿತ್ತು. ಭಾರತದಲ್ಲಿ ನಡೆದ ಪಂದ್ಯಗಳಿಗೆ ಇದುವರೆಗೂ ಮಳೆ ಭೀತಿ ಎದುರಾಗದಿದ್ದರೂ ಫೈನಲ್‌ ಪಂದ್ಯದ ಮಳೆ ನಿಯಮ(t20 world cup final rain rules) ಹೇಗಿದೆ ಎಂಬ ವರದಿ ಇಲ್ಲಿದೆ.

ಫೈನಲ್‌ ಪಂದ್ಯಕ್ಕೆ ಮೀಸಲು ದಿನವೂ ಇದೆ. ಅಲ್ಲೂ ಮಳೆ ಸುರಿದರೆ ಪಂದ್ಯ ರದ್ದಾದರೆ ಜಂಟಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಇದರ ನಡುವೆ ಪಂದ್ಯದ ಫಲಿತಾಂಶ ನಿರ್ಧರಿಸಲು ಹಲವು ಲೆಕ್ಕಾಚಾರಗಳಿವೆ.

  1. ಮಳೆ ಅಥವಾ ಇನ್ನಿತರ ಕಾರಣದಿಂದ ಭಾನುವಾರ ನಿಗದಿತ ಅವಧಿಯಲ್ಲಿ ಪಂದ್ಯ ಮುಗಿಯದೇ ಹೋದರೆ, ಹೆಚ್ಚುವರಿ 3 ಗಂಟೆ 15 ನಿಮಿಷ ನೀಡಲಾಗುತ್ತದೆ, ಆ ಅವಧಿಯಲ್ಲಿ ಪಂದ್ಯ ಮುಗಿಯಲೇಬೇಕು.
  2. ಮಳೆಯಡ್ಡಿ ಕಾರಣ ಪಂದ್ಯ ತಡವಾದರೆ, ಫಲಿತಾಂಶ ಬರಲು ಎರಡೂ ತಂಡಗಳು ಕನಿಷ್ಠ 10 ಓವರ್‌ಗಳನ್ನು ಆಡಿರಲೇಬೇಕು. ಇಲ್ಲವಾದರೆ ಪಂದ್ಯವನ್ನು ರದ್ದು ಎಂದು ಘೋಷಿಸಲಾಗುತ್ತದೆ.
  3. ಒಂದು ವೇಳೆ ನಿಗದಿತ ದಿನವಾದ ಭಾನುವಾರ ಏನೂ ಆಟ ನಡೆಯದೇ ಹೋದರೆ ಅಥವಾ 2ನೇ ಬ್ಯಾಟಿಂಗ್‌ ಮಾಡಿದ ತಂಡಕ್ಕೆ ಕನಿಷ್ಠ 10 ಓವರ್‌ ಆಡಲು ಆಗದೇ ಇದ್ದರೆ. ಮೀಸಲು ದಿನಕ್ಕೆ ಪಂದ್ಯ ಮುಂದೂಡಲ್ಪಡುತ್ತದೆ.
  4. ಮೀಸಲು ದಿನದಂದು ಹಿಂದಿನ ಪಂದ್ಯ ಎಲ್ಲಿಗೆ ನಿಂತಿತ್ತೋ ಅಲ್ಲಿಂದ ಮುಂದುವರಿಯುತ್ತದೆ.
  5. ಮೀಸಲು ದಿನವೂ ಫಲಿತಾಂಶ ಬಾರದೇ ಹೋದರೆ, ತಲಾ ಒಂದು ಓವರ್‌ಗಳ ಸೂಪರ್‌ ಓವರ್‌ ಆಡಿಸಸಲಾಗುತ್ತದೆ. ಅದೂ ಕೂಡ ಸಾಧ್ಯವಾಗದಿದ್ದರೆ ಇತ್ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಟಿ20 ವಿಶ್ವಕಪ್‌ ಫೈನಲ್‌ ತನಕ ಭಾರತ ನಡೆದು ಬಂದು ಹಾದಿ ಹೀಗಿದೆ

ಪಂದ್ಯ ಟೈಗೊಂಡರೆ

ಒಂದೊಮ್ಮೆ ಪಂದ್ಯ ಟೈಗೊಂಡರೆ ಸೂಪರ್‌ ಓವರ್‌ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಸೂಪರ್‌ ಓವರ್‌ ಕೂಡ ಟೈಗೊಂಡರೆ ಫಲಿತಾಂಶ ಬರುವ ತನಕ ಸೂಪರ್‌ ಓವರ್‌ ಆಡಿಸಲಾಗುತ್ತದೆ. ಹಾಲಿ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಣ ಲೀಗ್‌ ಪಂದ್ಯ ಎರಡು ಸೂಪರ್‌ ಓವರ್‌ ಕಂಡಿತ್ತು.