ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: FII ಮತ್ತು DII ಖರೀದಿಸಿದ 5 ಪೆನ್ನಿ ಸ್ಟಾಕ್ಸ್; 100 ರುಪಾಯಿಗಿಂತಲೂ ಅಗ್ಗ!

ಪೆನ್ನಿ ಸ್ಟಾಕ್ಸ್‌ಗಳನ್ನು ಸ್ಟಾಕ್‌ ಮಾರುಕಟ್ಟೆಯ ಅಂಡರ್‌ ಡಾಗ್ಸ್‌ ಎಂದು ಕರೆಯುತ್ತಾರೆ. ಕಡಿಮೆ ದರದ ಷೇರುಗಳಿವು, ಇವುಗಳಲ್ಲಿ ರಿಸ್ಕ್‌ ಇದ್ದರೂ, ಇವುಗಳ ಪೊಟೆನ್ಷಿಯಲ್‌ ಕೂಡ ಹೆಚ್ಚು. ಇವುಗಳ ದರ 100 ರುಪಾಯಿಗಿಂತಲೂ ಅಗ್ಗವಾಗಿದೆ ಎಂದು ತಿಳಿದು ಬಂದಿದೆ.

FII ಮತ್ತು DII ಖರೀದಿಸಿದ 5 ಪೆನ್ನಿ ಸ್ಟಾಕ್ಸ್

Profile Vishakha Bhat May 6, 2025 7:00 AM

ಕೇಶವ ಪ್ರಸಾದ.ಬಿ

ಮುಂಬೈ: ಪೆನ್ನಿ ಸ್ಟಾಕ್ಸ್‌ಗಳನ್ನು ಸ್ಟಾಕ್‌ ಮಾರುಕಟ್ಟೆಯ ಅಂಡರ್‌ ಡಾಗ್ಸ್‌ ಎಂದು ಕರೆಯುತ್ತಾರೆ. ಕಡಿಮೆ ದರದ ಷೇರುಗಳಿವು, ಇವುಗಳಲ್ಲಿ ರಿಸ್ಕ್‌ ಇದ್ದರೂ, ಇವುಗಳ ಪೊಟೆನ್ಷಿಯಲ್‌ ಕೂಡ ಹೆಚ್ಚು. ಇವುಗಳ ದರ 100 ರುಪಾಯಿಗಿಂತಲೂ ಅಗ್ಗ. ಇತ್ತೀಚೆಗೆ ಎಫ್‌ಐಐ ಅಥವಾ ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ ಮತ್ತು ಡಿಐಐ ಅಥವಾ ಡೊಮೆಸ್ಟಿಕ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿರುವ 5 ಪೆನ್ನಿ ಸ್ಟಾಕ್ಸ್‌ಗಳ ಬಗ್ಗೆ ತಿಳಿದುಕೊಳ್ಳೋಣ.

ಪೆನ್ನಿ ಸ್ಟಾಕ್ಸ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಒಂದೋ ಭಾರಿ ಲಾಭ ಸಿಗಬಹುದು ಇಲ್ಲ ನಷ್ಟ ಕೂಡ ಆಗಬಹುದು.

ಪೆನ್ನಿ ಸ್ಟಾಕ್ಸ್‌ಗಳಲ್ಲಿ ಕ್ವಿಕ್‌ ಪ್ರಾಫಿಟ್‌ ಮಾಡಬೇಕು ಎಂದು ಬಯಸುವವರು ಒಂದು ನಿಯಮವನ್ನು ಅಥವಾ ಸೂತ್ರವನ್ನು ಪಾಲಿಸುತ್ತಾರೆ. ಅದು ಏನೆಂದರೆ, ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ ಅಥವಾ ಎಫ್‌ಐಐಗಳು ಹಾಗೂ ಡೊಮೆಸ್ಟಿಕ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ ಅಥವಾ ಡಿಐಐಗಳು ಯಾವ ಪೆನ್ನಿ ಸ್ಟಾಕ್ಸ್‌ಗಳಲ್ಲಿ ಹೂಡಿಕೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಾರೆ. ಏಕೆಂದರೆ ಅವರು ಷೇರುಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಹೂಡಿಕೆ ಮಾಡುತ್ತಾರೆ ಎಂಬ ವಿಶ್ವಾಸ.

2025ರ ಮಾರ್ಚ್‌ನಲ್ಲಿ ಎಫ್‌ಐಐಗಳು ನೆಟ್‌ ಬೈಯರ್ಸ್‌ ಆಗಿದ್ದರು. ಕಳೆದ ಹನ್ನೊಂದು ತಿಂಗಳಿನ ಬಳಿಕ ಟ್ರೆಂಡ್‌ ರಿವರ್ಸ್‌ ಆಗಿತ್ತು. ಎಫ್‌ಐಐಗಳು ಮತ್ತೆ ಷೇರು ಮಾರುಕಟ್ಟೆಯತ್ತ ಮರಳುತ್ತಿದ್ದಾರೆ. ಜತೆಗೆ ಪೆನ್ನಿ ಸ್ಟಾಕ್ಸ್‌ಗಳಲ್ಲಿಯೂ ಹೂಡಿಕೆಯನ್ನು ಮಾಡುತ್ತಿದ್ದಾರೆ. ಅಂಥ 5 ಸ್ಟಾಕ್ಸ್‌ಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

  1. ಯುಕೊ ಬ್ಯಾಂಕ್‌

Uco Bank

ಷೇರಿನ ಈಗಿನ ದರ : 31 ರುಪಾಯಿ

2020ರಲ್ಲಿ ದರ : 11 ರುಪಾಯಿ

ಏರಿಕೆ : 164%

ಮಾರ್ಕೆಟ್‌ ಕ್ಯಾಪ್‌ : 39,000 ಕೋಟಿ ರುಪಾಯಿ

52 wk high : 62/-

52 wk low : 27/-

2025 ಜನವರಿ-ಮಾರ್ಚ್‌ನಲ್ಲಿ ನಿವ್ವಳ ಲಾಭ: 526 ಕೋಟಿ ರು.

ಯುಕೊ ಬ್ಯಾಂಕ್‌ ಮಧ್ಯಮ ಗಾತ್ರದ ಸಾರ್ವಜನಿಕ ವಲಯದ ಬ್ಯಾಂಕ್‌ ಆಗಿದ್ದು, ಕೋಲ್ಕತಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 1943ರಲ್ಲಿಯೇ ಸ್ಥಾಪನೆಯಾಗಿದ್ದ ಹಳೆಯ ಬ್ಯಾಂಕ್‌ ಇದು. 3,230 ಶಾಖೆಗಳನ್ನು ಒಳಗೊಂಡಿದೆ. 2024ರಲ್ಲಿ 25,119 ಕೋಟಿ ರುಪಾಯಿ ಆದಾಯ ಗಳಿಸಿತ್ತು. 21,461 ಉದ್ಯೋಗಿಗಳನ್ನು ಹೊಂದಿದೆ. ಬ್ಯಾಂಕಿಂಗ್‌ ಮತ್ತು ಫೈನಾನ್ಷಿಯಲ್‌ ಸರ್ವೀಸ್‌ ಅನ್ನು ಒದಗಿಸುತ್ತದೆ.

ರಿಟೇಲ್‌ ಬ್ಯಾಂಕಿಂಗ್‌, ಕಾರ್ಪೊರೇಟ್‌ ಬ್ಯಾಂಕಿಂಗ್‌ ಮತ್ತು ಟ್ರೆಶರಿ ಆಪರೇಷನ್ಸ್‌ಗಳನ್ನು ನಡೆಸುತ್ತಿದೆ. ವಿದೇಶಗಳಲ್ಲೂ ಮೂರು ಶಾಖೆಗಳನ್ನು ಒಳಗೊಂಡಿದೆ. 2,473 ಎಟಿಎಂ ನೆಟ್‌ ವರ್ಕ್‌ ಇದೆ. ಡಿಐಐಗಳ ಷೇರು ಖರೀದಿಯು 4.03%ರಿಂದ 5.36%ಕ್ಕೆ ಏರಿಕೆಯಾಗಿದೆ. ಅಂದ್ರೆ 1.33% ಹೆಚ್ಚಳವಾಗಿದೆ. ಎಲ್‌ಐಸಿ, ಬ್ಯಾಂಕ್‌ಗಳು ಮತ್ತು ಇತರ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ ಯುಕೊ ಬ್ಯಾಂಕ್‌ ಷೇರುಗಳಲ್ಲಿ ಇತ್ತೀಚೆಗೆ ಹೂಡಿಕೆ ಮಾಡಿರುವುದು ಇದಕ್ಕೆ ಕಾರಣ. ಎಫ್‌ಐಐ ಓನರ್‌ಶಿಪ್‌ನಲ್ಲೂ 0.42% ಹೆಚ್ಚಳವಾಗಿದೆ.

ಯುಕೊ ಬ್ಯಾಂಕ್‌ ತನ್ನ ಅಸೆಟ್‌ ಕ್ವಾಲಿಟಿಯನ್ನು ಸುಧಾರಿಸಲು ಯತ್ನಿಸುತ್ತಿದೆ. ಲೋ ಕಾಸ್ಟ್‌ ಡೆಪಾಸಿಟ್‌ಗಳು ಮತ್ತು ರಿಟೇಲ್‌ ಟರ್ಮ್‌ ಡೆಪಾಸಿಟ್‌ಗಳ ಸಂಗ್ರಹವನ್ನು ಹೆಚ್ಚಿಸಲು ಆದ್ಯತೆ ನೀಡಿದೆ. ಬಲ್ಕ್‌ ಡೆಪಾಸಿಟ್‌ ಅಥವಾ ಫಿಕ್ಸೆಡ್‌ ಡೆಪಾಸಿಟ್‌ಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಮುಂದಾಗಿದೆ. ಜತೆಗೆ ಅಗ್ರಿ ಗೋಲ್ಡ್‌ ಲೋನ್‌ ಮತ್ತು ತೋಟಗಾರಿಕಾ ಸಾಲ ವಿತರಣೆಯನ್ನು ಹೆಚ್ಚಿಸಲು ನಿರ್ಧರಿಸಿದೆ. 2025-26ರಲ್ಲಿ 12-14% ಕ್ರೆಡಿಟ್‌ ಗ್ರೋತ್‌ ಟಾರ್ಗೆಟ್‌ ಅನ್ನು ಬ್ಯಾಂಕ್‌ ನಿಗದಿಪಡಿಸಿದೆ. 2025ರ ಜನವರಿ-ಮಾರ್ಚ್‌ ಅವಧಿಯಲ್ಲಿ ಯುಕೊ ಬ್ಯಾಂಕ್‌ 526 ಕೋಟಿ ರುಪಾಯಿಗಳ ನಿವ್ವಳ ಲಾಭ ಗಳಿಸಿದೆ. 24% ಏರಿಕೆ ದಾಖಲಿಸಿದೆ.

  1. ಪಂಜಾಬ್‌ ಆಂಡ್‌ ಸಿಂಧ್‌ ಬ್ಯಾಂಕ್‌

Punjab and Sind Bank

ಷೇರಿನ ಈಗಿನ ದರ : 29 ರುಪಾಯಿ

2020ರಲ್ಲಿ ದರ : 14 ರುಪಾಯಿ

ಏರಿಕೆ : 114 %

ಮಾರ್ಕೆಟ್‌ ಕ್ಯಾಪ್‌ : 20,000 ಕೋಟಿ ರುಪಾಯಿ

52 wk high : 73/-

52 wk low : 25/-

2025 ಜನವರಿ-ಮಾರ್ಚ್‌ನಲ್ಲಿ ನಿವ್ವಳ ಲಾಭ: 312 ಕೋಟಿ ರು.

ಪಂಜಾಬ್‌ ಆಂಡ್‌ ಸಿಂಧ್‌ ಬ್ಯಾಂಕ್‌ ಶತಮಾನಗಳ ಇತಿಹಾಸ ಇರುವ ಸಾರ್ವಜನಿಕ ವಲಯದ ಬ್ಯಾಂಕ್.‌ ದಿಲ್ಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 1908ರಲ್ಲಿ ಸ್ಥಾಪನೆಯಾದ ಈ ಬ್ಯಾಂಕ್‌ 2024ರಲ್ಲಿ 10,915 ಕೋಟಿ ರುಪಾಯಿ ಆದಾಯ ಗಳಿಸಿತ್ತು. 1610 ಶಾಖೆಗಳನ್ನು ಒಳಗೊಂಡಿದೆ. ಕನ್‌ಸ್ಯೂಮರ್‌ ಬ್ಯಾಂಕಿಂಗ್, ಕಾರ್ಪೊರೇಟ್‌ ಬ್ಯಾಂಕಿಂಗ್‌, ಫೈನಾನ್ಸ್‌ ಆಂಡ್‌ ಇನ್ಷೂರೆನ್ಸ್‌, ಇನ್ವೆಸ್ಟ್‌ ಮೆಂಟ್‌ ಬ್ಯಾಂಕಿಂಗ್‌, ಮೋರ್ಟ್‌ಗೇಜ್‌ ಲೋನ್‌, ವೆಲ್ತ್‌ ಮ್ಯಾನೇಜ್‌ಮೆಂಟ್‌ ಸೇವೆಯನ್ನು ಒದಗಿಸುತ್ತದೆ. ಜನವರಿ-ಮಾರ್ಚ್‌ ಅವಧಿಯಲ್ಲಿ ಬ್ಯಾಂಕ್‌ 312 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. 124% ಏರಿಕೆಯಾಗಿತ್ತು.

ಪಂಜಾಬ್‌ ಆಂಡ್‌ ಸಿಂಧ್‌ ಬ್ಯಾಂಕ್‌ನಲ್ಲಿ ಡಿಐಐಗಳು 3.67% ಷೇರುಗಳನ್ನು ಖರೀದಿಸಿದ್ದಾರೆ. ಎಫ್‌ಐಐ ಓನರ್‌ಶಿಪ್‌ ನಲ್ಲಿ .7% ಏರಿಕೆ ಆಗಿದೆ.

ಈ ಬ್ಯಾಂಕ್‌ ಮತ್ತಷ್ಟು ಹೊಸ ಬ್ರ್ಯಾಂಚ್‌ಗಳನ್ನು ಆರಂಭಿಸಲು ನಿರ್ಧರಿಸಿದೆ. ಅಸೆಟ್‌ ಕ್ವಾಲಿಟಿ ಹೆಚ್ಚಿಸಲು ಗಮನ ಹರಿಸಿದೆ. ರಿಟೇಲ್‌, ಅಗ್ರಿ, ಎಂಎಸ್‌ ಎಂಇ ಕೆಟಗರಿಗಳಲ್ಲಿ ಸಾಲ ವಿತರಣೆ ಹೆಚ್ಚಿಸಲು ಉದ್ದೇಶಿಸಿದೆ.

  1. ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ

Central Bank of India

ಷೇರಿನ ಈಗಿನ ದರ : 37 ರುಪಾಯಿ

2020ರಲ್ಲಿ ದರ : 15 ರುಪಾಯಿ

ಏರಿಕೆ : 148 %

ಮಾರ್ಕೆಟ್‌ ಕ್ಯಾಪ್‌ : 33,000 ಕೋಟಿ ರುಪಾಯಿ

52 wk high : 73/-

52 wk low : 34/-

2025 ಜನವರಿ-ಮಾರ್ಚ್‌ನಲ್ಲಿ ನಿವ್ವಳ ಲಾಭ: 1,034 ಕೋಟಿ ರೂ.

ಮುಂಬಯಿ ಮೂಲದ ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ಶತಮಾದ ಇತಿಹಾಸವಿರುವ ಸಾರ್ವಜನಿಕ ವಲಯದ ಬ್ಯಾಂಕ್.‌ 31 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಒಳಗೊಂಡಿದೆ. 4545 ಬ್ರ್ಯಾಂಚ್‌ಗಳನ್ನು ಒಳಗೊಂಡಿದೆ. 4,085 ಎಟಿಎಂಗಳನ್ನು ಹೊಂದಿದೆ. ರಿಟೇಲ್‌, ಅಗ್ರಿ, ಕಾರ್ಪೊರೇಟ್‌, ಎಂಎಸ್‌ಎಂಇ ಸಾಲಗಳನ್ನು ನೀಡುತ್ತದೆ. ಡಿಐಐ ಓನರ್‌ಶಿಪ್‌ 5.87%ಕ್ಕೆ ಏರಿಕೆಯಾಗಿದೆ. ಹಲವು ಮ್ಯೂಚುವಲ್‌ ಫಂಡ್‌ಗಳು ಇದರಲ್ಲಿ ಹೂಡಿಕೆ ಮಾಡಿರುವುದು ಇದಕ್ಕೆ ಕಾರಣ. 2025-26ರಲ್ಲಿ 12% ಬಿಸಿನೆಸ್‌ ಗ್ರೋತ್‌ ನಿರೀಕ್ಷಿಸಲಾಗಿದೆ.

  1. ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌

Ujjivan Small Finance Bank

ಷೇರಿನ ಈಗಿನ ದರ : 41 ರುಪಾಯಿ

2020ರಲ್ಲಿ ದರ : 26 ರುಪಾಯಿ

ಏರಿಕೆ : 56 %

ಮಾರ್ಕೆಟ್‌ ಕ್ಯಾಪ್‌ : 8000 ಕೋಟಿ ರುಪಾಯಿ

52 wk high : 55/-

52 wk low : 30/-

2025 ಜನವರಿ-ಮಾರ್ಚ್‌ನಲ್ಲಿ ನಿವ್ವಳ ಲಾಭ: 83 ಕೋಟಿ ರೂ.

ಬೆಂಗಳೂರು ಮೂಲದ ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ 2017ರಲ್ಲಿ ಆರಂಭವಾದ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಆಗಿದೆ. 24 ರಾಜ್ಯಗಳಲ್ಲಿ 753 ಬ್ರ್ಯಾಂಚ್‌ಗಳನ್ನು ಒಳಗೊಂಡಿದೆ. ಗೃಹ ಸಾಲ, ಎಂಎಸ್‌ಎಂಇ ಸಾಲ, ಸ್ಮಾಲ್‌ ಬಿಸಿನೆಸ್‌ ಲೋನ್‌, ವಾಹನ ಸಾಲ ಹೀಗೆ ನಾನಾ ವಿಧದ ಸಾಲಗಳನ್ನು ಬ್ಯಾಂಕ್‌ ನೀಡುತ್ತಿದೆ. ಡಿಐಐ ಓನರ್ ಶಿಪ್‌ 8.47% ಕ್ಕೆ ಏರಿಕೆಯಾಗಿದೆ. ಎಫ್‌ಐಐಗಳು 1.64% ಷೇರುಗಳನ್ನು ಹೊಂದಿದ್ದಾರೆ.

  1. ಎಸ್‌ಬಿಎಫ್‌ಸಿ ಫೈನಾನ್ಸ್‌

SBFC Finance

ಷೇರಿನ ಈಗಿನ ದರ : 98 ರುಪಾಯಿ

2024ರಲ್ಲಿ ದರ : 83 ರುಪಾಯಿ

ಏರಿಕೆ : 18 %

ಮಾರ್ಕೆಟ್‌ ಕ್ಯಾಪ್‌ : 10,000 ಕೋಟಿ ರುಪಾಯಿ

52 wk high : 109/-

52 wk low : 78/-

ಈ ಸುದ್ದಿಯನ್ನೂ ಓದಿ: Stock Market: ಭಾರತ-ಪಾಕಿಸ್ತಾನ ಟೆನ್ಷನ್ಸ್‌; ಡಿಫೆನ್ಸ್‌ ಸ್ಟಾಕ್ಸ್‌ ಅಬ್ಬರ, ಈ 4 ಕಂಪನಿಗಳಲ್ಲಿ ಹೂಡಿದ್ರೆ ಲಾಭ ಆಗುತ್ತಾ?

2008ರಲ್ಲಿ ಸ್ಥಾಪನೆಯಾದ ಎಸ್‌ಬಿಎಫ್‌ಸಿ ಫೈನಾನ್ಸ್‌ ಸಂಸ್ಥೆಯು ಎಂಎಸ್‌ಎಂಇ ಸಾಲ ಹಾಗೂ ಚಿನ್ನದ ಅಡಮಾನದ ಆಧಾರದಲ್ಲಿ ಸಾಲವನ್ನು ಕೊಡುತ್ತದೆ. 205 ಶಾಖೆಗಳನ್ನು ಒಳಗೊಂಡಿದೆ. ಈ ಬ್ಯಾಂಕ್‌ನಲ್ಲಿ ಎಫ್‌ಐಐ ಓನರ್‌ಶಿಪ್‌ 1.61%ಕ್ಕೆ ಏರಿಕೆಯಾಗಿದೆ.