Murder Case: ತಮ್ಮನಿಗೆ ನಿಶ್ಚಯವಾದ ಹುಡುಗಿ ಮೇಲೆ ದುರಾಸೆ, ಕಲ್ಲೆತ್ತಿ ಹಾಕಿ ಕೊಂದ ಅಣ್ಣ!
ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯನ್ನು ತಾನೇ ಮದುವೆಯಾಗಬೇಕು ಎಂದು ಅಶೋಕ್ ಬಯಸಿದ್ದಾನೆ ಎನ್ನಲಾಗಿದೆ. ಇದೇ ವಿಚಾರದಿಂದ ಸಹೋದರರ ನಡುವೆ ಮನಸ್ತಾಪ ಉಂಟಾಗಿದ್ದು, ಕೋಪದ ಹೊತ್ತಿನಲ್ಲಿ ಅಶೋಕ್ ತನ್ನ ತಮ್ಮನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
-
ಗದಗ, ಮಾ.18: ಗದಗ (gadag news) ಜಿಲ್ಲೆಯ ನರಗುಂದ (Naragund) ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಮದುವೆ (Marriage) ವಿಚಾರವೇ ಭೀಕರ ಕೊಲೆಗೆ (Murder Case) ಕಾರಣವಾಗಿರುವ ಘಟನೆ ಬೆಳಕಿಗೆ ಬಂದಿದೆ. ತಮ್ಮನಿಗೆ ನಿಶ್ಚಯವಾಗಿದ್ದ ಯುವತಿಯ ವಿಚಾರಕ್ಕೆ ಅಣ್ಣನಲ್ಲೇ ಅಸಹನೆ ಹುಟ್ಟಿದ್ದು, ಅದೇ ಕೊನೆಗೆ ತಮ್ಮನ ಜೀವ ಕಸಿದುಕೊಂಡಿದೆ.
ಮೃತ ಯುವಕನನ್ನು ಫಕ್ಕೀರಪ್ಪ (19) ಎಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಕ್ಕಮೊಲಂಗಿ ಗ್ರಾಮದ ನಿವಾಸಿಯಾಗಿದ್ದ ಫಕ್ಕೀರಪ್ಪ ತನ್ನ ಅಣ್ಣ ಅಶೋಕ್ ಜೊತೆ ಹಿರೇಕೊಪ್ಪ ಗ್ರಾಮಕ್ಕೆ ಕುರಿ ಮೇಯಿಸಲು ಬಂದಿದ್ದನು.
ಇವರಿಬ್ಬರು ಕುರಿದೊಡ್ಡಿಯಲ್ಲಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯನ್ನು ತಾನೇ ಮದುವೆಯಾಗಬೇಕು ಎಂದು ಅಶೋಕ್ ಬಯಸಿದ್ದಾನೆ ಎನ್ನಲಾಗಿದೆ. ಇದೇ ವಿಚಾರದಿಂದ ಸಹೋದರರ ನಡುವೆ ಮನಸ್ತಾಪ ಉಂಟಾಗಿದ್ದು, ಕೋಪದ ಹೊತ್ತಿನಲ್ಲಿ ಅಶೋಕ್ ತನ್ನ ತಮ್ಮನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
Murder Case: ವೈರ್‌ನಿಂದ ಕುತ್ತಿಗೆ ಬಿಗಿದು ಪ್ರಿಯತಮೆಯ ಕೊಲೆ ಮಾಡಿದ ಪ್ರಿಯಕರ
ಕೊಲೆ ಮಾಡಿದ ಬಳಿಕ ಆರೋಪಿಯು ಇತರರು ದಾಳಿ ಮಾಡಿ ಹತ್ಯೆ ಮಾಡಿರಬಹುದು ಎಂದು ಕಥೆ ಕಟ್ಟಲು ಪ್ರಯತ್ನಿಸಿದ್ದಾನೆ. ಆದರೆ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಯ ಹೇಳಿಕೆಗಳಲ್ಲಿ ಗೊಂದಲ ಕಂಡುಬಂದಿದ್ದು, ಕೊನೆಗೆ ಅಶೋಕ್‌ನ ನಿಜ ಬಣ್ಣ ಬಯಲಾಗಿದೆ.
ಈ ಘಟನೆ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ನಡೆದ ಈ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.