ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

6ನೇ ಮಹಡಿಯಿಂದ ಹಾಲುಗಲ್ಲದ ಕಂದಮ್ಮನನ್ನು ಎಸೆದ 10 ವರ್ಷದ ಬಾಲಕಿ: ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ

Crime news: 10 ವರ್ಷದ ಬಾಲಕಿಯೊಬ್ಬಳು ನೆರೆಮನೆಯ 18 ತಿಂಗಳ ಮಗುವನ್ನು ಆರನೇ ಮಹಡಿಯಿಂದ ಎಸೆದ ಆಘಾತಕಾರಿ ಘಟನೆ ಮುಂಬೈನ ಗೋರೆಗಾಂವ್‌ನಲ್ಲಿ ನಡೆದಿದೆ. ಬುಧವಾರ (ಅ.14) ರಾತ್ರಿ ಸುಮಾರು 9 ಗಂಟೆಗೆ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಬಾಲಕಿ ಮಗುವನ್ನು ಎತ್ತಿಕೊಂಡು ಆರನೇ ಮಹಡಿಯಿಂದ ಎಸೆದಿದ್ದಾಳೆ.

ಸಾಂದರ್ಭಿಕ ಚಿತ್ರ

ಮುಂಬೈ, ಅ.16: 10 ವರ್ಷದ ಬಾಲಕಿಯೊಬ್ಬಳು ನೆರೆಮನೆಯ 18 ತಿಂಗಳ ಮಗುವನ್ನು ಆರನೇ ಮಹಡಿಯಿಂದ ಎಸೆದ ಆಘಾತಕಾರಿ ಘಟನೆ ಮುಂಬೈ (Mumbai) ನ ಗೋರೆಗಾಂವ್‌ನಲ್ಲಿ ನಡೆದಿದೆ. 6ನೇ ಮಹಡಿಯಿಂದ ಬಿದ್ದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಬಾಲಕಿ ಮತ್ತು ಆಕೆಯ ತಾಯಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬುಧವಾರ (ಅ.14) ರಾತ್ರಿ ಸುಮಾರು 9 ಗಂಟೆಗೆ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ (Crime news) ಸೆರೆಯಾಗಿದೆ. ಬಾಲಕಿ ಮಗುವನ್ನು ಎತ್ತಿಕೊಂಡು ಆರನೇ ಮಹಡಿಯಿಂದ ಎಸೆದಿದ್ದಾಳೆ. ನಂತರ ಕಾರಿಡಾರ್‌ನ ಇನ್ನೊಂದು ಬದಿಗೆ ಓಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಟೋಬರ್ 1 ರಂದು ಮಗುವಿನ ಪೋಷಕರು ಹೊಸ ಮನೆಗೆ ಸ್ಥಳಾಂತರಗೊಂಡಿದ್ದರು. ಎರಡು ಕುಟುಂಬಗಳ ನಡುವೆ ಬೆಕ್ಕಿನ ಬಗ್ಗೆ ಮೊದಲೇ ಜಗಳಗಳಿದ್ದವು ಎನ್ನಲಾಗಿದೆ. ಆದರೆ, ನಿಖರವಾಗಿ ಏನು ವಿವಾದ ಎಂದು ಸ್ಪಷ್ಟವಾಗಿಲ್ಲ.

ಮತ್ತೊಂದೆಡೆ, 10 ವರ್ಷದ ಬಾಲಕಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾಳೆ ಎಂದು ಹೇಳಲಾಗಿದೆ. ಬಾಲಕಿಯ ಕುಟುಂಬವು ಕಠಿಣ ಕ್ರಮ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿವೆ. ಘಟನೆಯನ್ನು ಮರೆಮಾಚುವ ಉದ್ದೇಶದಿಂದ ಬಾಲಕಿಯ ಕುಟುಂಬವು ಸಿಸಿಟಿವಿ ಕ್ಯಾಮರಾಗಳನ್ನು ಆಫ್ ಮಾಡಿದೆ ಎಂದು ಮೃತ ಮಗುವಿನ ಪೋಷಕರು ಆರೋಪಿಸಿದ್ದಾರೆ.

ಸ್ಥಳೀಯ ಅಪರಾಧಗಳನ್ನು ಬಯಲಿಗೆಳೆಯುತ್ತಿದ್ದ ಮುಂಬೈನ ಯೂಟ್ಯೂಬರ್‌ ಹತ್ಯೆ

ಈ ಘಟನೆ ಬುಧವಾರ (ಅ.14) ರಾತ್ರಿ ಶಿವಶಾಹಿ ಕಟ್ಟಡದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರನೇ ಮಹಡಿಯಿಂದ ಮಗು ಬೀಳುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಮಗುವನ್ನು ಎಸೆದಿದ್ದ ಅಪ್ರಾಪ್ತ ಬಾಲಕಿ ಸ್ಥಳದಿಂದ ಓಡಿಹೋಗಿ ನಂತರ ಅದೇ ಮಹಡಿಯಲ್ಲಿ ಸೈಕಲ್ ಸವಾರಿ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.

ಪೊಲೀಸರು ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದಿದ್ದು, ಆಕೆಯ ತಾಯಿಯನ್ನು ಕೂಡ ಬಂಧಿಸಿದ್ದಾರೆ. ದಿಂಡೋಶಿ ಪೊಲೀಸರು ಅಪಘಾತ ಸಾವಿನ ವರದಿ (ಎಡಿಆರ್) ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

15 ವರ್ಷಗಳ ಪ್ರೀತಿ ಕೊಲೆಯಲ್ಲಿ ಅಂತ್ಯ

ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ತನ್ನ ಗೆಳತಿಯನ್ನು ಕೊಲೆ ಮಾಡಿದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವ ಮೂಲಕ ನಾಗ್ಪುರದ ಪೊಲೀಸರು ಒಂದು ಸಂಚಲನಕಾರಿ ಪ್ರಕರಣವನ್ನು ಭೇದಿಸಿದ್ದಾರೆ. ಮಹಿಳೆಯು ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರಿದ ನಂತರ ಆರೋಪಿಯು ಆ ಮಹಿಳೆಯನ್ನು ಕೊಂದಿದ್ದಾನೆ. ನಂತರ ಆಕೆ ಕರೆಂಟ್ ಶಾಕ್‌ನಿಂದ ಮೃತಪಟ್ಟಿದ್ದಾಳೆ ಎಂದು ಬಿಂಬಿಸಿದ್ದಾನೆ. ವಿದ್ಯುತ್ ಶಾಕ್‌ನಿಂದ ಅವಳು ಮೃತಪಟ್ಟಿದ್ದಾಳೆ ಎಂಬ ಭಾವನೆ ಮೂಡಿಸಲು ಅವನು ಆಕೆಯ ದೇಹದ ಬಳಿ ಇಮ್ಮರ್ಶನ್ ಹೀಟರ್ ಅನ್ನು ಇರಿಸಿದನು. ಆದರೆ, ಮರಣೋತ್ತರ ಪರೀಕ್ಷೆಯ ವೈದ್ಯರು ಮಹಿಳೆಯ ಸಾವು ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸಂಭವಿಸಿದೆ ಎಂದು ಬಹಿರಂಗವಾದಾಗ ಪ್ರಕರಣವು ತಿರುವು ಪಡೆದುಕೊಂಡಿತು.

ಆರೋಪಿಯನ್ನು ಜಲಗಾಂವ್ ಜಿಲ್ಲೆಯ ರಾವತ್ ತಹಸಿಲ್‌ನ ಶಿವ ಕಾಲೋನಿಯ ನಿವಾಸಿ ಜಾವೇದ್ ಶೇಖ್ ಸಾಹಿದ್ ಮನ್ನಿಯಾರ್ (35) ಎಂದು ಗುರುತಿಸಲಾಗಿದ್ದು, ಮೃತಳನ್ನು ಕವಿತಾ (35) ಎಂದು ಗುರುತಿಸಲಾಗಿದೆ.