ಮದ್ರಸಾದಲ್ಲಿ ಎಲ್ಲೆ ಮೀರಿದ ದೌರ್ಜನ್ಯ; ಕಾಲಿಗೆ ಬಿಗಿದ ಸಂಕೋಲೆ ಹೊತ್ತು ಅನ್ನ, ನೀರು ಇಲ್ಲದೆ ಅಲೆದಾಡಿದ ನಾಲ್ವರು ಬಾಲಕರು
Bihar Horror: ಬಿಹಾರದ ಮದ್ರಸಾವೊಂದರಲ್ಲಿ ಬಾಲಕರನ್ನು ಸಂಕೋಲೆಯಿಂದ ಕಟ್ಟಿ ಹಾಕಿ ದೌರ್ಜನ್ಯ ಎಸಗುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಯಿಂದ ಗಾಯಗೊಂಡ ಬಾಲಕರು ಕಾಲಿಗೆ ಕಟ್ಟಿದ ಸಂಕೋಲೆ ಸಹಿತ ಮದ್ರಸಾದಿಂದ ತಪ್ಪಿಸಿಕೊಂಡು ಹೊರ ಬಂದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ -
ಪಾಟ್ನಾ, ಜೂ. 21: ಬಿಹಾರದ ಮದ್ರಸಾವೊಂದರೊಳಗೆ ಧಾರ್ಮಿಕ ಶಿಕ್ಷಣ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ, ಕ್ರೂರ ಕೃತ್ಯ ಕಾಲಿಗೆ ಸಂಕೋಲೆ ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನಾಲ್ವರು ಅಪ್ರಾಪ್ತ ವಯಸ್ಸಿನ ಬಾಲಕರ ಮೂಲಕ ಬೆಳಕಿಗೆ ಬಂದಿದೆ. ನಿರಂತರ ಶೋಷಣೆ ಎದುರಿಸುತ್ತಿದ್ದ ಈ ಬಾಲಕರು ಅದು ಹೇಗೋ ಮದ್ರಸಾ ಮ್ಯಾನೇಜ್‌ಮೆಂಟ್‌ನ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಹೊರ ಬಂದಿದ್ದು, ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ (Bihar Horror). ಕಾಲಿಗೆ ಕಬ್ಬಿಣದ ಸಂಕೋಲೆ ಬಿಗಿದ ಸ್ಥಿತಿಯಲ್ಲಿ, ಮೈತುಂಬಾ ಗಾಯಗಳಿರುವ ಬಾಲಕರ ಸ್ಥಿತಿ ಕಂಡು ಒಂದುಕ್ಷಣ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಬಿಹಾರದ ದರ್ಬಾಂಗ್ ಜಿಲ್ಲೆಯಲ್ಲಿ ಈ ಅಮಾನುಷ ಘಟನೆ ನಡೆದಿದೆ. ನಾಲ್ವರು ಅಪ್ರಾಪ್ತ ಬಾಲಕರನ್ನು ಶೋಚನೀಯ ಸ್ಥಿತಿಯನ್ನು ಗಮನಿಸಿದ ಗ್ರಾಮಸ್ಥರು ಅವರ ಆರೈಕೆ ಮಾಡಿ ದೂರು ದಾಖಲಿಸಿದ್ದಾರೆ. ಆ ಮೂಲಕ ಮದ್ರಸಾದಲ್ಲಿ ವರ್ಷಗಳಿಂದ ನಡೆಯುತ್ತಿದ್ದ ಕರ್ಮಕಾಂಡ ಹೊರ ಜಗತ್ತಿಗೆ ಗೊತ್ತಾಗಿದೆ.
ಫರಿದಾಬಾದ್ ಅಲ್ ಪಲಾಹ್ ವಿವಿ ಪಕ್ಕದ ಮದ್ರಸಾಕ್ಕೂ ವ್ಯಾಪಿಸಿದ ದೆಹಲಿ ಬಾಂಬ್ ಸ್ಫೋಟದ ತನಿಖೆ
ಘಟನೆ ವಿವರ
ಗ್ರಾಮವೊಂದರಲ್ಲಿ ನಾಲ್ವರು ಬಾಲಕರು ಬಿಸಿಲಿನಿಂದ ಬಳಲಿ, ನೀರು, ಆಹಾರ ಇಲ್ಲದೆ ಮರವೊಂದರ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದರು. ಕಾಲಿಗೆ ಸರಪಳಿ ಬೇರೆ ಬಿಗಿದಿರುವುದನ್ನು ಗಮನಿಸಿದ ಗ್ರಾಮಸ್ಥರು ಬಾಲಕರನ್ನು ಮನೆಗೆ ಕರೆದೊಯ್ದು ನೀರು, ಆಹಾರ ನೀಡಿ ಆರೈಕೆ ಮಾಡಿದರು. ಬಳಿಕ ವಿಚಾರಿಸಿದಾಗ ಬಾಲಕರು ದರ್ಬಾಂಗ್‌ನ ಮದ್ರಸಾದಲ್ಲಿ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿವರಿಸಿದ್ದು, ಮೈಮೇಲೆ ಆಗಿರುವ ಗಾಯಗಳನ್ನೂ ತೋರಿಸಿದರು. ಕೂಡಲೇ ಗ್ರಾಮಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಮಧುಬನಿ ಜಿಲ್ಲೆಯಯವರಾದ ಈ ಬಾಲಕರು ಶಿಕ್ಷಣಕ್ಕಾಗಿ ಮದ್ರಸಾದಲ್ಲಿ ತಂಗಿದ್ದರು.
ಹೊರ ಬಂತು ಬೆಚ್ಚಿಬೀಳಿಸುವ ಅಂಶ
ದೂರು ದಾಖಲಿಸಿಕೊಂಡ ಪೊಲೀಸರು ಮದ್ರಸಾ ನಡೆಸುತ್ತಿದ್ದ ಮೌಲಾನ ಖಾದಿರ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮೌಲಾನ ಖಾದಿರ್‌ನ ಇನ್ನಷ್ಟು ಕರ್ಮಕಾಂಡ ಬೆಳಕಿಗೆ ಬಂದಿದೆ. ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿದ್ದ ಆತ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದ. ಮನಸೋಇಚ್ಛೆ ಥಳಿಸುತ್ತಿದ್ದ. ಅಲ್ಲದೆ ಮಲ-ಮೂತ್ರವನ್ನು ಬಾಲಕರ ಬರಿಗೈಯಿಂದಲೇ ಸ್ವಚ್ಛ ಮಾಡಿಸುತ್ತಿದ್ದ ಎನ್ನುವ ವಿಚಾರವೂ ಬೆಳಕಿಗೆ ಬಂದಿದೆ.
ಮದ್ರಸಾ ಬಿಟ್ಟು ಹೋಗಬಾರದೆಂದು ತಮ್ಮ ಕಾಲಿಗೆ ಸರಪಳಿ ಬಿಗಿಯುತ್ತಿದ್ದ ಎಂದೂ ಸಂತ್ರಸ್ತ ಬಾಲಕರು ತಾವು ಎದುರಿಸಿದ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಿರಂತರ ಹಲ್ಲೆಯಿಂದ ತಮ್ಮ ದೇಹದ ಮೇಲೆಲ್ಲ ಗಾಯಗಳಾಗಿವೆ ಎಂದೂ ತಿಳಿಸಿದ್ದಾರೆ. ಸದ್ಯ ಪೊಲೀಸರು ಬಾಲಕರನ್ನು ವೈದ್ಯಕೀಯ ಪರಿಶೀಲನೆಗೆ ಒಳಪಡಿಸಿದ್ದಾರೆ.
ಉದ್ಯಮಿಯನ್ನು ಅಟ್ಟಾಡಿಸಿ ಗುಂಡಿಕ್ಕಿ ಕೊಂದ ದುರುಳರು! ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪೊಲೀಸರು ಹೇಳಿದ್ದೇನು?
ʼʼದೂರು ನೀಡಿದ ಹಿನ್ನೆಲೆಯಲ್ಲಿ ಮದ್ರಸಾದ ಮೌಲಾನ ಖಾದಿರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆʼʼ ಎಂದಿದ್ದಾರೆ. ಆದಾಗ್ಯೂ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಸದ್ಯ ಆರೋಪಗಳನ್ನು ಎಲ್ಲ ಕೋನಗಳಿಂದಲೂ ಪರಿಶೀಲಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಸದ್ಯ ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ.
ಅಪರಾಧ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.