ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಂದೆಯಿಂದ 90 ಲಕ್ಷ ರೂ. ದೋಚಲು ಅಪಹರಣದ ನಾಟಕವಾಡಿದ 40 ವರ್ಷದ ಮಗ

ತಂದೆಯಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಲು ಮಗನೊಬ್ಬ ಅಪಹರಣದ ನಾಟಕ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಇದೀಗ ಆತನನ್ನು ಜೈಲಿಗೆ ಅಟ್ಟಲಾಗಿದೆ. ಈ ಘಟನೆ ಹಾಸನದಲ್ಲಿ ನಡೆದಿದೆ. ಆರೋಪಿಯನ್ನು 40 ವರ್ಷದ ಮನೀಶ್ ಎಂದು ಗುರುತಿಸಲಾಗಿದೆ. ಆತ ತನ್ನ ತಂದೆಯಿಂದ ಬರೋಬ್ಬರಿ 90 ಲಕ್ಷ ರೂ. ಸುಲಿಗೆ ಮಾಡಲು ಈ ನಾಟಕ ರೂಪಿಸಿದ್ದಾನೆ ಎನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ.

ಸಂಗ್ರಹ ಚಿತ್ರ

ಹಾಸನ: ವ್ಯಕ್ತಿಯೊಬ್ಬ ತಂದೆಯನ್ನೇ ದೋಚಲು ಯತ್ನಿಸಿದ ಘಟನೆ ಹಾಸನದಲ್ಲಿ (hasana crime) ನಡೆದಿದೆ. ತಂದೆಯಿಂದ ಬರೋಬ್ಬರಿ 90 ಲಕ್ಷ ರೂ. ಸುಲಿಗೆ (Extortion) ಮಾಡಲು 40 ವರ್ಷದ ಮಗ ತನ್ನದೇ ಅಪಹರಣವಾಗಿದೆ (Kidnap) ಎಂದು ಸುಳ್ಳು ನಾಟಕ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಮನೀಶ್ ಎಂಬಾತನ ತನ್ನ ಸಹಚರರೊಂದಿಗೆ ಸೇರಿ ಹಣಕ್ಕಾಗಿ ಅಪಹರಣದ ನಾಟಕವನ್ನು ಮಾಡಿದ್ದಾನೆ. ಆತನನ್ನು ಸಹಚರರೊಂದಿಗೆ ಪತ್ತೆ ಮಾಡಿದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ.

ಹಾಸನ ಜಿಲ್ಲೆಯವನಾದ ಮನೀಶ್ ತನ್ನ ಇಬ್ಬರು ಸಹಚರರೊಂದಿಗೆ ಸೇರಿಕೊಂಡು ಅಪಹರಣದ ನಾಟಕವಾಡಿ 62 ವರ್ಷದ ತಂದೆ ಮನೋಹರ್ ಪಟೇಲ್ ಅವರ ಬಳಿ 90 ಲಕ್ಷ ರೂ. ಬೇಡಿಕೆ ಇಟ್ಟಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

'ಚಲೋ ದೆಹಲಿ': ಅಕ್ಟೋಬರ್ 10ರಂದು ಮತ್ತೊಂದು ಹೋರಾಟಕ್ಕೆ ಸಿಜೆಪಿ ಸಜ್ಜು

ಹಣಕಾಸಿನ ವ್ಯವಹಾರಕ್ಕಾಗಿ ಮನೀಶ್ ಗದಗಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದನು. ರೈಲಿನಲ್ಲಿ ಗದಗ ಜಿಲ್ಲೆಗೆ ಹೋಗುತ್ತಿದ್ದು, ಮರುದಿನ ಬೆಳಗ್ಗೆ ಕರೆ ಮಾಡುವುದಾಗಿ ತಂದೆ ಮನೋಹರ್ ಅವರಿಗೆ ತಿಳಿಸಿದ್ದನು. ಮರುದಿನ ಮನೋಹರ್ ಅವರಿಗೆ ಮಗನ ಸಂಖ್ಯೆಯಿಂದ ವಾಟ್ಸಾಪ್ ಕರೆ ಬಂದಿದ್ದು, ಮನೀಶ್‌ನ ಅಪಹರಣವಾಗಿದೆ. ಆತನ ಬಿಡುಗಡೆಗೆ 90 ಲಕ್ಷ ರೂ. ನೀಡುವಂತೆ ಕರೆ ಬಂದಿದೆ.

ಇದರಿಂದ ಆತಂಕಗೊಂಡ ಮನೋಹರ್ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ತಕ್ಷಣ ಪೊಲೀಸರು ಮನೀಶ್‌ನ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚುವ ಕಾರ್ಯ ನಡೆಸಿದರು. ಮನೀಶ್ ಫೋನ್ ಸ್ವಿಚ್ ಆಫ್ ಆಗಿತ್ತು. ಆದರೆ ಬಳಿಕ ಮನೋಹರ್ ಅವರಿಗೆ ಬೇರೊಂದು ಸಂಖ್ಯೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಅದನ್ನು ಟ್ರೇಸ್ ಮಾಡಿದ ಪೊಲೀಸರು ಹಾಸನದ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಅಲ್ಲಿ ಮನೀಶ್ ತನ್ನ ಸಹಚರರೊಂದಿಗೆ ಆರಾಮವಾಗಿ ಮಲಗಿರುವುದನ್ನು ನೋಡಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಮನೀಶ್ ಹಣಕ್ಕಾಗಿ ಅಪಹರಣದ ನಾಟಕವಾಡಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಿದ ಪೊಲೀಸರು ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ.

ಮೋಟಾರು ವಾಹನ ನಿರೀಕ್ಷಕರ ನೇಮಕಾತಿಯಲ್ಲೂ ಅಕ್ರಮ ಆರೋಪ; ಹೆಚ್ಚುವರಿ ಆಯ್ಕೆಪಟ್ಟಿ ಹಿಂಪಡೆದ ಕೆಪಿಎಸ್‌ಸಿ

ಈ ಕುರಿತು ಮಾಹಿತಿ ನೀಡಿದ ಪಶ್ಚಿಮ ವಿಭಾಗದ ಪೊಲೀಸ್ ಉಪ ಆಯುಕ್ತ ಯತೀಶ್, ಇದು ಹಣಕ್ಕಾಗಿ ನಡೆದ ಅಪಹರಣವಾಗಿರಲಿಲ್ಲ. ಹಣದ ಅಗತ್ಯವಿದ್ದ ವ್ಯಕ್ತಿಯೊಬ್ಬನ ಯೋಜನೆಯಾಗಿತ್ತು. ತಂದೆಯಿಂದ ತನಗೆ ಬೇಕಾದಷ್ಟು ಹಣ ಸಿಗದೇ ಇದ್ದುದರಿಂದ ಮಗ ಅಪಹರಣದ ನಾಟಕವಾಡಿದ್ದನು ಎಂದು ಹೇಳಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author