ಚಂಡೀಗಢ: ಮದುವೆಯ ಕನಸು ಹೊತ್ತು ಇಳಿವಯಸ್ಸಿನಲ್ಲಿ ಭಾರತಕ್ಕೆ ಬಂದಿದ್ದ ವಿದೇಶಿ ವೃದ್ಧೆಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. (Murder Case) ಭಾರತ ಮೂಲದ ಯುಕೆ ಪ್ರಜೆಯ ಬಣ್ಣ ಬಣ್ಣದ ಮಾತುಗಳನ್ನು ಕೇಳಿ ಅಮೆರಿಕದಿಂದ ಆತನನ್ನು ಮದುವೆಯಾಗಲು 72 (Punjab) ವರ್ಷದ ರೂಪಿಂದರ್ ಕೌರ್ ಪಂಧೇರ್ ಅವರು ಬಂದಿದ್ದರು. ಆದರೆ ಯುಕೆ ಮೂಲದ ಅನಿವಾಸಿ ಭಾರತೀಯ ಚರಣ್‌ಜಿತ್ ಸಿಂಗ್ ಆಕೆಯನ್ನು ಕೊಲೆ ಮಾಡಿಸಿದ್ದಾನೆ. ರೂಪಿಂದರ್ನ ಮನವೊಲಿಸಿ ಮದುವೆಯಾಗುವುದಾಗಿ ಹೇಳಿ ಭಾರತಕ್ಕೆ ಕರೆಸಿಕೊಂಡು, ಸುಪಾರಿಕೊಟ್ಟು ಆಕೆಯ ಹತ್ಯೆ ಮಾಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರೂಪಿಂದರ್ ಕೌರ್ ಪಂಧೇರ್ ಜುಲೈನಲ್ಲಿ ಚರಣ್ಜೀತ್ ಆಹ್ವಾನದ ಮೇಲೆ ಭಾರತಕ್ಕೆ ಬಂದಿದ್ದರು. ಲುಧಿಯಾನ ಜಿಲ್ಲೆಯ ಕಿಲಾ ರಾಯ್‌ಪುರ ಗ್ರಾಮಕ್ಕೆ ಪ್ರಯಾಣಿಸಿದ ನಂತರ ರೂಪಿಂದರ್ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಆಕೆಯ ಸಹೋದರಿ ಪದೇ ಪದೇ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಅವರು ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರು. ಮದುವೆ ಸಂಭ್ರಮದಲ್ಲಿರಬೇಕಿದ್ದ ಕೌರ್ ನಿಗೂಢವಾಗಿ ಕಣ್ಮರೆಯಾಗಿದ್ದರು. ರೂಪಿಂದರ್ ಅವರನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿದ್ದ ಪೊಲೀಸರಿಗೆ ಇತ್ತೀಚೆಗೆ ಸುಳಿವೊಂದು ಸಿಕ್ಕಿತ್ತು.
ತನಿಖೆ ಮುಂದುವರಿಸಿದ ಪೊಲೀಸರು, ಗ್ರೆವಾಲ್ ಮತ್ತು ಅವರ ಸಹೋದರ ಸೇರಿದಂತೆ ಪ್ರಮುಖ ಶಂಕಿತರ ಹೆಸರನ್ನು ದಾಖಲಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಜುಲೈ 12 ಮತ್ತು 13 ರ ಮಧ್ಯರಾತ್ರಿ ಅವರ ಮನೆಯ ಉಗ್ರಾಣದಲ್ಲಿ ಕೌರ್ ಅವರನ್ನು ಕೊಲೆ ಮಾಡಿ, ಆಕೆಯ ಶವಕ್ಕೆ ಬೆಂಕಿ ಹಚ್ಚಲಾಗಿತ್ತು. ಈ ಕುರಿತು ಆರೋಪಿಗಳ ಪೈಕಿ ರಾಯ್‌ಪುರದ ಮಲ್ಹಾ ಪಟ್ಟಿಯ ಮುಖ್ಯ ಶಂಕಿತ ಸುಖ್‌ಜೀತ್ ಸಿಂಗ್ ಅಲಿಯಾಸ್ ಸೋನು ಒಪ್ಪಿಕೊಂಡಿದ್ದಾನೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಹರ್ಜಿಂದರ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Murder Case: ಹೆಂಡತಿಯನ್ನು ತವರಿಗೆ ಕರೆದೊಯ್ದ ಅತ್ತೆಯನ್ನೇ ಕೊಲೆಗೈದ ಅಳಿಯ
ರೂಪಿಂದರ್ ಹತ್ಯೆಗೆ ₹ 50 ಲಕ್ಷ ನೀಡುವುದಾಗಿ ಗ್ರೇವಾಲ್ ಭರವಸೆ ನೀಡಿದ್ದ ಎಂದು ತಿಳಿದು ಬಂದಿದೆ. ಆರೋಪಿ ಆಕೆಯ ಶವವನ್ನು ಸ್ಟೋರ್ ರೂಂ ಒಳಗೆ ಡೀಸೆಲ್ ಹಾಕಿ ಸುಟ್ಟು, ಶವಗಳನ್ನು ನೀರಿನಿಂದ ತಂಪಾಗಿಸಿ, ನಂತರ ಲೆಹ್ರಾ ಗ್ರಾಮದ ಬಳಿಯ ಚರಂಡಿಯಲ್ಲಿ ವಿಲೇವಾರಿ ಮಾಡುವ ಮೂಲಕ ಸಾಕ್ಷ್ಯಗಳನ್ನು ನಾಶಪಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಭಾಗಶಃ ಅಸ್ಥಿಪಂಜರದ ಅವಶೇಷಗಳನ್ನು ವಶಪಡಿಸಿಕೊಂಡಿದ್ದು, ಬಲಿಪಶುವಿನ ಗುರುತನ್ನು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ಸದ್ಯ ಪ್ರಮುಖ ಆರೋಪಿಗಳಾದ ಚರಣ್ಜೀತ್ ಹಾಗೂ ಆತನ ಸಹೋದರ ತಲೆಮರಿಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ.