ಚೆನ್ನೈ, ಜೂ. 29: ತಮಿಳುನಾಡಿನಲ್ಲಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯದ ಪ್ರಕರಣ ಬೆಳಕಿಗೆ ಬಂದಿದ್ದು, ಅಪ್ರಾಪ್ತ ಬಾಲಕನೊಬ್ಬ 9 ವರ್ಷದ ಹುಡುಗನನ್ನು ಹತ್ಯೆ ಮಾಡಿದ್ದಾನೆ. ಹತ್ಯೆ ಮಾಡುವ ಮುನ್ನ 9 ವರ್ಷದ ಬಾಲಕನ ಮೇಲೆ 17 ವರ್ಷದ ಅಪ್ರಾಪ್ತ ಲೈಂಗಿಕ ದೌರ್ಜನ್ಯ ಎಸಗಿರುವ ಈ ಘಟನೆ ತಮಿಳುನಾಡಿನ ಪುದುಕೋಟೈ ಜಿಲ್ಲೆಯಲ್ಲಿ ನಡೆದಿದೆ (Tamil Nadu Horror). ಸದ್ಯ ಪೊಲೀಸರು ಅಪರಾಧಿಯನ್ನು ವಶಕ್ಕೆ ಪಡೆದಿದ್ದು, ಆತನ ಕೃತ್ಯಕ್ಕೆ ರಾಜ್ಯವೇ ಬೆಚ್ಚಿ ಬಿದ್ದಿದೆ.
ʼʼ17 ವರ್ಷದ ಅಪ್ರಾಪ್ತ ತನ್ನದೇ ಊರಿನ 9 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಆತನನ್ನು ವಶಕ್ಕೆ ಪಡೆಯಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆʼʼ ಎಂದು ಪುದುಕೋಟೈ ಪೊಲೀಸರು ತಿಳಿಸಿದ್ದಾರೆ.
ಅನುಮಾನಾಸ್ಪದ ರೀತಿಯಲ್ಲಿ ಬಾಲಕನ ಶವ ಪತ್ತೆಯಾಗುವುದರೊಂದಿಗೆ ಪ್ರಕರಣ ಬೆಳಕಿಗೆ ಬಂತು. ಆರಂಭದಲ್ಲಿ ಪೊಲೀಸರು ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡರು. ಕೂಲಂಕುಷ ಪರಿಶೀಲನೆ ವೇಳೆ ಪೊಲೀಸರಿಗೆ ಹಲವು ಅನುಮಾನ ಮೂಡಿದ್ದು, ತನಿಖೆಯನ್ನು ಇನ್ನಷ್ಟು ವಿಸ್ತರಿಸಿದರು. ಆಗ ತಿಳಿದು ಬಂದಿದ್ದೇ ಬೆಚ್ಚಿ ಬೀಳಿಸುವ ಅಂಶ.
ಅಪ್ರಾಪ್ತ ಬಾಲಕಿಯ ಅಪಹರಣ, ಹೋಟೆಲ್ ಮಾಲಕನಿಗೆ ಮಾರಾಟ, 30 ಮಂದಿಯಿಂದ 5 ದಿನ ನಿರಂತರ ಸಾಮೂಹಿಕ ಅತ್ಯಾಚಾರ
ಘಟನೆ ವಿವರ
ದಿನಗೂಲಿ ನೌಕರನ ಪುತ್ರ, 4ನೇ ತರಗತಿಯ ಸಂತ್ರಸ್ತ ಬಾಲಕನ ಮೃತದೇಹ ಜೂನ್ 27ರಂದು ಕರಂಬಕುಡಿಯ ಕಾರುಕ್ಕಾಕುರಿಚಿ ಗ್ರಾಮದ ಆತನ ಮನೆಯಿಂದ ಸುಮಾರು 100 ಮೀಟರ್ ದೂರಲ್ಲಿ ಪತ್ತೆಯಾಯ್ತು. ಸಂಜೆ 6.30ರ ಸುಮಾರಿಗೆ ಆತ ಗೆಳೆಯರ ಜತೆ ಆಟ ಆಡಲು ಹೊರಗೆ ಹೋಗಿದ್ದ. ಬಳಿಕ ನಾಪತ್ತೆಯಾಗಿದ್ದವನ ಮೃತದೇಹ ಮಧ್ಯರಾತ್ರಿ ವೇಳೆ ಪತ್ತೆಯಾಯ್ತು. ಮೃತದೇಹದಲ್ಲಿನ ಗಾಯದ ಕಲೆಗಳು ಪೊಲೀಸರಲ್ಲಿ ಅನುಮಾನ ಹುಟ್ಟಿಸಿದ್ದವು. ಆತನ ಕುತ್ತಿಗೆ ಮತ್ತು ಮುಖದಲ್ಲಿ ಗಾಯ ಕಂಡು ಬಂದಿದ್ದರೆ, ದೇಹದಲ್ಲಿ ಪ್ಯಾಂಟ್ ಇರಲಿಲ್ಲ.
ಪೊಲೀಸ್ ಶ್ವಾನಗಳ ಸಹಾಯದಿಂದ ತನಿಖೆ ಕೈಗೆತ್ತಿಕೊಳ್ಳಲಾಯಿತು. ಜೂನ್ 28ರ ಬೆಳಗ್ಗೆ ತನಿಖೆಗೆ ಮಹತ್ವದ ತಿರುವು ದೊರೆಯಿತು. ಸಂತ್ರಸ್ತನ ಜತೆ ಆಟವಾಡುತ್ತಿದ್ದ ಬಾಲಕರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಹಲವು ಮಾಹಿತಿ ಹಂಚಿಕೊಂಡರು. ತಮ್ಮೊಂದಿಗೆ ಆಟವಾಡುತ್ತಿದ್ದ ಬಾಲಕನನ್ನು ಅದೇ ಊರಿನ 17 ವರ್ಷದ ಹುಡುಗನೊಬ್ಬ ಕರೆದುಕೊಂಡು ಹೋಗಿದ್ದ ಎಂದು ತಿಳಿಸಿದರು. ಸಂತ್ರಸ್ತ ನಾಪತ್ತೆಯಾದ ಸಮಯಕ್ಕೂ ಮಕ್ಕಳು ಹೇಳಿದ ಸಮಯಕ್ಕೂ ಹೊಂದಿಕೆಯಾಗುತ್ತಿದ್ದರಿಂದ ಪೊಲೀಸರು ತಮ್ಮ ತನಿಖೆಯನ್ನು 17 ವರ್ಷದ ಅಪ್ರಾಪ್ತನ ಬಳಿಗೆ ವಿಸ್ತರಿಸಿದರು.
ಅಪ್ರಾಪ್ತ ಬಾಲಕನ ಅಪಹರಣ, ಲೈಂಗಿಕ ದೌರ್ಜನ್ಯ ನೀಡಿ ಹಣ ಸುಲಿಗೆ ಮಾಡಲು ಯತ್ನಿಸಿದ ಮಹಿಳೆಯ ಬಂಧನ
ಪೊಲೀಸರು ಹೇಳಿದ್ದೇನು?
ʼʼವಿಚಾರಣೆ ವೇಳೆ 17 ವರ್ಷದ ಅಪ್ರಾಪ್ತ ತಪ್ಪೊಪ್ಪಿಕೊಂಡಿದ್ದಾನೆ. 9 ವರ್ಷದ ಬಾಲಕನನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆತ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದ. ಆತನ ಉದ್ದೇಶ ಅರಿತ ಬಾಲಕ ಅಲ್ಲಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಆಗ ಅಪರಾಧಿ ಆತನನ್ನು ಹಿಡಿದೆಳೆದು, ಬಟ್ಟೆ ಹರಿದು ಕೊಲೆ ಮಾಡಿದ್ದಾನೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧಿ ವಯಸ್ಕನಲ್ಲದ ಕಾರಣ ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ.
ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.