ಅಪ್ರಾಪ್ತ ಬಾಲಕನ ಅಪಹರಣ, ಲೈಂಗಿಕ ದೌರ್ಜನ್ಯ ನೀಡಿ ಹಣ ಸುಲಿಗೆ ಮಾಡಲು ಯತ್ನಿಸಿದ ಮಹಿಳೆಯ ಬಂಧನ
Crime News: 16 ವರ್ಷದ ಅಪ್ರಾಪ್ತ ಬಾಲಕ ಅಪಹರಣ, ಲೈಂಗಿಕ ದೌರ್ಜನ್ಯ ಮತ್ತು ಹಣ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣದ ತನಿಖೆಯ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತಳು ಹನಿಟ್ರ್ಯಾಪ್ ಗ್ಯಾಂಗ್‌ನ ಮಾಸ್ಟರ್‌ಮೈಂಡ್ ಎಂದೇ ಹೇಳಲಾಗಿದೆ. ಉತ್ತರಪ್ರದೇಶದ ಲಖನೌದಲ್ಲಿ ಘಟನೆ ನಡೆದಿದೆ.
ಬಾಲಕನನ್ನು ಅಪಹರಿಸಿ ಹಣ ಸುಲಿಗೆ ಮಾಡಲು ಯತ್ನಿಸಿದ ಮಹಿಳಾ ಆರೋಪಿಯ ಬಂಧನ -
ಲಖನೌ, ಏ.19: ಹನಿಟ್ರ್ಯಾಪ್ ಗ್ಯಾಂಗ್‌ನ ಮಾಸ್ಟರ್‌ಮೈಂಡ್‌ಳನ್ನು ಉತ್ತರಪ್ರದೇಶದ (Uttar Pradesh) ಲಖನೌ ಪೊಲೀಸರು ಬಂಧಿಸಿದ್ದಾರೆ. 16 ವರ್ಷದ ಅಪ್ರಾಪ್ತ ಬಾಲಕ ಅಪಹರಣ, ಲೈಂಗಿಕ ದೌರ್ಜನ್ಯ ಮತ್ತು ಹಣ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣದ ತನಿಖೆಯ ನಂತರ (Crime News) ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತಳನ್ನು ಅತಿಕಾ ಎಂದು ಗುರುತಿಸಲಾಗಿದೆ. ಸಂತ್ರಸ್ತನ ತಾಯಿ ಅಸ್ಮಾ ಖಾನ್, ತನ್ನ ಮಗ 9ನೇ ತರಗತಿ ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕ ಇಬ್ರಾಹಿಂ (ಹೆಸರು ಬದಲಾಯಿಸಲಾಗಿದೆ) ಫೆ.17ರಂದು ನಾಪತ್ತೆಯಾಗಿದ್ದ. ಬಾಲಕನ ಸ್ನೇಹಿತನ ಸಂಬಂಧಿ ಅತಿಕಾ, ಅಪ್ತಾಪ್ತ ವಯಸ್ಕನನ್ನು ಸುಳ್ಳು ನೆಪದಲ್ಲಿ ಆಕರ್ಷಿಸಿ ಬಲವಂತವಾಗಿ ಉತ್ತರಾಖಂಡದ ನೈನಿತಾಲ್ ಗಿರಿಧಾಮಕ್ಕೆ ಕರೆದೊಯ್ದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪ್ರಯಾಣದ ಸಮಯದಲ್ಲಿ ಆರೋಪಿ ಮಹಿಳೆಯು, ಬಾಲಕನ ಮೊಬೈಲ್ ಫೋನ್ ಅನ್ನು ತೆಗೆದುಕೊಂಡು, ಸಿಮ್ ಕಾರ್ಡ್ ಅನ್ನು ನಾಶಪಡಿಸಿದ್ದಾಳೆ. ಹೀಗಾಗಿ ಬಾಲಕ ತನ್ನ ಕುಟುಂಬಕ್ಕೆ ಕರೆ ಮಾಡದಂತೆ ನಿರ್ಬಂಧಿಸಲಾಯಿತು. ನಂತರ ನೈನಿತಾಲ್‌ನ ಹೋಟೆಲ್‌ಗೆ ಬಾಲಕನನ್ನು ಕರೆದೊಯ್ದು, ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಲಾಯಿತು. ಈ ವೇಳೆ ಸಂತ್ರಸ್ತನ ಫೋಟೋ, ವಿಡಿಯೊಗಳನ್ನು ತೆಗೆದುಕೊಂಡಿದ್ದಾಳೆ. ನಂತರ ಅವಳು ದೊಡ್ಡ ಮೊತ್ತದ ಹಣ ಸುಲಿಗೆ ಸಂಚು ರೂಪಿಸಿದಳು ಎಂದು ತನಿಖೆಯಿಂದ ತಿಳಿದುಬಂದಿದೆ.
ನಿದಾ ಖಾನ್ ಇರುವ ಸ್ಥಳದ ಕುರಿತು ಪೊಲೀಸರಿಗೆ ಪತಿಯಿಂದಲೇ ಮಾಹಿತಿ! ಮತಾಂತರ ಜಾಲದ ಇನ್ನಷ್ಟು ರಹಸ್ಯ ಬಯಲು!
ನಂತರ ಸಂತ್ರಸ್ತನ ಕುಟುಂಬಕ್ಕೆ ನಿರಂತರ ಬೆದರಿಕೆಯೊಡ್ಡಿದ್ದಾಳೆ. ಬಾಲಕನ ಕುಟುಂಬಕ್ಕೆ 10 ಲಕ್ಷ ರೂ. ಬೇಡಿಕೆ ಇಟ್ಟಿದ್ದಾಳೆ. ಬೇಡಿಕೆ ಈಡೇರಿಸದಿದ್ದರೆ ಫೋಟೋ ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಮರ್ಯಾದೆ ಕಳೆಯುವುದಾಗಿ ಬೆದರಿಸಿದ್ದಾಳೆ. ಅಲ್ಲದೆ, ಆತನ ಕುಟುಂಬವನ್ನು ಸುಳ್ಳು ಕಾನೂನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡಿದ್ದಾಳೆ ಎನ್ನಲಾಗಿದೆ.
ಇನ್ನು, ಕಾನೂನಿನಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು ಹಾಗೂ ಲೈಂಗಿಕ ಅಪರಾಧಗಳ ಮಕ್ಕಳ ರಕ್ಷಣೆ (ಫೋಕ್ಸೋ) ಕಾಯ್ದೆಯ ಕಠಿಣ ನಿಬಂಧನೆಗಳನ್ನು ತಪ್ಪಿಸಿಕೊಳ್ಳಲು ಬಾಲಕನ ಜನ್ಮ ದಿನಾಂಕವನ್ನು ತಿರುಚಿದ್ದಾಳೆ ಎಂಬ ಆರೋಪವೂ ಆಕೆಯ ಮೇಲಿದೆ.
ಏಪ್ರಿಲ್ 5ರಂದು ಸಂತ್ರಸ್ತ ಬಾಲಕನ ತಾಯಿ ಅಸ್ಮಾ ಖಾನ್ ಸಲ್ಲಿಸಿದ ದೂರಿನ ನಂತರ, ಠಾಕೂರ್ಗಂಜ್ ಪೊಲೀಸರು ಕೂಲಂಕುಷ ತನಿಖೆ ನಡೆಸಿದರು. ಸಂತ್ರಸ್ತನ ವಯಸ್ಸನ್ನು ಪರಿಶೀಲಿಸಲು ಮತ್ತು ಆರೋಪಿಗಳ ಹೇಳಿಕೆಗಳನ್ನು ನಿರಾಕರಿಸಲು ಬಾಲಕನ ಕುಟುಂಬವು ಆಧಾರ್ ಕಾರ್ಡ್, ಮೂಲ ಶಾಲಾ ಪ್ರಮಾಣಪತ್ರಗಳು ಮತ್ತು ಅಸಲಿ ಪಾಸ್‌ಪೋರ್ಟ್ ಅನ್ನು ಅಧಿಕಾರಿಗಳಿಗೆ ಸಲ್ಲಿಸಿತು.
ಈ ಸಂಬಂಧ ಪೊಲೀಸರು, ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಹಲವಾರು ಗಂಭೀರ ವಿಭಾಗಗಳು ಮತ್ತು ವಿಶೇಷ ಕಾನೂನುಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಆರೋಪಗಳಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಫೋಕ್ಸ್ ಉಲ್ಲಂಘನೆ, ಸುಲಿಗೆ, ಕ್ರಿಮಿನಲ್ ಬೆದರಿಕೆ ಮತ್ತು ಸರ್ಕಾರಿ ದಾಖಲೆಗಳ ನಕಲಿ ಸೇರಿದಂತೆ ಹಲವು ಆರೋಪಗಳಿವೆ. ಪೊಲೀಸರು ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ.