ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪತ್ನಿಯ ಶಿರಚ್ಛೇದ ಮಾಡಿ ಪೂಜಾ ಕೋಣೆಯೊಳಗಿಟ್ಟ ಪಾಪಿ; ತಂದೆಯನ್ನೂ ಕೊಂದು ಆಯುಧ ಹಿಡಿದು ಊರಿಡೀ ತಿರುಗಿದ ಹಂತಕ

Crime News: ವ್ಯಕ್ತಿಯೊಬ್ಬ ಪತ್ನಿಯ ಶಿರಚ್ಛೇದ ಮಾಡಿ, ತಂದೆಯನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಮಂಗಲ್ ಚೌಧರಿ ಎಂದು ಗುರುತಿಸಲಾಗಿದೆ. ಆರೋಪಿಯು ತನ್ನ ಪತ್ನಿ ರುಂಪಾ ಚೌಧರಿಯನ್ನು ಕೊಂದು, ನಂತರ ಸುಮಾರು 60 ವರ್ಷ ವಯಸ್ಸಿನ ತನ್ನ ತಂದೆ ರಾಜೇಂದ್ರ ಚೌಧರಿಯನ್ನೂ ಹತ್ಯೆ ಮಾಡಿದ್ದಾನೆ.

ಸಾಂದರ್ಭಿಕ ಚಿತ್ರ

ಕೋಲ್ಕತಾ, ಅ. 21: ವ್ಯಕ್ತಿಯೊಬ್ಬ ಹೆಂಡತಿಯ ಶಿರಚ್ಛೇದ ಮಾಡಿ ತಂದೆಯನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ (West Bengal) ಬಂಕುರಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯು ಪ್ರದೇಶದಲ್ಲಿ ಭೀತಿಯನ್ನುಂಟು ಮಾಡಿದ್ದು, ಕೊಲೆಯ ನಂತರ ಆರೋಪಿಯು ಚಾಕುವಿನೊಂದಿಗೆ ಗ್ರಾಮದಲ್ಲಿ ಸುತ್ತಾಡಿದ್ದಾನೆ (Crime News). ಬಂಕುರಾ ಜಿಲ್ಲೆಯ ಸೋನಮುಖಿ ಪೊಲೀಸ್ ಠಾಣೆ ಮತ್ತು ಪಶ್ಚಿಮ ಬರ್ಧಮಾನ್ ಜಿಲ್ಲೆಯ ಕಾಂಕ್ಸಾ ಪೊಲೀಸ್ ಠಾಣೆಯ ನಡುವಿನ ಗಡಿಯ ಸಮೀಪವಿರುವ ದಾಮೋದರ್ ನದಿಯ ಉದ್ದಕ್ಕೂ ಇರುವ ಲಾಲ್ ಬಾಬಾ ಮನಾಚಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಆರೋಪಿಯನ್ನು ಮಂಗಲ್ ಚೌಧರಿ ಎಂದು ಗುರುತಿಸಲಾಗಿದೆ. ಆರೋಪಿಯು ತನ್ನ ಪತ್ನಿ ರುಂಪಾ ಚೌಧರಿಯನ್ನು (39) ಕೊಂದು, ನಂತರ ಸುಮಾರು 60 ವರ್ಷ ವಯಸ್ಸಿನ ತನ್ನ ತಂದೆ ರಾಜೇಂದ್ರ ಚೌಧರಿಯನ್ನು ಹತ್ಯೆ ಮಾಡಿದ್ದಾನೆ. ಆರೋಪಿಯು ತನ್ನ ಪತ್ನಿಯ ಕತ್ತರಿಸಿದ ತಲೆಯನ್ನು ಮನೆಯೊಳಗಿನ ಪೂಜಾ ಸ್ಥಳದಲ್ಲಿ ತ್ರಿಶೂಲದ ಮುಂದೆ ಇಟ್ಟಿದ್ದಾನೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಸೋನಮುಖಿ ಮತ್ತು ಕಾಂಕ್ಸಾ ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತಲುಪಿದರು. ಎರಡೂ ಮೃತದೇಹಗಳನ್ನು ವಶಪಡಿಸಿಕೊಂಡು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶೂಟರ್ಸ್‌ ಪತ್ತೆಗೆ ಮಹತ್ವದ ಸುಳಿವು ನೀಡಿದ ಕ್ಯಾಬ್ ಚಾಲಕನ ಆ ಒಂದು ಫೋನ್ ಕರೆ

ಆರೋಪಿ ಮಂಗಲ್ ತನ್ನ ಸಹೋದರನ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ ಅವನು ತಪ್ಪಿಸಿಕೊಂಡಿದ್ದಾನೆ. ನಂತರ ಆರೋಪಿಯು ಚಾಕು ಹಿಡಿದುಕೊಂಡು ಹಳ್ಳಿಯಲ್ಲಿ ಓಡಾಡಿದ್ದು, ನಿವಾಸಿಗಳಲ್ಲಿ ಭಯವನ್ನುಂಟು ಮಾಡಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಮಂಗಲ್‍ನನ್ನು ಬಂಧಿಸಿದರು. ಹತ್ಯೆಗೆ ಏನು ಕಾರಣ ಎಂಬ ಬಗ್ಗೆ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಘಟನೆಗೆ ಮೊದಲು ಆರೋಪಿಯು ತನ್ನ ಒಂದು ಬೆರಳಿಗೆ ಗಾಯ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಗಾಯಗೊಂಡ ಬೆರಳಿಗೆ ಚಿಕಿತ್ಸೆಗಾಗಿ ಮಂಗಲ್‌ನನ್ನು ಬಂಕುರಾ ಸಮ್ಮಿಲಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದರಿಂದ ಆತನನ್ನು ತಕ್ಷಣ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಟ-ಮಂತ್ರದಂತಹ ಆಚರಣೆಗಾಗಿ ಹತ್ಯೆ ನಡೆದಿವೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಈ ಕುರಿತು ಯಾವುದೇ ಸಂಬಂಧವಿರುವುದನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ. ಮಂಗಲ್ ಮತ್ತು ಆತನ ಪತ್ನಿ ಮನೆಯೊಳಗಿರುವ ಪೂಜಾ ಕೋಣೆಯಲ್ಲಿ ನಿಯಮಿತವಾಗಿ ಪೂಜೆ ಸಲ್ಲಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ, ಒಬ್ಬ ತಾಂತ್ರಿಕರು ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದರು ಎಂದೂ ಹೇಳಿದ್ದಾರೆ. ಸ್ಥಳೀಯರ ಈ ಹೇಳಿಕೆಗಳಿಂದಾಗಿ, ಈ ಕೊಲೆಗಳು ಮಾಟಮಂತ್ರ ಆಚರಣೆಗಳಿಗೆ ಸಂಬಂಧಿಸಿವೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಸದ್ಯ, ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.