ಅಮೃತಸರ, ಜ.29: ಸ್ಯಾಂಡ್‌ವಿಚ್ ಪಾವತಿಗೆ ಸಂಬಂಧಿಸಿದಂತೆ ಕ್ಷುಲ್ಲಕ ವಿವಾದದಲ್ಲಿ ಹೆಡ್ ಕಾನ್‌ಸ್ಟೇಬಲ್ ಒಬ್ಬರನ್ನು ಇರಿದು ಹತ್ಯೆ ಮಾಡಿರುವ ಘಟನೆ ಪಂಜಾಬ್ನಲ್ಲಿ (Panjab) ನಡೆದಿದೆ. ಅಮನ್‌ದೀಪ್ ಸಿಂಗ್ ಮೃತ ಮುಖ್ಯ ಪೇದೆ. ಪಟಿಯಾಲಾದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದ ನಭಾ ನಿವಾಸಿ ಸಿಂಗ್, ಜನವರಿ 25 ರಂದು ಆರು ಮಂದಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟಿದ್ದರು (Crime News).
ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡ ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ, ಕಾನ್‌ಸ್ಟೇಬಲ್ ತನ್ನ ಸಹೋದರನೊಂದಿಗೆ ಉಪಾಹಾರ ಗೃಹಕ್ಕೆ ಊಟಕ್ಕೆ ತೆರಳಿದ್ದರು. ಈ ವೇಳೆ ಅವರು ಸಮವಸ್ತ್ರದಲ್ಲಿ ಇರಲಿಲ್ಲ ಎಂದು ಹೇಳಿದರು.
Self Harming: ಮದುವೆಯಾದ ಎರಡೇ ತಿಂಗಳಿಗೆ ಮತ್ತೊಬ್ಬನ ಜೊತೆ ಪತ್ನಿ ಪರಾರಿ; ಪತಿ, ಮದುವೆ ಮಾಡಿಸಿದವನೂ ಆತ್ಮಹತ್ಯೆ
ಹಣ ಪಾವತಿ ವಿಚಾರದಲ್ಲಿ ಅಂಗಡಿಯಲ್ಲಿದ್ದ ಯುವಕನೊಂದಿಗೆ ವಾಗ್ವಾದ ನಡೆಯಿತು. ಊಟ ಮಾಡಿದ ನಂತರ ಹಣ ನೀಡುವುದಾಗಿ ಕಾನ್‌ಸ್ಟೇಬಲ್ ಪಟ್ಟು ಹಿಡಿದಾಗ, ತೀವ್ರ ವಾಗ್ವಾದ ಮತ್ತು ಗಲಾಟೆಗೆ ಕಾರಣವಾಯಿತು. ಈ ವೇಳೆ ಯುವಕರು ಫೋನ್ ಕರೆಗಳನ್ನು ಮಾಡಿದ್ದಾರೆ. ನಂತರ ಆರರಿಂದ ಏಳು ಸಹಚರರು ಸ್ಥಳಕ್ಕೆ ಆಗಮಿಸಿ ಕಾನ್‌ಸ್ಟೇಬಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕಾನ್‌ಸ್ಟೇಬಲ್‌ಗೆ ಒಂದೇ ಚಾಕುವಿನಿಂದ ಹಿಂದಿನಿಂದ ಎರಡು ಬಾರಿ ಇರಿದಿದ್ದಾರೆ. ಪರಿಣಾಮ ಸ್ಥಳದಲ್ಲೇ ಪೇದೆ ಮೃತಪಟ್ಟಿದ್ದಾರೆ. ಅವರ ಸಹೋದರ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ 36 ಗಂಟೆಗಳಲ್ಲಿ ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಎಲ್ಲಾ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಟಿಯಾಲ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಆಶಿ, ಹೀರಾ, ರಾಹುಲ್, ಕೈಫ್, ರಿಕಿ ಮತ್ತು ಇಬ್ಬರು ಬಾಲಾಪರಾಧಿಗಳು ಎಂದು ಗುರುತಿಸಲಾಗಿದೆ. ರಿಕಿ ಎಂಬಾತನೊಂದಿಗೆ ಆರಂಭದಲ್ಲಿ ವಿವಾದ ಆರಂಭವಾಯಿತು. ನಂತರ ಆತ ಇತರ ಆರೋಪಿಗಳನ್ನು ಸ್ಥಳಕ್ಕೆ ಕರೆಸಿದ್ದಾನೆ.
ಮೂವರು ಆರೋಪಿಗಳ ವಿರುದ್ಧ ಈಗಾಗಲೇ ಕಳ್ಳತನ ಮತ್ತು ಇತರ ಅಪರಾಧಗಳು ಸೇರಿದಂತೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಎಸ್‌ಎಸ್‌ಪಿ ಶರ್ಮಾ ತಿಳಿಸಿದ್ದಾರೆ. ಅಪರಾಧ ಎಸಗಿದ ನಂತರ, ಆರೋಪಿಗಳು ನಭಾದಿಂದ ಪರಾರಿಯಾಗಿ ಬೇರೆ ಜಿಲ್ಲೆಯಲ್ಲಿ ಆಶ್ರಯ ಪಡೆದರು. ಆದರೆ, ಸಂಘಟಿತ ಅಂತರ ಜಿಲ್ಲಾ ಪೊಲೀಸ್ ಕಾರ್ಯಾಚರಣೆಗಳ ಮೂಲಕ ಬಂಧಿಸಲಾಯಿತು. ಲುಧಿಯಾನದಲ್ಲಿ ಕೆಲವು ಬಂಧನಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಯಾವುದೇ ಸಂಘಟಿತ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿಲ್ಲ ಎಂದು ಪೊಲೀಸ್ ಅಧಿಕಾರಿ ಒತ್ತಿ ಹೇಳಿದರು. ಅವರು ಸ್ಥಳೀಯ ದುಷ್ಕರ್ಮಿಗಳು ಎಂದು ಹೇಳಿದ್ದಾರೆ. ಇದು ಒಂದು ಸಣ್ಣ ವಿಷಯದ ಮೇಲೆ ಜಗಳ ಪ್ರಾರಂಭವಾಗಿ ಆ ವಿಷಯ ದೊಡ್ಡದಾಗಿ ಆವೇಶದ ಸಮಯದಲ್ಲಿ ನಡೆದ ಅಪರಾಧ ಎಂದು ಅವರು ಹೇಳಿದರು.
ದರೋಡೆಕೋರರ ವಿರುದ್ಧ ಕಾರ್ಯಾಚರಣೆ ಆರಂಭವಾದಾಗಿನಿಂದ, ಪಟಿಯಾಲ ಪೊಲೀಸರು ಕೊಲೆ, ಕೊಲೆಯತ್ನ, ದರೋಡೆ ಮತ್ತು ಇತರ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವ 150 ಕ್ಕೂ ಹೆಚ್ಚು ಅಪರಾಧಿಗಳನ್ನು ಬಂಧಿಸಿದ್ದಾರೆ. ಯಾವುದೇ ಅಪರಾಧಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಸಂದೇಶವಾಗಿದೆ ಎಂದು ಎಸ್‌ಎಸ್‌ಪಿ ಶರ್ಮಾ ಹೇಳಿದ್ದಾರೆ.