ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಾಗಲಕಾಯಿ ಖಾದ್ಯ ಮಾಡಿದ್ದಕ್ಕೆ ತಾಯಿಯನ್ನೇ ಕೊಂದ ಪಾಪಿ

Crime News: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಷ್ಟವಿಲ್ಲದ ಹಾಗಲಕಾಯಿ ಅಡುಗೆ ಮಾಡಿದ್ದ ಬಗ್ಗೆ ತನ್ನ ತಾಯಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದ. ಕೊನೆಗೆ ಆರೋಪಿಯು ತನ್ನ ತಾಯಿಗೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ.

ಎಐ ಚಿತ್ರ

ಮುಂಬೈ, ಫೆ. 21: ಹಾಗಲಕಾಯಿ ಅಡುಗೆ ಮಾಡುವ ವಿಚಾರದಲ್ಲಿ ಉಂಟಾದ ಜಗಳದಲ್ಲಿ 37 ವರ್ಷದ ವ್ಯಕ್ತಿಯೊಬ್ಬ ತನ್ನ 65 ವರ್ಷದ ತಾಯಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ. ಮುಲ್ ತೆಹಸಿಲ್ ವ್ಯಾಪ್ತಿಯ ಡೊಂಗರ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಸುಮಿತ್ರಾ ಪೆಟ್ಕುಲೆ (65) ಎಂದು ಗುರುತಿಸಲಾಗಿದೆ. ಆರೋಪಿ ಜಗದೀಶ್ ಪೆಟ್ಕುಲೆ (37)ನನ್ನು ಬಂಧಿಸಲಾಗಿದೆ (Crime News).

ಜಗದೀಶ್ ಮದ್ಯದ ಚಟ ಹೊಂದಿದ್ದ. ಅವನ ಪತ್ನಿ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ನಂತರ ಆತ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ. ಘಟನೆ ನಡೆದ ರಾತ್ರಿ, ಆರೋಪಿಯು ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ. ಅವನಿಗೆ ಇಷ್ಟವಿಲ್ಲದ ಹಾಗಲಕಾಯಿ ಅಡುಗೆ ಮಾಡಿದ್ದ ಬಗ್ಗೆ ತನ್ನ ತಾಯಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದ. ಜಗಳ ಶೀಘ್ರದಲ್ಲೇ ಉಲ್ಬಣಗೊಂಡಿತು. ಬಳಿಕ ಆರೋಪಿ ಜಗದೀಶ್ ತನ್ನ ತಾಯಿಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದ. ಮಾರಕ ದಾಳಿಗೆ ತಾಯಿ ಸುಮಿತ್ರಾ ಪೆಟ್ಕುಲೆ ಸ್ಥಳದಲ್ಲೇ ಮೃತಪಟ್ಟರು.

ಮಟನ್ ಕರಿಯಲ್ಲಿ ಮಾತ್ರೆ ಬೆರೆಸಿ ಪತಿ ಹತ್ಯೆ ಯತ್ನ; ಸಾಧ್ಯವಾಗದ್ದಕ್ಕೆ ಕತ್ತು ಹಿಸುಕಿ ಪತಿಯನ್ನೇ ಕೊಂದ ಪಾಪಿ ಪತ್ನಿ!

ಘಟನೆಯ ನಂತರ, ಆರೋಪಿಯು ಹಳ್ಳಿಯಲ್ಲಿ ಸುತ್ತಾಡಿ ತನ್ನ ತಾಯಿಯನ್ನು ಕೊಂದಿರುವುದಾಗಿ ಗ್ರಾಮಸ್ಥರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ. ಆದರೆ ಅವನು ಕುಡಿದಿದ್ದರಿಂದ ಗ್ರಾಮಸ್ಥರು ಅವನ ಮಾತನ್ನು ನಿರ್ಲಕ್ಷಿಸಿದರು. ನಂತರ ಅವರಿಗೆ ಅನುಮಾನ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದರು.

ಮುಲ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ. ಹಾಗಲಕಾಯಿ ಖಾದ್ಯದ ವಿವಾದದ ನಂತರ ಈ ಕೊಲೆ ನಡೆದಿದೆ ಎಂದು ಇನ್ಸ್‌ಪೆಕ್ಟರ್ ವಿಜಯ್ ರಾಥೋಡ್ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಟಿವಿ ವಾಲ್ಯೂಮ್ ಕಡಿಮೆ ಮಾಡದ್ದಕ್ಕೆ ಪತಿಯನ್ನೇ ಕೊಂದ ಪತ್ನಿ

ಆಂಧ್ರ ಪ್ರದೇಶದ ಮಂಗಳಗಿರಿಯಲ್ಲಿ ಮಹಿಳೆಯೊಬ್ಬರು ಟಿವಿ ವಾಲ್ಯೂಮ್ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಪತಿಯನ್ನು ಕೊಂದಿದ್ದಾರೆ. ಟಿವಿ ಸೆಟ್‌ನ ವಾಲ್ಯೂಮ್ ಬಗ್ಗೆ ನಡೆದ ಜಗಳದಲ್ಲಿ ಪತ್ನಿಯೇ ವ್ಯಕ್ತಿಯನ್ನು ಇರಿದು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಶೇಖ್ ಅಹ್ಮದ್ (27) ಎಂದು ಗುರುತಿಸಲಾಗಿದೆ. ಅವರು ಎಸಿ ಮೆಕ್ಯಾನಿಕ್ ಆಗಿದ್ದರು. ಅಹ್ಮದ್ ಮತ್ತು ಅವರ ಪತ್ನಿ ಮಂಗಳಗಿರಿಯ ಟಿಡ್ಕೊ ಹೌಸಿಂಗ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು.

ತನ್ನ ಪತ್ನಿಯನ್ನು ಟಿವಿಯ ಧ್ವನಿಯನ್ನು ಕಡಿಮೆ ಮಾಡಲು ಪತಿ ಕೇಳಿದಾಗ ಜಗಳವಾಯಿತು. ಇದರಿಂದ ಕೋಪಗೊಂಡ ಆಕೆ ಚಾಕುವಿನಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ. ಅಲ್ಲೇ ಇದ್ದವರು ಅಹ್ಮದ್ ಅವರನ್ನು ಚಿಕಿತ್ಸೆಗಾಗಿ ವಿಜಯವಾಡದ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮಹಿಳೆಯನ್ನು ಬಂಧಿಸಲಾಗಿದೆ. ಪೊಲೀಸರು ಪ್ರಕರಣದ ಎಲ್ಲ ಆಯಾಮಗಳನ್ನು ತನಿಖೆ ಮಾಡುತ್ತಿದ್ದಾರೆ.