ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೀಲ್ಸ್ ಹುಚ್ಚಿಗೆ ಮಹಿಳೆ ಬಲಿ; ಆಕಸ್ಮಿಕವಾಗಿ ನೇಣು ಬಿಗಿದುಕೊಂಡು ಸಾವು

Accidental death: ರೀಲ್ಸ್ ಹುಚ್ಚಿಗೆ ಮಹಿಳೆಯೊಬ್ಬಳು ಬಲಿಯಾಗಿರುವ ದುರ್ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರೀಲ್ಸ್ ಚಿತ್ರೀಕರಣ ನಡೆಸುವ ವೇಳೆ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು ಮಹಿಳೆ ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಸಾರ್ವಜನಿಕರಲ್ಲಿ ಆಘಾತ ಮೂಡಿಸಿದೆ. ಸದ್ಯ ಈ ಸುದ್ದಿ ವೈರಲ್‌ ಆಗಿದೆ.

ರೀಲ್ಸ್ ಹುಚ್ಚಿಗೆ ಮಹಿಳೆ ಬಲಿ; ಆಕಸ್ಮಿಕವಾಗಿ ನೇಣು ಬಿಗಿದುಕೊಂಡು ಸಾವು

ಮೃತ ಮೋಹಿನಿ (ಸಂಗ್ರಹ ಚಿತ್ರ) -

Priyanka P
Priyanka P Feb 7, 2026 2:40 PM

ಲಖನೌ, ಫೆ. 7: ಇತ್ತೀಚೆಗೆ ಹಲವು ಮಂದಿ ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿಗಳಿಸಲು ಪ್ರಾಣಕ್ಕೆ ಹಾನಿಯಾಗುವಂತಹ ರೀಲ್ಸ್‌ಗಳಲ್ಲಿ ತೊಡಗುತ್ತಾರೆ. ಇದರಿಂದ ಅನೇಕರು ಜೀವ ಕಳೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ವ್ಯಸನ ಮತ್ತು ರೀಲ್ ಮೇಕಿಂಗ್‌ನ ಹುಚ್ಚು ಮಹಿಳೆಯೊಬ್ಬಳ ಜೀವಕ್ಕೆ ಮಾರಕವಾಗಿದೆ. ಉತ್ತರ ಪ್ರದೇಶದ (Uttar Pradesh) ಬಂದಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು, ವಿಡಿಯೊ ಚಿತ್ರೀಕರಿಸಲು ಪ್ರಯತ್ನಿಸುವಾಗ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಒಂದು ರೀಲ್‌ ಚಿತ್ರೀಕರಣ ಮಾಡಲು ಹೋಗಿ ಆಕೆಯ ಜೀವನ ದುರಂತವಾಗಿ ಅಂತ್ಯಗೊಂಡಿದೆ. 27 ವರ್ಷದ ಮೋಹಿನಿ ಮೃತ ದುರ್ದೈವಿ. ಆಕೆ ತನ್ನ ಮನೆಯೊಳಗೆ ರೀಲ್ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕುಟುಂಬ ಸದಸ್ಯರ ಪ್ರಕಾರ, ಮೋಹಿನಿ ನೇಣು ಬಿಗಿಯುವ ದೃಶ್ಯವನ್ನು ಸೃಷ್ಟಿಸುತ್ತಿದ್ದಳು. ಅವಳು ಕುತ್ತಿಗೆಗೆ ನೇಣು ಬಿಗಿದುಕೊಂಡು ಸ್ಟೂಲ್ ಮೇಲೆ ನಿಂತು ತನ್ನ ಮೊಬೈಲ್ ಫೋನ್‌ನಲ್ಲಿ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಳು.

ಆರು ವರ್ಷಗಳಲ್ಲಿ ಮೂರು ಮದುವೆ; ವರದಕ್ಷಿಗೆ ಕಿರುಕುಳ ನೀಡ್ತಿದ್ದ ಭೂಪ ನಾಲ್ಕನೇ ಮದುವೆ ವೇಳೆ ಸಿಕ್ಕಿ ಬಿದ್ದಿದ್ದೇ ರೋಚಕ!

ಆದರೆ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ದುರಂತ ತಿರುವು ಪಡೆದುಕೊಂಡಿತು. ಅವಳು ಜಾರಿದಳೋ ಅಥವಾ ಸಮತೋಲನ ಕಳೆದುಕೊಂಡಳೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆಕೆಯ ಕುತ್ತಿಗೆಗೆ ಕುಣಿಕೆ ಬಿಗಿಯಾಗಿದ್ದು, ಕೆಲವೇ ಸೆಕೆಂಡುಗಳಲ್ಲಿ ಆಕೆಯ ಸಾವಿಗೆ ಕಾರಣವಾಯಿತು. ಮೋಹಿನಿಯ ನಾಲ್ಕು ವರ್ಷದ ಮಗಳು ಕೋಣೆಗೆ ಪ್ರವೇಶಿಸಿದಾಗ ಈ ಘಟನೆ ಬೆಳಕಿಗೆ ಬಂದಿತು. ತಾಯಿ ನೇಣು ಬಿಗಿದುಕೊಂಡಿರುವುದನ್ನು ನೋಡಿದ ಮಗು ಸಹಾಯಕ್ಕಾಗಿ ಕಿರುಚಿತು. ಕೂಗು ಕೇಳಿ ನೆರೆಹೊರೆಯವರು ಒಳಗೆ ಓಡಿ ಬಂದು ನೋಡಿದ ದೃಶ್ಯದಿಂದ ದಿಗ್ಭ್ರಮೆಗೊಂಡರು. ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದಳು.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಶವವನ್ನು ಕುಣಿಕೆಯಿಂದ ಕೆಳಗಿಳಿಸಿದರು. ಮೃತದೇಹವನ್ನು ವಶಕ್ಕೆ ತೆಗೆದುಕೊಂಡು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣವನ್ನು ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆರಂಭಿಕ ತನಿಖೆಗಳ ಪ್ರಕಾರ ಇದು ರೀಲ್ ಚಿತ್ರೀಕರಣ ಮಾಡುವಾಗ ಸಂಭವಿಸಿದ ಅಪಘಾತ.

ಗಾಜಿಯಾಬಾದ್ ಮೂವರು ಸಹೋದರಿಯರ ಆತ್ಮಹತ್ಯೆ ಪ್ರಕರಣ

ಉತ್ತರ ಪ್ರದೇಶದ ಗಾಜಿಯಾಬಾದ್‌ನ ತಿಲಾ ಮಾಡ್ ಪ್ರದೇಶದ ಭಾರತ್ ಸಿಟಿ ಸೊಸೈಟಿಯ ಒಂಭತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಮೂವರು ಅಪ್ರಾಪ್ತ ಸಹೋದರಿಯರ ಪ್ರಕರಣದಲ್ಲಿ, ತನಿಖೆಯಲ್ಲಿ ಯಾವುದೇ ಪಿತೂರಿ ಅಥವಾ ಬಾಹ್ಯ ಹಸ್ತಕ್ಷೇಪವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಮತ್ತು ಘಟನೆಯ ದೃಶ್ಯ ಮರುಸೃಷ್ಟಿಯಲ್ಲಿ ಮೂವರು ಸಹೋದರಿಯರು ಒಬ್ಬೊಬ್ಬರಾಗಿ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹಲ್ಲೆ, ಬಲವಂತ ಅಥವಾ ಹಳೆಯ ಗಾಯಗಳ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಎತ್ತರದಿಂದ ಬಿದ್ದು ಉಂಟಾದ ಗಂಭೀರ ಗಾಯಗಳಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ವರದಿಯ ಪ್ರಕಾರ, ತಲೆ, ಪಕ್ಕೆಲುಬುಗಳು ಮತ್ತು ಕಾಲುಗಳಲ್ಲಿ ಬಹು ಮುರಿತಗಳು ಕಂಡುಬಂದಿವೆ. ಆದರೆ ಆಂತರಿಕ ಅಂಗಗಳ ಛಿದ್ರವೂ ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆಯ ವರದಿಯು ಮೂವರ ಸಾವಿನ ಸಮಯ ಬಹುತೇಕ ಒಂದೇ ಆಗಿತ್ತು ಎಂದು ಹೇಳುತ್ತದೆ.