ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗಾಂಜಾ ನಶೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ನಡೆಸಿದ ಆರೋಪಿಯ ಬಂಧನ

Bengaluru Crime News: ಬೆಂಗಳೂರು ಹೊರವಲಯದ ತಾವರೆಕೆರೆ ಗ್ರಾಮದಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೀಡಾದ ಬಾಲಕಿ, ಕೊಪ್ಪಳ ಮೂಲದ ದಂಪತಿಯ ಮಗಳಾಗಿದ್ದು, ಪಾಲಕರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಘಟನೆ ನಡೆದಿತ್ತು.

ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ನಡೆಸಿದ ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ.

Profile Ramesh B Jul 10, 2025 3:59 PM

ಬೆಂಗಳೂರು: ಬೆಂಗಳೂರು (Bengaluru Crime News) ಹೊರವಲಯದ ತಾವರೆಕೆರೆ ಗ್ರಾಮದಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ (Murder Case) ನಡೆಸಿದ (Physical abuse) ಆರೋಪಿಯನ್ನು ಬಂಧಿಸಲಾಗಿದೆ. ಹತ್ಯೆಗೀಡಾದ ಬಾಲಕಿ, ಕೊಪ್ಪಳ ಮೂಲದ ದಂಪತಿಯ ಮಗಳಾಗಿದ್ದು, ಪಾಲಕರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಘಟನೆ ನಡೆದಿತ್ತು. ಆರೋಪಿ ರಾಯಚೂರು ಮೂಲದವನಾಗಿದ್ದು, ಬಾಲಕಿಯ ಪಾಲಕರ ಬಗ್ಗೆ ಆತನಿಗೆ ಮೊದಲೇ ಗೊತ್ತಿತ್ತು ಎನ್ನಲಾಗಿದೆ. ಮರಗೆಲಸ ಮಾಡಿಕೊಂಡಿದ್ದವನು ಬುಧವಾರ ಮಧ್ಯಾಹ್ನ ಗಾಂಜಾ ನಶೆಯಲ್ಲಿ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾನೆ. ರಾತ್ರಿ ತಾವರೆಕೆರೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಬೈಕ್ ಹಾಗೂ ಮೊಬೈಲ್ ಕಳವು ಮಾಡಿದ್ದ. ಕಳವು ಮಾಡಿದ ಬೈಕ್‌ನಲ್ಲೇ ಆತ ಬುಧವಾರ ಮಧ್ಯಾಹ್ನ ಬಾಲಕಿಯ ಮನೆಯ ಬಳಿ ಬಂದಿದ್ದ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಹತ್ಯೆ ನಡೆಸಿ ಮನೆಯಲ್ಲಿ ಇದ್ದ ಸಿಲಿಂಡರ್ ಹೊತ್ತೊಯ್ದಿದ್ದ. ತಲೆಮರೆಸಿಕೊಂಡಿದ್ದ ಆತ ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಘಟನೆ ವಿವರ

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಕೊಪ್ಪಳ ಮೂಲದ ದಂಪತಿ ಗಾರೆ ಕೆಲಸ ಮಾಡಿಕೊಂಡು 15 ವರ್ಷಗಳಿಂದ ವಾಸವಾಗಿದ್ದಾರೆ. ತಂದೆ ತಾಯಿ ಕೆಲಸಕ್ಕೆ ಹೋಗಿದ್ದಾಗ ಆರೋಪಿ ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾನೆ. ಈ ಬಾಲಕಿ ಶಾಲೆಗೆ ಹೋಗದೆ ಮನೆಯಲ್ಲಿ ಇದ್ದಳು ಎನ್ನಲಾಗಿದೆ. ಮಧ್ಯಾಹ್ನ ಮನೆಯಲ್ಲಿ ಬಾಲಕಿ ಶವ ಪತ್ತೆಯಾಗಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಸುದ್ದಿಯನ್ನೂ ಓದಿ: Physical Abuse: ಬೆಂಗಳೂರಿನಲ್ಲಿ ಹೀನ ಕೃತ್ಯ; ಸ್ನೇಹಿತನ ಮನೆಗೆ ಹೋಗಿದ್ದ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌

ಗೆಳತಿ ಮೇಲೆ ಸಾಮೂಹಿಕ ಅತ್ಯಾಚಾರ

ಚಿಕ್ಕನಾಯಕನಹಳ್ಳಿ: 19 ವರ್ಷದ ಯವತಿಯೊಬ್ಬಳನ್ನು ಆಕೆಯ ಸ್ನೇಹಿತನೇ ಕರೆಸಿ, ತನ್ನ ಗೆಳೆಯರ ಜತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ತಾಲೂಕಿನ ಕಂದಿಕೆರೆ ಹೋಬಳಿಯ ಆಶ್ರೀಹಾಲ್ ಗ್ರಾಮದಲ್ಲಿ ನಡೆದಿತ್ತು. ಜೂ. 9ರ ರಾತ್ರಿ 10.30ರ ಸುಮಾರಿಗೆ ಆರೋಪಿಯು ಪೋನ್ ಕರೆ ಮಾಡಿ ಯುವತಿಯನ್ನು ಮಾತನಾಡಬೇಕು ಎಂದು ಆಚೆ ಕರೆಸಿಕೊಂಡಿದ್ದಾನೆ. ಆಕೆ ಬಂದಾಗ ಆಕೆಯ ಬಾಯಿಗೆ ವೇಲ್ ಕಟ್ಟಿ ತನ್ನ ಸ್ನೇಹಿತರೊಂದಿಗೆ ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾನೆ. ಅಲ್ಲಿ ಆತ ಮೊದಲು ಆತ್ಯಾಚಾರ ಮಾಡಿದ್ದಾನೆ. ನಂತರ ಆತನ ಸ್ನೇಹಿತರು ಆತ್ಯಾಚಾರ ಎಸಗಿದ್ದಾರೆ.

ಅತ್ಯಾಚಾರದ ನಂತರ ಯುವತಿಯು ತೀವ್ರ ಅಸ್ವಸ್ಥಳಾಗಿದ್ದಳು. ಆರೋಪಿಗಳು ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಮತ್ತು ನಿನ್ನ ಹೆತ್ತವರನ್ನು ಸಾಯಿಸುತ್ತೇವೆ ಎಂದು ಬೆದರಿಸಿ ಅಲ್ಲಿಂದ ಓಡಿಹೋಗಿದ್ದಾರೆ. ಯುವತಿ ಹೇಗೋ ಮನೆಗೆ ಬಂದು ತನಗಾದ ಅನ್ಯಾಯವನ್ನು ತಾಯಿಗೆ ತಿಳಿಸಿದ್ದಾಳೆ. ಆದರೆ ಆರೋಪಿಗಳ ಬೆದರಿಕೆಯಿಂದ ಹೆದರಿ ತಾಯಿ ಮತ್ತು ಮಗಳು ಕೃತ್ಯ ಎಸಗಿದ ಆರೋಪಿಗಳ ಬಗ್ಗೆ ಏನನ್ನೂ ಹೇಳದೆ ಸುಮ್ಮನಾಗಿದ್ದಾರೆ. ಕೆಲವು ದಿನಗಳ ನಂತರ ಹುಡುಗಿಯ ತಾಯಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಸಂತ್ರಸ್ತೆಯ ತಂದೆಗೆ ಈ ವಿಚಾರ ತಿಳಿದಾಗ ಮತ್ತೊಬ್ಬರ ಸಹಾಯದಿಂದ ಚಿಕ್ಕನಾಯಕನಹಳ್ಳಿ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.