ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Murder Case: ಇಂದೋರ್‌ ಹತ್ಯೆ ರೀತಿಯಲ್ಲೇ ಮತ್ತೊಂದು ಮರ್ಡರ್‌; ಬಾಯ್‌ಫ್ರೆಂಡ್‌ಗಾಗಿ ಮದುವೆಯಾದ ಒಂದೇ ತಿಂಗಳಿಗೇ ಗಂಡನನ್ನು ಕೊಂದಳಾ ಪತ್ನಿ?

ಇತ್ತೀಚೆಗೆ ಇಂದೋರ್‌ ಮರ್ಡರ್‌ ಕೇಸ್‌ (Murder Case) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪತ್ನಿಯೇ ಖುದ್ದು ತನ್ನ ಪತಿಯನ್ನು ಕೊಲೆ ಮಾಡಿಸಿದ್ದಳು. ಇದೀಗ ಆಂಧ್ರಪ್ರದೇಶದಲ್ಲಿಯೂ (Andhra Pradesh) ಅಂತಹುದೇ ಪ್ರಕರಣವೊಂದು ದಾಖಲಾಗಿದೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ವ್ಯಕ್ತಿಯೊಬ್ಬ ಮದುವೆಯಾದ ಒಂದು ತಿಂಗಳ ನಂತರ ಶವವಾಗಿ ಪತ್ತೆಯಾಗಿದೆ.

ಬಾಯ್‌ಫ್ರೆಂಡ್‌ಗಾಗಿ ಮದುವೆಯಾದ ಒಂದೇ ತಿಂಗಳಿಗೇ ಗಂಡನನ್ನೇ ಕೊಂದಳಾ ಪತ್ನಿ?

-

Vishakha Bhat Heggar
Vishakha Bhat Heggar Jun 23, 2025 3:37 PM

ಹೈದರಾಬಾದ್‌: ಇತ್ತೀಚೆಗೆ ಇಂದೋರ್‌ ಮರ್ಡರ್‌ ಕೇಸ್‌ (Murder Case) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪತ್ನಿಯೇ ಖುದ್ದು ತನ್ನ ಪತಿಯನ್ನು ಕೊಲೆ ಮಾಡಿಸಿದ್ದಳು. ಇದೀಗ ಆಂಧ್ರಪ್ರದೇಶದಲ್ಲಿಯೂ (Andhra Pradesh) ಅಂತಹುದೇ ಪ್ರಕರಣವೊಂದು ದಾಖಲಾಗಿದೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ವ್ಯಕ್ತಿಯೊಬ್ಬ ಮದುವೆಯಾದ ಒಂದು ತಿಂಗಳ ನಂತರ ಶವವಾಗಿ ಪತ್ತೆಯಾಗಿದ್ದು, ಆತನ ಪತ್ನಿ ಮತ್ತು ಆಕೆಯ ತಾಯಿಯನ್ನು ಬಂಧಿಸಲಾಗಿದೆ. ಮೇ 18 ರಂದು ಮದುವೆಯಾದ ಒಂದು ತಿಂಗಳ ನಂತರ, ಜೂನ್ 17 ರಂದು 32 ವರ್ಷದ ತೇಜೇಶ್ವರ್ ನಾಪತ್ತೆಯಾಗಿದ್ದರು. ಅವರ ಮೃತದೇಹ ಈಗ ಕಾಲುವೆಯಲ್ಲಿ ಪತ್ತೆಯಾಗಿದೆ.

ಮೃತರನ್ನು ತೇಜೇಶ್ವರ್ ಎಂದು ಗುರುತಿಸಲಾಗಿದ್ದು ಅವರು ಖಾಸಗಿ ಸರ್ವೇ ಅಧಿಕಾರಿ ಮತ್ತು ನೃತ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.ತೇಜೇಶ್ವರ್ ಅವರ ಕುಟುಂಬವು ಅವರ ಪತ್ನಿ ಈಶ್ವರ್ಯ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪಿಸಿದ್ದು, ಆಕೆಯೇ ನಮ್ಮ ಮಗನನ್ನು ಕೊಂದಿದ್ದಾಳೆ ಎಂದು ಆರೋಪಿಸಿದ್ದಾರೆ. ತೇಜೇಶ್ವರ್ ಅವರ ಕುಟುಂಬದವರ ಪ್ರಕಾರ, ಈಶ್ವರ್ಯ ಅವರ ತಾಯಿ ಸುಜಾತಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾರೆ. ಈಶ್ವರ್ಯ ಬ್ಯಾಂಕ್ ಉದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದರು ಅವರು ಆರೋಪ ಮಾಡಿದ್ದಾರೆ. ಆದರೂ ತೇಜೇಶ್ವರ್ ಜೊತೆ ಪ್ರೀತಿ ಪ್ರೇಮದ ನಾಟಕವಾಡಿದ್ದಾಳೆ. ನಂತರ ಇಬ್ಬರ ಒಪ್ಪಿಗೆಯೊಂದಿಗೆ ಮದುವೆಯಾಗಿದೆ.

ಫೆಬ್ರವರಿಯಲ್ಲಿ ಮದುವೆ ನಿಗದಿಯಾಗಿತ್ತು, ಆದರೆ ಈಶ್ವರ್ಯ ಕಾಣೆಯಾದ ನಂತರ ಅದನ್ನು ಮುಂದೂಡಬೇಕಾಯಿತು. ನಂತರ ಅವರು ಹಿಂತಿರುಗಿ ತೇಜೇಶ್ವರ್ ಜೊತೆ ಮತ್ತೆ ಪ್ರೀತಿ ಪ್ರೇಮದ ನಾಟಕವಾಡಿದ್ದಳು. ತೇಜೇಶ್ವರ್ ಅವರ ಕುಟುಂಬ ಸದಸ್ಯರು ಈಶ್ವರ್ಯ ಅವರನ್ನು ಮದುವೆಯಾಗದಂತೆ ಎಚ್ಚರಿಸಿದ್ದರು. ಆದರೂ ಆತ ಆಕೆಯನ್ನೇ ಮದುವೆಯಾಗಿದ್ದ. ಇದೀಗ ಆಕೆಯೇ ಆತನನ್ನು ಕೊಲೆ ಮಾಡಿದ್ದಳೆ ಎಂದು ತೇಜೇಶ್ವರ್‌ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Honeymoon Murder Case: ಹನಿಮೂನ್ ಕೊಲೆಗೆ ಹೊಸ ಟ್ವಿಸ್ಟ್- ಸಂಜಯ್ ವರ್ಮಗೆ 234 ಬಾರಿ ಕರೆ ಮಾಡಿದ್ದ ಸೋನಂ-ಅಷ್ಟಕ್ಕೂ ಯಾರೀತಾ?

ಮಧ್ಯಪ್ರದೇಶದ ಇಂದೋರ್ ಮೂಲದ ರಾಜಾ ರಘುವಂಶಿ ಎಂಬುವವರು ಸೋನಮ್ ಅವರನ್ನು ವಿವಾಹವಾಗಿದ್ದರು. ಕೆಲವೇ ದಿನಗಳಲ್ಲಿ ಹನಿಮೂನ್ ನೆಪದಲ್ಲಿ ಗಂಡನನ್ನು ಕರೆದೊಯ್ದು ತನ್ನ ಪ್ರಿಯಕರನ ಕೈಯಲ್ಲೇ ಆತನನ್ನು ಹತ್ಯೆ ಮಾಡಿಸಿದ್ದಳು. ಕೊಲೆಯಾಗಿ ಕೆಲವು ದಿನಗಳ ಬಳಿಕ ರಾಜಾ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆ ಮದುವೆಗೂ ಮುನ್ನ ರಾಜ್ ಕುಶ್ವಾಹ ಎಂಬುವವನ್ನು ಪ್ರೀತಿಸುತ್ತಿದ್ದಳು. ಆತನನ್ನೇ ಮದುವೆಯಾಗಬೇಕೆಂದು ಬಯಸಿದ್ದಳು. ಆದರೆ ಮನೆಯಲ್ಲಿ ಒಪ್ಪಿರಲಿಲ್ಲ.