ಭೋಪಾಲ್, ಏ.24: ಯುವತಿ ಓಡಿಹೋಗಿದ್ದಕ್ಕೆ ಕೋಪಗೊಂಡ ಆಕೆಯ ಕುಟುಂಬಸ್ಥರು ವ್ಯಕ್ತಿಯ ಕುಟುಂಬದ 70 ವರ್ಷದ ವೃದ್ಧರೊಬ್ಬರನ್ನು ಅಪಹರಿಸಿ, ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ (Madhya Pradesh) ಮಾನವೀಯತೆಯನ್ನು ಬೆಚ್ಚಿಬೀಳಿಸುವಂತಹ ಈ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಕಳೆದ ತಿಂಗಳಲ್ಲಿ ನಡೆದಿದ್ದರೂ, ವೃದ್ಧನ ಮೇಲೆ ನಡೆದ ದೌರ್ಜನ್ಯದ ವಿಡಿಯೊ ವೈರಲ್ ಆದ ನಂತರ ಪ್ರಕರಣ ಬಹಿರಂಗವಾಯಿತು.
70 ವರ್ಷದ ವ್ಯಕ್ತಿಯನ್ನು ಅಪಹರಿಸಿ, ಅವರ ಮಗ ಓಡಿಹೋದ ಯುವತಿಯ ಕುಟುಂಬದವರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ವೃದ್ಧನನ್ನು ಥಳಿಸಿ ಮದ್ಯದ ಬಾಟಲಿಯಿಂದ ಮೂತ್ರ ಕುಡಿಸಿ ಅಮಾನುಷವಾಗಿ ವರ್ತಿಸಿದ್ದಾರೆ. ಮಾರ್ಚ್ 5 ರಂದು, ರೈಸೇನ್‍ನ ವ್ಯಕ್ತಿಯೊಬ್ಬ ವಿದಿಶಾ ಜಿಲ್ಲೆಯ ಯುವತಿಯೊಂದಿಗೆ ಮದುವೆಯಾಗಲು ಓಡಿಹೋದ. ಮರುದಿನ ಈ ಪ್ರಕರಣದ ಬಗ್ಗೆ ಕೇಸ್ ದಾಖಲಾಗಿತ್ತು. ನಂತರ, ಮಾರ್ಚ್ 7 ರಂದು, ಯುವತಿಯ ಕುಟುಂಬ ಮತ್ತು ಸಂಬಂಧಿಕರು ಓಡಿಹೋದಾತನ ಮನೆಗೆ ಹೋಗಿ ವೃದ್ಧ ವ್ಯಕ್ತಿಯಲ್ಲಿ ವಿಚಾರಿಸಿದ್ದಾರೆ. ಮಗ ಎಲ್ಲಿ ಎಂದು ಕೇಳಿ, ಹಲ್ಲೆ ನಡೆಸಿದ್ದಾರೆ.
ನಂತರ, ಹುಡುಗಿಯನ್ನು ಹುಡುಕುವ ನೆಪದಲ್ಲಿ, ಆರೋಪಿಗಳು 70 ವರ್ಷದ ವ್ಯಕ್ತಿಯನ್ನು ತಮ್ಮ ವಾಹನಗಳಲ್ಲಿ ಬಲವಂತವಾಗಿ ರಹಸ್ಯ ಸ್ಥಳಕ್ಕೆ ಕರೆದೊಯ್ದರು. ಕನಿಷ್ಠ 12 ಪುರುಷರು ಅಲ್ಲಿದ್ದರು ಎನ್ನಲಾಗಿದೆ. ಅವರು ವೃದ್ಧ ವ್ಯಕ್ತಿಯನ್ನು ರಾಜ್‌ಗಢ ಜಿಲ್ಲೆಯ ಮೋತಿಪುರ ಗ್ರಾಮಕ್ಕೆ ಕರೆದೊಯ್ದರು.
ಬಸವಕಲ್ಯಾಣದಲ್ಲಿ ಬಸವೇಶ್ವರರ ರಥೋತ್ಸವದ ವೇಳೆ ಘೋರ ದುರಂತ; ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು
ಓಡಿಹೋದ ಯುವಕ-ಯುವತಿ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣ, ಕುಟುಂಬ ಸದಸ್ಯರು ವೃದ್ಧನಿಗೆ ಬಲವಂತವಾಗಿ ಮದ್ಯದ ಬಾಟಲಿಯಿಂದ ಮೂತ್ರ ಕುಡಿಸಿ, ನಂತರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಿಂಗಳುಗಳ ನಂತರ, ಸಂತ್ರಸ್ತ ವ್ಯಕ್ತಿ ಮತ್ತು ಅವನ ಕುಟುಂಬ ಪೊಲೀಸ್ ಠಾಣೆಗೆ ಹೋಗಿ ಆರೋಪಿಯ ವಿರುದ್ಧ ದೂರು ದಾಖಲಿಸಿದರು.
ವಿಡಿಯೊ ವೈರಲ್ ಆದ ನಂತರ, ರಾಜ್‌ಗಢ ಪೊಲೀಸರು ವಿಷಯ ತಿಳಿದುಕೊಂಡು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಂತ್ರಸ್ತ ವ್ಯಕ್ತಿಯ ಮನೆಗೆ ಭೇಟಿ ನೀಡಿದರು. ವ್ಯಕ್ತಿಯ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ. ಉಳಿದ ಆರೋಪಿಗಳನ್ನು ಗುರುತಿಸಿ ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಸಿಕ್‌ನ ಮತ್ತೊಬ್ಬ ಸ್ವಘೋಷಿತ ದೇವ ಮಾನವ ಭೋಂದು ಬಾಬಾ ವಿರುದ್ಧ ಅತ್ಯಾಚಾರ ಪ್ರಕರಣ
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಆಧ್ಯಾತ್ಮಿಕ ಚಿಕಿತ್ಸೆಯ ಹೆಸರಿನಲ್ಲಿ 28 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 'ಭೋಂದು ಬಾಬಾ’ ಎಂದು ಕರೆಯಲ್ಪಡುವ ಸ್ವಯಂಘೋಷಿತ ದೇವಮಾನವನ ವಿರುದ್ಧ ಪ್ರಕರಣ ದಾಖಲಾಗಿದೆ. ಮಾನಸಿಕ ನೆಮ್ಮದಿ ಅರಸಿ ಬಂದಿದ್ದ ಸಂತ್ರಸ್ತೆಯ ಮೇಲೆ ಈ ಕ್ರೂರ ಕೃತ್ಯ ನಡೆದಿದೆ. ಆರೋಪಿಯನ್ನು ಮಹೇಶ್‌ಗಿರಿ ಬಾಬಾ ಅಲಿಯಾಸ್ ಮಹೇಶ್ ದಿಲೀಪ್ ಕಾಕ್ಡೆ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ರಾಜ್ಯದ ಮಾಟಮಂತ್ರ ವಿರೋಧಿ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.