ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಾರಾಷ್ಟ್ರ ನೆಲೆಯಲ್ಲಿ ಅಭ್ಯಾಸದ ವೇಳೆ ಗುಂಡು ಹಾರಿ ಸೇನಾಧಿಕಾರಿ ಸಾವು

ಅಭ್ಯಾಸದ ವೇಳೆ ಗುಂಡು ಹಾರಿ ಸೇನಾಧಿಕಾರಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಜೂನಿಯರ್ ಕಮಿಷನರ್ ಅಧಿಕಾರಿಗಳಲ್ಲಿ ಅತ್ಯುನ್ನತ ಸುಬೇದಾರ್ ಮೇಜರ್ ಹುದ್ದೆ ಹೊಂದಿದ್ದ ಅಧಿಕಾರಿಯನ್ನು ಓಂ ಬಹದ್ದೂರ್ ಖಾಂಡ್ ಮೃತರು. ವಾರ್ಧಾ ಜಿಲ್ಲೆಯ ಸೆಂಟ್ರಲ್ ಮದ್ದುಗುಂಡು ಡಿಪೋದ ಪುಲ್ಗಾಂವ್ ಫೈರಿಂಗ್ ರೇಂಜ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

ಸಂಗ್ರಹ ಚಿತ್ರ

ಮಹಾರಾಷ್ಟ್ರ: ಫೈರಿಂಗ್ ಅಭ್ಯಾಸದ (firing practice) ವೇಳೆ ಆಕಸ್ಮಿಕವಾಗಿ ಗುಂಡು ತಗಲಿ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೇ 15ರಂದು ಶುಕ್ರವಾರ ನಡೆದಿದೆ. ಮಹಾರಾಷ್ಟ್ರದ (Maharastra) ವಾರ್ಧಾ ಜಿಲ್ಲೆಯ ಸೆಂಟ್ರಲ್ ಮದ್ದುಗುಂಡು ಡಿಪೋದ ಪುಲ್ಗಾಂವ್ ಫೈರಿಂಗ್ ರೇಂಜ್‌ನಲ್ಲಿ (Pulgaon firing range) ಗುಂಡು ಹಾರಿಸುವ ಅಭ್ಯಾಸದ ವೇಳೆ ರಕ್ಷಣಾ ಭದ್ರತಾ ದಳದ ಜೂನಿಯರ್ ಕಮಿಷನರ್ ಅಧಿಕಾರಿಯೊಬ್ಬರು ಗುಂಡು ತಗಲಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ್ದಾರೆ. ಓಂ ಬಹದ್ದೂರ್ ಖಾಂಡ್ ಮೃತರು. ಘಟನೆಯ ಕುರಿತು ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ.

ವಾರ್ಧಾ ಜಿಲ್ಲೆಯ ನಾಗ್ಪುರದಿಂದ 100 ಕಿ.ಮೀ. ದೂರದಲ್ಲಿರುವ ಪುಲ್ಗಾಂವ್‌ನ ಸೆಂಟ್ರಲ್ ಅಮ್ಯುನಿಷನ್ ಡಿಪೋದಲ್ಲಿ ಸೇನಾಧಿಕಾರಿ ಮೇಜರ್ ಮನನ್ ತಿವಾರಿ ಅವರು ಶುಕ್ರವಾರ ಅಭ್ಯಾಸ ಮಾಡುತ್ತಿದ್ದ ವೇಳೆ ಓಂ ಬಹದ್ದೂರ್ ಖಾಂಡ್ ಅವರಿಗೆ ಗುಂಡು ತಗಲಿದೆ. ಮುಂಜಾನೆ 5.56ರ ವೇಳೆಗೆ ಐಎನ್‌ಎಸ್‌ಎಎಸ್ ಅಸಾಲ್ಟ್ ರೈಫಲ್‌ನಿಂದ ಮನನ್ ತಿವಾರಿ ಅವರು ಓಂ ಬಹದ್ದೂರ್ ಮೇಲೆ ಹತ್ತಿರದಿಂದ ಗುಂಡು ಹರಿಸಿದ್ದಾರೆ ಎಂದು ಪುಲ್ಗಾಂವ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಕಲ್ಲಂಗಡಿ ಸೇವಿಸಿ ಮಧ್ಯಪ್ರದೇಶದಲ್ಲಿ ಓರ್ವ ಸಾವು, ಇನ್ನೋರ್ವ ಗಂಭೀರ

ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಪ್ರಕಾರ ಅಭ್ಯಾಸ ನಡೆಸುತ್ತಿದ್ದ ಮನನ್ ತಿವಾರಿ ಅವರು ಖಾಲಿ ಪೆಟ್ಟಿಗೆಗಳನ್ನು ಸಂಗ್ರಹಿಸುತ್ತಿದ್ದ ಮೇಜರ್ ಓಂ ಬಹದ್ದೂರ್ ಖಾಂಡ್ ಮೇಲೆ ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದಾರೆ. ತಕ್ಷಣವೇ ನೆಲಕ್ಕೆ ಬಿದ್ದ ಖಾಂಡ್ ಅವರ ತಲೆಬುರುಡೆ ಸ್ಫೋಟಗೊಂಡಿದ್ದು, ಸುಮಾರು 15 ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಜರ್ ತಿವಾರಿ ಅವರನ್ನು ಭಾರತೀಯ ಸೇನೆಯು ವಶಕ್ಕೆ ಪಡೆದು ವಾರ್ಧಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸಿಎಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲ್ಯಾನ್ಸ್ ನಾಯಕ್ ಬೀರ್ ಸಿಂಗ್ ಧಾಮಿ ಅವರ ಹೇಳಿಕೆಯನ್ನು ಆಧರಿಸಿ ಎಫ್‌ಐಆರ್ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪುಲ್ಗಾಂವ್ ನಲ್ಲಿ 2016 ರಲ್ಲಿ ನಡೆದ ಸ್ಫೋಟದಲ್ಲಿ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ 18 ಜನರು ಸಾವನ್ನಪ್ಪಿದರು. ಅನಂತರ ಹಳೆಯ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ತರಬೇತಿ ವೇಳೆ ಕಾರ್ಮಿಕರ ತಂಡವೊಂದು ಸಾವನ್ನಪ್ಪಿತ್ತು.

ಮಧ್ಯಪ್ರಾಚ್ಯ ಶಾಂತಿ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡಲಿದೆ: ಪ್ರಧಾನಿ ಮೋದಿ

ಓಂ ಬಹದ್ದೂರ್ ಸಾವಿನ ಕುರಿತು ವಿಷಾದ ವ್ಯಕ್ತಪಡಿಸಿರುವ ರಕ್ಷಣಾ ಪಿಆರ್‌ಒ ಪತ್ರಿಕಾ ಪ್ರಕಟಣೆ ನೀಡಿದ್ದು, ಪುಲ್ಗಾಂವ್‌ನ ಸೆಂಟ್ರಲ್ ಮದ್ದುಗುಂಡು ಡಿಪೋದಲ್ಲಿ ತರಬೇತಿ ವೇಳೆ ರಕ್ಷಣಾ ಭದ್ರತಾ ದಳದ ಜೂನಿಯರ್ ಕಮಿಷನರ್ ಅಧಿಕಾರಿ ಸುಬೇದಾರ್ ಮೇಜರ್ ಓಂ ಬಹದ್ದೂರ್ ಖಾಂಡ್ ಅವರು ಗುಂಡು ತಗಲಿ ಸಾವನ್ನಪ್ಪಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.

ವಿದ್ಯಾ ಇರ್ವತ್ತೂರು

View all posts by this author