ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲ್ಲಂಗಡಿ ಸೇವಿಸಿ ಮಧ್ಯಪ್ರದೇಶದಲ್ಲಿ ಓರ್ವ ಸಾವು, ಇನ್ನೋರ್ವ ಗಂಭೀರ

ಕಲ್ಲಂಗಡಿ ತಿಂದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಶಿಯೋಪುರದಲ್ಲಿ ತಂದೆ, ಮಗ ಕಲ್ಲಂಗಡಿ ಸೇವಿಸಿ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಂದೆ ಸಾವನ್ನಪ್ಪಿದ್ದರೆ, ಮಗನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಕಲ್ಲಂಗಡಿ ತಿಂದು ವ್ಯಕ್ತಿ ಸಾವು

ಸಂಗ್ರಹ ಚಿತ್ರ -

ಮಧ್ಯಪ್ರದೇಶ: ಕಲ್ಲಂಗಡಿ (watermelon) ತಿಂದು ತಂದೆ ಮಗ ಅಸ್ವಸ್ಥರಾಗಿದ್ದು, ಇವರಲ್ಲಿ ತಂದೆ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಶಿಯೋಪುರದಲ್ಲಿ (Sheopur) ನಡೆದಿದೆ. ಮಗನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಶಾಜಾಪುರ ಜಿಲ್ಲೆಯ (Shajapur district) ಶಿಯೋಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಇಂದ್ರ ಕುಮಾರ್ ಪರಿಹಾರ್ (43) ಮತ್ತು ಅವರ ಮಗ ವಿನೋದ್ (21) ಗುರುವಾರ ರಾತ್ರಿ ಕಲ್ಲಂಗಡಿ ಸೇವಿಸಿ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದ್ರ ಕುಮಾರ್ ಅವರು ಸಾವನ್ನಪ್ಪಿದ್ದರೆ, ವಿನೋದ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಶಿಯೋಪುರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಇಂದ್ರ ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಗುರುವಾರ ರಾತ್ರಿ ಇಂದ್ರ ಕುಮಾರ್ ಮತ್ತು ಅವರ ಮಗ ವಿನೋದ್ ಕಲ್ಲಂಗಡಿ ಸೇವಿಸಿದ್ದು, ಶುಕ್ರವಾರ ಬೆಳಗ್ಗೆ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು.

ವಿದೇಶ ಪ್ರಯಾಣ ನಿರ್ಬಂಧಗಳ ಕುರಿತಾದ ವರದಿ ತಳ್ಳಿ ಹಾಕಿದ ಪ್ರಧಾನಿ ಮೋದಿ

ಕೂಡಲೇ ಅವರನ್ನು ಕುಟುಂಬ ಸದಸ್ಯರು ಶಿಯೋಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಇಂದ್ರ ಕುಮಾರ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಅವರನ್ನು ಕೋಟಾಗೆ ಕಳುಹಿಸಲಾಯಿತು. ಆದರೆ ದಾರಿ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ.

ಇಂದ್ರ ಕುಮಾರ್ ಪರಿಹಾರ್ ಅವರು ಪತ್ನಿ ಸಂಗೀತಾ, ಪುತ್ರರಾದ ವಿನೋದ್, ರಾಜಾ ಮತ್ತು ದೇವಾ ಹಾಗೂ ಕುಟುಂಬ ಸದಸ್ಯೆ ರಾಧಿಕಾ ಅವರೊಂದಿಗೆ ವಾಸಿಸುತ್ತಿದ್ದರು.

ಘಟನೆ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಆರ್.ಬಿ. ಗೋಯಲ್, ಇಂದ್ರ ಕುಮಾರ್ ಮತ್ತು ವಿನೋದ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಶುಕ್ರವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಲ್ಲಂಗಡಿ ಸೇವನೆಯಿಂದ ಅವರ ಆರೋಗ್ಯ ಹದಗೆಟ್ಟಿತ್ತು ಎನ್ನುವುದನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ರೋಗಿಗಳು ಹೊಟ್ಟೆಯ ಸೋಂಕಿನಿಂದ ಬಳಲುತ್ತಿದ್ದಿರಬಹುದು. ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆಯೇ ನಿಖರವಾದ ಕಾರಣವನ್ನು ನಿರ್ಧರಿಸಬಹುದು ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕಲ್ಲಂಗಡಿ ಹಣ್ಣು ಸೇವಿಸಿ ಛತ್ತೀಸ್‌ಗಢದ ಜಂಜ್‌ಗೀರ್-ಚಂಪಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಓರ್ವ ಸಾವನ್ನಪ್ಪಿದ್ದು, ಮೂವರು ಅಸ್ವಸ್ಥಗೊಂಡ ಘಟನೆ ನಡೆದಿತ್ತು. ಘುರ್ಕೋಟ್ ಗ್ರಾಮದಲ್ಲಿ ಸಂಬಂಧಿಕರ ಮನೆಗೆಂದು ಬಂದಿದ್ದ ಪೋಡಿ ದಲ್ಹಾ ಗ್ರಾಮದ ನಿವಾಸಿ ಅಖಿಲೇಶ್ ಧಿವರ್ (15) ಎಂಬ ಬಾಲಕ ಮೃತಪಟ್ಟಿದ್ದು, ಅವರಿಡ್ ಗ್ರಾಮದ ಧಿವರ್ (4), ಖಟೋಲಾದಿಂದ ಪಿಂಟು ಧಿವರ್ (12) ಮತ್ತು ಕೊಟ್‌ಗಢದ ಹಿತೇಶ್ ಧಿವರ್ (13) ಅಸ್ವಸ್ಥಗೊಂಡಿದ್ದರು.

ಮಿಲಿಟರಿಯಿಂದ ಪರಿಹಾರ ಸಾಧ್ಯವಿಲ್ಲ, ಗಂಭೀರವಾಗಿ ಮಾತುಕತೆಗೆ ಬನ್ನಿ: ಅಮೆರಿಕಕ್ಕೆ ಇರಾನ್ ಸಂದೇಶ

ಮೇ 10ರಂದು ಅವರು ಮನೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಿದ ಬಳಿಕ ವಾಂತಿ, ಅತಿಸಾರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕ ಅಖಿಲೇಶ್ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.