ಬೆಂಗಳೂರು, ಡಿ.23: ಅನೈತಿಕ ಸಂಬಂಧದ (Illegal relationship) ಸಹವಾಸ ಬೇಡ ಎಂದು ಮಹಿಳೆಯೊಬ್ಬಳಿಗೆ ಗುಡ್ ಬೈ ಹೇಳಿದ್ದ ಯುವಕ ಆಕೆಯಿಂದ ಮಾರಣಾಂತಿಕ ಹಲ್ಲೆಗೀಡಾಗಿ (Assault Case) ಇದೀಗ ಆಸ್ಪತ್ರೆ ಸೇರುವಂತಾಗಿದೆ. ತನ್ನಿಂದ ದೂರ ಹೋದ ಯುವಕನ ಮೇಲೆ ಮಹಿಳೆಯೇ ಗ್ಯಾಂಗ್ ಕಟ್ಟಿಕೊಂಡು ಡೆಡ್ಲಿ ಅಟ್ಯಾಕ್ ಮಾಡಿಸಿದ ಶಾಕಿಂಗ್ ಘಟನೆ ದೊಡ್ಡಬಳ್ಳಾಪುರ (Doddaballapuara) ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.
ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಘಟನೆ ದೊಡ್ಡಬಳ್ಳಾಪುರದ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ದೀಪ ಎಂಬಾಕೆ ಜೊತೆ ಅದೇ ಗ್ರಾಮದಲ್ಲಿ ನೆಲೆಸಿದ್ದ ಕಾರ್ತಿಕ್ ಎಂಬ ಯುವಕ ಅಕ್ರಮ ಸಂಬಂಧ ಹೊಂದಿದ್ದ. ವಿಚಾರ ತಿಳಿದು ಕಾರ್ತಿಕ್ ಕುಟುಂಬಸ್ಥರು ಆತನಿಗೆ ಬುದ್ದಿವಾದ ಹೇಳಿದ್ದಾರೆ. ಆಕೆಯ ಸಹವಾಸ ಬಿಟ್ಟುಬಿಡು ಎಂದಿದ್ದಾರೆ. ನಂತರ ಯುವಕ ತನಗೀ ಅನೈತಿಕ ಸಂಬಂಧ ಬೇಡ ಎಂದು ಆಕೆಯಿಂದ ದೂರವುಳಿದಿದ್ದಾನೆ.
ಇದರಿಂದ ರೊಚ್ಚಿಗೆದ್ದ ದೀಪಾ ಆತನ ಕೈಕಾಲು ಮುರಿಯಲು ಪ್ಲಾನ್ ಮಾಡಿದ್ದಾಳೆ. ಡಿಸೆಂಬರ್ 13ರ ಮುಸ್ಸಂಜೆ ವೇಳೆ ಯುವಕ ಕಾರ್ತಿಕ್ ಅಂಗಡಿಯಲ್ಲಿ ಕೂತಿದ್ದ. ಅದೇ ಸ್ಥಳಕ್ಕೆ ಕಾರಿನಲ್ಲಿ ಮಹಿಳೆ ಆ್ಯಂಡ್ ಗ್ಯಾಂಗ್ ಬಂದಿದೆ. ಮಹಿಳೆಯ ಕಡೆಯವರು ಕಾರಿಂದ ಇಳಿದು ಸಿನಿಮೀಯ ರೀತಿಯಲ್ಲಿ ಕಾರ್ತಿಕ್ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ. ಅತ್ತ ದೀಪಾ ಕಾರಿನಲ್ಲೆ ಕೂತು ಕಾರ್ತಿಕ್ ಕೂಗಾಟ ನೋಡುತ್ತಿದ್ದಳು.
ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು
ಕಾರ್ತಿಕ್ ಕೂಗಾಟ ಕಂಡು ಜನರು ಓಡಿ ಬಂದಿದ್ದು, ಗ್ಯಾಂಗ್ ಮೇಲೆ ತಿರುಗಿ ಬಿದ್ದಿದ್ದಾರೆ. ಇದರಿಂದ ಆತನನ್ನು ಬಿಟ್ಟು ಮಹಿಳೆ ಆ್ಯಂಡ್ ಗ್ಯಾಂಗ್ ಎಸ್ಕೇಪ್ ಆಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ದೂರು ದಾಖಲಾದ ಬಳಿಕ ತನಿಖೆ ಕೈಗೊಂಡ ದೊಡ್ಡಬೆಳವಂಗಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಗ್ಯಾಂಗ್ ಕಟ್ಟಿಕೊಂಡು ಕಾರಿನಲ್ಲಿ ಬಂದು ಹಲ್ಲೆ ಮಾಡಿಸಿದ್ದ ಖತರ್ನಾಕ್ ಮಹಿಳೆ ಹಾಗೂ ಮತ್ತೋರ್ವನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.