Viral Video: ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು
ತಮಿಳುನಾಡಿನ ವಿರುತ್ತನಗರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ತಮಗಿಂತ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಅಪ್ರಾಪ್ತ ಬಾಲಕರ ಗುಂಪೊಂದು ಮನ ಬಂದಂತೆ ಹಲ್ಲೆ ನಡೆಸಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಎಐ ಚಿತ್ರ -
ಚೆನ್ನೈ, ಡಿ. 18: ಮಕ್ಕಳಿಗೆ ಬಾಲ್ಯದಿಂದಲೇ ಶಿಸ್ತನ್ನು ಹೇಳಿಕೊಂಡಬೇಕೆಂದು ಹೆಚ್ಚಿನವರು ಸಲಹೆ ನೀಡುತ್ತಾರೆ. ಇಲ್ಲದಿದ್ದಲ್ಲಿ ಮಕ್ಕಳ ನಡವಳಿಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಸಮಾಜಕ್ಕೆ ಕಂಟಕವಾಗಿ ಅವರು ಬೆಳೆಯುತ್ತಾರೆ. ತಮಿಳುನಾಡಿನ ವಿರುತ್ತನಗರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ತಮಗಿಂತ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಅಪ್ರಾಪ್ತ ಬಾಲಕರ ಗುಂಪೊಂದು ಮನಬಂದಂತೆ ಹಲ್ಲೆ ನಡೆಸಿದ್ದ ಘಟನೆಯೊಂದು ನಡೆದಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ.
ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕರ ಗುಂಪೊಂದು ಕಿರಿಯ ಮಕ್ಕಳ ಮೇಲೆ ಮನಬಂದಂತೆ ನಡೆಸಿಕೊಂಡಿರುವ ದೃಶ್ಯ ಕಂಡು ಬಂದಿದೆ. ಸದ್ಯ ಈ ಗೊಂದಲದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಆಕ್ರೋಶ ಮತ್ತು ಕಳವಳವನ್ನು ಹುಟ್ಟುಹಾಕಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಕೆಲವು ಅಪ್ರಾಪ್ತ ಬಾಲಕರು ಮೂವರು ಸಣ್ಣ ಮಕ್ಕಳನ್ನು ಯಾರು ಇಲ್ಲದ ಪ್ರದೇಶಕ್ಕೆ ಕರೆದೊಯ್ದು ಅವರಿಗೆ ಕಪಾಳಮೋಕ್ಷ ಮಾಡುವುದು, ಕಾಲಿನಿಂದ ಒದೆಯುವ ದೃಶ್ಯ ಕಂಡು ಬಂದಿದೆ.
ವಿಡಿಯೊ ನೋಡಿ:
விருதுநகரில் போதை கும்பல் அட்டூழியம் , சிறுவர்களை தாக்கி சித்திரவதை ! #virudhunagar #drugs #mkstalin #tamilnews pic.twitter.com/DA5QQ4gbBD
— Letstalkpolitics (@LTPoliticsTamil) December 17, 2025
ಮೂಲಗಳ ಪ್ರಕಾರ, ಈ ಹಲ್ಲೆಗೊಳಗಾದ ಮಕ್ಕಳು ಅಪ್ರಾಪ್ತ ಹುಡುಗರು ಗಾಂಜಾ ಸೇದುತ್ತಿದ್ದ ವಿಷಯವನ್ನು ಗ್ರಾಮದ ಜನತೆಗೆ ಹೇಳಿದ್ದರು. ಇದೇ ಸಿಟ್ಟಿನಿಂದ ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಕ್ರೂರ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಕ್ಕಳ ಪೋಷಕರು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮಕ್ಕಳ ಸುರಕ್ಷತೆಯ ಬಗ್ಗೆ ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
14 ಗಂಟೆಗೂ ಹೆಚ್ಚು ಕೆಲಸ ಮಾಡಿದ ಬ್ಲಿಂಕ್‌ಇಟ್ ಡೆಲಿವರಿ ಬಾಯ್; ಆದಾಯ ಎಷ್ಟು?
ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಮಕ್ಕಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಬ್ಬರು ಇಂತಹ ಮಕ್ಕಳ ಪೋಷಕರ ಗತಿಯೇನು? ಬಾಲ್ಯದಿಂದಲೇ ಸರಿಯಾದ ಶಿಸ್ತನ್ನು ನಿಮ್ಮ ಮಕ್ಕಳಿಗೆ ತಿಳಿಸಿಕೊಡಿ ಎಂದು ಸಲಹೆ ನೀಡಿದ್ದಾರೆ.